Home Interesting Siddaramaiah : ಸಿದ್ದರಾಮಯ್ಯ ಲೈಫ್‌ ಕುರಿತು ಯಾರೂ ಅರಿಯದ ಕೆಲವು ಇಂಟರೆಸ್ಟಿಂಗ್ ಸಂಗತಿಗಳಿವು!

Siddaramaiah : ಸಿದ್ದರಾಮಯ್ಯ ಲೈಫ್‌ ಕುರಿತು ಯಾರೂ ಅರಿಯದ ಕೆಲವು ಇಂಟರೆಸ್ಟಿಂಗ್ ಸಂಗತಿಗಳಿವು!

Hindu neighbor gifts plot of land

Hindu neighbour gifts land to Muslim journalist

Siddaramaiah Biography :ಕರ್ನಾಟಕ(Karnataka) ಕಾಂಗ್ರೆಸ್ ನ ಮಾಸ್ ಲೀಡರ್, ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅಂದ್ರೆನೆ ಅದೊಂದು ಗತ್ತು. ಸಚಿವರಾಗಿ, ಉಪಮುಖ್ಯಮಂತ್ರಿಗಳಾಗಿ, ಅಹಿಂದಾ ಸಂಘಟನೆಯ ನಾಯಕರಾಗಿ, ರಾಜ್ಯದ ಮುಖ್ಯಮಂತ್ರಿಯಾಗಿ ಸಂಪೂರ್ಣ 5 ವರ್ಷಗಳ ಕಾಲ ಆಡಳಿತ ನಡೆಸಿ, ತಮ್ಮ ವಿಭಿನ್ನವಾದ ಮಾತು ಕತೆಗಳ ಮೂಲಕ, ಭಾಷಣಗಳ ಮೂಲಕ, ವಿಶಿಷ್ಟವಾದ ಕಾರ್ಯ ವೈಖರಿಗಳ ಮೂಲಕ ಎಲ್ಲರ ಮನದಲ್ಲಿ ನೆಲೆ ನಿಂತ ಧೀಮಂತ ನಾಯಕ ಈ ಟಗರು.

ಅಂದಹಾಗೆ ಇದೆಲ್ಲದರ ನಡುವೆ ಸಿದ್ದರಾಮಯ್ಯ ಎಂದ ಕೂಡಲೇ ಸಿಟ್ಟಿನ, ಗಡುಸಿನ ವ್ಯಕ್ತಿ ಎಂಬ ಭಾವನೆ ಹಲವರಲ್ಲಿ ಇದೆ. ಆದರೆ ಎದುರಿಗೆ ಒರಟನಂತೆ ಕಂಡರೂ ಅವರೊಳಗೂ ಒಂದು ಮಗುವಿನ ಮನಸ್ಸಿದೆ. ಅವರೊಬ್ಬ ಭಾವುಕ ಜೀವಿಯೂ ಹೌದು! ಹೀಗಾಗಿ ಸಿದ್ದು ಕುರಿತು ನಿಮಗೆ ಗೊತ್ತಿಲ್ಲದ , ಅವರ ಬದುಕಿನ ಕೆಲವು (Siddaramaiah Biography) ಇಂಟರೆಸ್ಟಿಂಗ್ ವಿಚಾರಗಳನ್ನು ನಿಮಗೆ ಹೇಳ್ತೇವೆ ಕೇಳಿ.

ವೀರಮಕ್ಕಳ ಕುಣಿತ ಅಂದ್ರೆ ಇಷ್ಟ: ಸಿದ್ದರಾಮಯ್ಯ ಅವರಿಗೆ ವೀರಮಕ್ಕಳ ಕುಣಿತ ಅಂದ್ರೆ ಇಷ್ಟ. ಸಿದ್ದರಾಮಯ್ಯ ಅವರು ಪ್ರತಿವರ್ಷ ಸ್ವಗ್ರಾಮ ಸಿದ್ದರಾಮನಹುಂಡಿಗೆ ಭೇಟಿ ಕೊಡುತ್ತಾರೆ. ಗ್ರಾಮದಲ್ಲಿ ನಡೆಯುವ ಉತ್ಸವದಲ್ಲಿ ಭಾಗವಹಿಸುತ್ತಾರೆ. ಅಲ್ಲಿ ಗ್ರಾಮಸ್ಥರೊಂದಿಗೆ ಸೇರಿ ಹೆಜ್ಜೆ ಹಾಕುತ್ತಾರೆ. ಕಳೆದ ವರ್ಷ ಹಬ್ಬದ ಸಂದರ್ಭದಲ್ಲೂ ಸಿದ್ಧು ತಮ್ಮ ಊರಲ್ಲಿ ಸ್ನೇಹಿತರೊಂದಿಗೆ ಸ್ಟೆಪ್ ಹಾಕಿದ್ದು, ಆ ವಿಡಿಯೋಗಳೆಲ್ಲಾ ಭಾರೀ ವೈರಲ್ ಆಗಿತ್ತು.

ವೆಸ್ಪಾ ಸ್ಕೂಟರ್ ರೈಡರ್: ಸಿದ್ದರಾಮಯ್ಯ ಅವರಿಗೆ ವೆಸ್ಪಾ ಸ್ಕೂಟರ್ ಅಂದ್ರೆ ಭಾರೀ ಇಷ್ಟ. ಅವರು ಮೈಸೂರಿನಲ್ಲಿ ಪಕ್ಷದ ವತಿಯಿಂದ ಯಾವುದೇ ಬೈಕ್‌ ರ‍್ಯಾಲಿ ಇದ್ದರೂ ವೆಸ್ಪಾ ಮೇಲೆಯೇ ಬರುವುದು. ಅವಕಾಶ ಸಿಕ್ಕಾಗೆಲ್ಲಾ ಅದರ ಸವಾರಿ ಮಾಡುತ್ತಾರೆ. ಊರಿನಲ್ಲಿ ಮತದಾನಕ್ಕೆ ಹೋದಾಗಲೂ ಕೆಲವು ವೇಳೆ ಸ್ಕೂಟರ್ ಓಡಿಸಿದ್ದರು.

ನಾನ್‌ವೆಜ್ ಪ್ರಿಯ: ಸಿದ್ದರಾಮಯ್ಯ ನಾನ್‌ವೆಜ್ ಪ್ರಿಯರು. ಚಾಮಂಡೇಶ್ವರಿ ಕ್ಷೇತ್ರದಲ್ಲಿ ಶಾಸಕರಾಗಿ, ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಕ್ಷೇತ್ರ ಪ್ರವಾಸ ಹೊರಟರೆ ಮಧ್ಯಾಹ್ನ ನಾನ್‌ವೆಜ್ ಊಟ ಗ್ಯಾರಂಟಿ. ಆಗ ಬೆಳ್ಳಂಬೆಳಗ್ಗೆ ಉಪಾಹಾರಕ್ಕೆ ಇಡ್ಲಿ, ಬೋಟಿ, ನಾಟಿಕೋಳಿ ಮಾಡಿಸುವುದು ಉಂಟು! ಈಗ ಆರೋಗ್ಯದ ಹಿತದೃಷ್ಟಿಯಿಂದ ನಾನ್‌ವೆಜ್ ಕಡಿಮೆ ಮಾಡಿದ್ದೇನೆ ಅಂತಾ ಅವರೇ ಹೇಳಿದ್ದಾರೆ.

ದೋಸೆ, ಬೋಂಡಾ, ಸಾಂಬರ್ ಅಂದ್ರೆ ಪಂಚಪ್ರಾಣ:
ಮೈಸೂರಿಗೆ ಸಿದ್ದರಾಮಯ್ಯ ಬಂದಾಗಲೆಲ್ಲಾ ಕಾಸ್ಟೋಪಾಲಿಟನ್ ಕ್ಲಬ್‌ಗೆ ಹೊಂದಿಕೊಂಡಂತಿದ್ದ ರಮ್ಯಾ ಹೋಟೆಲ್‌ಗೆ ಭೇಟಿ ನೀಡುತ್ತಿದ್ದರು. ಮಸಾಲೆ ದೋಸೆ, ಬೋಂಡಾ- ಸಾಂಬರ್ ತಿಂದು ಕಾಫಿ ಕುಡಿಯುತ್ತಾರೆ. (ಈಗ ರಮ್ಯಾ ಹೋಟೆಲ್ ಮುಚ್ಚಿ ಹೋಗಿದೆ).

ಸ್ನೇಹಿತರ ಜೊತೆ ಕಾರ್ಡ್ಸ್: ಕಾರ್ಡ್ಸ್ ಆಡೋದೆಂದರೆ ಸಿದ್ದುಗೆ ಭಾರೀ ಇಷ್ಟವಂತೆ. ಸಿದ್ದರಾಮಯ್ಯ ಬೇಜಾರಾದಾಗ ಕಾಲ ಕಳೆಯಲು ಸ್ನೇಹಿತರೊಂದಿಗೆ ಕಾರ್ಡ್ ಕೂಡ ಆಡುತ್ತಾರೆ. ತಮ್ಮ ಆಪ್ತ ಬಳಗದ ಜೊತೆಗೆ ಪ್ರವಾಸಕ್ಕೆ ಹೋದಾಗ ಅಥವಾ ಮೈಸೂರಿನ ಹೊರವಲಯದ ಮನೆಯಲ್ಲಿ ಉಳಿದಾಗ ಕೆಲವೇ ಕೆಲವು ಆಪ್ತರ ಜೊತೆ ಸೇರಿ ಕಾರ್ಡ್ಸ್ ಆಡುತ್ತಾರೆ.

ಸಿದ್ದರಾಮಯ್ಯ ಆ ಒಂದು ಕಾರಣಕ್ಕೆ ಮೊದಲ ಬಾರಿಗೆ ಕಣ್ಣೀರು ಹಾಕಿದ್ರು!: ಸಿದ್ದರಾಮಯ್ಯ ಸಾರ್ವಜನಿಕವಾಗಿ ಮೊದಲ ಬಾರಿಗೆ ಕಣ್ಣೀರು ಹಾಕಿದ್ದು 2008 ರಲ್ಲಿ! ಅವರು ಸುದೀರ್ಘವಾಗಿ ಪ್ರತಿನಿಧಿಸಿದ್ದ ಚಾಮುಂಡೇಶ್ವರಿ ಕ್ಷೇತ್ರ ವಿಭಜನೆಯಾಗಿ ವರುಣಾ ಸೃಷ್ಟಿಯಾಯಿತು. ಆಗ ಚಾಮುಂಡೇಶ್ವರಿ ಕ್ಷೇತ್ರವನ್ನು ಬಿಟ್ಟು ಹೋಗುವುದು ಹೇಗೆ? ಎಂಬ ಕರಳುಬಳ್ಳಿಯ ಸಂಬಂಧ ಅವರನ್ನು ಕಾಡಿತು. ಯಾವಾಗಲೂ ಕೋಪಿಸಿಕೊಳ್ಳುವ, ರೇಗುವ, ಎದೆ ಉಬ್ಬಿಸಿಕೊಂಡು, ಕಾಲು ಕುಣಿಸಿಕೊಂಡೇ ಮಾತನಾಡುವ, ತಪ್ಪು ಮಾಡುವವರನ್ನು ತರಾಟೆಗೆ ತೆಗೆದುಕೊಳ್ಳುವ ಸಿದ್ದರಾಮಯ್ಯ ಇದೇ ಕಾರಣಕ್ಕಾಗಿ 2008ರ ಚುನಾವಣೆಯ ವೇಳೆಗೆ ಅಕ್ಷರಶಃ ಕಣ್ಣೀರು ಹಾಕಿದರು. ನನ್ನನ್ನು ಈ ಮಟ್ಟಕ್ಕೆ ಬೆಳೆಸಿದ ಕ್ಷೇತ್ರವನ್ನು ಕಾರ್ಯಕರ್ತರನ್ನು ಬಿಟ್ಟು ಹೋಗಬೇಕಲ್ಲ ಎಂದು ಭಾವೋದ್ವೇಗಕ್ಕೆ ಒಳಗಾಗಿ ಬಹಿರಂಗ ಸಭೆಯಲ್ಲಿ ಕಣ್ಣೀರು ಹಾಕಿದ್ದರು! ಅಲ್ಲಿಯವರೆಗೆ ಸಿದ್ದರಾಮಯ್ಯ ಕಣ್ಣೀರು ಹಾಕಿದ್ದನ್ನು ಯಾರೂ ನೋಡಿರಲಿಲ್ಲ.

ಇದನ್ನೂ ಓದಿ: Samantha Divorce Reason: ಯಾರ್​ ಜೊತೆನಾದ್ರೂ ಸಂಬಂಧ ಇಟ್ಕೊಳ್ಳಿ, ಆದ್ರೆ ಚೆನ್ನಾಗಿ ಮಾಡ್ಕೊಳ್ಳಿ – ಮಾಜಿ ಪತಿ ಬಗ್ಗೆ ಸಮಂತಾ ಶಾಕಿಂಗ್​ ಹೇಳಿಕೆ !