Indias First Underwater Metro : ಭಾರತದ ಮೊದಲ ನೀರೊಳಗಿನ ಮೆಟ್ರೋ! ಇಲ್ಲಿದೆ ಹೆಚ್ಚಿನ ವಿವರ!
Underwater Metro : ನಾವು ಸಾಮಾನ್ಯವಾಗಿ ಭೂಮಿಯ ಮೇಲೆ ಚಲಿಸುವ ಮೆಟ್ರೋಗಳನ್ನು(metro) ನಾವು ನೋಡಿದ್ದೇವೆ ಅದರ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಮೊದಲ ನೀರೊಳಗಿನ ಮೆಟ್ರೋ ಪ್ರಯೋಗಿಕ ಸಂಚಾರ ನಡೆಸಲು ಸಿದ್ದವಾಗಿದೆ. ಹಾಗಾದರೆ ಭೂಮಿಯ (Earth) ಮೇಲೆ ಚಲಿಸುವ ಮೆಟ್ರೋ ಗಳ ಹಾಗೇನೇ ನೀರಿನ (water) ಒಳಗೆ ಚಲಿಸುವ ಮೆಟ್ರೋಗಳು ಇರಬಹುದು ಎಂಬ ನೋಡುವ ಕುತೂಹಲ ನಿಮಗಿಲ್ಲವೇ. ಈ ನೀರೊಳಗಿನ ಮೆಟ್ರೋ ಗಳನ್ನು ಯಾವ ರೀತಿ ತಯಾರಿಸಬಹುದು, ಯಾವ ರೀತಿ ಇರಬಹುದು ಎಂಬುದರ ಇಂಟರೆಸ್ಟಿಂಗ್ ವಿಷಯ (interesting topic) ಒಮ್ಮೆ ಓದಿ.
ಹೌದು, ದೇಶದಲ್ಲಿ ಮೊದಲನೆಯ ಸಾರಿ ಈ ಮೆಟ್ರೋ ಸಂಚಾರ (metro travel) ಆರಂಭವಾಗುತ್ತಿದೆ. ಏಪ್ರಿಲ್ 9ರಂದು ಹೂಗ್ಲಿ (Hooghly) ನದಿಯ ನೀರೊಳಗಿನ ಸುರಂಗದ ಅಡಿಯಲ್ಲಿ ಆರು ಕೋಚ್‌ನ ಎರಡು ಮೆಟ್ರೋ ರೈಲುಗಳ ಪ್ರಾಯೋಗಿಕ ಸಂಚಾರ ಮಾಡಲು ಸಜ್ಜಾಗಿದೆ.ಇದು ಭಾರತದ ಮೊಟ್ಟಮೊದಲ ನೀರೊಳಗಿನ ವಿಭಾಗವಾಗಿದೆ. ಕೋಲ್ಕತ್ತಾ ಪೂರ್ವ-ಪಶ್ಚಿಮ ಮೆಟ್ರೋ ಯೋಜನೆಯ ಭಾಗವಾಗಿ ಎರಡು – ಆರು ಬೋಗಿಗಳನ್ನು ಹೊಂದಿರುವ ಪ್ರಯೋಗಕ್ಕೆ ನೀರೊಳಗಿನ ಮೆಟ್ರೋ( Underwater Metro) ಗಳನ್ನು ಸಿದ್ಧಗೊಳಿಸಲಾಗಿದೆ.
ಈ ನೀರೊಳಗಿನ ಮೆಟ್ರೋ ಯಾವ ರೀತಿ ಕಾರ್ಯನಿರ್ವಹಿಸುತ್ತದೆ(work) ಎಂದರೆ ಸಾಲ್ಟ್ ಲೇಕ್‌ನಲ್ಲಿರುವ ಹೌರಾ ಮೈದಾನ ಮತ್ತು ಸೆಕ್ಟರ್ 5 ಅನ್ನು ಸಂಪರ್ಕಿಸುವ ಪೂರ್ವ ಪಶ್ಚಿಮ ಮೆಟ್ರೋ ಕಾರಿಡಾರ್ ಸೆಕ್ಟರ್ 5 ನಿಲ್ದಾಣ ಮತ್ತು ಸೀಲ್ದಾ ನಡುವೆ ಇದು ಕೆಲಸ ಮಾಡುತ್ತದೆ. ಎರಡು ಆರು ಬೋಗಿಗಳನ್ನು ಹೊಂದಿರುವ ಈ ಮೆಟ್ರೋ ರೈಲು ಎಸ್ಪ್ಲೇನೇಡ್(Esplanade) ಮತ್ತು ಹೌರಾ ಮೈದಾನದ ನಡುವಿನ 4.8 ಕಿಲೋಮೀಟರ್ ವ್ಯಾಪ್ತಿಯಲ್ಲಿ ಅಂದರೆ ದೂರದಲ್ಲಿ ಜನಗಳನ್ನು ಹೊತ್ತುಕೊಂಡು ಪ್ರಾಯೋಗಿಕವಾಗಿ ಸಂಚಾರ ಮಾಡಲಿದೆ.
1984 ರಲ್ಲಿ ಕೋಲ್ಕತ್ತಾದಲ್ಲಿ ಮತ್ತು ನಂತರ 2002 ರಲ್ಲಿ ದೆಹಲಿ ದೇಶದ ಮೊದಲ ಮೆಟ್ರೋ ರೈಲು ಪ್ರಾರಂಭವಾಯಿತು ಆದರೆ ಇದೀಗ ಈ ನೀರೊಳಗಿನ ಮೆಟ್ರೋ ಪ್ರಾಯೋಗಿಕ ಸಂಚಾರ ಶುರುವಾಗುವುದರಿಂದ ಕೋಲ್ಕತ್ತಾ ಮೆಟ್ರೋ(Kolkata metro) ಕಿರೀಟಕ್ಕೆ ಮತ್ತೊಂದು ಹೊಸ ರೀತಿಯ ಗರಿ ಸೇರ್ಪಡೆಯಾಗಲಿದೆ. ಸೆಕ್ಟರ್ 5 ಮತ್ತು ಸೀಲ್ಡಾ ನಡುವಿನ ವಿಭಾಗವು ಸಂಪೂರ್ಣವಾಗಿ ಈಗಾಗಲೇ ಕಾರ್ಯನಿರ್ವಹಿಸುತ್ತಿದೆ ಅಂದರೆ ಯಥಾ ಪ್ರಕಾರವಾಗಿ ಕೆಲಸ ಮಾಡುತ್ತಿದೆ. ಆದರೆ ಆಗಸ್ಟ್ 2019 ರಲ್ಲಿ ನಡೆದ ಮೂರು ಪ್ರಮುಖ ಕುಸಿತದ ಘಟನೆಗಳಿಂದ ಸೀಲ್ಡಾ (Sealdah) ಮತ್ತು ಎಸ್ಪ್ಲಾನೇಡ್ ನಡುವಿನ ವಿಭಾಗವು ವಿಳಂಬವಾಗಿದೆ ಅಂದರೆ ಸೀಲ್ಡಾ ಮತ್ತು ಎಸ್ಪ್ಲಾನೇಡ್ ಬೇರೆ ಬೇರೆಯಾಗಿದೆ.
ಮೆಟ್ರೋ ಅಧಿಕಾರಿಗಳು ತಿಳಿಸಿದ ಮಾಹಿತಿಯ ಪ್ರಕಾರ ಸಾಲ್ಟ್ ಲೇಕ್ ಮತ್ತು ಹೌರಾ ನಡುವೆ ನಾಳೆ ನಡೆಯಲಿರುವ ಪ್ರಯೋಗಿಕ ಸಂಚಾರ ಸೀಲ್ದಾ ಮತ್ತು ಎಸ್ಪ್ಲಾನೇಡ್ ಸುರಂಗದ ಮೂಲಕ ಯಶಸ್ವಿಯಾಗಿ ಈ ಮೆಟ್ರೋ ಹಾದುಹೋಗಲಿದೆ. ಸೀಲ್ದಾಹ್ ಮತ್ತು ಎಸ್ಪ್ಲೇನೇಡ್ ನಡುವಿನ ಟ್ರ್ಯಾಕ್ ಹಾಕುವಿಕೆಯು ಈಗಾಗಲೇ ಕೆಲಸ ಆಗಿದೆ ಎಂಬ ಮಾಹಿತಿಯನ್ನು ವರದಿಯಲ್ಲಿ ತಿಳಿಸಲಾಗಿದೆ. ಆದಾಗ್ಯೂ, ಇದೀಗ ಎರಡು ಪ್ರಾಯೋಗಿಕ ರೈಲುಗಳ ಸಾಗಣೆಗಾಗಿ ತಾತ್ಕಾಲಿಕ ಹಳಿಗಳನ್ನು ಹಾಕುವ ಮೂಲಕ ಅಂತರವನ್ನು ಕಡಿಮೆ ಮಾಡಲಾಗಿದೆ.
ಸೀಲ್ದಾಹ್ ನಿಲ್ದಾಣದವರೆಗೆ, ರೈಲುಗಳು ಸೀಲ್ಡಾದಿಂದ ಎಸ್ಪ್ಲಾನೇಡ್‌ಗೆ ಸಾಮಾನ್ಯವಾಗಿ ಓಡುತ್ತವೆ. ಆದರೆ ಅವುಗಳನ್ನು ಬ್ಯಾಟರಿ (battery) ಚಾಲಿತ ಲೊಕೊದಿಂದ ಸುರಂಗವಾಗಿ ಓಡಿಸಲಾಗುತ್ತದೆ. ನಂತರ ಮತ್ತೆ ಎಸ್‌ಪ್ಲೇನೇಡ್‌ನಿಂದ ಹೌರಾಗೆ ಅವು ಸಾಮಾನ್ಯವಾಗಿ ಸಂಚರಿಸುತ್ತ ಕೆಲಸ ಮಾಡುತ್ತದೆ. ಬ್ಯಾಟರಿ ಚಾಲಿತ ಲೊಕೊವನ್ನು ಇನ್ನೂ ವಿದ್ಯುದ್ದೀಕರಿಸಿದ ಮೂರನೇ ಹಳಿಗಳನ್ನು ಹೊಂದಿಲ್ಲದಿರುವುದರಿಂದ ಇದನ್ನು ಬಳಸಲಾಗುತ್ತದೆ ಎಂದು ಅಧಿಕಾರಿಗಳು ಈ ಮೂಲಕ ತಿಳಿಸಿದ್ದಾರೆ.
ಈ ಹಿಂದೆ ಕೆಎಂಆರ್‌ಸಿ(KMRC) ಭಾರತದ ಮೊದಲ ನೀರೊಳಗಿನ ಮೆಟ್ರೋಗಳ ಬಗ್ಗೆ ಮಾತನಾಡಿದ ಸಿವಿಲ್ ಕೆಎಂಆರ್‌ಸಿ ಜನರಲ್ ಮ್ಯಾನೇಜರ್ ಶೈಲೇಶ್ ಕುಮಾರ್(Shailesh Kumar), ಚಾಲ್ತಿಯಲ್ಲಿರುವ ಪೂರ್ವ-ಪಶ್ಚಿಮ ಮೆಟ್ರೋ ಕಾರಿಡಾರ್ (metro corridor) ಯೋಜನೆಯು ಡಿಸೆಂಬರ್ 2023 ರ ವೇಳೆಗೆ ಇದರ ಕೆಲಸ ಪೂರ್ಣಗೊಂಡು ಈ ಮೆಟ್ರೋ ಚಲಿಸುವ ನಿರೀಕ್ಷೆಯಿದೆ. ಹಾಗೆಯೇ ಇನ್ನೂ ಕೆಲವು ಕಾರ್ಯಗಳು ಪ್ರಕ್ರಿಯೆಯಲ್ಲಿವೆ ಮತ್ತು ಇತರ ಸಮಸ್ಯೆಗಳು ನೀರೊಳಗಿನ ಮೆಟ್ರೋ ಯೋಜನೆಯನ್ನು ಪೂರ್ಣಗೊಳಿಸಲು ವಿಳಂಬ ಮಾಡುತ್ತಿವೆ ಎಂದು ಹೇಳಿದ್ದಾರೆ.
ಭಾರತದಲ್ಲಿ ಮೊದಲ ಬಾರಿ ನೀರೊಳಗಿನ ಮೆಟ್ರೋ ರೈಲು ಪ್ರಾರಂಭವಾಗುವುದನ್ನು ಲಂಡನ್ ಮತ್ತು ಪ್ಯಾರಿಸ್(London and Paris) ಅನ್ನು ಸಂಪರ್ಕಿಸುವ ಯುರೋಸ್ಟಾರ್‌ಗೆ (eurostar) ಹೋಲಿಸಲಾಗಿದೆ. ಸುರಂಗವು ನೀರಿನ ಪ್ರವೇಶ ಸಾಧ್ಯತೆಯನ್ನು ಕಡಿಮೆ ಮಾಡುವ ವಸ್ತುವಿನಿಂದ ಕೂಡಿದೆ ಮತ್ತು ಹೂಗ್ಲಿ ನದಿಪಾತ್ರದ ಕೆಳಗೆ 13 ಮೀಟರ್‌ಗಳಷ್ಟು ಇರುತ್ತದೆ. ಕೋಲ್ಕತ್ತಾ ಮೆಟ್ರೋ ರೈಲ್ವೇ ಕಾರ್ಪೊರೇಷನ್ ಜರ್ಮನ್ ಯಂತ್ರಗಳು ಮತ್ತು ಅತ್ಯುತ್ತಮ ಸಂಶೋಧಕರ (scientist) ಸಹಾಯದಿಂದ ಸುರಂಗವನ್ನು ತಯಾರಿಸಿ ಮೆಟ್ರೋ ಚಲಿಸುವಂತಹ ಕಷ್ಟಕರವಾದ ಕೆಲಸವನ್ನು ಕೈಗೆತ್ತಿಕೊಂಡಿದೆ ಎಂದು ಈ ಮೂಲಕ ಮಾಹಿತಿಯನ್ನು ತಿಳಿಸಲಾಗಿದೆ.
I don’t think the title of your article matches the content lol. Just kidding, mainly because I had some doubts after reading the article.
Can you be more specific about the content of your article? After reading it, I still have some doubts. Hope you can help me.