Online Medicine Purchase : ಆನ್ಲೈನ್ ಔಷಧಿ ಖರೀದಿಸುವ ಮುನ್ನ ಎಚ್ಚರ! ಅಧ್ಯಯನದಲ್ಲಿ ಬಹಿರಂಗವಾಗಿದೆ ‘ಸೈಬರ್ ಕಾಂಡ್ರಿಯಾಸಿಸ್’ ಆರೋಗ್ಯ ಸಮಸ್ಯೆ

Share the Article

Online Medicine Purchase : ಮುಂದುವರಿದ ಜಗತ್ತಿನಲ್ಲಿ ಪ್ರತಿಯೊಂದು ಕೆಲಸವೂ ಆನ್ಲೈನ್ ಮಯವಾಗಿ ಹೋಗಿದೆ. ಪುಟ್ಟ ವಸ್ತುವಿನಿಂದ ಹಿಡಿದು ಆಹಾರದ ವರೆಗೆ ಎಲ್ಲಾ ವಸ್ತುಗಳನ್ನು ಆನ್ಲೈನ್ ಮೂಲಕವೇ ಖರೀದಿ ಮಾಡುವಂತೆ ಆಗಿದೆ. ಅಲ್ಲದೆ ಯಾವುದೇ ವ್ಯವಹಾರ ನಡೆಸಬೇಕಾದರೂ ಯುಪಿಐ ಪೇಮೆಂಟ್ ಗಳ ಮೂಲಕವೇ ನಡೆಯುತ್ತಿದೆ.

ಅಷ್ಟೇ ಅಲ್ಲದೆ ಅನಾರೋಗ್ಯ ಎಂದಾಗ ವೈದ್ಯರನ್ನು ಭೇಟಿಯಾಗುತ್ತಿದ್ದ ಜನರು, ಇದೀಗ ಆನ್ಲೈನ್ ಔಷಧಿಗಳತ್ತ(Online Medicine Purchase) ಮುಖ ಮಾಡಿದ್ದಾರೆ. ಇಂತಹ ಬೆಳವಣಿಗೆಯ ನಡುವೆ ನಿಮಾನ್ಸ್ ಸಂಸ್ಥೆ ಅಧ್ಯಯನವೊಂದನ್ನು ನಡೆಸಿದ್ದು, ಆತಂಕದ ವಿಚಾರ ಹೊರಹಾಕಿದೆ.

ಸೈಬರ್ ಕಾಂಡ್ರಿಯಾಸಿಸ್ ಹರಡುವಿಕೆಯ ಕುರಿತು ಬೆಂಗಳೂರಿನಲ್ಲಿ ಇದು ಮೊದಲ ಅಧ್ಯಯನವಾಗಿದ್ದು, ನಿಮ್ಹಾನ್ಸ್‌ ಮನೋವೈದ್ಯಕೀಯ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥ ಡಾ.ಬಿ.ಪಿ ನಿರ್ಮಲಾ ರವ್ರ ತಂಡ ‌ಅಧ್ಯಯನ‌ ಮಾಡಿದೆ. ಅಧ್ಯಯನವು ಸ್ಮಾರ್ಟ್ ಫೋನ್ ಚಟ ಮತ್ತು ಭಾಗವಹಿಸುವವರಲ್ಲಿ ಆರೋಗ್ಯದ ಆತಂಕದ ಬಗ್ಗೆ ವಿವರಿಸಿದೆ.

ಹೌದು. ನಿಮಾನ್ಸ್ ಸಂಸ್ಥೆ ಅಧ್ಯಯನದ ಪ್ರಕಾರ ಬೆಂಗಳೂರಿನ ಯುವಜನರು ಆನ್‌ಲೈನ್‌ನಲ್ಲಿ ಹೆಚ್ಚಾಗಿ ಆರೋಗ್ಯದ ಬಗ್ಗೆ ಮಾಹಿತಿಯನ್ನು ಹುಡುಕುತ್ತಿದ್ದಾರೆ. ಇದನ್ನು ‘ಸೈಬರ್ ಕಾಂಡ್ರಿಯಾಸಿಸ್’ ಎಂದು ಕರೆಯಲಾಗುತ್ತದೆ. ಸೈಬರ್ ಕಾಂಡ್ರಿಯಾಸಿಸ್ ಪ್ರಮುಖ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿ ಪರಿಣಮಿಸುತ್ತಿದ್ದು, ಇದರಿಂದ ವ್ಯಕ್ತಿಯು ಪೂರ್ವಗ್ರಹ ಪೀಡಿತರಾಗಬಹುದು ಹಾಗೂ ವೈದ್ಯರನ್ನು ಬದಲಾಯಿಸಬಹುದು ಅಥವಾ ವೈದ್ಯರೊಂದಿಗಿನ ಅವರ ಸಂಬಂಧದ ಮೇಲೆ ಪರಿಣಾಮ ಬೀರಬಹುದು.

ಅಲ್ಲದೆ, ಸ್ವಯಂ-ರೋಗನಿರ್ಣಯ ಮತ್ತು ಪರಿಹಾರಗಳನ್ನು ಕಂಡುಕೊಳ್ಳಲು ಪ್ರಯತ್ನಿಸಬಹುದು ಅನ್ನೋದು ಸಂಶೋಧನೆಯಲ್ಲಿ ಬಹಿರಂಗವಾಗಿದೆ. ಈ ಅಧ್ಯಯನದಲ್ಲಿ ಬೆಂಗಳೂರಿನ 356 ಕಾಲೇಜು ವಿದ್ಯಾರ್ಥಿಗಳನ್ನು ಒಳಪಡಿಸಿದ್ದು, ಈ ಪೈಕಿ, 48.6% ವಿದ್ಯಾರ್ಥಿಗಳಲ್ಲಿ ಸೈಬರ್ ಕಾಂಡ್ರಿಯಾಸಿಸ್ ಕಾಣಿಸಿಕೊಂಡಿದೆ. ಅಧ್ಯಯನದಲ್ಲಿ ಭಾಗವಹಿಸಿದವರೆಲ್ಲರೂ 18 ರಿಂದ 25 ವರ್ಷ ವಯಸ್ಸಿನ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಎಂದು ಅಧ್ಯಯನ ಹೇಳಿದೆ.

ಇದನ್ನು ಓದಿ : Congress Leader’s Controversial Statement: ರಾಹುಲ್‌ ಗಾಂಧಿಗೆ ಜೈಲು ಶಿಕ್ಷೆ ನೀಡಿದ ಜಡ್ಜ್‌ ನಾಲಿಗೆಯನ್ನು ಕಟ್ ಮಾಡುತ್ತೇವೆ! ವಿವಾದಿತ ಹೇಳಿಕೆ ನಿಡಿದ ಕಾಂಗ್ರೆಸ್‌ ನಾಯಕ

Leave A Reply