Men’s hands inside underwear while sleeping: ಗಂಡಸರು ಮಲಗುವಾಗ ತಮ್ಮ ಅಂಡರ್‌ವೇರ್ ಒಳಗೆ ಕೈ ಹಾಕೋದ್ಯಾಕೆ ಗೊತ್ತಾ? ಈ ಬಗ್ಗೆ ವಿವರಿಸಿದ ಶ್ರೀ ಸೋಹಂ ಹೇಳಿದ್ದೇನು?
Men’s hands inside underwear : ಜೀವನದಲ್ಲಿ ಪ್ರತಿದಿನವೂ ನಾವು ನಮಗೆ ಗೊತ್ತಿಲ್ಲದಂತೆ ಅನೇಕ ಕೆಲಸಗಳನ್ನು ಮಾಡುತ್ತೇವೆ. ಕೆಲವು ಕ್ರಿಯೆಗಳು ತನ್ ತಾನೇ ನಡೆಯುತ್ತವೆ. ಅವು ಅನುಸರಣೆಯೋ, ಅನುಕರಣೆಯೋ ಅಥವಾ ಪ್ರಕೃತಿ ಸಹಜವಾದದ್ದೋ ಗೊತ್ತಿಲ್ಲ. ಕೆಲವೊಮ್ಮೆ ಅನೇಕರು ಈ ಬಗ್ಗೆ ಹೇಳ್ಕೊಳ್ಳೋದಕ್ಕೆ ನಾಚ್ಕೊಳ್ತಾರೆ, ಮುಜುಗರ ಪಡ್ತಾರೆ. ಆದರೆ ಇದು ವಾಸ್ತವ. ಅದರಲ್ಲೇ ಒಂದಾದ ಅಂಶವೆಂದರೆ ಎಷ್ಟೋ ಜನ ಪುರುಷರು ಮಲಗುವಾಗ ತಮ್ಮ ಅಂಡರ್‌ವೇರ್ ಒಳಗೆ ಕೈ ಇಟ್ಟುಕೊಂಡು (Men’s hands inside underwear) ಮಲಗುತ್ತಾರೆ. ಯಾಕೆ ಹೀಗೆಂದು ಯಾವಾಗಾದರೂ ಯೋಚಿಸಿದ್ದೀರಾ? ಅಥವಾ ಬೇರೆಯವರನ್ನು ಪ್ರಶ್ನಿಸಿದ್ದೀರಾ? ಆದ್ರೆ ಶ್ರೀ ಸೋಹಂ ಎನ್ನುವವರು ಇದರ ಕುರಿತು ಇಂಟ್ರೆಸ್ಟಿಂಗ್ ವಿಷಯ ಹಂಚಿಕೊಂಡಿದ್ದಾರೆ.
ಹೌದು, ಇನ್‌ಸ್ಟಾದಲ್ಲಿ ಶ್ರೀ ಸೋಹಂ ಅನ್ನೋರ ರೀಲ್ಸ್ ಸಖತ್ ಫೇಮಸ್. ಇವರು ಅನೇಕ ಪ್ರಶ್ನೆಗಳಿಗೆ ಮನ ಮುಟ್ಟೋ ಉತ್ತರ ಕೊಡ್ತಾರೆ. ಇವರ ರೀಲ್ಸ್ ಅನ್ನು ಜನ ಇಷ್ಟಪಟ್ಟು ನೋಡ್ತಾರೆ. ಅಲ್ಲದೆ ಇಲ್ಲಿ ಬರೋ ಪ್ರಶ್ನೆಗಳೆಲ್ಲ ನಾವು ನೀವು ರಿಯಲ್ ಲೈಫ್‌ನಲ್ಲಿ ಫೇಸ್ ಮಾಡಿರೋದೆ ಆಗಿರತ್ತೆ. ಆದರೆ ಅವಕ್ಕೆ ಸರಿಯಾದ ಉತ್ತರ ಸಿಗದೆ ಒದ್ದಾಟ ಮಾಡುತ್ತಿರುತ್ತೇವೆ. ಇಂಥಾ ಪ್ರಶ್ನೆಗಳಿಗೆ ಸೋಹಂ ಕೊಡೋ ಉತ್ತರ ಸಖತ್ತಾಗಿರುತ್ತೆ. ಅಂತೆಯೇ ಈ ಅಂಡರ್‌ವೇರ್ ಹಾಗೂ ಅದರೊಳಗಿನ ಕೈ ವಿಚಾರವಾಗಿ ಶ್ರೀ ಸೋಹಂ ಅವರು ಪ್ರತಿಕ್ರಿಯಿಸಿದ್ದಾರೆ.
ಅಂದಹಾಗೆ ಇಲ್ಲೊಬ್ಬ ಶ್ರೀ ಸೋಹಂ ಅವರ ಫಾಲೋವರ್ ಇನ್ಸ್ಟಾಗ್ರಾಮ್ ನಲ್ಲಿ ಸೋಹಂ ಅವರಿಗೆ ಒಂದು ಪ್ರಶ್ನೆ ಕೇಳ್ತಾನೆ. ಕೊಂಚ ಮುಜುಗರ ತರಿಸೋ ಸಂಗತಿಯಾದರೂ ಎಲ್ಲರೂ ತಿಳಿಯಬೇಕಾದ ವಿಚಾರ ಅದು. ಅದೇನೆಂದರೆ ‘ಗಂಡಸರು ಮಲಗುವಾಗ ತಮ್ಮ ಅಂಡರ್‌ವೇರ್ ಒಳಗೆ ಕೈ ಇಟ್ಕೊಂಡು ಮಲಗೋದ್ಯಾಕೆ?’ ಅನ್ನೋದು ಪ್ರಶ್ನೆ. ಅದಕ್ಕೆ ಸೋಹಂ ಅವರು ನೀಡಿರೋ ಉತ್ತರ ವೈಜ್ಞಾನಿಕವಾಗಿದೆ.
“ಎಲ್ಲ ಗಂಡಸರೂ ಮಲಗೋವಾಗ ತಮ್ಮ ಕೈಗಳನ್ನು ಅಂಡರ್‌ವೇರ್ ಒಳಗೆ ಇಟ್ಕೊಳ್ಳೋದಿಲ್ಲ. ಆದರೆ ಒಂದಿಷ್ಟು ಜನಕ್ಕೆ ಆ ಅಭ್ಯಾಸ ಇರುತ್ತೆ. ಅದಕ್ಕೆ ಮುಖ್ಯ ಕಾರಣ ಆ ಜಾಗದಲ್ಲಿ ಸಿಗೋ ಕಂಫರ್ಟ್ ಫೀಲ್. ನಮ್ಮ ಅಂಗೈ, ಪಾದ, ಕಿವಿಯ ಭಾಗಗಳಲ್ಲಿ ಅನೇಕ ನರಗಳಿರುತ್ತವೆ. ಅನೇಕ ನರಗಳ ಎಂಡಿಂಗ್ ಪಾಯಿಂಟ್ ಈ ಭಾಗಗಳಿರುತ್ತೆ. ಹೀಗಾಗಿ ಈ ಭಾಗಗಳಿಗೆ ಒಂದು ಬಗೆಯ ಕಂಫರ್ಟ್ ಆಗ, ಬೆಚ್ಚಗಿನ ಫೀಲ್ ಬೇಕಾಗಿರುತ್ತೆ. ಹೀಗಾಗಿ ಕೈಗಳನ್ನು ಮರ್ಮಾಂಗಗಳಲ್ಲಿ ಇಟ್ಟಾಗ ಒಂದು ಬಗೆಯ ಕಂಫರ್ಟ್ ಫೀಲ್ ಸಿಗುತ್ತದೆ” ಎಂದಿದ್ದಾರೆ.
“ಇನ್ನು ಎರಡನೇ ರೀಸನ್ ಗಂಡಸರ ಜನನಾಂಗ, ಅಂದರೆ ವೃಷಣಗಳು ದೇಹದ ತಾಪಮಾನಕ್ಕೆ ತಕ್ಕ ಹಾಗೆ ತಮ್ಮ ಟೆಂಪರೇಚರ್ ಅನ್ನು ಮಾರ್ಪಾಡು ಮಾಡಿಕೊಳ್ಳುತ್ತ ಇರುತ್ತವೆ. ಹೀಗಾಗಿ ವೃಷಣಗಳ ಗಾತ್ರ ಬದಲಾಗುತ್ತಲೇ ಇರುತ್ತದೆ. ಕೆಲವೊಮ್ಮೆ ಚಿಕ್ಕದಾಗಿದ್ದರೆ ಕೆಲವೊಮ್ಮೆ ಊದಿಕೊಂಡಂತೆ ಇರುತ್ತವೆ. ಕೆಲವೊಮ್ಮೆ ಬಿಗಿಯಾಗಿದ್ದರೆ ಕೆಲವೊಮ್ಮೆ ಜೋತು ಬಿದ್ದ ಹಾಗೆ ಇರುತ್ತವೆ. ಇದಕ್ಕೆ ದೇಹದ ಟೆಂಪರೇಚರ್ ಕಾರಣ, ನಿದ್ದೆ ಮಾಡುವಾಗ ದೇಹ ಕೂಲ್ ಆಗುತ್ತೆ. ಆದರೆ ಈ ನರ್ವ್ ಎಂಡ್‌ಗಳಿಗೆ ಕೊಂಚ ಬೆಚ್ಚನೆಯ ಟೆಂಪರೇಚರ್ ಬೇಕಾಗುತ್ತೆ. ಆಗ ಮತ್ತೆ ಕೈಗಳು ಆ ಭಾಗದತ್ತ ಹೋಗುತ್ತವೆ. ಇದರಲ್ಲಿ ದೊಡ್ಡ ಕಾರಣ ಇಲ್ಲ. ಇದು ಸಹಜ. ಇದರಲ್ಲಿ ಅಶ್ಲೀಲ ಅನಿಸುವಂಥದ್ದು ಏನೂ ಇಲ್ಲ. ಪ್ರಕೃತಿ ಸಹಜ (Normal). ಹೀಗಾಗಿ ಈ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯ ಇಲ್ಲ. ಇದನ್ನು ಸಹಜವಾಗಿ ತೆಗೆದುಕೊಳ್ಳಬಹುದು” ಎಂದು ಸೋಹಂ ಅವರು ಹೇಳ್ತಾರೆ.
ಇದನ್ನೂ ಓದಿ: Career Guidance: ಪಿಯುಸಿಯಲ್ಲಿ ಕಾಮರ್ಸ್ ವಿಭಾಗ ಆಯ್ಕೆ ಮಾಡಿದ್ದೀರಾ? ಹಾಗಾದ್ರೆ ಇಲ್ಲಿದೆ ನಂತರದ ಬೆಸ್ಟ್ ಕೋರ್ಸ್ ಗಳು?