Health and Immunity booster : ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ಈನೈಸರ್ಗಿಕ ಪದಾರ್ಥಗಳು ಆಹಾರಕ್ರಮದಲ್ಲಿರಲಿ!
Health and Immunity booster : ಬಿಸಿಲಿನ ತಾಪಮಾನದಿಂದಾಗಿರಬಹುದು ಅಥವಾ ಜನರು ತಿನ್ನುವ ಈಗಿನ ಜಂಕ್ ಫುಡ್ ಗಳಿಂದ ನಮ್ಮ ಆರೋಗ್ಯ ಸಮಸ್ಯೆಗಳು ಹದಗೆಡುತ್ತಿರುವುದು ಎಲ್ಲರಿಗೂ ತಿಳಿದೇ ಇದೆ. ಈ ಮಾತೇನು ಹೊಸತ್ತಲ್ಲ. ಆದ್ರೂ, ಜನರಿಗೆ ಈ ಮಾಹಿತಿ ತಿಳಿದಿದ್ರು ಎಲ್ಲರೂ ಹೆಚ್ಚಾಗಿ ಜಂಕ್ ಫುಡ್ ಗಳ ಕಡೆಗೆ ತಮ್ಮ ಸಂಚಾರವನ್ನು ಮಾಡುತ್ತಿದ್ದಾರೆ. ನಮ್ಮ ದೇಹದ ಆರೋಗ್ಯವನ್ನು ಸ್ಥಿರವಾಗಿ ಇಟ್ಟುಕೊಳ್ಳಬೇಕಾದರೆ ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದರಿಂದ ವಿವಿಧ ಋತುಮಾನಗಳಲ್ಲಿ ಕಾಡುವ ಕಾಯಿಲೆಗಳಿಂದ ನಾವು ದೂರ ಇರಬಹುದು.ದೇಹದಲ್ಲಿ ಪ್ರತಿರಕ್ಷಣಾ ವ್ಯವಸ್ಥೆಯನ್ನು ಸುಧಾರಿಸಲು ಹಾಗೂ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ರೋಗನಿರೋಧಕ ಶಕ್ತಿಯನ್ನು(Health and Immunity booster) ನಮ್ಮ ದೇಹದಲ್ಲಿ ಉತ್ತಮ ರೀತಿಯಲ್ಲಿ ಕಾಪಾಡಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯ ಮತ್ತು ಇದು ಬಹಳ ಮುಖ್ಯವಾಗಿದೆ.
ನಾವು ಸೇವಿಸುವ ಪ್ರತಿಯೊಂದು ಆಹಾರ ಪದಾರ್ಥಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಅಂಶಗಳಿವೆ. ಅವು ತಮ್ಮ ಆಂಟಿಆಕ್ಸಿಡೆಂಟ್ ಹಾಗೂ ಉರಿಯೂತ ವಿರೋಧ ಪರಿಣಾಮದೊಂದಿಗೆ ದೇಹವನ್ನು ಬಲಪಡಿಸುತ್ತವೆ ಮತ್ತು ಪೌಷ್ಟಿಕಾಂಶದ ಕೊರತೆಯನ್ನು ನಿಭಾಯಿಸುವ ಮೂಲಕ ದೀರ್ಘಕಾಲದಲ್ಲಿ ಬರುವ ಕಾಯಿಲೆಗಳನ್ನು ನಿರ್ವಹಿಸಲು ಅಥವಾ ತಡೆಯಲು ಇದು ತುಂಬಾನೇ ಸಹಾಯ ಮಾಡಬಹುದು.
ಹಾರ್ಮೋನುಗಳ ಅಸಮತೋಲನ, ಯಕೃತ್ತಿನ ಆರೋಗ್ಯ, ಕೊಲೆಸ್ಟ್ರಾಲ್, ಜೀರ್ಣಕಾರಿ ಆರೋಗ್ಯ, ಹೃದಯದ ಆರೋಗ್ಯದಿಂದ ಚರ್ಮ ಮತ್ತು ಕೂದಲಿನ ಆರೋಗ್ಯ, ಈ ಆರೋಗ್ಯ ಸಮಸ್ಯೆಗಳನ್ನು ನಿರ್ವಹಿಸಲು ಅಂದರೆ ಕಡಿಮೆ ಮಾಡಲು ಕೆಲವು ಸಹಾಯ ಮಾಡುವ ನೈಸರ್ಗಿಕ ಪೂರಕಗಳಿವೆ. ಆದರೆ ಈ ಆಹಾರಗಳ ಸೇವನೆಗೂ ಮುನ್ನ ವೈದ್ಯರ ಸಲಹೆ ಪಡೆದುಕೊಂಡು ಆಮೇಲೆ ಇದನ್ನು ಸೇವಿಸುವುದು ಉತ್ತಮ.
ವಿಶ್ವ ಆರೋಗ್ಯ ದಿನದ (ಏಪ್ರಿಲ್ 7) ಸಂದರ್ಭದಲ್ಲಿ, ಪೌಷ್ಟಿಕತಜ್ಞೆ ಮತ್ತು ದಿ ಹೆಲ್ತ್ ಪ್ಯಾಂಟ್ರಿಯ ಸಂಸ್ಥಾಪಕರಾದ ಖುಷ್ಬೂ ಜೈನ್ ತಿಬ್ರೆವಾಲಾ ಪ್ರತಿ ಆರೋಗ್ಯ ರಕ್ಷಣಾ ವ್ಯವಸ್ಥೆಯ ಸುಧಾರಣೆಗೆ ಪೂರಕವಾಗಿರುವ ಕೆಲವು ನೈಸರ್ಗಿಕ ಪದಾರ್ಥಗಳು ಹಾಗೂ ಅವುಗಳ ಉಪಯೋಗಗಳ ಬಗ್ಗೆ ಸ್ಪಷ್ಟವಾದ ಮಾಹಿತಿಯನ್ನು ನೀಡಿದ್ದಾರೆ ನೋಡಿ
ಮಿಲ್ಕ್ ಥಿಸಲ್ : ಮಿಲ್ಕ್ ಥಿಸಲ್ ಒಂದು ನೇರಳೆ ಹೂ ಬಿಡುವ ಸಸ್ಯ. ಹಾಗೆಯೇ ಈ ಮಿಲ್ಕ್ ಥಿಸಲ್ ಸಿಲಿಬಮ್ ಮರಿಯಾನಮ್ ಎನ್ನುವುದು ಒಂದು ಹಸಿರು ಎಲೆ. ಇದರಲ್ಲಿ ಸಿಲಿಮರಿನ್ ಎಂಬ ಸಕ್ರಿಯ ಸಂಯುಕ್ತವಿದೆ. ಇದು ಆಂಟಿಆಕ್ಸಿಡೆಂಟ್ ಹಾಗೂ ಉರಿಯೂತ ನಿವಾರಣೆಯ ಅಂಶಗಳನ್ನು ಬಹಳಷ್ಟು ಹೊಂದಿದೆ. ಯಕೃತ್ತಿನ ಉರಿಯೂತ ಮತ್ತು ಹಾನಿಯನ್ನು ತಡೆಯಲು ಇದರ ಸೇವನೆ ಬಹಳ ಉತ್ತಮವಾಗಿದೆ. ಇದು ಫ್ರಿ ರಾಡಿಕಲ್‌ಗಳ ಹಾನಿಯನ್ನು ತಡೆಯುತ್ತದೆ. ಮಿಲ್ಕ್ ಥಿಸಲ್ ವಯಸ್ಸಾದವರಲ್ಲಿ ಕಾಣಿಸುವ ಮೆದುಳಿನ ಕ್ರಿಯೆಯ ಸಮಸ್ಯೆಯನ್ನು ನಿವಾರಿಸುವ ಗುಣವನ್ನು ಹೊಂದಿದೆ. ಇನ್ಸುಲಿನ್ ಸಂವೇದನೆಯನ್ನು ನಿಧಾನಗೊಳಿಸುತ್ತದೆ. ಋತುಬಂಧದ ನಂತರದ ಕಾಡುವ ಮೂಳೆಯ ಸಮಸ್ಯೆಯನ್ನು ಇದು ಸಂಪೂರ್ಣವಾಗಿ ಕಡಿಮೆ ಮಾಡುತ್ತದೆ.
ಅರಿಸಿನ : ಅರಿಸಿನವನ್ನು ವೈದ್ಯಕೀಯ ಲೋಕದಲ್ಲಿ ಹಳ್ಳಿ ಮದ್ದುಗಳಲ್ಲಿ ಕೆಲವು ಸಲ ಬಳಸುತ್ತಾರೆ. ಶತ ಶತಮಾನಗಳ ಹಿಂದಿನಿಂದಲೂ ಅರಿಸಿನವನ್ನು ಆಹಾರದಲ್ಲಿ ಬಳಸಲಾಗುತ್ತಿದ್ದು, ಹಾಗೆಯೇ ಇದರಿದ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಗಳಿವೆ. ಅರಿಸಿನವು ದೇಹದ ಪ್ರತಿ ಅಂಗಗಳಿಗೂ ಪ್ರಯೋಜನ ನೀಡುವ ಆಹಾರಗಳಲ್ಲಿ ಇದು ಒಂದಾಗಿದೆ. ಇದು ಪ್ರತಿಯೊಂದು ಅಂಗವನ್ನು ಯಾವುದೇ ರೀತಿ ಒಳಗಾಗುವ ಹಾನಿಯಿಂದ ಮನುಷ್ಯನನ್ನು ರಕ್ಷಿಸುತ್ತದೆ. ನಮ್ಮ ದೇಹದ ಉರಿಯೂತವನ್ನು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆ ಮಾಡುತ್ತದೆ. ದೇಹದಲ್ಲಿ ಪ್ರತಿರಕ್ಷಣಾ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಹೃದ್ರೋಗ, ಕ್ಯಾನ್ಸರ್‌ನಂತಹ ದೀರ್ಘಕಾಲದ ಕಾಯಿಲೆಗಳ ನಿವಾರಣೆಗೂ ಇದು ಬಹಳ ಮುಖ್ಯವಾಗಿದೆ.
ಪಾಚಿ ಎಣ್ಣೆ (Algae Oil) : ಪಾಚಿ ಎಣ್ಣೆಯು ಸಂಪೂರ್ಣವಾಗಿ ಸಸ್ಯಾಹಾರಿ ಎಣ್ಣೆಯಾಗಿದೆ. ಮೀನಿನೆಣ್ಣೆಯಂತೆ ಇದರಲ್ಲೂ ಒಮೆಗಾ-3 ಅಂಶ ಸಮೃದ್ಧವಾಗಿದೆ. ಒಮೆಗಾ-3 ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಕೊಲೆಸ್ಟ್ರಾಲ್ ಮಟ್ಟ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ದೃಷ್ಟಿಯ ಖಿನ್ನತೆಯನ್ನು ಕಾಪಾಡಿಕೊಳ್ಳಬಹುದು.
ಸ್ಪಿರುಲಿನಾ (Spirulina) : ಸ್ಪಿರುಲಿನಾ ನೋಡಲು ನೀಲಿ ಹಸಿರು ಪಾಚಿಯಾಗಿದ್ದು, ಇದನ್ನು ಬಿಸಿಲಿನಲ್ಲಿ ಒಣಗಿಸಿ ಪುಡಿ ಮಾಡಿ ಸೇವಿಸಲಾಗುತ್ತದೆ. ಇದು ಪ್ರೊಟೀನ್ ಹಾಗೂ ತಾಮ್ರದ ಮೂಲವಾಗಿದೆ. ಇದರಲ್ಲಿ ʼಫೈಕೊಸೈನಿನ್’ ಎಂಬ ಸಕ್ರಿಯ ಸಂಯುಕ್ತವಿದ್ದು, ಇದು ಆಕ್ಸಿಡೇಟಿವ್ ಹಾನಿ, ಕೊಲೆಸ್ಟ್ರಾಲ್ ಹಾಗೂ ರಕ್ತದೊತ್ತಡದಂತಹ ಮೆಟಾಬಾಲಿಕ್ ಸಿಂಡ್ರೋಮ್ ಎನ್ನುವ ಲಕ್ಷಣಗಳನ್ನು ನಿಯಂತ್ರಿಸುತ್ತದೆ. ಅಲರ್ಜಿಕ್ ರಿನಿಟಿಸ್ ಇರುವವರಿಗೆ ಇದು ತುಂಬಾ ಒಳ್ಳೆಯದು. ಸ್ನಾಯುಗಳ ಬೆಳವಣಿಗೆಗೆ ಇದು ಬಹಳ ಅತ್ಯುತ್ತಮವಾಗಿದೆ. ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ತ್ರಿಫಲ : ತ್ರಿಫಲವು ಹರಿತಕಿ, ಅಮಲಕಿ ಮತ್ತು ಭಿಭಿಟಕಿ ಎಂಬ 3 ಗಿಡಮೂಲಿಕೆಗಳನ್ನು ಒಳಗೊಂಡಿವೆ. ಇದು ಮಲಬದ್ಧತೆ ಮತ್ತು ಆಮ್ಲೀಯತೆಯನ್ನು ನಿವಾರಿಸುತ್ತದೆ. ರೋಗನಿರೋಧಕ ಶಕ್ತಿಯನ್ನು ಸುಧಾರಿಸುವುದು ಮಾತ್ರವಲ್ಲ, ಒತ್ತಡವನ್ನೂ ನಿಯಂತ್ರಿಸುತ್ತದೆ. ಯಕೃತ್ತಿನ ಹಾನಿಯನ್ನು ತಡೆಯುತ್ತದೆ. ಇದು ದೇಹದಲ್ಲಿನ ಕೊಬ್ಬು ಕರಗಲು ಸಹಕಾರಿ. ಇದನ್ನು ಯಾವಾಗಲೂ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀರಿನೊಂದಿಗೆ ಸೇವಿಸಬೇಕು.
ಬೆಳ್ಳುಳ್ಳಿ : ಬೆಳ್ಳುಳ್ಳಿ ಅಲಿಸಿನ್ ಎಂಬ ಸಕ್ರಿಯ ಸಂಯುಕ್ತವನ್ನು ಹೊಂದಿದ್ದು ಅದರಲ್ಲಿ ಹಲವು ಆರೋಗ್ಯ ಪ್ರಯೋಜನಗಳಿವೆ. ಇದನ್ನು ಹೆಚ್ಚಾಗಿ ಎಲ್ಲರೂ ಬಳಸುತ್ತಾರೆ . ಹೊಟ್ಟೆ ನೋವು ಇದ್ದು ಇದನ್ನು ಸೇವಿಸಿದರೆ ಹೊಟ್ಟೆ ನೋವನ್ನು ಕಡಿಮೆ ಮಾಡಬಹುದು. ರಕ್ತದೊತ್ತಡ, ಕೊಲೆಸ್ಟ್ರಾಲ್ ಮತ್ತು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಹೃದಯರಕ್ತನಾಳದ ಆರೋಗ್ಯ ಸುಧಾರಣೆಗೂ ಇದು ಬಹಳ ಸಹಕಾರಿ ಆಗಿದೆ. ಒಂದು ಬೆಳುಳ್ಳಿ ಎಸಳು ಹಲವು ರೀತಿಯಲ್ಲಿ ದೇಹಾರೋಗ್ಯಕ್ಕೆ ಸಹಾಯ ಮಾಡುವುದು ಮಾತ್ರ, ಒಟ್ಟಾರೆ ಮನುಷ್ಯ ದೇಹದ ಆರೋಗ್ಯ ಸುಧಾರಿಸಿ ಆಯುಷ್ಯ ಹೆಚ್ಚುವಂತೆ ಮಾಡುತ್ತದೆ. ಪ್ರತಿದಿನ ಬೆಳಿಗ್ಗೆ ಒಂದು ಎಸಳು ಬೆಳ್ಳುಳ್ಳಿಯೊಂದಿಗೆ ಕೆಲವು ಹನಿ ಜೇನುತುಪ್ಪ ಸೇರಿಸಿ ಸೇವಿಸುವುದು ತುಂಬಾನೇ ಉತ್ತಮ. ಏಕೆಂದರೆ ನಮ್ಮ ಆರೋಗ್ಯವನ್ನು ಇದರಿಂದ ಸುಧಾರಿಸಬಹುದು.
ರೆಸ್ವೆರಾಟ್ರೋಲ್ (Resveratrol) : ದ್ರಾಕ್ಷಿ, ಬೆರಿ ಹಣ್ಣುಗಳು, ಕಡಲೆ ಹಾಗೂ ಕೆಂಪುವೈನ್‌ಗಳಲ್ಲಿ ಈ ಸಂಯುಕ್ತ ಹೆಚ್ಚಾಗಿ ಕಂಡು ಬರುತ್ತದೆ. ಇದು ರಕ್ತದಲ್ಲಿನ ಹೆಚ್ಚಿನ ರೀತಿಯ ಕೊಬ್ಬಿನ ಅಂಶವನ್ನು ಕಡಿಮೆ ಮಾಡುತ್ತದೆ. ಚರ್ಮ ಮತ್ತು ಮೆದುಳಿನಲ್ಲಿ ವಯಸ್ಸಿಗೆ ಸಂಬಂಧಿಸಿದ ಬದಲಾವಣೆಗಳನ್ನು ನಿಧಾನಗೊಳಿಸುತ್ತದೆ. ಇದು ಪಿಸಿಓಎಸ್, ಟೈಪ್-2 ಡಯಾಬಿಟಿಸ್, ಫ್ಯಾಟಿ ಲಿವರ್ ಮುಂತಾದ ಇನ್ಸುಲಿನ್ ಸೂಕ್ಷ್ಮತೆಯನ್ನು ಕಡಿಮೆ ಮಾಡಿ ಆರೋಗ್ಯವನ್ನು ಸುರಕ್ಷಿತವಾಗಿಡಲು ಸಹಾಯ ಮಾಡುತ್ತದೆ. ಇದರಲ್ಲಿನ ಉರಿಯೂತ ವಿರೋಧಿ ಅಂಶಗಳಿದ್ದು, ಇದು ರುಮಟಾಯ್ಡ್ ಸಂಧಿವಾತ ಮತ್ತು ಇತರ ಸ್ವಯಂ ನಿರೋಧಕ ಅಸ್ವಸ್ಥತೆಗಳ ಲಕ್ಷಣಗಳನ್ನು ಸಹ ಕಡಿಮೆ ಮಾಡುತ್ತದೆ. ರಿಸ್ವೆರಾಟ್ರೋಲ್ ಸೇವಿಸುವುದರಿಂದ ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು.