Sullia :ಸುಳ್ಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಜಿ. ಕೃಷ್ಣಪ್ಪ ಅವರೇ ಫೈನಲ್ : ನಂದ ಕುಮಾರ್ ಬೆಂಬಲಿಗರ ನಡೆ ಏನಿರಬಹುದು?

Share the Article

  . Krishnappa :ಮಂಗಳೂರು : ಕಳೆದ ಮೂವತ್ತು ವರ್ಷಗಳಿಂದ ಸುಳ್ಯ ಕ್ಷೇತ್ರದಲ್ಲಿ ಗೆಲುವನ್ನೇ ಕಾಣದ ಕಾಂಗ್ರೆಸ್‌ ಈ ಬಾರಿ ಗೆಲ್ಲಬೇಕೆಂಬ ಚಿಂತನೆಯಲ್ಲಿತ್ತು.

ಆದರೆ ಮೊದಲ ಪಟ್ಟಿಯಲ್ಲಿ ಸುಳ್ಯ ಕ್ಷೇತ್ರದ ಅಭ್ಯರ್ಥಿ ಘೋಷಣೆ ಮಾಡಲಾಗಿತ್ತು.ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಜಿ.ಕೃಷ್ಣಪ್ಪ (G. Krishnappa) ಅವರು ಅಭ್ಯರ್ಥಿಯಾಗಿ ಹೈಕಮಾಂಡ್‌ ಆಯ್ಕೆ ಮಾಡಿತ್ತು.

ಮೊದಲ‌ ಪಟ್ಟಿಯಲ್ಲಿದ್ದ ಸುಳ್ಯ ಕ್ಷೇತ್ರದ ಅಭ್ಯರ್ಥಿ ಕೃಷ್ಣಪ್ಪ ಅವರಿಗೆ ಸ್ವಪಕ್ಷೀಯರಿಂದಲೇ ಆಕ್ಷೇಪ್ಪ ವ್ಯಕ್ತವಾಗಿದೆ.ಇದರ ಪರಿಣಾಮ ಟಿಕೇಟ್ ಆಕಾಂಕ್ಷಿಯಾಗಿದ್ದ ನಂದ ಕುಮಾರ್ ಅವರ ಬೆಂಬಲಿಗರು ,ಸಭೆ,ಪತ್ರಿಕಾಗೋಷ್ಟಿ ನಡೆಸಿ ಕಾಂಗ್ರೆಸ್.ನ ಅಭ್ಯರ್ಥಿ ವಿರುದ್ದ ಹೈಕಮಾಂಡ್ ‌ಗೆ ಮನವಿ ಮಾಡಿದ್ದಾರೆ.

ಇದರಿಂದಾಗಿ ಸುಳ್ಯ ಕಾಂಗ್ರೆಸ್‌ನಲ್ಲಿ ಎರಡು ಬಣಗಳು ಸೃಷ್ಟಿಯಾಗಿವೆ.

ಕೆ.ಕುಶಲ ಅವರ ಬಳಿಕ ಕಾಂಗ್ರೆಸ್‌‌ಗೆ ಗೆಲುವು ಮರೀಚಿಕೆಯಾಗಿಯೇ ಉಳಿದಿದೆ. ಸುಳ್ಯದಲ್ಲಿ ಬಿಜೆಪಿ ನಿರಂತರವಾಗಿ ಕ್ಷೇತ್ರದಲ್ಲಿ ಹಿಡಿತ ಸಾಧಿಸುತ್ತಿದೆ.

ಆದರೆ ಈ ಬಾರಿ ಬಿಜೆಪಿಯಲ್ಲಿ ಅಭ್ಯರ್ಥಿ ಬದಲಾವಣೆಯ ಗೊಂದಲವಿತ್ತು.ಆದರೆ ಇದರ ಲಾಭ ಪಡೆಯಲು ಕಾಂಗ್ರೆಸ್ ಸಂಪೂರ್ಣ ವಿಫಲವಾಗಿದೆ.ಎರಡು ಬಣಗಳಾಗಿ ಚದುರಿದೆ.

ಮೂಲಗಳ ಪ್ರಕಾರ ನಂದಕುಮಾರ್‌ ಅವರನ್ನು ಪಕ್ಷೇತರರನ್ನಾಗಿ ಕಣಕ್ಕಿಳಿಸಲು ಬೆಂಬಲಿಗರು ನಿರ್ಧರಿಸಿದ್ದಾರೆ. ಅದರ ಪೂರ್ವಭಾವಿಯಾಗಿ ಎ.9ರಂದು ನಿಂತಿಕಲ್‌ನಲ್ಲಿ ಸಮಾವೇಶ ಹಮ್ಮಿಕೊಂಡಿದ್ದಾರೆ.

ಈ ಸಮಾವೇಶದ ಬಳಿಕ ನಂದ ಕುಮಾರ್ ಹಾಗೂ ಅವರ ಬೆಂಬಲಿಗರ ನಡೆ ಏನಿರಬಹುದು ಎಂಬುದು ಹೊರಬರಲಿದೆ.

Leave A Reply

Your email address will not be published.