Health tips: ಬಿಸಿಲಿನಿಂದ ಕಪ್ಪಾದ ಮುಖಕ್ಕೆ ಮನೆಯಲ್ಲೇ ಮಾಡಿ ಫೇಸ್ ಮಾಸ್ಕ್ ; ವಿಧಾನ ಇಲ್ಲಿದೆ

Home made face mask: ಜನರು ಮುಖದ ಸೌಂದರ್ಯಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಾರೆ. ಮುಖ ಚೆನ್ನಾಗಿರಬೇಕು ಎಂದು ಹಲವು ರೀತಿಯ ಸೌಂದರ್ಯವರ್ಧಕ ಬಳಸುತ್ತಾರೆ. ಹೌದು, ಹೊಳೆಯುವ ಮತ್ತು ಕಳಂಕರಹಿತ ಚರ್ಮದ ವಿಷಯಕ್ಕೆ ಬಂದಾಗ, ನಾವು ಏನೆನೋ ಟ್ರೈ ಮಾಡುತ್ತೇವೆ. ಸೌಂದರ್ಯ ಚಿಕಿತ್ಸೆಗಳಿಂದ ಹಿಡಿದು ದುಬಾರಿ ಪುಡಿಗಳವರೆಗೆ ಎಲ್ಲವನ್ನೂ ಬಳಸಲಾಗುತ್ತದೆ. ಅದರಲ್ಲೂ ಸದ್ಯದ ಉರಿ ಬಿಸಿಲಿಗೆ ಮುಖ, ಹಣೆ ಕಪ್ಪಾಗುತ್ತದೆ. ಬಿಸಿಲಿನ ಹೊಡೆತಕ್ಕೆ ನಿಮ್ಮ ಹಣೆಯೂ ಕಪ್ಪಾಗಿದೆಯಾ? ಹಾಗಾದ್ರೆ ಇಲ್ಲಿದೆ ನೋಡಿ ಪರಿಹಾರ (health tips).

 

ಹಣೆ ಕಪ್ಪಾಗುವುದನ್ನು ತಪ್ಪಿಸಲು ಸಲಹೆ ಇಲ್ಲಿದೆ. ಹೌದು, ಈ ಸನ್ ಟ್ಯಾನ್ ರಿಮೂವಲ್ ಮಾಸ್ಕ್ (sun tan removal face mask) ಬಳಸಿ. ಟ್ಯಾನಿಂಗ್ ಓಡಿಸಿರಿ. ನೀವು ದುಬಾರಿ ಬೆಲೆ ತೆರುವ ಅವಶ್ಯಕತೆ ಇಲ್ಲ. ಮನೆಯಲ್ಲೇ ಮಾಡಬಹುದು. ಸುಲಭ ಸರಳವಾಗಿ ಮಾಡಿ ಹೋಮ್ ಮೇಡ್ (home made face mask) ಟ್ಯಾನ್ ರಿಮೂವ್ ಫೇಸ್ ಮಾಸ್ಕ್!!

ಇದಕ್ಕಾಗಿ, ಹಸಿ ಹಾಲು (milk) ಮತ್ತು ಹಸಿ ಅರಿಶಿನದ ಅವಶ್ಯಕತೆಯಿದೆ, ಹಾಲು ತ್ವಚೆಗೆ ಉತ್ತಮವಾದದ್ದು, ಹಾಗೇ ಅರಿಶಿಣವೂ ಹೌದು. ಇದು ತ್ವಚೆಯ ಬಣ್ಣವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಈ ಮಾಸ್ಕ್‌ಗಳು ತ್ವಚೆಯನ್ನು ನೈಸರ್ಗಿಕವಾಗಿ ಸ್ವಚ್ಛಗೊಳಿಸುತ್ತವೆ. ಹಾಗಿದ್ದರೆ ಮನೆಯಲ್ಲೇ ಸನ್ ಟ್ಯಾನ್ ಫೇಸ್ ಮಾಸ್ಕ್ ಮಾಡುವ ವಿಧಾನ ಹೇಗೆ?

ವಿಧಾನ: ಎರಡು ಚಮಚ ಹಸಿ ಹಾಲು ಹಾಗೂ 1/2 ಟೀಸ್ಪೂನ್ನಷ್ಟು ತುರಿದ ಹಸಿ ಅರಿಶಿನವನ್ನು ತೆಗೆದುಕೊಳ್ಳಿ, ಎರಡನ್ನೂ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಇದನ್ನು ನಿಮ್ಮ ಮುಖ ಮತ್ತು ಕುತ್ತಿಗೆಗೆ ಚೆನ್ನಾಗಿ ಹಚ್ಚಿಕೊಳ್ಳಿ, 10 ನಿಮಿಷಗಳ ನಂತರ ಮುಖವನ್ನು ತಣ್ಣೀರಿನಿಂದ ತೊಳೆಯಿರಿ. ನಂತರ ಮಾಯಿಶ್ಚರೈಸರ್ ಮತ್ತು ಸನ್‌ಸ್ಟೀನ್ ಅನ್ನು ಮುಖಕ್ಕೆ ಹಚ್ಚಿ. ಬೇಸಿಗೆ ಸಮಯದಲ್ಲಿ

ನಿಯಮಿತವಾಗಿ ಈ ಮಾಸ್ಕ್ ಹಚ್ಚಿಕೊಳ್ಳಿ, ಸುಲಭವಾಗಿ ಹಣೆಯ ಮೇಲಿನ ಟ್ಯಾನ್ ರಿಮೂವ್ ಮಾಡಿರಿ.

ಇದನ್ನೂ ಓದಿ: Noise HRX Sprint Smartwatch : ನಾಯ್ಸ್ ಕಂಪೆನಿ ಅನಾವರಣ ಮಾಡಿದೆ ಹೊಸ ಸ್ಮಾರ್ಟ್ ವಾಚ್ ; ಬೆಲೆ ಎಷ್ಟು? ಸಂಪೂರ್ಣ ಮಾಹಿತಿ ಇಲ್ಲಿದೆ

Leave A Reply

Your email address will not be published.