Electoral Bonds: ಚುನಾವಣೆ ಹಿನ್ನೆಲೆ SBI ನಲ್ಲಿ ಇಂದಿನಿಂದ ಸಿಗಲಿದೆ ಚುನಾವಣಾ ಬಾಂಡ್
Electoral Bonds : ರಾಜ್ಯದ ವಿಧಾನಸಭೆ ಚುನಾವಣೆ ಮೇ 10ರಂದು ನಡೆಯಲಿದ್ದು ಈ ವರ್ಷದ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(State Bank of India) ಇಂದಿನಿಂದ ಅಂದರೆ ಏಪ್ರಿಲ್ 3 ರಿಂದ ಚುನಾವಣಾ ಬಾಂಡ್( Electoral Bonds)ಗಳ(election paper bond) ಮಾರಾಟ ಮಾಡಲು ಆರಂಭಿಸಿದೆ.
ಹೌದು, ಹಣಕಾಸು ಸಚಿವಾಲಯವು ಮಾರ್ಚ್ 31ರಂದು ‘ಎಲೆಕ್ಟೋರಲ್ ಬಾಂಡ್ ಸ್ಕೀಮ್(electoral bond scheme) 2018’ ರ ಅಡಿಯಲ್ಲಿ ಚುನಾವಣಾ ಬಾಂಡ್‌ಗಳ 26ನೇ ಕಂತಿನ ಘೋಷಣೆ ಮಾಡಿತ್ತು. ಹಾಗಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೀಡಲಿರುವ ಚುನಾವಣಾ ಬಾಂಡ್ ಗಳು ಎಸ್ಬಿಐನ 29 ಶಾಖೆಗಳಲ್ಲಿ ಏಪ್ರಿಲ್ 12 ವರೆಗೆ ಬಾಂಡ್ ಗಳ ಖರೀದಿಗೆ ಅವಕಾಶ ಇರಲಿದೆ. ಇದರಂತೆ, ಭಾರತೀಯ ನಾಗರಿಕರು, ಉದ್ಯಮಿಗಳು ಅವರಿಗೆ ಬಾಂಡ್‌ಗಳನ್ನು ಖರೀದಿಸಬಹುದಾಗಿದ್ದು(bond purchase), ರಾಜಕೀಯ ಪಕ್ಷಗಳು ತೆರೆದಿರುವ ಎಲೆಕ್ಟೋರಲ್ ಬಾಂಡ್ ಖಾತೆಗಳ ಮೂಲಕ ದೇಣಿಗೆ ನೀಡಬಹುದಾಗಿದೆ.
ಬಾಂಡ್ಗಳು ಇಶ್ಯೂ (issue)ಮಾಡಿದ 15 ದಿನಗಳ ಅವಧಿಯ ಗಡು ಮಾತ್ರ ಹೊಂದಿರುತ್ತವೆ. ಈ ಅವಧಿಯ ಒಳಗೆ ರಾಜಕೀಯ(politician) ಪಕ್ಷಗಳು ಬಾಂಡ್ ಗಳನ್ನು ಪಡೆದುಕೊಳ್ಳಬೇಕಾಗುತ್ತದೆ.ಚುನಾವಣೆ ಮೇ 10ರಂದು ನಡೆಯಲಿದ್ದು,ಅದರ ಫಲಿತಾಂಶ(result) ಮೇ 13ರಂದು ಪ್ರಕಟವಾಗಲಿದೆ ಎಂಬ ಮಾಹಿತಿಯನ್ನು ಮಾರ್ಚ್ 29 ರಂದು ಕೇಂದ್ರ ಚುನಾವಣಾ ಆಯೋಗ ಘೋಷಿಸಿತು.
ಈ ಹಿಂದಿನ ಮಾರಾಟದ ಅವಧಿಯಲ್ಲಿ, ಜನವರಿ ತಿಂಗಳಲ್ಲಿ ಎಸ್ಬಿಐ 308.76 ಕೋಟಿ ರೂಪಾಯಿ ಮೊತ್ತದ ಚುನಾವಣಾ ಬಾಂಡ್(election bond)ಗಳನ್ನು ಮಾರಾಟ ಮಾಡಿತ್ತು. ಫೆಬ್ರವರಿಯಲ್ಲಿ ನಡೆದ ತ್ರಿಪುರಾ, ಮೇಘಾಲಯ ಹಾಗೂ ನಾಗಾಲ್ಯಾಂಡ್ ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ಬಾಂಡ್ ಗಳನ್ನು ಬಿಡುಗಡೆ ಮಾಡಲಾಗಿತ್ತು ಎಂಬುದು ಆರ್ಟಿಐ ನೀಡಿದ ಅರ್ಜಿಯಲ್ಲಿ ಮಾಹಿತಿ ತಿಳಿದುಬಂದಿದೆ.
ಈ ವರೆಗೆ ಅಂದರೆ 2018 ವರ್ಷದ ನಂತರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ12,008.59 ಕೋಟಿ ರೂಪಾಯಿ ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಮಾರಾಟ ಮಾಡಿದೆ. ಈ ಪೈಕಿ 11,984.91 ಕೋಟಿ ರೂ. ಮೌಲ್ಯದ ಬಾಂಡ್‌ಗಳನ್ನು ರಾಜಕೀಯ ಪಕ್ಷಗಳು ರಿಡೀಮ್(redeem) ಮಾಡಿಕೊಂಡಿವೆ.
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಜಾಸ್ತಿಯಾಗಿ 30 ದಿನಗಳ ಕಾಲ ಚುನಾವಣಾ ಬಾಂಡ್ ಗಳ ಮಾರಾಟಕ್ಕೆ ಅವಕಾಶ ನೀಡುತ್ತದೆ. ಆದರೆ ವಿಧಾನಸಭಾ ಚುನಾವಣೆಯ ಅವಧಿಯಲ್ಲಿ ಪ್ರತಿ ವರ್ಷ ಜನವರಿ, ಏಪ್ರಿಲ್, ಜುಲೈ ಹಾಗೂ ಅಕ್ಟೋಬರ್ ತಿಂಗಳಲ್ಲಿ ನಾಲ್ಕರಿಂದ 10 ದಿನಗಳ ಅವಧಿಗೆ ಚುನಾವಣಾ ಬಾಂಡ್‌ಗಳನ್ನು ಮಾರಾಟ ಮಾಡಲಾಗುತ್ತದೆ. 2022 ವರ್ಷ ದಿಂದ ವಿಧಾನಸಭೆ ಚುನಾವಣೆಗಳ ಸಂದರ್ಭದಲ್ಲಿ ಜಾಸ್ತಿಯಾಗಿ 15 ದಿನಗಳ ಕಾಲ ಬಾಂಡ್‌ಗಳ ಮಾರಾಟಕ್ಕೆ ಹಣಕಾಸು ಸಚಿವಾಲಯ(financial minister) ಆದೇಶವನ್ನು ನೀಡಿದೆ.
ಚುನಾವಣಾ ಬಾಂಡ್ ಎಂದರೇನು?
ರಾಜಕೀಯ ಪಕ್ಷಗಳಿಗೆ ದೇಣಿಗೆ ಅಂದರೆ ಹಣವನ್ನು ನೀಡುವುದಕ್ಕಾಗಿ ವ್ಯಕ್ತಿಗಳು ಅಥವಾ ಸಂಸ್ಥೆ ಇನ್ನಿತ್ತರ ಕಂಪನಿಗಳು(company) ಈ ಚುನಾವಣಾ ಬಾಂಡ್‌ಗಳನ್ನು ಪಡೆದುಕೊಳ್ಳುತ್ತಾರೆ. ಎಸ್ಬಿಐ ಬ್ಯಾಂಕ್ ನಿರ್ದಿಷ್ಟ ಮುಖಬೆಲೆಯ ಚುನಾವಣಾ ಬಾಂಡ್‌ಗಳನ್ನು ಬಿಡುಗಡೆ ಮಾಡಿ ಮಾರಾಟ ಮಾಡುತ್ತದೆ. ಚುನಾವಣಾ ಬಾಂಡ್‌ಗಳನ್ನು ಪಡೆಯುವ ಅರ್ಹ ರಾಜಕೀಯ ವ್ಯಕ್ತಿಗಳು ಅಥವಾ ರಾಜಕೀಯ ಪಕ್ಷಗಳು ಅಧಿಕೃತ ಬ್ಯಾಂಕ್ ಖಾತೆಯ ಮೂಲಕ ಮಾತ್ರವೇ ಎನ್‌ಕ್ಯಾಶ್ ಮಾಡಬಹುದಾಗಿದೆ ಅಂದರೆ ಬಾಂಡುಗಳನ್ನು ಪಡೆಯಬಹುದಾಗಿದೆ.
ಚುನಾವಣಾ ಬಾಂಡ್ ಅನ್ನು ಯಾರು ಖರೀದಿಸಬೇಕು ಮತ್ತು ಹೇಗೆ ಖರೀದಿಸಬಹುದು?
ಎಸ್ಬಿಐ ಬ್ಯಾಂಕ್ನ ಅಧಿಕೃತ ಶಾಖೆಗಳಲ್ಲಿ ಚುನಾವಣಾ ಬಾಂಡ್ಗಳು ದೊರೆಯುತ್ತವೆ. ರಾಜಕೀಯ ಪಕ್ಷದವರು ಬಾಂಡುಗಳನ್ನು ಖರೀದಿಸಬೇಕಾದರೆ ಡಿಜಿಟಲ್ ಪಾವತಿ ಅಥವಾ ಚೆಕ್ ನೀಡಿ ಪಡೆದುಕೊಳ್ಳಬೇಕಾಗುತ್ತದೆ. ಯಾವುದೇ ರೀತಿಯ ಹಣವನ್ನು ಪಾವತಿಸಿ ಬಾಂಡ್ ಗಳನ್ನು ಖರೀದಿಸಲು ಅವಕಾಶವಿಲ್ಲ. ಚುನಾವಣಾ ಬಾಂಡ್‌ಗಳನ್ನು(election bond) ಖರೀದಿಸಿದ ದೇಣಿಗೆದಾರು ಅದನ್ನು ತನಗೆ ಇಷ್ಟವಾದ ರಾಜಕೀಯ ಪಕ್ಷಕ್ಕೆ(politician party) ನೀಡಬಹುದು. ಅದನ್ನು ರಾಜಕೀಯ ಪಕ್ಷ 15 ದಿನಗಳ ಒಳಗಾಗಿ ಎನ್‌ಕ್ಯಾಶ್ ಮಾಡಿಕೊಳ್ಳಬೇಕು.
ಚುನಾವಣಾ ಸಂದರ್ಭದಲ್ಲಿ ಯಾವೆಲ್ಲ ರಾಜಕೀಯ ಪಕ್ಷಗಳು ಚುನಾವಣಾ ಬಾಂಡ್ ಪಡೆದುಕೊಳ್ಳುತ್ತದೆ.
1951ರ ಪ್ರಜಾ ಪ್ರತಿನಿಧಿ ಕಾಯ್ದೆಯ ಸೆಕ್ಷನ್ 29 ಅಡಿಯಲ್ಲಿ ನೋಂದಣಿಯಾಗಿರುವ ರಾಜಕೀಯ ಪಕ್ಷ ಮಾತ್ರ ಚುನಾವಣಾ ಬಾಂಡ್‌ಗಳನ್ನು ಸ್ವೀಕರಿಸಲು ಅವಕಾಶವಿದೆ. ಅಲ್ಲದೆ, ಹಿಂದಿನ ಲೋಕಸಭೆ ಚುನಾವಣೆ ಹಾಗೂ ರಾಜ್ಯ ಚುನಾವಣೆಗಳಲ್ಲಿ ಶೇಕಡಾ 1ಕ್ಕಿಂತ ಕಡಿಮೆ ಮತಗಳನ್ನು ಪಡೆದಿದ್ದರೆ ಅಂಥ ರಾಜಕೀಯ ಪಕ್ಷ ಚುನಾವಣಾ ಬಾಂಡ್ ಸ್ವೀಕರಿಸಲು ಅರ್ಹರಾಗಿರಲ್ಲ.
ಚುನಾವಣಾ ಬಾಂಡುಗಳನ್ನು ಖರೀದಿಸುವಾಗ ಒಬ್ಬನೇ ಖರೀದಿ (one person)ಮಾಡಬೇಕು ಎನ್ನುವ ನಿಯಮಾವಳಿಗಳು ಇಲ್ಲ ಜಂಟಿಯಾಗಿಯೂ(two person) ಚುನಾವಣಾ ಬಾಂಡ್‌ಗಳನ್ನು ಖರೀದಿಸಬಹುದಾಗಿದೆ. ಕೆವೈಸಿ ದೃಢೀಕರಿಸಿದ ಬಳಿಕವಷ್ಟೇ ಚುನಾವಣಾ ಬಾಂಡ್‌ಗಳನ್ನು ವಿತರಿಸಲಾಗುತ್ತದೆ. ಈ ಬಾಂಡ್ಗಳು ಹಣವನ್ನು ಪಾವತಿ ಮಾಡುವವರ ಹೆಸರನ್ನು ಹೊಂದಿರುವುದಿಲ್ಲ.
ಚುನಾವಣಾ ಸಂದರ್ಭದಲ್ಲಿ ಬಾಂಡ್ ಬಿಡುಗಡೆಗೆ ಕಾರಣವೇನು?
2017 ರ ಬಜೆಟ್ ಮಂಡನೆಯಲ್ಲಿ ಅಂದಿನ ಹಣಕಾಸು ಸಚಿವ(financial minister) ಅರುಣ್ ಜೇಟ್ಲಿ ಚುನಾವಣಾ ಬಾಂಡ್‌ಗಳನ್ನು ಬಿಡುಗಡೆ ಮಾಡುವ ಯೋಜನೆ ಬಗ್ಗೆ ಮಾಹಿತಿಯನ್ನು ಘೋಷಿಸಿದ್ದರು. ಅಂದಿನಿಂದ ಕೇಂದ್ರ ಸರ್ಕಾರ 2017ರ ಹಣಕಾಸು ಕಾಯ್ದೆಯಲ್ಲಿ ವಿಧಾನಸಭಾ ಮತ್ತು ಲೋಕಸಭಾ ಚುನಾವಣಾ ಬಾಂಡ್ ಪರಿಚಯಿಸಿತು. 2018ರಲ್ಲಿ ಚುನಾವಣಾ ಬಾಂಡ್ ಯೋಜನೆ ಬಗ್ಗೆ ಸರ್ಕಾರ ಕಟ್ಟು ನಿಟ್ಟಿನ ಆದೇಶವನ್ನು ಹೊರಡಿಸಿತ್ತು. ಹಾಗಾಗಿ ಪ್ರತಿ ವರ್ಷ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಯ ಬಾಂಡ್ ಗಳು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಖಾತೆಯಲ್ಲಿ ಚುನಾವಣಾ ಪಕ್ಷದವರಿಗೆ ನೀಡಲಾಗುತ್ತದೆ.