Nirmala Seetharaman : ₹ 2000 ರದ ಬಗ್ಗೆ ಬಿಗ್ ಅಪ್ ಡೇಟ್ ನೀಡಿದ ವಿತ್ತ ಸಚಿವರು! ಇಲ್ಲಿದೆ ನೋಡಿ ಮಹತ್ವದ ಮಾಹಿತಿ!!!

Nirmala Seetharaman :ನಿಮ್ಮ ಬಳಿ ರೂ. 2000 ನೋಟುಗಳು ಇದೆಯಾ?  ಇದ್ದರೆ ಒಮ್ಮೆ ಇಲ್ಲಿ ನೋಡಿ.

ಕೇಂದ್ರ ಸರ್ಕಾರವು ಸುಮಾರು 6 ವರ್ಷದ ನಂತರ ಕರೆನ್ಸಿ ನೋಟುಗಳ ಬಗ್ಗೆ ಮಾಹಿತಿಯೊಂದನ್ನು ಹೊರ ಹಾಕಿದೆ. ಇದರ ಬಗ್ಗೆ  ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Nirmala Seetharaman) ಬಿಗ್ ಅಪ್ ಡೇಟ್ ನೀಡಿದ್ದಾರೆ.

ಇತ್ತೀಚೆಗೆ  ರೂ. 2000 ಎಲ್ಲೆಡೆ ಚರ್ಚೆಗೆ ಒಳಗಾಗಿದೆ. ಕೆಲವು ವರ್ಷಗಳಿಂದ ರೂ. 2000 ನೋಟುಗಳ ಗಣನೀಯ ಕಡಿಮೆಯಾಗಿದೆ.  ರಿಸರ್ವ್ ಬ್ಯಾಂಕ್ ಇದರ ಬಗ್ಗೆ  ಮಾಹಿತಿ ನೀಡಿದ್ದಾರ? ಹಾಗಾದರೆ ಈ ಬಗ್ಗೆ ಸಂಸತ್ತಿನಲ್ಲಿ ನಿರ್ಮಲಾ ಸೀತಾರಾಮನ್ ಹೇಳಿದ್ದೇನು?

ಸರ್ಕಾರವೂ ರೂ.2000 ಗಳನ್ನು ತೆಗೆದು ಹಾಕಲಿದ್ಯಾ?

ಹೌದು ಇತ್ತೀಚೆಗೆ ಎಟಿಎಂಗಳಲ್ಲಿ ರೂ.2000 ನೋಟುಗಳು ಕಾಣೆಯಾಗಿವೆ. ಇದರ ಬದಲಿಗೆ ರೂ. 500 ಮತ್ತು ರೂ.200 ರ ನೋಟುಗಳು ಬರುತ್ತಿವೆ.  ಈ ವಿಚಾರ ಕುರಿತು ಲೋಕಸಭೆಯಲ್ಲಿ ಸಂಸದ ಸಂತೋಷ್ ಕುಮಾರ್ ಅವರು  ಹಣಕಾಸು ಸಚಿವರಿಗೆ ಅನೇಕ ಪ್ರಶ್ನೆಗಳನ್ನು ಮುಂದಿಟ್ಟರು. ಈ ಎಲ್ಲಾ ಪ್ರಶ್ನೆಗೆ ಸ್ವತಃ ಹಣಕಾಸು ಸಚಿವೆ ಉತ್ತರ ನೀಡಿದ್ದಾರೆ.

ಲೋಕಸಭೆಯಲ್ಲಿ ನಿರ್ಮಲಾ ಸೀತಾರಾಮನ್ ಅವರು ನೋಟುಗಳ  ವಾರ್ಷಿಕ ವರದಿಯನ್ನು ಬಹಿರಂಗಪಡಿಸಿದ್ದು, ಆರ್ ಬಿಐ ಪ್ರಕಾರ ಮಾರ್ಚ್ 2017 ಮತ್ತು 2022 ರ ವರೆಗೂ ರೂ.500 ಮತ್ತು ರೂ.2000 ನೋಟುಗಳ ಒಟ್ಟು ಮೌಲ್ಯ ರೂ. 9.512 ಲಕ್ಷ ಕೋಟಿ. ಮತ್ತು ರೂ. 27.057 ಲಕ್ಷ ಕೋಟಿ ಎಂದು ತಿಳಿಸಿದ್ದಾರೆ.

ರಿಸರ್ವ್ ಬ್ಯಾಂಕ್ ಗಳಿಗೆ ಯಾವುದೇ ಅಧಿಕೃತ ಸೂಚನೆಯನ್ನು ನೀಡಿಲ್ಲ. ಯಾವಾಗ ಮುಖಬೆಲೆಯ ನೋಟುಗಳನ್ನು ಸೇರಿಸಬೇಕು ಎಂಬ ವಿಷಯ ಕೇವಲ ಬ್ಯಾಂಕ್ ಗೆ ಸೇರಿದ್ದು, ಅವರೇ ಸ್ವತಃ ನಿರ್ಧರಿಸುತ್ತಾರೆ. ಇದರ ಬಗ್ಗೆ ಚರ್ಚೆ ಬೇಡ ಎಂದರು.  ಜೊತೆಗೆ ಆರ್ ಬಿಐ ವಾರ್ಷಿಕ ವರದಿ ಪ್ರಕಾರ 2019 – 20ನೇ ಸಾಲಿನಲ್ಲಿ ರೂ. 2000 ನೋಟುಗಳನ್ನು ಮುದ್ರಿಸಿಲ್ಲ ಎಂದು ತಿಳಿಸಿದರು.

Leave A Reply

Your email address will not be published.