Hijab: ಹಿಜಾಬ್ ಧರಿಸದ ಹೆಣ್ಣುಮಕ್ಕಳ ಪತ್ತೆ ಮಾಡಲು ಸಾರ್ವಜನಿಕ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಕೆ
Hijab: ಇರಾನ್‌ನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಕೆ ಮಾಡಲಾಗುತ್ತಿದೆ. ಸಾಮಾನ್ಯವಾಗಿ ಸಿಸಿ ಟಿವಿ ಅಳವಡಿಸುವುದು ಒಂದೋ ಜನರು ಟ್ರಾಫಿಕ್ ರೂಲ್ಸ್ ಫಾಲೋ ಮಾಡಲಿ ಎಂದು ಅಥವಾ ಕ್ರೈಂ ಅನ್ನು ನಿಯಂತ್ರಿಸಲು ಸಹಾಯ ಆಗಲಿ ಎಂದು. ಆದರೆ ಇದಕ್ಕೆ ಅಪವಾದ ಇರಾನ್. ಇರಾನ್ ನ (Iran) ಸರ್ಕಾರ ಕೂಡಾ ಕೂಡ ಅಫ್ಘಾನಿಸ್ತಾನ (Afghanistan)ದ ಹಾದಿಯನ್ನೇ ಅನುಸರಿಸುತ್ತಿದೆ. ಮಹಿಳೆಯರ ಬಗ್ಗೆ ಇರಾನ್ ಕಟ್ಟುನಿಟ್ಟಾಗಿ ವರ್ತಿಸುತ್ತಿದೆ. ಮಹಿಳೆಯರು ಹಿಜಾಬ್ ಧರಿಸಲು ಕಟ್ಟುನಿಟ್ಟಿನ ಆದೇಶಗಳನ್ನು ಹೊರಡಿಸಲಾಗಿದೆ. ಕಡ್ಡಾಯ ಡ್ರೆಸ್ಕೋಡ್ನ ಭಾಗವಾಗಿ ಇರಾನ್‌ನಲ್ಲಿ ಹಿಜಾಬ್ (Hijab) ಅನ್ನು ಅಳವಡಿಸಲಾಗಿದೆ, ಆದರೆ ಸಾಕಷ್ಟು ಮಹಿಳೆಯರು ಈ ನಿಯಮಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ. ಇದರಿಂದ ಆತಂಕಗೊಂಡಿರುವ ಇರಾನ್ ಸರ್ಕಾರ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಸಿಸಿಟಿವಿಯನ್ನು ಅಳವಡಿಸಲು ನಿರ್ಧರಿಸಿದೆ.
ಇರಾನ್ ಅಧಿಕಾರಿಗಳ ಪ್ರಕಾರ, ಕಡ್ಡಾಯ ಡ್ರೆಸ್ ಕೋಡ್ ಅನ್ನು ಉಲ್ಲಂಘಿಸುವ ಮಹಿಳೆಯರನ್ನು ಸಿಸಿಟಿವಿ ಮೂಲಕ ಪತ್ತೆ ಹಚ್ಚಲಾಗುವುದು. ಅವರನ್ನು ಗುರುತಿಸಿದ ನಂತರ ನಿಯಮ ಉಲ್ಲಂಘಿಸುವವರಿಗೆ ಮೊದಲುಎಚ್ಚರಿಕೆ ನೀಡಲಾಗುವುದು, ನಂತರ ಶಿಕ್ಷೆ ವಿಧಿಸಲಾಗುತ್ತದೆ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, ಹಿಜಾಬ್ ಕಾನೂನಿನ ವಿರುದ್ಧ ಪ್ರತಿರೋಧವನ್ನು ನಿಲ್ಲಿಸುವುದು ಇರಾನ್ ಸರ್ಕಾರದ ಗುರಿಯಾಗಿದೆ. ಹಿಜಾಬ್‌ಗೆ ಸಂಬಂಧಿಸಿದಂತೆ ಕಳೆದ ಹಲವು ತಿಂಗಳುಗಳಿಂದ ಇರಾನ್‌ನಲ್ಲಿ ವಿವಾದ ನಡೆಯುತ್ತಿದೆ. ವಾಸ್ತವವಾಗಿ ಈ ಸಂಪೂರ್ಣ ವಿವಾದವು 22 ವರ್ಷದ ಇರಾನ್ ಹುಡುಗಿ ಮಹ್ಸಾ ಸಾವಿನೊಂದಿಗೆ ಪ್ರಾರಂಭವಾಯಿತು.
ಮಾಧ್ಯಮ ವರದಿಗಳ ಪ್ರಕಾರ, ಇರಾನ್‌ನ ಪೊಲೀಸರು ಹಿಜಾಬ್ ಅನ್ನು ಸರಿಯಾಗಿ ಧರಿಸದ ಕಾರಣ ಮಹ್ಸಾ ಅವರನ್ನು ಬಂಧಿಸಿದ್ದರು. ಪೊಲೀಸ್ ಕಸ್ಟಡಿಯಲ್ಲಿ ಮಹ್ಸಾ ನಿಗೂಢವಾಗಿ ಸಾವನ್ನಪ್ಪಿದ್ದರು.
ಈಗ ಸಿಸಿ ಟಿವಿ ಮೂಲಕ ಮಹಿಳೆಯರ ಹಿಜಾಬ್ ಗಮನಿಸುವ ಕ್ರಮದ ನಂತರ ಇರಾನ್‌ನಾದ್ಯಂತ ಮಹಿಳೆಯರ ಆಕ್ರೋಶ ಭುಗಿಲೆದ್ದಿದೆ. ಬೀದಿಗಳಲ್ಲಿ ಪ್ರತಿಭಟನೆಗಳು ಪ್ರಾರಂಭವಾಗಿದ್ದು ಮತ್ತದು ಶೀಘ್ರದಲ್ಲೇ ಅದು ದೊಡ್ಡ ಚಳವಳಿಯಾಗಿ ಮಾರ್ಪಾಡಾಗಿದೆ. ಈಗ ದೇಶದಲ್ಲಿ ಹಿಜಾಬ್ ಅನ್ನು ವಿರೋಧಿಸುವ ಮಹಿಳೆಯರ ಸಂಖ್ಯೆ ಹೆಚ್ಚಾಗಿದ್ದು, ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಹಿಜಾಬ್ ಇಲ್ಲದೆ ತಿರುಗಾಡುತ್ತಿದ್ದಾರೆ. ಇತ್ತೀಚೆಗೆ ಹಿಜಾಬ್ ಧರಿಸಿಲ್ಲ ಎಂಬ ಕಾರಣಕ್ಕೆ ಇಬ್ಬರು ಮಹಿಳೆಯರ ಮೇಲೆ ಹಲ್ಲೆ ನಡೆಸಲಾಗಿತ್ತು. ಒಬ್ಬಾತ ಮಹಿಳೆಯ ಮೇಲೆ ಮೊಸರು ಎರಚಿದ್ದ. ಇದೀಗ ಈ ಘಟನೆಯ ವಿಡಿಯೋ ಭಾರೀ ವೈರಲ್ ಆಗಿದೆ.
Thank you for your sharing. I am worried that I lack creative ideas. It is your article that makes me full of hope. Thank you. But, I have a question, can you help me?