Village Stay and Money : ಈ ಹಳ್ಳಿಯಲ್ಲಿ ನೀವು ವಾಸ ಮಾಡಿದರೆ ನಿಮಗೆ ದೊರಕುತ್ತೆ ಅರ್ಧ ಕೋಟಿ ರೂಪಾಯಿ!

Village Stay and Money : ಸುಂದರವಾದ ಪ್ರದೇಶದಲ್ಲಿ ಒಂದು ವಿಶಾಲವಾದ ಮನೆಯನ್ನು ಕಟ್ಟಬೇಕು ಎಂಬುದು ಎಲ್ಲರ ಕನಸು. ಆದರೆ ಇದಕ್ಕೆಲ್ಲ ಸಾಕಷ್ಟು ಹಣ ಬೇಕಾಗುತ್ತದೆ. ಇದರಿಂದಲೇ ಎಷ್ಟೋ ಜನ ತಮ್ಮ ಕನಸನ್ನು ಹಾಗೆಯೇ ಬಿಟ್ಟು ಬಿಡುತ್ತಾರೆ. ಆದರೆ ನಿಮಗೆ ಹಣವನ್ನು ನೀಡಿ ಸುಂದರವಾದ ಸ್ಥಳದಲ್ಲಿ ವಾಸವಾಗಿ(Village Stay and Money)ಎಂದರೆ ಎಷ್ಟು ಸಂತೋಷ ಅಲ್ವಾ?

ಅಂತಹದೊಂದು ವಿಚಾರ ಇದೀಗ ಚರ್ಚೆಯಲ್ಲಿದೆ. ಈ ಸ್ಥಳಕ್ಕೆ ವಾಸಿಸಲು ನಿಮಗೆ ಒಂದಲ್ಲ ಎರಡಲ್ಲ ಬರೋಬ್ಬರಿ 49 ಲಕ್ಷವನ್ನು ನೀಡುತ್ತಾರೆ.

ಈ ಗ್ರಾಮವು ಹಿಮಭರಿತ ಪರ್ವತಗಳಿಂದ ಕೂಡಿದ್ದು, ಸುಮಾರು 4,265 ಅಡಿ ಇದೆ. ಈ ಸುಂದರವಾದ ಜಾಗದಲ್ಲಿ ವಾಸವಾಗಿದ್ದರೆ ಸರ್ಕಾರವು ಹಣ ನೀಡುತ್ತಿದೆ. ಸರ್ಕಾರ ಯಾಕೆ ಹೀಗೆ ಮಾಡುತ್ತಿದೆ ಎಂದು ನೀವು ಯೋಚಿಸುತ್ತಿದ್ದಿರಾ?

ಕೆಲ ವರ್ಷಗಳಿಂದ ಈ ಗ್ರಾಮದಲ್ಲಿ ಜನರು ವಾಸಿಸುತ್ತಿಲ್ಲ, ಜನರು ಈ ಸ್ಥಳವನ್ನು ತೊರೆಯುತ್ತಿದ್ದಾರೆ. ಇಲ್ಲಿ ಕೇವಲ ಕೆಲವು ಮಂದಿ ವಾಸವಾಗಿದ್ದಾರೆ ಅಷ್ಟೇ. ಕಳೆದ 2018 ರಿಂದ , ಈ ಗ್ರಾಮದ ಜನಸಂಖ್ಯೆಯನ್ನು ಹೆಚ್ಚಿಸಲು ಸರ್ಕಾರವು ಜನರಿಗೆ ಹಣವನ್ನು ನೀಡುತ್ತಿದೆ.

ಈ ಗ್ರಾಮದಲ್ಲಿ ವಾಸಿಸುವವರಿಗೆ ಕರೆನ್ಸಿಯಲ್ಲಿ 49 ಲಕ್ಷವನ್ನು ನೀಡುತ್ತಾರೆ. ಅಂದರೆ ಭಾರತೀಯ ರೂಪಾಯಿಯಲ್ಲಿ 50,000. ನಾಲ್ಕು ಜನರು ಇರುವ ಕುಟುಂಬಕ್ಕೆ, ಪ್ರತಿ ವಯಸ್ಕ ಸದಸ್ಯರಿಗೆ ರೂ. 22 ಲಕ್ಷ ಮತ್ತು ಮಕ್ಕಳಿಗೆ ರೂ. 8 ಲಕ್ಷವನ್ನು ನೀಡಲಾಗುತ್ತದೆ.

ಹತ್ತು ವರ್ಷಗಳ ಕಾಲ ಈ ಹಳ್ಳಿಯಲ್ಲಿ ಇದ್ದರೆ ಮನೆಯ ಮೌಲ್ಯ ಹೆಚ್ಚಾಗುತ್ತದೆ. ಆದರೆ ನೆನಪಿನಲ್ಲಿಡಿ ಅದಕ್ಕಿಂತ ಮೊದಲು ನೀವೇನಾದರೂ ಸ್ಥಳವನ್ನು ಬಿಟ್ಟರೆ ನಿಮಗೆ ನೀಡಿದ ಹಣವನ್ನು ಸರ್ಕಾರಕ್ಕೆ ವಾಪಸ್ ಮಾಡಬೇಕಾಗುತ್ತದೆ.

ಫ್ರಾನ್ಸ್ ಮತ್ತು ಇಟಲಿಯ ಗಡಿಯಲ್ಲಿರುವ ಈ ಗ್ರಾಮದ ಹೆಸರು ಅಲ್ಟಿನೆನ್ ಆಗಿದೆ. ಇದು ಸ್ವಿಸರ್ಲಾಂಡ್ ನಲ್ಲಿರುವ ವಲೈಸ್ ಪ್ರಾಂತ್ಯದಲ್ಲಿದೆ.

ಈ ಹಳ್ಳಿಯಲ್ಲಿ ವಾಸವಾಗಿರಲು ಕೆಲವು ಷರತ್ತುಗಳಿವೆ. ಈ ಷರತ್ತಿನ ಪ್ರಕಾರ ನೀವು ಅಲ್ಲಿಯ ಪ್ರಜೆಯಾಗಿರಬೇಕು ಮತ್ತು 45 ವರ್ಷಕ್ಕಿಂತ ಕಡಿಮೆ ವಯಸ್ಸಾಗಿರಬೇಕು.

ಇದನ್ನು ಓದಿ : Kempegowda International Airport Recruitment : ಕೆಂಪೇಗೌಡ ಇಂಟರ್‌ನ್ಯಾಷನಲ್‌ ಏರ್‌ಪೋರ್ಟ್‌ನಲ್ಲಿ ಡ್ರೈವರ್‌ ಕೆಲಸ! ಈ ಕೂಡಲೇ ಅರ್ಜಿ ಸಲ್ಲಿಸಿ

Leave A Reply

Your email address will not be published.