Phonepe : ಫೋನ್ ಪೇ ಕಡೆಯಿಂದ ಹೊಸದಾಗಿ ಪರಿಚಯಿಸಿದೆ ‘ಪಿನ್‌ಕೋಡ್’ ಆಪ್! : ಸರಕು ಮತ್ತು ಸೇವೆಗಳನ್ನು ವಿನಿಮಯ ಮಾಡಿಕೊಳ್ಳಬಹುದಾದ ಈ ಆಪ್ ಕುರಿತು ಇಲ್ಲಿದೆ ಮಾಹಿತಿ!
Phonepe launches pincode app : ಇಂದಿನ ಡಿಜಿಟಲ್ ಯುಗದಲ್ಲಿ ಎಲ್ಲಾ ವಹಿವಾಟುಗಳು ಆನ್ ಲೈನ್ ಮೂಲಕವೇ ನಡೆಯುತ್ತಿದ್ದು, ಕೆಲಸಗಳೆಲ್ಲ ಸುಲಭವಾಗಿ ಕೂತಲ್ಲಿಂದಲೇ ನಡೆಯುವಂತೆ ಆಗಿದೆ. ಇಂತಹ ವಹಿವಾಟಿಗಾಗಿಯೇ ಹಲವು ಯುಪಿಐ ಪೆಮೆಂಟ್ ಆಪ್ ಗಳು ಚಾಲ್ತಿಯಲ್ಲಿದ್ದು, ಇವುಗಳಲ್ಲಿ ಫೋನ್ ಪೇ ಕೂಡ ಸೇರಿದೆ.
ಇದೀಗ ಅತೀ ಹೆಚ್ಚು ಜನರು ಬಳಸುತ್ತಿರುವ ಗೂಗಲ್ ಪೇ ಆಪ್ ಕಡೆಯಿಂದ ಗ್ರಾಹಕರಿಗೆ ಗುಡ್ ನ್ಯೂಸ್ ವೊಂದಿದ್ದು, ಪಿನ್‌ಕೋಡ್ ಎಂಬ ಹೊಸ ಆಪ್ ಪರಿಚಯಿಸಿದೆ. ಈ ಅಪ್ಲಿಕೇಶನ್ ಮೂಲಕ, ಜನರು ದಿನಸಿ, ಔಷಧಿಗಳು ಮತ್ತು ಆಹಾರ ಪದಾರ್ಥಗಳನ್ನು ಆರ್ಡರ್ ಮಾಡಬಹುದಾಗಿದೆ.
ಫೋನ್‌ಪೇ ONDC(ಓಪನ್ ನೆಟ್ವರ್ಕ್ ಫಾರ್ ಡಿಜಿಟಲ್ ಕಾಮರ್ಸ್)ಯ ಭಾಗವಾಗಿರುವ ಪಿನ್‌ಕೋಡ್ ಎಂಬ ಹೊಸ ಆಪ್ ಅನ್ನು ಲಾಂಚ್ (Phonepe launches pincode app) ಮಾಡಿದ್ದು, ಡಿಜಿಟಲ್ ಅಥವಾ ಎಲೆಕ್ಟ್ರಾನಿಕ್ ನೆಟ್‌ವರ್ಕ್‌ಗಳ ಮೂಲಕ ಸರಕು ಮತ್ತು ಸೇವೆಗಳನ್ನು ವಿನಿಮಯ ಮಾಡಿಕೊಳ್ಳಬಹುದಾಗಿದೆ. ಈ ಹೊಸ ಆಪ್ ಸದ್ಯ ಬೆಂಗಳೂರಿನಲ್ಲಿ ಮಾತ್ರ ಪರಿಚಯಿಸಲಾಗಿದೆ.
ಪಿನ್‌ಕೋಡ್ ಹೊಚ್ಚಹೊಸ ಶಾಪಿಂಗ್ ಅಪ್ ಆಗಿದ್ದು, ಇ-ಕಾಮರ್ಸ್‌ಗೆ ಕ್ರಾಂತಿಕಾರಿ ಹೊಸ ವಿಧಾನವನ್ನು ಇದರಿಂದ ಕಂಡುಕೊಳ್ಳಬಹುದು ಎಂದು ಈ ಆಪ್ ಬಿಡುಗಡೆಯ ಕುರಿತು ಸಿಇಒ ಮತ್ತು ಫೋನ್‌ಪೇ ಸಂಸ್ಥಾಪಕ ಸಮೀರ್ ನಿಗಮ್ ಹೇಳಿದ್ದಾರೆ. ಗ್ರಾಹಕರಿಗೆ ಸ್ಪರ್ಧೆಗಿಂತ ಉತ್ತಮ ಮತ್ತು ವ್ಯಾಪಕವಾದ ಉತ್ಪನ್ನಗಳನ್ನು ಒದಗಿಸಲು ಇದು ಮುಂದಾಗಿದ್ದು, ಮತ್ತು ಪ್ರಸಿದ್ಧ ರಾಷ್ಟ್ರೀಯ ಬ್ರ್ಯಾಂಡ್‌ಗಳು ಮತ್ತು ಸ್ಥಳೀಯವಾಗಿ ತಯಾರಿಸಿದ ದಿನಸಿ, ಉಡುಪು, ಎರಡನ್ನೂ ಒಳಗೊಂಡಿರುತ್ತದೆ ಎಂದು ಕಂಪನಿ ಹೇಳಿದೆ.
ಹಾಗೆಯೇ ಪಾದರಕ್ಷೆಗಳು ಸೇರಿದಂತೆ ಇತರೆ ಪರಿಕರಗಳು ಇರಲಿವೆ. ಇದರೊಂದಿಗೆ MSME ಗಳು ಮತ್ತು ರೈತರನ್ನು ಒಳಗೊಂಡಂತೆ ಸಂಪೂರ್ಣ ಸ್ಥಳೀಯ ಪರಿಸರ ವ್ಯವಸ್ಥೆಗೆ ಈ ಆಪ್ ಶಕ್ತಿ ತುಂಬಲಿದೆ. ಪಿನ್‌ಕೋಡ್ ಆಪ್ ಸ್ಥಳೀಯ ವ್ಯಾಪಾರಿಗಳು ಮತ್ತು ಮಾರಾಟಗಾರರನ್ನು ಉತ್ತೇಜಿಸುವ ಗುರಿಯನ್ನು ಹೊಂದಿದ್ದು, ಪ್ರತಿ ನಗರದ ಗ್ರಾಹಕರು ಸಾಮಾನ್ಯವಾಗಿ ಆಫ್‌ಲೈನ್‌ನಿಂದ ಖರೀದಿಸುವ ಎಲ್ಲಾ ನೆರೆಹೊರೆಯ ಅಂಗಡಿಗಳೊಂದಿಗೆ ಆನ್‌ಲೈನ್ ಆರ್ಡರ್, ರಿಯಾಯಿತಿಗಳು ಮತ್ತು ತ್ವರಿತ ಮರುಪಾವತಿಗಳು ಮತ್ತು ರಿಟರ್ನ್ಸ್‌ಗಳ ಅನುಕೂಲದೊಂದಿಗೆ ಡಿಜಿಟಲ್ ಸಂಪರ್ಕವನ್ನು ಕಲ್ಪಿಸುವ ಆಶಯವನ್ನು ಹೊಂದಿದೆ.
Your point of view caught my eye and was very interesting. Thanks. I have a question for you.
Thank you for your sharing. I am worried that I lack creative ideas. It is your article that makes me full of hope. Thank you. But, I have a question, can you help me?