Airplane Milage: ಒಂದು ಲೀಟರ್ ಇಂಧನದಲ್ಲಿ ವಿಮಾನ ಎಷ್ಟು ದೂರ ಕ್ರಮಿಸುತ್ತೆ?
Aiplane Milage : ವಿಮಾನಕ್ಕೆ ಬಳಸುವ ಇಂಧನ ಯಾವುದು ಎಂದು ತಿಳಿದಿದ್ಯಾ? ನೀವು ಎಂದಾದರೂ ವಿಮಾನಕ್ಕೆ ಬಳಸುವ ಇಂಧನ ಬಗ್ಗೆ ಅಲೋಚಿಸಿದ್ದಿರಾ? ಒಂದು ಲೀಟರ್ ಇಂಧನದಲ್ಲಿ ವಿಮಾನ ಎಷ್ಟು ದೂರ ಪ್ರಯಾಣಿಸಬಹುದು(Aiplane Milage)? ಈ ಎಲ್ಲಾ ಪ್ರಶ್ನೆಗೆ ಮಾಹಿತಿ ಇಲ್ಲಿದೆ ನೋಡಿ. ವಿಮಾನದಲ್ಲಿ ಪ್ರಯಾಣ ಮಾಡೋ ಎಷ್ಟೋ ಜನರಿಗೆ ಅದರ ಮೈಲೇಜ್ ಬಗ್ಗೆ ಗೊತ್ತೇ ಇರುವುದಿಲ್ಲ. ಹೆಚ್ಚಾಗಿ ಜನರು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹೋಗಲು ಬಸ್ಸು ಅಥವಾ ರೈಲನ್ನು ಬಳಸುತ್ತಾರೆ. ಆದರೆ ವಿದೇಶಕ್ಕೆ ಪ್ರಯಾಣ ಬೆಳಸಬೇಕಾದರೆ ಹಡಗು ಮತ್ತು ವಿಮಾನಗಳಲ್ಲಿಯೇ ಸಾಗಬೇಕು. ವೇಗವಾಗಿ ತಲುಪಲು ವಿಮಾನವನ್ನೇ ಬಳಸಬೇಕಾಗುತ್ತದೆ.
ವಿಮಾನಗಳ ಇಂಧನದ ಸಂಪೂರ್ಣ ಮಾಹಿತಿ ತಿಳಿಯಿರಿ;
ವಿಮಾನದ ಇಂಧನದ ಬಗ್ಗೆ ನಿಖರವಾಗಿ ಉತ್ತರಿಸುವುದು ಕಷ್ಟವೇ. ಯಾಕೆಂದರೆ ಚಾಲ್ತಿಯಲ್ಲಿರುವ ಪರಿಸ್ಥಿತಿಗಳ ಆಧಾರದ ಮೇಲೆ ಇಂಧನದ ಬಳಕೆಯು ಭಾರಿ ವ್ಯತ್ಯಾಸಗೊಳ್ಳುತ್ತದೆ. ವಿಮಾನದ ತೂಕ, ಅದರ ಎತ್ತರ ಮತ್ತು ಹವಾಮಾನಗಳ ಮೇಲೆ ಇದನ್ನು ನಿರ್ಧರಿಸಲಾಗುತ್ತದೆ. ಕಿಮೀ ಅಥವಾ ಲೀ ನಲ್ಲಿ ವಿಮಾನದ ಲೆಕ್ಕಾಚಾರ ಮಾಡುವುದಾದರೆ, B737 ಸಾಮಾನ್ಯವಾಗಿ ಪ್ರತಿ ಇಂಜಿನ್ ಗೆ ಪ್ರತಿ ನಿಮಿಷಕ್ಕೆ 20 ಲೀಟರ್ ಇಂಧನವನ್ನು ಬಳಕೆ ಮಾಡಲಾಗುತ್ತದೆ. ಅಂದರೆ ಎರಡೂ ಇಂಜಿನ್‌ಗಳ ಆಧಾರದ ಮೇಲೆ ಹೇಳುವುದಾದರೆ ನಿಮಿಷಕ್ಕೆ 40 ಲೀಟರ್ ಇಂಧನ ಬೇಕು. ಇದರ ವೇಗವು ಸಾಮಾನ್ಯವಾಗಿ ಗಂಟೆಗೆ 900 ಕಿಮೀ ಇರುತ್ತದೆ.
ಇದೇ ರೀತಿ ಲೆಕ್ಕ ಮಾಡಿದರೆ ಗಂಟೆಗೆ 2400 ಲೀಟರ್ ಇಂಧನ ಖರ್ಚಾಗುತ್ತದೆ. ಒಂದು ಗಂಟೆಗೆ 900 ಕಿಮೀ ಆದ್ದರಿಂದ ಪ್ರತಿ ಕಿಮೀ ಗೆ 2.6 ಲೀಟರ್ ಇಂಧವನ್ನು ಬಳಸಲಾಗುತ್ತದೆ. ಇನ್ನು ವಿಮಾನದ ಮೈಲೇಜ್ ಬಗ್ಗೆ ಹೇಳುವುದಾದರೆ, ಒಂದು ವಿಮಾನದಲ್ಲಿ 189 ಪ್ರಯಾಣಿಕರು ಪ್ರಯಾಣಿಸುವ ಸಾಮರ್ಥ್ಯ ಹೊಂದಿದ್ದರೆ, ವಿಮಾನವು 384 kmpl ಮೈಲೇಜ್ ಅನ್ನು ನೀಡುತ್ತದೆ. ವಿಮಾನವು ಹಾರುವ ಸಂದರ್ಭದಲ್ಲಿ ಬಹಳಷ್ಟು ಇಂಧನವನ್ನು ಬಳಸಿಕೊಳ್ಳುತ್ತದೆ. ಆದರೆ ವಿಮಾನವು ಲ್ಯಾಂಡಿಂಗ್ ಸಮಯದಲ್ಲಿ ಕಡಿಮೆ ಇಂಧನವನ್ನು ಬಳಸುತ್ತವೆ.
ವಿಮಾನಗಳು ಬಳಸುವ ಇಂಧನವನ್ನು ಏರ್ ಕ್ರಾಫ್ಟ್ ಟರ್ಬೈನ್ ಫ್ಯೂಲ್ ಎಂದು ಕರೆಯಲಾಗುತ್ತದೆ. ವಿಮಾನದ ಇಂಜಿನ್ ಆಧಾರದ ಮೇಲೆ, ಅವುಗಳಿಗೆ ಯಾವ ರೀತಿಯ ಇಂಧನವನ್ನು ಬಳಸಬೇಕು ಎಂದು ನಿರ್ಧರಿಸಲಾಗುತ್ತದೆ. ವಿಮಾನಗಳಿಗೆ ಸಾಮಾನ್ಯವಾಗಿ ಎರಡು ರೀತಿಯ ಇಂಧನವನ್ನು ಬಳಸುತ್ತಾರೆ. ಇವುಗಳನ್ನು ಜೆಟ್ ಇಂಧನ ಹಾಗೂ ಅವಿಗಾಸ್ ಎಂದು ಕರೆಯಲಾಗುತ್ತದೆ. ಜೆಟ್ ಇಂಧನವನ್ನು ಇಂಜಿನ್ ಗಳಿಗೆ ಶಕ್ತಿ ತುಂಬಲು ಬಳಸಲಾಗುತ್ತದೆ. ಮತ್ತು ಅವಿಗಾಸ್ ಅನ್ನು ಸಣ್ಣ ಟರ್ಬೊಪ್ರಾಪ್ ವಿಮಾನಗಳಲ್ಲಿ ಇಂಜಿನ್ ಪಿಸ್ಟನ್ ಗಳನ್ನು ಓಡಿಸಲು ಬಳಸಲಾಗುತ್ತದೆ.
ವಿಮಾನಕ್ಕೆ ಬಳಕೆ ಮಾಡುವ ಇಂಧನವನ್ನು ಏರ್‌ಕ್ರಾಫ್ಟ್ ಟರ್ಬೈನ್ ಫ್ಯೂಲ್ (ATF) ಎಂದು ಕರೆಯಲಾಗುತ್ತದೆ. ವಿಮಾನಗಳ ಎಂಜಿನ್ ಮಾದರಿಯ ಆಧಾರದ ಮೇಲೆ, ಅವುಗಳಿಗೆ ಯಾವ ರೀತಿಯ ಇಂಧನವನ್ನು ಬಳಸಬೇಕು ಎಂದು ನಿರ್ಧರಿಸಲಾಗುತ್ತದೆ. ಸಾಮಾನ್ಯವಾಗಿ, ವಿಮಾನಗಳಲ್ಲಿ ಎರಡು ರೀತಿಯ ಇಂಧನವನ್ನು ಬಳಸಲಾಗುತ್ತದೆ. ಈ ಇಂಧನಗಳು ಜೆಟ್ ಇಂಧನ ಮತ್ತು ಅವಿಗಾಸ್ ಎಂದು ಹೇಳಲಾಗುತ್ತದೆ. ಜೆಟ್ ಇಂಧನವನ್ನು ಜೆಟ್ ಇಂಜಿನ್’ಗಳಿಗೆ ಶಕ್ತಿ ತುಂಬಲು ಬಳಸಲಾಗುತ್ತದೆ. ಅವಿಗಾಸ್ ಅನ್ನು ಸಣ್ಣ ಟರ್ಬೊಪ್ರಾಪ್ ವಿಮಾನಗಳಲ್ಲಿ ಎಂಜಿನ್ ಪಿಸ್ಟನ್’ಗಳನ್ನು ಓಡಿಸಲು ಬಳಸಲಾಗುತ್ತದೆ.