ಹೊಸ ಚಿನ್ನಾಭರಣವನ್ನು ಖರೀದಿಸುವಾಗ ಹೊಸ ನಿಯಮಗಳ ಬಗ್ಗೆಯೂ ನಿಮಗೆ ತಿಳಿದಿರಲಿ!

Gold Rules : ಹಳೆಯ ಹಣಕಾಸು ವರ್ಷ(financial year) ಮುಕ್ತಾಯವಾಗಿ ಹೊಸ ಹಣಕಾಸು ವರ್ಷ ಶುರುವಾಗಿಯೇ ಹೋಯ್ತು. ಹೊಸ ಹಣಕಾಸು ವರ್ಷ ಶುರುವಾದಾಗಲೇ ಹೊಸ – ಹೊಸ ನಿಯಮಗಳು(rules) ಹುಟ್ಟಿಕೊಂಡವು. ಹಲವು ವಲಯಗಳ ನಿಯಮಗಳಲ್ಲಿ ಬದಲಾವಣೆಯಾಗಿದ್ದು ನಮಗೆ ಈಗಾಗಲೇ ಗೊತ್ತೇ ಇದೆ. ಈ ಹೊಸ ನಿಯಮಗಳು ಶುರುವಾದಂತೆ ಚಿನ್ನಗಳಲ್ಲಿಯು ಹೊಸ ರೀತಿಯ ನಿಯಮಗಳು ಬರಲು ಪ್ರಾರಂಭವಾಗಿದೆ. ನಕಲಿ ಚಿನ್ನ ಎಲ್ಲಿ ಮಾರಾಟವಾಗುತ್ತೋ ಅನ್ನೋ ಉದ್ದೇಶದಿಂದ ಇದೀಗ ಚಿನ್ನದ ಹಾಲ್‌ಮಾರ್ಕಿಂಗ್(hall marking) ನಿಯಮ(Gold Rules)ಗಳಲ್ಲಿಯೂ ಬದಲಾವಣೆ ಮಾಡಲಾಗಿದೆ.ಅದೇನಪ್ಪಾ ಅಂದ್ರೆ.

 

ಚಿನ್ನಾಭರಣ(gold) ಮಾರಾಟದ ನಿಯಮಗಳನ್ನು ಇದೀಗ ಕೇಂದ್ರ ಸರ್ಕಾರ ಬದಲಾಯಿಸಿದ್ದು, ಏಪ್ರಿಲ್ 1 ರಿಂದ ಚಿನ್ನಾಭರಣಗಳಿಗೆ ಹಾಲ್ ಮಾರ್ಕ್ ಕಡ್ಡಾಯಗೊಳಿಸಿದೆ. ಹಾಲ್ ಮಾರ್ಕ್ (hall mark) ಇಲ್ಲದಿದ್ದರೆ ಚಿನ್ನಾಭರಣವನ್ನು ಖರೀದಿಸುವುದು ಅಸಾಧ್ಯವಾದ ಮಾತೆ ಹೌದು. ಏಪ್ರಿಲ್ 1, 2023 ರಿಂದ, ಚಿನ್ನದ ಆಭರಣಗಳು 6-ಅಂಕಿಯ( 6 digit) ಹಾಲ್‌ಮಾರ್ಕ್ ವಿಶಿಷ್ಟ ಗುರುತಿನ ಸಂಖ್ಯೆಯನ್ನು (HUID) ಹೊಂದಿರಬೇಕು. ಈ ಹೊಸ ಹಣಕಾಸು ವರ್ಷದಲ್ಲಿ, ಯಾವುದೇ ಆಭರಣ 6-ಅಂಕಿಯ ಹಾಲ್‌ಮಾರ್ಕ್ ವಿಶಿಷ್ಟ ಗುರುತಿನ ಸಂಖ್ಯೆ (HUID) ಇಲ್ಲದೆ ಹೋದರೆ ಚಿನ್ನದ ಆಭರಣಗಳನ್ನು ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ ಎಂದು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಕಟ್ಟು ನಿಟ್ಟಿನ ಕ್ರಮವನ್ನು ಹೇಳಿದೆ.

 

ಈ ಹಿಂದೆ ಎಲ್ಲರಿಗೂ 4-ಅಂಕಿಯ ಮತ್ತು 6-ಅಂಕಿಯ ಹಾಲ್‌ಮಾರ್ಕ್‌ಗಳ ಬಗ್ಗೆ ಗೊಂದಲವನ್ನು ಸೃಷ್ಟಿ ಮಾಡಿತ್ತು. ಆದರೆ ಇದೀಗ 6-ಅಂಕಿಯ ಹಾಲ್‌ಮಾರ್ಕ್ ಇದ್ದರೆ ಮಾತ್ರ ಚಿನ್ನ ಖರೀದಿಸಲು ಸಾಧ್ಯ ಎಂದು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್(bureau of Indian standards) ಹೇಳಿದೆ.

 

ಈಗಾಗಲೇ ಹೆಚ್ಚುತ್ತಿರುವ ನಕಲಿ ಆಭರಣಗಳ ಮಾರಾಟವನ್ನು ಕಡಿಮೆಗೊಳಿಸಲು ಕೇಂದ್ರ ಸರ್ಕಾರ ಈ ರೀತಿಯ ಕಟ್ಟುನಿಟ್ಟಿನ ಕ್ರಮವನ್ನು ಕೈಗೆತ್ತಿಕೊಂಡಿದೆ ಅಂದರೆ ಜಾರಿಗೆ ತಂದಿದೆ. ಆಭರಣದ ಶುದ್ಧತೆಯನ್ನು ಗುರುತಿಸಲು ಅಂದರೆ ಆಭರಣ ನಕಲಿಯೋ ಅಥವಾ ಪರಿಶುದ್ಧವಾಗಿದೆಯೋ ಎಂದು ತಿಳಿದುಕೊಳ್ಳಲು ಆಭರಣಕ್ಕೆ 6-ಅಂಕಿಯ ಆಲ್ಫಾನ್ಯೂಮರಿಕ್ ಕೋಡ್ (alpha numeric code)ಅನ್ನು ಈಗಾಗಲೇ ನಿಗದಿಪಡಿಸಲಾಗಿದೆ .

 

ಈ 6 ಅಂಕಿಯ ಸಂಖ್ಯೆಯ ಮೂಲಕ ಈ ಆಭರಣ ನಕಲಿಯೋ ಅಥವಾ ಪರಿಶುದ್ಧವಾಗಿದೆಯೋ ಎಂಬ ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳಬಹುದು. ಗ್ರಾಹಕರು ಚಿನ್ನವನ್ನು ಖರೀದಿಸುವಾಗ ಮಾರುಕಟ್ಟೆಯಲ್ಲಿ(market) ನಾವು ಖರೀದಿಸುವ ಚಿನ್ನ ನಕಲಿಯೋ ಅಥವಾ ಏನಾದರೂ ಕಲಬೆರಕೆ ಇದೆಯೋ ಎಂಬ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ಈ ಆರು ಅಂಕಿಯ ಸಂಖ್ಯೆಯನ್ನು ಸ್ಕ್ಯಾನ್ ಮಾಡಿದರೆ ಪೂರ್ಣ ಮಾಹಿತಿಯು ನಮಗೆ ಒದಗುತ್ತದೆ. ಸಂಕ್ಷಿಪ್ತವಾಗಿ, ಹೇಳಬೇಕಾದರೆ ಈ HUID ಚಿನ್ನದ ಶುದ್ಧತೆಯ ಪ್ರಮಾಣಪತ್ರದಂತಿದೆ.

 

ಏಪ್ರಿಲ್ 1 ರಿಂದ ಚಿನ್ನದ ಬಗ್ಗೆ ಹೊಸ ನಿಯಮಗಳು ಕಡ್ಡಾಯವಾಗಿದ್ದರೂ ಹಳೆಯ ಆಭರಣಗಳನ್ನು ಮಾರಾಟ ಮಾಡುವುದಾದರೆ ಏನು ಚಿಂತಿಸಬೇಕಾಗಿಲ್ಲ. ಜನರು ಹಳೆಯ ಆಭರಣಗಳನ್ನು ಮಾರುಕಟ್ಟೆಯಲ್ಲಿ(market) ಮಾರಾಟ ಮಾಡುವುದಾದರೆ ಯಾವುದೇ ಕಾರಣಕ್ಕೂ ಹಾಲ್ ಮಾರ್ಕ್ ನ ಅಗತ್ಯವಿಲ್ಲ. ಎಲ್ಲಾದರೂ ಹೊಸ ಚಿನ್ನವನ್ನು ಖರೀದಿಸಬೇಕಾದರೆ ಈ 6 ಸಂಖ್ಯೆಯ ಹಾಲ್ ಮಾರ್ಕ್ ನ ಅಗತ್ಯ ಬಹಳ ಮುಖ್ಯವಾಗಿದೆ. ಕೇಂದ್ರ ಸರ್ಕಾರ ಹಳೆಯ ಚಿನ್ನವನ್ನು(gold) ಮಾರಾಟ ಮಾಡುವಾಗ ಯಾವುದೇ ರೀತಿಯ ಹಾಲ್ ಮಾರ್ಕ್(hallmark) ನ ನಿಯಮಗಳನ್ನು ಬದಲಾವಣೆ ಮಾಡಿಲ್ಲ.

2 Comments
  1. binance skapa konto says

    Thank you for your sharing. I am worried that I lack creative ideas. It is your article that makes me full of hope. Thank you. But, I have a question, can you help me?

  2. Tài khon binance min phí says

    I don’t think the title of your article matches the content lol. Just kidding, mainly because I had some doubts after reading the article.

Leave A Reply

Your email address will not be published.