Husband of more than hundred wife: ಜಗತ್ತಿನಾದ್ಯಂತ ಹೆಂಡತಿಯರನ್ನು ಹೊಂದಿದ್ದ ಈತ ನೂರಕ್ಕೂ ಅಧಿಕ ಹೆಂಡಿರನ್ನು ವರಿಸಿ ಗಿನ್ನೆಸ್ ರೆಕಾರ್ಡ್ ಮಾಡಿದ್ದ!

Husband of more than hundred wife : ಒಬ್ಬಳು ಹೆಂಡತಿ (Wife), ಒಂದು ಇಲ್ಲ 2 ಮಕ್ಕಳನ್ನು (Children) ನಿಭಾಯಿಸುವುದರಲ್ಲೇ ಸಾಮಾನ್ಯವಾಗಿ ಪತಿಯರು (Husband) ಸುಸ್ತಾಗಿ ಹೋಗುತ್ತಾರೆ. ಕೆಲವರು ಒಬ್ಬಳನ್ನು ಮದುವೆಯಾದ ಬಳಿಕ ಗುಟ್ಟಾಗಿ ಎರಡನೇ ಮದುವೆಯಾಗಿ ಬೇರೆ ಕಡೆ ಸಂಸಾರ ನಡೆಸುತ್ತಿರುತ್ತಾರೆ. ಆದರೆ ಇಲ್ಲೊಬ್ಬನದ್ದು ಊಹಿಸಲಾಗದಂಥ ಸಂಸಾರ. ಯಾಕೆಂದರೆ ಈತನಿಗೆ ಜಗತ್ತಿನಾದ್ಯಂತ ಹೆಂಡತಿಯರು (Husband of more than hundred wife). ಅಂದರೆ ಈತ ಬರೋಬ್ಬರಿ 104 ಮದುವೆ ಆಗಿದ್ದಾನೆ!

 

ಅಸಲಿ ಹೆಸರನ್ನು ಹೇಳದ ಜಿಯೊವನ್ನಿ ವಿಗ್ಲಿಯೊಟೊ (Giovanni Vigliotto) ಎಂಬ ಹೆಸರಿನ ಅಸಾಮಿ 33 ವರ್ಷಗಳಲ್ಲಿ ಯಾರಿಗೂ ವಿಚ್ಛೇದನ ಕೊಡದೆ, ಒಬ್ಬರಾದ ಮೇಲೆ ಒಬ್ಬರಂತೆ ಒಟ್ಟು 104 ಮದುವೆಯಾಗಿದ್ದ. ಯುಎಸ್​​ನ​ 27 ರಾಜ್ಯಗಳಲ್ಲಿ ಮಾತ್ರವಲ್ಲದೆ, ಜಗತ್ತಿನ ಇತರ 14 ದೇಶಗಳಲ್ಲಿನ ಮಹಿಳೆಯರನ್ನು ಈತ ವರಿಸಿದ್ದಾನೆ. ವಿಶೇಷವೆಂದರೆ ಅತಿಹೆಚ್ಚು ಮದುವೆ ಆಗಿರುವ ವಿಚಾರದಲ್ಲಿ ವಿಶ್ವದಾಖಲೆಗೂ ಪಾತ್ರನಾಗಿದ್ದಾನೆ.

ಹೌದು, ಈ ಭೂಪ ತನ್ನ ಗುರುತು ಮರೆಮಾಚಿ ಮಹಿಳೆಯರನ್ನು ಮರುಳು ಮಾಡಿ ಮದುವೆಯಾಗುವ ಈತ ಮುಂಚಿತವಾಗಿ ಹಲವಾರು ಯೋಜನೆಗಳನ್ನು ಹಾಕಿದ್ದಾನೆ. ಮದುವೆಯಾಗೋ ಎಲ್ಲಾ ಮಹುಳೆಯರಿಗೆಲ್ಲಾ “ನಾನು ದೂರದಲ್ಲಿ ನೆಲೆಸಿರುವುದರಿಂದ ನೀನು ಎಲ್ಲ ಗಂಟುಮೂಟೆ ಕಟ್ಟಿಕೊಂಡು ಬಾ” ಎಂದು ಹೇಳುತ್ತಿದ್ದ. ಆಕೆ ತಂದ ವಸ್ತುಗಳನ್ನು ಪ್ಯಾಕೇಜ್ ಲಾರಿಗೆ ಹಾಕಿಸಿ ಪರಾರಿಯಾಗುವ ಈತ ನಂತರ ಸಿಗುತ್ತಿರಲಿಲ್ಲ. ಬಳಿಕ ಈತ ಆ ವಸ್ತುಗಳನ್ನು ಸೆಕೆಂಡ್​ ಹ್ಯಾಂಡ್ ಮಾರುಕಟ್ಟೆಯಲ್ಲಿ ಮಾರುತ್ತಿದ್ದ. ಅಮೆರಿಕದಲ್ಲಿನ ಇತರ ಸಾಮಾನ್ಯ ಪುರುಷರಿಗಿಂತ ಭಿನ್ನವಾಗಿ ಈತ ಮಹಿಳೆಯರೊಂದಿಗೆ ವರ್ತಿಸುತ್ತಿದ್ದುದರಿಂದ ಅವರು ಈತನಿಗೆ ಮರುಳಾಗುತ್ತಿದ್ದರು.

ಹೀಗೆ ಮಹಿಳೆಯರನ್ನು ವಂಚಿಸಿ, ವರಿಸುತ್ತಿದ್ದ ಈತ ಕೊನೆಗೂ ಸಿಕ್ಕಿಬಿದ್ದ. ಮದುವೆಯಾಗಿ ವಂಚಿಸಿದ್ದ ಪ್ರಕರಣಗಳಲ್ಲಿ ಈತನಿಗೆ ಒಟ್ಟು 34 ವರ್ಷದ ವರೆಗೆ ಶಿಕ್ಷೆಯಾಯಿತು. 3,36,000 ಡಾಲರ್ ದಂಡ ವಿಧಿಸಲಾಗಿತ್ತು. ಅರಿಜೋನಾ ಸ್ಟೇಟ್ ಪ್ರಿಸನ್​ನಲ್ಲಿ 8 ವರ್ಷದ ಶಿಕ್ಷೆ ಮುಗಿಯುವಷ್ಟರಲ್ಲಿ ಈತ ಬ್ರೇನ್ ಹ್ಯಾಮರೇಜ್​ನಲ್ಲಿ 1991ರಲ್ಲಿ ಮೃತಪಟ್ಟಿದ್ದ. ಅಂದು ಸಾವಿಗೀಡಾಗಿದ್ದ ಈತನ ಕುರಿತು ಗಿನ್ನೆಸ್​ ವರ್ಲ್ಡ್ ರೆಕಾರ್ಡ್ಸ್​ ಇತ್ತೀಚೆಗೆ ಟ್ವೀಟ್​ ಮಾಡಿದ್ದರಿಂದ ಮತ್ತೆ ಈತನ ವಿಚಾರ ಮುನ್ನೆಲೆಗೆ ಬಂದಿದ್ದು, ಈತನ ವಿಚಾರ ಎಲ್ಲೆಡೆ ಭಾರೀ ವೈರಲ್ ಆಗ್ತಿದೆ.

1 Comment
  1. binance registrācija says

    Your article helped me a lot, is there any more related content? Thanks!

Leave A Reply

Your email address will not be published.