Cooker Bomb Blast : ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿ ಸ್ಪೋಟಕ ಮಾಹಿತಿ ಪತ್ತೆ!! ಪತ್ತೆಯಾದ ಶಾರಿಕ್​ನ ​ಪೆನ್ ಡ್ರೈವ್, ಪಿಡಿಎಫ್ ಫೈಲ್ ನಲ್ಲಿ ಏನಿತ್ತು?

Cooker Bomb Blast : ಮಂಗಳೂರು: ಮಂಗಳೂರಿನ ಜನತೆಯನ್ನು ಬೆಚ್ಚಿಬೀಳಿಸಿದ ನಾಗೂರಿನ (Naguru, Mangaluru) ಬಳಿ ಆಟೋದಲ್ಲಿ ಸಂಭವಿಸಿದ (Auto Blast) ಕುಕ್ಕರ್ ಬಾಂಬ್ ಬ್ಲಾಸ್ಟ್ (Cooker Bomb Blast) ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ತನಿಖೆ ನಡೆಸುತ್ತಿದ್ದು, ಈ ವೇಳೆ ಸ್ಫೋಟಕ ಮಾಹಿತಿಗಳು ಲಭ್ಯವಾಗಿವೆ ಎಂದು ತಿಳಿದುಬಂದಿದೆ. ತನಿಖೆ ವೇಳೆ ಗೌಪ್ಯತೆಗಳು ಅಡಗಿರುವ ಪೆನ್ ಡ್ರೈವ್ ಹಾಗೂ PDF ಪೈಲ್‌ಗಳು ಲಭ್ಯವಾಗಿವೆ.

NIA ತಂಡ ಕುಕ್ಕರ್ ಬಾಂಬ್ ಬ್ಲಾಸ್ಟ್ (Cooker Bomb Blast) ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ತನಿಖೆ ನಡೆಸಿದ್ದು, ಉಗ್ರ ಶಾರಿಕ್ ನನ್ನು ಪರಿಶೀಲನೆ ನಡೆಸಿದ್ದು, ಈ ವೇಳೆ ಶಾರಿಕ್ ಬಳಿ 80GBಯ ಪೆನ್ ಡ್ರೈವ್ ಪತ್ತೆ ಹಚ್ಚಿದೆ. ಆ ಪೆನ್ ಡ್ರೈವ್​ನಲ್ಲಿ ಶಂಕಿತರ ಹಲವಾರು ಸ್ಫೋಟಕ PDFನ ರಹಸ್ಯ ಫೈಲ್​ಗಳು ಪತ್ತೆಯಾಗಿವೆ. 80 ಜಿಬಿ ಪೆನ್ ಡ್ರೈವ್ ನಲ್ಲಿ ಹಲವು ಪ್ರಚೋದನಕಾರಿ ವಿಡಿಯೋಗಳು, ಹಿಟ್ ಸ್ಕ್ವಾಡ್ ಬಗೆಗಿನ ಮಾಹಿತಿ, ಕೋಮು‌ ವಿಧ್ವಂಸಕ ಕೃತ್ಯಗಳ ಪ್ಲಾನಿಂಗ್ ಸೇರಿದಂತೆ ಹಲವು ಮಾಹಿತಿಗಳು ಲಭ್ಯವಾಗಿವೆ.

ಕೃತ್ಯ ನಡೆಸಲು ಹಾಕಿದ್ದ ಪ್ಲಾನ್ ಗಳ‌ ಮಾಹಿತಿ ಲಭ್ಯವಾಗಿವೆ.
ಪ್ಲಾನ್ ಮಾಡಿದ್ದ ಸ್ಥಳದ ವಿಡಿಯೋಗಳು ಪತ್ತೆಯಾಗಿವೆ. ಅಲ್ಲದೆ ಶಾರಿಕ್‌ ಹಾಗೂ ಮತಿನ್ ಇಬ್ಬರೂ ಕಾನೂನು ಸುವ್ಯವಸ್ಥೆ ಹದಗೆಡಲು ಮಾಡಬೇಕಾದ ಹಲವು ಪ್ಲಾನ್ಗಳ ಬಗ್ಗೆ ತನ್ನ ಸಹಚರರಿಗೆ ವಿಡಿಯೋ ಮಾಡಿ ಸೂಚನೆ ನೀಡಿದ್ದರು ಎಂದು ತಿಳಿದುಬಂದಿದೆ. ಮತೀನ್ ಜೊತೆ ಸೇರಿ ಮಾಡಿದ್ದ ಪ್ಲಾನಿಂಗ್ ಬಗ್ಗೆ ಹಲವು ಮಾಹಿತಿ ಹೇಳಿದ್ದಾನೆ.

ಪೆನ್ ಡ್ರೈವ್​ನಲ್ಲಿ ಆರ್ಟಿಕಲ್ 370 ರದ್ದು ಬಗ್ಗೆಯೇ ಹೆಚ್ಚು ಪ್ರಚೋದನಕಾರಿ ವಿಡಿಯೋಗಳು ಪತ್ತೆಯಾಗಿವೆ. 2017ರಲ್ಲಿ ತೀರ್ಥಹಳ್ಳಿಯಲ್ಲಿ ಆದ ಮೌಲ್ವಿ ಭಾಷಣ ಪತ್ತೆಯಾಗಿದೆ. ‘ಕಾಫೀರರನ್ನ ( ಮುಸ್ಲಿಮೇತರನ್ನು) ಮಟ್ಟ ಹಾಕುವ ಸಮಯ ಬಂದಿದೆ’ ಜಿಹಾದಿ ಮೂಲಕ ಇಸ್ಲಾಂನ್ನು ಉಳಿಸೋಣ ಎಂದೆಲ್ಲ ಮೌಲ್ವಿ ಭಾಷಣ ಮಾಡಿದ್ದಾರೆ. ಈ ಭಾಷಣದಿಂದ ಹಲವು ಯುವಕರು ಪ್ರಚೋದಿತರಾಗಿ ಸಂಘರ್ಷಕ್ಕೆ ಸಿದ್ಧರಾಗಿದ್ದರು. ಪೆನ್ ಡ್ರೈವ್ ನಲ್ಲಿ ಭಾಷಣದ ತುಣುಕು ಪತ್ತೆಯಾದ ಕೂಡಲೆ ಮೌಲ್ವಿಗಾಗಿ ಎನ್​ಐಎ ಅಧಿಕಾರಿಗಳು ಬೆಲೆ ಬೀಸಿದ್ದಾರೆ.

ಅಲ್ಲದೆ, ಶಂಕಿತ ಉಗ್ರ ಶಾರಿಕ್ (shariq) ವಿಚಾರಣೆ ವೇಳೆ ಹಲವು ಸ್ಪೋಟಕ ಮಾಹಿತಿ ಹೊರಹಾಕಿದ್ದು, ಶಿವಮೊಗ್ಗದ ಕಾಡುಗಳಲ್ಲಿ ಕೆಲವು ಶಂಕಿತರು ನೆಲೆಸಿದ್ದು, ಇವರೆಲ್ಲ ವೀರಪ್ಪನ್ ಮಾದರಿಯಲ್ಲಿ ಆಹಾರ ಸಂಗ್ರಹಣೆ ಮಾಡಿದ್ದರು ಎಂದು ಶಾರಿಕ್ ಮಾಹಿತಿ ನೀಡಿದ್ದಾನೆ. ಆಹಾರವನ್ನು ಕೆಡದಂತೆ ಸಂಗ್ರಹಿಸಿಡಲು ಪ್ಲಾಸ್ಟಿಕ್ ಡ್ರಮ್​ಗಳನ್ನು ನೆಲದಲ್ಲಿ ಹೂತು ಆಹಾರ ಸಂಗ್ರಹಣೆ ಮಾಡಿದ್ದರು. ಶಾರಿಕ್ ಮತ್ತು ಆತನ ಗ್ಯಾಂಗ್ ನಿರಂತರವಾಗಿ ಕಾಡಿನಲ್ಲಿ ತರಬೇತಿ ಹಾಗೂ ಪ್ಲಾನಿಂಗ್ ಮಾಡುತ್ತಿದ್ದರು. ಹೀಗಾಗಿ ಶಿವಮೊಗ್ಗದ ಕಾಡುಗಳಲ್ಲಿ ಆಹಾರ ಪದಾರ್ಥ ಸಂಗ್ರಹ ಮಾಡ್ತಿದ್ದರು ಎನ್ನಲಾಗಿದೆ. ಸದ್ಯ ಪೆನ್ ಡ್ರೈವ್​ನಲ್ಲಿದ್ದ ಮಾಹಿತಿ ಬಗ್ಗೆ NIA ಅಲರ್ಟ್ ಆಗಿದ್ದು, ಸೂಕ್ಷ್ಮವಾಗಿ ಪರಿಶೀಲಿಸುತ್ತಿದೆ.

 

ಇದನ್ನೂ ಓದಿ : Best CNG Car: ಉತ್ತಮ ಮೈಲೇಜ್ ನೀಡುವ 7 ಸೀಟರ್ ಆಯ್ಕೆಯೊಂದಿಗೆ ಲಭ್ಯವಿರುವ ಬೆಸ್ಟ್ CNG ಕಾರುಗಳಿವು!

1 Comment
  1. Creati un cont personal says

    Thank you for your sharing. I am worried that I lack creative ideas. It is your article that makes me full of hope. Thank you. But, I have a question, can you help me?

Leave A Reply

Your email address will not be published.