Humans Life Span : ಇನ್ಮುಂದೆ ಮನುಷ್ಯರು 141 ವರ್ಷ ಬದುಕುವ ಸಾಧ್ಯತೆ ಹೆಚ್ಚು!

Humans Life Span : ಪ್ರಪಂಚದಲ್ಲಿ 20 ಮನುಷ್ಯರು 141 ವರ್ಷ ಬದುಕುತ್ತಾರೆ(Humans Life Span) ಎಂದು ವಿಜ್ಞಾನಿಗಳು ಸಾಕ್ಷಿ ಸಮೇತವಾಗಿ ವಾದಿಸಿದ್ದಾರೆ.

 

ಹಿತೈಷಿಗಳು 100 ವರ್ಷಗಳ ಕಾಲ ಬದುಕಿ ಬಾಳಿ ಎಂದು ಆಶೀರ್ವಾದಿಸುತ್ತಾರೆ. ಈ ರೀತಿ 100 ವರ್ಷಗಳ ನಂತರವೂ ಬದುಕಿರುವ ಶತಾಯುಷಿಗಳು ನಮ್ಮ ನಡುವೆ ಹಲವಾರು ಮಂದಿ ಇದ್ದಾರೆ. ಇವರುಗಳು ದೀರ್ಘಾಯುಷ್ಯವಾಗಿ ಬದುಕಿ ಬಾಳಿ ಇಂದಿನ ಪೀಳಿಗೆಗೆ ಮಾದರಿಯಾಗಿದ್ದಾರೆ. ಮುಖ್ಯ ಕಾಲಘಟ್ಟದಲ್ಲಿ ಹುಟ್ಟಿದವರು ಕೂಡ 100 ಕ್ಕಿಂತ ಹೆಚ್ಚು ವರ್ಷಗಳು ಬದುಕಿದ್ದಾರೆ. ಇದಕ್ಕೆ ಕಾರಣವೆಂದರೆ ಅವರು ಆ ಕಾಲಘಟ್ಟದಲ್ಲಿ ಜನಿಸಿರುವುದು. ಇದರ ಬಗ್ಗೆ ಪೂರ್ತಿ ಮಾಹಿತಿ ಇಲ್ಲಿದೆ ನೋಡಿ.

ಮನುಷ್ಯನ(human) ಸಂಪೂರ್ಣ ಆಯಸ್ಸು(age) 120 ವರ್ಷಗಳ ಕಾಲ. ಕೆಲವು ವರ್ಷದಲ್ಲಿ ಹುಟ್ಟಿದವರು ಮಾತ್ರ ಸಂಪೂರ್ಣ ಆಯಸ್ಸನ್ನು ಹೊಂದಿರುತ್ತಾರೆ ಅಂತೆ. ಅವರುಗಳು ಮಾತ್ರ ಅಷ್ಟು ವರ್ಷ ಬದುಕುವ ಶಕ್ತಿ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಆ ವರ್ಷ ಯಾವುದೂ ಎಂದು ಗೊತ್ತಾ?
ಹೌದು ಒಂದು ಅಧ್ಯಯನ ಪ್ರಕಾರ 1910 ರಿಂದ 1950 ರ ನಡುವೆ ಹುಟ್ಟಿದವರು ಹೆಚ್ಚು ವರ್ಷಗಳು ಕಾಲ ಬದುಕಿದ್ದಾರೆ. ಅಂದರೆ ಅವರು 100 ವರ್ಷಕ್ಕಿಂತ ಹೆಚ್ಚು ಕಾಲ ಬದುಕುತ್ತಾರಂತೆ. ಅವರುಗಳು ಸಂಪೂರ್ಣ ಆಯಸ್ಸನ್ನು ಹೊಂದಿರುತ್ತಾರೆ.

ಮನುಷ್ಯನ ಆಯಸ್ಸು 120 ವರ್ಷಗಳು ಆದರೆ ಇದೀಗ ಮನುಷ್ಯರು 141 ವರ್ಷಗಳವರೆಗೆ ಬದುಕುವ ಸಾದ್ಯತೆ ಇದೆ ಎಂದು ಒಂದು ಅಧ್ಯಯನ ತಿಳಿಸಿದೆ. ಜಾರ್ಜಿಯಾ ವಿಶ್ವವಿದ್ಯಾನಿಲಯ ಸಂಶೋಧನೆಯ ಪ್ರಕಾರ ಪುರುಷರು ಭರ್ತಿ 141 ವರ್ಷಗಳಷ್ಟು ಕಾಲ ಬದುಕಲು ಸಾಧ್ಯವಿದೆ ಮತ್ತು ಮಹಿಳೆಯರು 130 ಕ್ಕಿಂತ ಹೆಚ್ಚು ವರ್ಷಗಳ ಕಾಲ ಬದುಕಲು ಸಾಧ್ಯವಿದೆ ಎಂದು ತಿಳಿಸಿದೆ.

 

ಜಾರ್ಜಿಯಾ ವಿಶ್ವವಿದ್ಯಾನಿಲಯವೂ ಪೂರ್ಣಾಯುಷಿಗಳ ಬಗ್ಗೆ ಸಂಶೋಧನೆಯೊಂದನ್ನು ನಡೆಸಿದೆ. ಅಲ್ಲಿನ ಸಹಾಯಕ ಪ್ರಾಧ್ಯಾಪಕರಾದ ಡೇವಿಡ್ ಮೇಕ್ ಕಾರ್ಥಿ ಅವರು 19 ದೇಶಗಳಲ್ಲಿ ಸಂಶೋಧನೆ ನಡೆಸಿ, ಪೂರ್ಣಾಯುಷ್ಯ ತುಂಬಿ ಮರಣ ಹೊಂದಿರುವವರ ಬಗ್ಗೆ ವಿಶ್ಲೇಷಣೆ ಮಾಡಿದ್ದಾರೆ. ಇದಲ್ಲದೆ ಬೇರೆ ಬೇರೆ ವರ್ಷಗಳಲ್ಲಿ ಜನಿಸಿದವರ ಜೊತೆಗಾರರ ನಡುವಿನ ಮರಣ ಪ್ರಮಾಣ ಹೇಗೆ ವ್ಯತ್ಯಾಸ ಆಗುತ್ತದೆ ಎಂಬುವುದನ್ನು ಕೂಡ ಕಂಡು ಹಿಡಿದಿದ್ದಾರೆ. ಇದನ್ನು PLOS One ನಲ್ಲಿ ಒಂದು ಅಧ್ಯಯನದ ವರದಿ ಪ್ರಕಟ ಮಾಡಲಾಗಿದೆ.

1900 ರ ದಶಕದಲ್ಲಿ ಜನಿಸಿದವರಿಗೆ ಜೀವಿತ ಅವಧಿ ಸುಧೀರ್ಘವಾಗಿರುತ್ತದೆ. ಜೊತೆಗೆ ಅವರಿಗೆ ಮರಣ ಸಂಭವಿಸುವುದು ಬಹಳ ತಡವಾಗಿವೆ. ಈ ಕಾಲಘಟ್ಟದಲ್ಲಿ ಜನಿಸಿರುವ ಸದಸ್ಯರು ಮುಂದಿನ ದಶಕಗಳಲ್ಲಿ ಅವರ ವೃದ್ಧಾಪ್ಯ ಮುಂದುವರೆಯುತ್ತಲೇ ಇದ್ದು ಮರಣದ ಗರಿಷ್ಠ ವಯಸ್ಸು ಏರಿಕೆಯಾಗುತ್ತದೆ.
1900 ರಲ್ಲಿ ಜನಿಸಿದವರು ಇನ್ನೂ ಜೀವಂತವಾಗಿ ಇದ್ದಾರೆ. ಇವರ ಆಯಸ್ಸು ಬಹಳ ಗಟ್ಟಿಯಾಗಿ ಇದೆ. ಇವರಿಗೆ ತಡವಾಗಿ ಸಾವು ಸಂಭಿಸುತ್ತದೆ ಎಂದು ಡಾ. ಮೆಕ್ ಕಾರ್ಥಿ ಅವರು ತಿಳಿಸಿದ್ದಾರೆ. ಹಾಗೂ ಈ ಮನುಷ್ಯರು 120 ವರ್ಷ ಮೀರಿಯೂ ಕೂಡ ಬದುಕಬಹುದು ಎಂದಿದ್ದಾರೆ. ಇದ್ದರಿಂದಾಗಿ ಮುಂದೆ ಬರುವ ವರ್ಷಗಳಲ್ಲಿ ದೀರ್ಘಾಯುಷಿಗಳು, ಶತಾಯುಷಿಗಳ ದಾಖಲೆ ಇನ್ನೂ ಹೆಚ್ಚಿನ ಗಣನೀಯ ಮಟ್ಟಕ್ಕೆ ಏರುತ್ತದೆ.

ದೀರ್ಘಾಯುಷಿ ದಾಖಲೆ ಪ್ರಕಾರ ಫ್ರೆಂಚ್‌ನ ಹಳೆಯ ಮಹಿಳೆಯಾದ ಜೀನ್ ಕಾಲೆಂಟ್ ಅವರು 1875 ರಲ್ಲಿ ಜನಿಸಿದ್ದರು. ಮತ್ತು ಅವರು ವಿಶ್ವಯುದ್ಧ ಮತ್ತು ಸ್ಪ್ಯಾನಿಷ್ ಜ್ವರ ಮಧ್ಯೆಯು ಕೂಡ ಆಕೆ ಬದುಕುಳಿದಿದ್ದಳು. 1888 ರಲ್ಲಿ ವಿನ್ಸೆಂಟ್ ವ್ಯಾನ್ ಗಾಗ್ ರನ್ನು ಭೇಟಿ ಮಾಡಿದ್ದಳು. ಅವಳು ಒಂದು ಬಾರಿ ‘ನೀವು ಏನನ್ನೂ ಮಾಡಲು ಸಾಧ್ಯವಾಗದಿದ್ದರೆ ಅದರ ಬಗ್ಗೆ ಚಿಂತಿಸಬೇಡಿ’ ಎಂದು ಹೇಳಿದ್ದರು.
ಕಾಲವು ಬದಲಾಗುತ್ತಲ್ಲೇ ಇದೆ ಇದರ ಜೊತೆ ಜೀವಿತಾವಧಿಯು ಕೂಡ ಬದಲಾಗುತ್ತಿದೆ. ಒಟ್ಟಿನಲ್ಲಿ ಹಿರಿಯರು ಮುಕ್ತ ಬದುಕಿನ ಜೀವನ ಶೈಲಿಯಲ್ಲಿ ಬದುಕಿದ್ದರು. ನಾವು ಕೂಡ ಈ ರೀತಿ ಅದ್ಭುತವಾಗಿ ಜೀವಿತಾವಧಿಯನ್ನು ಗಳಿಸಬೇಕು. ವೈದ್ಯರ ಔಷಧಿಗಳು, ಸಾವಯವ ಆಹಾರ ಪದ್ಧತಿ, ಯೋಗ, ಧ್ಯಾನದ ವ್ಯಾಪಕದ ಮೂಲಕ ಸಾವಿನ ಪ್ರಮಾಣವನ್ನು ಕಡಿಮೆ ಮಾಡಿ, ಮನುಷ್ಯರೂ ದೀರ್ಘಾಯುಷಿಗಳಗಿ ಬದುಕಬಹುದು ಎಂದು ಸಂಶೋಧನೆ ತಿಳಿಸಿದೆ.

Leave A Reply

Your email address will not be published.