Post Payment Bank : ಪೋಸ್ಟ್ ಪೇಮೆಂಟ್ ಬ್ಯಾಂಕ್ ಖಾತೆದಾರರಿಗೆ ಗುಡ್ ನ್ಯೂಸ್ : ಹೊಸದಾಗಿ ಪರಿಚಯಿಸಲಿದೆ ವಾಟ್ಸಪ್ ಬ್ಯಾಂಕಿಂಗ್!
Post payment bank :ಗ್ರಾಹಕರಿಗೆ ನೆರವಾಗುವ ನಿಟ್ಟಿನಲ್ಲಿ ಪೋಸ್ಟ್ ಆಫೀಸ್ ಇಲಾಖೆ ಹಲವು ಯೋಜನೆಗಳನ್ನು ರೂಪಿಸುತ್ತಲೇ ಬಂದಿದ್ದು, ಉತ್ತಮ ಸೇವಿಂಗ್ ಜೊತೆ ಭದ್ರತೆಯನ್ನು ನೀಡುವ ಹಲವು ಸ್ಕೀಮ್ ಗಳು ಜಾರಿಯಲ್ಲಿದೆ. ಅದರಂತೆ ಈಗ ಖಾತೆದಾರರಿಗೆ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ (Post payment bank)ಮತ್ತೊಂದು ಹೊಸ ಪ್ರಯೋಜನವನ್ನು ನೀಡುತ್ತಿದೆ.
ಹೌದು. ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ವಾಟ್ಸಾಪ್ ಬ್ಯಾಂಕಿಂಗ್ ಸೇವೆ ಆರಂಭಿಸಿದ್ದು, ಏರ್ಟೆಲ್ ಸಹಯೋಗದೊಂದಿಗೆ ಪ್ರಾರಂಭಿಸಲು ಮುಂದಾಗಿದೆ. ಯಾವುದೇ ವಹಿವಾಟುಗೆ ಬ್ಯಾಂಕ್ ಗೆ ಅಲೆದಾಡುವುದನ್ನು ತಪ್ಪಿಸಲು ಈ ವಾಟ್ಸಪ್ ಬ್ಯಾಂಕಿಂಗ್ ಸಹಕಾರಿಯಾಗಲಿದೆ. ಇನ್ಮುಂದೆ ಖಾತೆದಾರರು ಮನೆಯಿಂದಲೇ ಖಾತೆಯನ್ನು ಸುಲಭವಾಗಿ ನಿರ್ವಹಿಸಬಹುದು.
ಟೆಲಿಕಾಂ ಕಂಪನಿ ಏರ್ಟೆಲ್ ಮತ್ತು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಒಟ್ಟಾಗಿ ವಾಟ್ಸಾಪ್ ಬ್ಯಾಂಕಿಂಗ್ ಮೂಲಕ ಪ್ರತಿ ತಿಂಗಳು ಸುಮಾರು 250 ಮಿಲಿಯನ್ ಸಂದೇಶಗಳನ್ನು ಕಳುಹಿಸಲು ಕೆಲಸ ಮಾಡುತ್ತಿವೆ. ಈ ವಾಟ್ಸಪ್ ಬ್ಯಾಂಕ್ ಬಳಸಿಕೊಂಡು ಖಾತೆದಾರನು ತನ್ನ ಬಳಿ ಇರುವ ಪೋಸ್ಟ್ ಆಫೀಸ್ ಬಗ್ಗೆ ಮಾಹಿತಿಯನ್ನು ಪಡೆಯಬಹುದು.
ಇದಲ್ಲದೆ ಖಾತೆದಾರರು ವಾಟ್ಸಾಪ್ ಸಂದೇಶದ ಮೂಲಕ ಮನೆಯಲ್ಲಿ ಕುಳಿತು ಐಎಫ್ಎಸ್ಸಿ ಕೋಡ್, ಬ್ಯಾಲೆನ್ಸ್ ಮತ್ತು ಆನ್ಲೈನ್ ಹೆಲ್ಪ್ ಡೆಸ್ಕ್ನ ಸೌಲಭ್ಯವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಸಂವಹನ ಸಚಿವಾಲಯದಿಂದಲೂ ಹೇಳಿಕೆ ನೀಡಲಾಗಿದೆ. ಹಾಗೆಯೇ, ಕೇಂದ್ರ ಸರ್ಕಾರ ಹೊರಡಿಸಿರುವ ಡಿಜಿಟಲ್ ಇಂಡಿಯಾ ಮಿಷನ್ ಅನ್ನು ಮುಂದಕ್ಕೆ ಕೊಂಡೊಯ್ಯುವ ಯೋಜನೆ ಕೂಡ ಇದೆ ಎನ್ನಲಾಗಿದೆ.
ಈ ಮೆಸೇಜಿಂಗ್ ವೈಶಿಷ್ಟ್ಯದ ಮೂಲಕ ಗ್ರಾಹಕರು ಖಾತೆಯ ಭದ್ರತೆಯನ್ನು ಹೆಚ್ಚಿಸಿಕೊಳ್ಳಬಹುದು. ಟೆಲಿಕಾಂ ಕಂಪನಿ ಏರ್ಟೆಲ್ ಕೂಡ ಈ ನಿಟ್ಟಿನಲ್ಲಿ ಕೆಲಸ ಮಾಡಲು ಸಿದ್ಧವಾಗಿದ್ದು, ಗ್ರಾಹಕರಿಗೆ ಖಾತೆಗೆ ಸಂಬಂಧಿಸಿದ ಮಾಹಿತಿ ನೀಡಲಿದೆ.ಈ ಮೂಲಕ ಪೋಸ್ಟ್ ಆಫೀಸ್ ಖಾತೆದಾರರು ಈ ಮಾಹಿತಿಯನ್ನು ಪಡೆದುಕೊಳ್ಳಬಹುದು.