Tech Tips : ಇಂಟರ್ನೆಟ್ ಇಲ್ಲದೆ ಯುಪಿಐ ಹಣ ಕಳುಹಿಸುವುದು ಹೇಗೆ?
Offline UPI Payments : ಇತ್ತೀಚೆಗೆ ಜನರು ಹೆಚ್ಚಾಗಿ ಯುಪಿಐ (UPI) ನ ಮೂಲಕ ಹಣ ವರ್ಗಾವಣೆ ಮಾಡುತ್ತಾರೆ. ಅದರಲ್ಲೂ ಕೋರೋನ ವೈರಸ್ (corona virus) ಬಂದ ಮೇಲೆ ಹೆಚ್ಚಿನ ವ್ಯವಹಾರಗಳು ಆನ್ಲೈನ್ (online) ಮೂಲಕವೇ ನಡೆಯುತ್ತಿದೆ. ಹಣ ಪಾವತಿಸಲು ಜನರು ಡಿಜಿಟಲ್ ವ್ಯವಸ್ಥೆಗೆ ಮಾರು ಹೋಗಿದ್ದಾರೆ. ಹಣ ಪಾವತಿಸಲು ಇಂಟರ್ನೆಟ್ ನ (internet) ಅವಶ್ಯಕತೆ ಬೇಕಾಗುತ್ತದೆ. ಆದರೆ ಇದೀಗ ಇಂಟರ್ನೆಟ್ ಇಲ್ಲದೆ(Offline UPI Payments) ಕೂಡ ಮೊಬೈಲ್ ನಲ್ಲಿ ಯುಪಿಐ (UPI) ಮೂಲಕ ಹಣ ಕಳುಹಿಸಬಹುದಾಗಿದೆ.
ಕೆಲವೊಮ್ಮೆ ನೀವು ಹಣ ಪಾವತಿಸುವಾಗ ನಿಮ್ಮ ಬಳಿ ಮೊಬೈಲ್ ಡೇಟಾ (mobile data) ಇಲ್ಲದೆ ಅಥವಾ ಇಂಟರ್ನೆಟ್ ಕನೆಕ್ಷನ್ (internet connection) ಇಲ್ಲದೆ ಇದ್ದಾಗ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದರೆ ಇದೀಗ ಈ ಸಮಸ್ಯೆಗೆ ಮುಕ್ತಿ ಸಿಗುತ್ತಿದೆ. ಹೇಗೆ ಎಂದು ತಿಳಿಯಲು ಮುಂದೆ ಓದಿ!
ಇಂಟರ್ನೆಟ್ ಕನೆಕ್ಷನ್ (intermet connection) ಇಲ್ಲದೆ ಇದ್ದಾಗ ನೀವು ಕೇವಲ ಯುಎಸ್ಎಸ್ಡಿ (USSD) ಆಧಾರಿತ *99# ಬಳಸಿ ಆಫ್ಲೈನ್ (offline) ಮೂಲಕ ಹಣವನ್ನು ಪಾವತಿಸಬಹುದು.
ಇದೀಗ NPCI ಯುಪಿಐ (UPI) ಪಾವತಿಗಳನ್ನು ಅಪ್‌ಗ್ರೇಡ್ ಮಾಡಿದ USSD ಈ ಸೌಲಭ್ಯವನ್ನು ಪರಿಚಯಿಸಿದೆ. ಇದರಿಂದ ನೀವು ಇಂಟರ್ನೆಟ್ (internet) ಇಲ್ಲದೆ ಯುಪಿಐ ಮೂಲಕ ಪೇಮೆಂಟ್ ಮಾಡಬಹುದು. ಇದರ ಮತ್ತೊಂದು ವಿಶೇಷತೆ ಎಂದರೆ ನೀವು ಈ ಸೇವೆಯನ್ನು ಬೇಸಿಕ್ ಮೊಬೈಲ್‌ಗಳಲ್ಲೂಕೂಡ ಬಳಸಿ ಯುಪಿಐ (UPI) ಮೂಲಕ ಹಣ ಪಾವತಿಸಬಹುದು. ಈಗ ಪ್ರತಿಯೊಬ್ಬರಿಗೂ ಕೂಡ ಮೊಬೈಲ್ ಬ್ಯಾಕಿಂಗ್ ಸೇವೆ ಬಳಸುವುದಕ್ಕೆ ಅವಕಾಶ ಇದೆ.
ಇಂಟರ್ನೆಟ್ ಕನೆಕ್ಷನ್ (internet connection) ಇಲ್ಲದೆ ಇದ್ದಾಗ ನೀವು ಕೇವಲ ಯುಎಸ್ಎಸ್ಡಿ (USSD) ಆಧಾರಿತ *99# ಬಳಸಿ ಆಫ್ಲೈನ್ ಮೂಲಕ ಹಣವನ್ನು ಪಾವತಿಸಬಹುದು. ನಿಮ್ಮ ಮೊಬೈಲ್‌ನಲ್ಲಿ ಅಥವಾ ಸ್ಮಾರ್ಟ್‌ಫೋನಿನಲ್ಲಿ *99# ಡಯಲ್ ಮಾಡಿ. ಮಾಡಿದ ಕೆಲವೇ ಸೆಕೆಂಟ್ ಗಳಲ್ಲಿ ನಿಮಗೆ ಸೆಂಡ್ ಮನಿ(send money), ರಿಸಿವ್ ಮನಿ (recieve) ಬ್ಯಾಲೆನ್ ಚೆಕ್ (balance check), ಮೈ ಪ್ರೊಫೈಲ್ (my profile), ಮತ್ತು ಯುಪಿಐ ಪಿನ್ (UPI PIN) ಸೇರಿದಂತೆ ಏಳು ವಿಭಿನ್ನ ಆಯ್ಕೆಗಳು ನಿಮಗೆ ಮೆನುವಿನಲ್ಲಿ ಕಾಣಿಸುತ್ತದೆ. ನಂತರ ನೀವು ಹಣ ಪಾವತಿಸಬೇಕಾದರೆ ಸೆಂಡ್ ಮನಿ ಆಯ್ಕೆ ಮಾಡಿ, ಮತ್ತು ಇದಕ್ಕಾಗಿ ಒಂದನ್ನು ಒತ್ತಿರಿ. ನಂತರ ನಿಮ್ಮ ಮೊಬೈಲ್ ಸಂಖ್ಯೆ, ಯುಪಿಐ ಐಡಿ (UPI ID) ಅಥವಾ ನಿಮ್ಮ ಖಾತೆಯ ಸಂಖ್ಯೆ ಮತ್ತು ಐಎಫ್ಎಸ್ಸಿ (IFSC) ಕೋಡ್ ಹಾಕಿ ಹಣವನ್ನು ಕಳುಹಿಸುವ ಆಯ್ಕೆ ಇರುತ್ತದೆ. ನಿಮಗೆ ಯಾವುದು ಸೂಕ್ತ ಅದನ್ನು ಆಯ್ಕೆ ಮಾಡಿರಿ.
ನಂತರ ನೀವು ಯಾರಿಗೆ ಹಣವನ್ನು ಕಳುಹಿಸಬೇಕು ಅವರನ್ನು ಆಯ್ಕೆ ಮಾಡಿಕೊಳ್ಳಿ. ನೀವೇನಾದರೂ ನಿಮ್ಮ ಮೊಬೈಲ್ ಸಂಖ್ಯೆ ಮೂಲಕ ಹಣ ಪಾವತಿಸಲು ಇದ್ದರೆ ನೀವು ಹಣ ಕಳಿಹಿಸುವ ವ್ಯಕ್ತಿಯ ಮೊಬೈಲ್ ಸಂಖ್ಯೆಯನ್ನು ನಮೂದಿಸಿ. ಅಥವಾ ನೀವು ಯುಪಿಐ ಐಡಿ (UPI ID) ಆಯ್ಕೆ ಮಾಡಿದರೆ ಆ ವ್ಯಕ್ತಿಯ ಯುಪಿಐ ಐಡಿ (UPI ID) ಯನ್ನು ನಮೂದಿಸಿ. ನಿಮ್ಮ ಮೊಬೈಲ್ ಸಂಖ್ಯೆ, ಯುಪಿಐ ಐಡಿ (UPI ID) , ಬ್ಯಾಂಕ್ ಖಾತೆ ವಿವರವನ್ನು ನಮೂದಿಸಿ ಬಳಿಕ ಹಣವನ್ನು ಎಂಟ್ರಿ ಮಾಡಿ.
ಇದಾದ ನಂತರ ನೀವು ಯಾರಿಗೆ ಹಣವನ್ನು ಪಾವತಿಸಬೇಕು ಅಂತ ಇದ್ದೀರಿ ಅವರಿಗೆ ಹಣ ತಲುಪುತ್ತದೆ. ಈ ಮೂಲಕ ಇಂಟರ್ನೆಟ್ ಕನೆಕ್ಷನ್ (internet connection) ಇಲ್ಲದೆ ಹಣವನ್ನು ಪಾವತಿಸಬಹುದು.