Job in Phone Manufacture : ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್, ಫೋನ್ ತಯಾರಿಕಾ ಉದ್ಯಮದಲ್ಲಿ 1,50,000 ಹುದ್ದೆ!
Job in Phone Manufacture : ದೇಶದಲ್ಲಿ ಕೊರೋನಾ(corona) ಕಾಯಿಲೆ ಬಂದ ನಂತರ ಜನರಿಗೆ ಹೆಚ್ಚಾಗಿ ಕೆಲಸಗಳೇ ಇಲ್ಲದಂತಾಗಿದೆ. ಲಾಕ್ ಡೌನ್(lock down) ಆದ ಬಳಿಕವಂತು ಹಲವು ಕಂಪನಿಗಳು ಮುಚ್ಚಿ ಹೋಗಿದೆ. ಹಾಗೆಯೇ ಕೆಲವು ಕಂಪನಿಗಳು ಯಥಾಪ್ರಕಾರ ಮುಂಚಿನ ಹಾಗೆಯೇ ಕಾರ್ಯನಿರ್ವಹಿಸುತ್ತಿದೆ. ಆದ್ರೆ ಲಾಭವಿಲ್ಲದೆ ಕೆಲವು ಕಂಪನಿಗಳು(company) ಮುಚ್ಚಿ ಹೋದ ಕಾರಣದಿಂದ ಕೆಲಸ ಮಾಡುತ್ತಿದ್ದ ಜನಗಳಿಗೆ ಮತ್ತು ಕಲಿಕೆ ಪೂರ್ಣವಾದ ವಿದ್ಯಾರ್ಥಿಗಳು ಕೆಲಸವಿಲ್ಲದೆ ಪರದಾಡುವುದನ್ನು ಈಗಾಗಲೇ ನೀವು ನೋಡಿರಬಹುದು. ಈ ಸಮಸ್ಯೆಯನ್ನು ತಡೆಗಟ್ಟಲು ಇದೀಗ ಕೇಂದ್ರ ಸರ್ಕಾರ ಕಂಪನಿಗಳ ಆಗಮನಕ್ಕೆ ಹೆಚ್ಚಿನ ರೀತಿಯಲ್ಲಿ ಉತ್ತೇಜಿಸುತ್ತಿದೆ. ಈ ಆರ್ಥಿಕ ವರ್ಷದಲ್ಲಿ ದೇಶದಲ್ಲಿ ಮೊಬೈಲ್ (mobile) ಉತ್ಪಾದನೆಯಲ್ಲಿ(Job in Phone Manufacture)1,50,000 ಹೊಸ ಉದ್ಯೋಗಗಳು ಜನರಿಗೋಸ್ಕರ ಸೃಷ್ಟಿಯಾಗುವ ಸಾಧ್ಯತೆ ಇದೆ.
ಹೌದು, ಜನರ ಹಿತ ದೃಷ್ಟಿಯಿಂದ ಕೇಂದ್ರ ಸರ್ಕಾರ ಹೊಸ ರೀತಿಯ ಉದ್ಯೋಗವಕಾಶವನ್ನು ಆಗಮನ ಮಾಡುತ್ತಿರುವುದು ಅತ್ಯಂತ ಸಂತಸದ ವಿಷಯ. ಉನ್ನತ ಹ್ಯಾಂಡ್‌ಸೆಟ್(handset) ತಯಾರಕರು ಭಾರತದಲ್ಲಿ ದೊಡ್ಡ ಪ್ರಮಾಣದ ನೇಮಕಾತಿಯನ್ನು ತಯಾರಿಸುತ್ತಿದ್ದಾರೆ. ಭಾರತ ಸರ್ಕಾರದ ಉತ್ಪಾದನಾ-ಸಂಯೋಜಿತ ಪ್ರೋತ್ಸಾಹ (ಪಿಎಲ್‌ಐ) ಯೋಜನೆಯಿಂದ ಇದು ಹೆಚ್ಚಿನ ರೀತಿಯಲ್ಲಿ ಬಹಳ ಸಹಕಾರಿಯಾಗಿದೆ ಎಂದು ತಿಳಿದು ಬಂದಿದೆ. ಕೇಂದ್ರ ಸರ್ಕಾರ ರೂಪಿಸಿದ ಈ ಯೋಜನೆಯಲ್ಲಿ ಹಲವಾರು ಕಂಪನಿಗಳು ಈ ವಲಯದಲ್ಲಿ ಅಂದಾಜು 120,000-150,000 ಹೊಸ ಉದ್ಯೋಗಗಳನ್ನು ಸೃಷ್ಟಿಸಲು ಮುಂದಾಗುತ್ತಿದೆ.
ಸ್ಯಾಮ್‌ಸಂಗ್(Samsung), ನೋಕಿಯಾಮ್ ಫಾಕ್ಸ್‌ಕಾನ್(Nokia fox can), ವಿಸ್ಟ್ರಾನ್, ಪೆಗಾಟ್ರಾನ್, ಟಾಟಾ ಗ್ರೂಪ್ ಮತ್ತು ಸಾಲ್‌ಕಾಂಪ್‌ನಂತಹ ದೊಡ್ಡ – ದೊಡ್ಡ ಕಾರ್ಪೊರೇಟ್ ದೈತ್ಯರು ದೇಶದಲ್ಲಿ ತಮ್ಮ ಉದ್ಯೋಗಿಗಳನ್ನು ಹೆಚ್ಚಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಅಂದರೆ ಇಂತಹ ಕಂಪೆನಿಯಲ್ಲಿ ಜನರಿಗೆ ಕೆಲಸ ಮಾಡುವ ಅವಕಾಶವನ್ನು ನೀಡುತ್ತಿದ್ದಾರೆ ಎನ್ನಲಾಗಿದೆ.
ಈಗಿನ ಎಲ್ಲಾ ವಿಷಯಕ್ಕೂ ಮೊಬೈಲ್ ನ ಅವಶ್ಯಕತೆ ಬಹಳ ಮುಖ್ಯವಾಗಿದೆ. ಕೊರೋನಾ ಎಂಬ ಮಾರನಾಂತಿಕ ಕಾಯಿಲೆ ಬಂದ ನಂತರ ವಿದ್ಯಾರ್ಥಿಗಳಿಗೆ(student) ಮೊಬೈಲ್ ಇಲ್ಲದೆ ವಿದ್ಯಾಭ್ಯಾಸ ಮುಂದೆ ಹೋಗಲು ಸಾಧ್ಯವೇ ಇಲ್ಲ ಎನ್ನುವ ರೀತಿ ಆಗಿದೆ. ಹಾಗಾಗಿ ಭಾರತದಲ್ಲಿ ಮೊಬೈಲ್ ತಯಾರಕರು ಜನರ ಬೇಡಿಕೆಯ ಹೆಚ್ಚಳದ ನಿರೀಕ್ಷೆಯಲ್ಲಿ ಇದಕ್ಕೆ ನೇಮಕಾತಿಯನ್ನು ಪುನರಾರಂಭಿಸಿದ್ದಾರೆ. ಕಳೆದ ಎರಡು ತ್ರೈಮಾಸಿಕಗಳಲ್ಲಿ ಕಂಡುಬರುವ ಸರಾಸರಿ ಬೇಡಿಕೆಗಿಂತ ತಂತ್ರಜ್ಞರು, ಮೇಲ್ವಿಚಾರಕರು ಮತ್ತು ಗುಣಮಟ್ಟದ ಭರವಸೆ ಪ್ರೊಫೈಲ್‌ಗಳ ಬೇಡಿಕೆಯು ತುಂಬಾನೇ ದ್ವಿಗುಣವಾಗಿದೆ ಅಂದರೆ ಬಹಳಷ್ಟು ಹೆಚ್ಚಾಗಿದೆ. ಎಂದು ಸಿಯೆಲ್ ಎಚ್‌ಆರ್ ಸರ್ವಿಸಸ್ ಸಿಇಒ ಆದಿತ್ಯ ನಾರಾಯಣ ಮಿಶ್ರಾ (Narayana Mishra) ಹೇಳಿದ್ದಾರೆ.
ಟೀಮ್ ಲೀಸ್ ಸರ್ವಿಸಸ್ ನ ಸಿಇಓ (CEO) ಕಾರ್ತಿಕ್ ನಾರಾಯಣ್(Karthik Narayan) ಹೇಳಿದ ಮಾಹಿತಿಯ ಪ್ರಕಾರ ಹೆಚ್ಚಿನ ಮೊಬೈಲ್ ಬ್ರಾಂಡ್‌ಗಳು ಮತ್ತು ಅವುಗಳ ಘಟಕಗಳ ತಯಾರಿಕೆ ಮತ್ತು ಅಸೆಂಬ್ಲಿ ಪಾಲುದಾರರು ಈಗಾಗಲೇ ಭಾರತದಲ್ಲಿ ಉತ್ಪಾದನೆಯನ್ನು ಹೊಂದಲು ಬಯಸುತ್ತಿರುವ ಕಾರಣದಿಂದ ನೇಮಕಾತಿಯನ್ನು ಬಹಳಷ್ಟು ರೀತಿಯಲ್ಲಿ ಹೆಚ್ಚಿಸುತ್ತಿದ್ದಾರೆ.