Bikini Farmer : ಹಸುಗಳ ಸಗಣಿ ಬಾಚಿ, ಮೈ ತೊಳೆದು ಆರೈಕೆ ಮಾಡೋ ಈ ಬೆಡಗಿ ಹಾಲು ಕರೆಯೋಕೆ ಬಂದ್ರೆ ಇಡೀ ಊರೇ ಅಲ್ಲಿಗೆ ಬರುತ್ತೆ! ಯಾಕೆ ಗೊತ್ತಾ?

Bikini Farmer : ಕೆಲವು ವರ್ಷಗಳ ಹಿಂದೆ ಕೃಷಿ, ಹೈನುಗಾರಿಕೆಗಳೆಲ್ಲವೂ ಹಳ್ಳಿಗರಿಗೆ ಹಾಗೂ ಅವಿದ್ಯವಂತರಿಗೆ ಮಾತ್ರ ಸೀಮಿತವಾದ್ದು ಎಂದು ಎಲ್ಲರೂ ಭಾವಿಸಿದ್ದರು. ಆದರೆ ಸದ್ಯ ಇಂದು ಉನ್ನತ ಶಿಕ್ಷಣ ಪಡೆದವರು, ಉನ್ನತ ಪದವಿ ಅಲಂಕರಿಸಿದವರೆಲ್ಲರೂ ಈ ಎರಡೂ ಕಾರ್ಯಗಳನ್ನು ಅರಸಿ ಹೋಗುತ್ತಿದ್ದಾರೆ. ಕೆಲವರು ಇದನ್ನು ಪ್ಯಾಷನ್ ಆಗೂ ಮಾಡಿಕೊಂಡು ಇದರಮೂಲಕವೇ ಲಕ್ಷ ಲಕ್ಷ ಸಂಪಾದಿಸುತ್ತಿದ್ದಾರೆ. ಅಂತೆಯೇ ಇಲ್ಲೊಬ್ಬಳು ಮಹಿಳೆ ಹೈನುಗಾರಿಕೆ ನಂಬಿಯೇ ಜೀವನ ನಡೆಸುತ್ತಿದ್ದಾಳೆ. ಆದರೀಕೆ ದನಗಳ ಹಾಲು ಕರೆಯೋಕೆ ನಿಂತ್ರೆ, ಇಡೀ ಊರೇ ಅಲ್ಲಿ ಸೇರುತ್ತಂತೆ! ಯಾಕೆ ಗೊತ್ತಾ?

 

ಹೌದು, ಇತ್ತೀಚಿನ ದಿನಗಳಲ್ಲಿ ಗ್ವಾಲಿನ್ ಎಂಬ ಮಹಿಳೆ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ಹೈನುಗಾರಿಕೆಯನ್ನೇ ತನ್ನ ಪ್ಯಾಷನ್ ಆಗಿ ಮಾಡಿಕೊಂಡಿರುವ ಈಕೆ ಅನೇಕ ಹಸುಗಳನ್ನು ಸಾಕಿ ಸಲಹುತ್ತಿದ್ದಾಳೆ. ಆದರೆ ಈಕೆ ಹಾಲು ಕರೆಯುವುದನ್ನು ನೋಡಲು ಅನೇಕರು ಬರುತ್ತಾರೆ.

ಈ ಗ್ವಾಲಿನ್​ ಹಾಲು ಕರೆರೋದಂದ್ರೆ ಊರ ಜನರಿಗೆಲ್ಲಾ ಯಾಕಪ್ಪಾ ಇಷ್ಟೊಂದು ಎಷ್ಟ ಅಂದ್ರೆ, ಅವಳು ಬಿಕಿನಿ ತೊಟ್ಟು ಪಶುಸಂಗೋಪನೆ (Bikini Farmer) ಮಾಡುತ್ತಾಳೆ. ಹೌದು, ತನ್ನ ಪ್ರತೀ ಕೆಲಸಮಾಡುವಾಗಲೂ ಈಕೆ ಇಲ್ಲಿ ಬಿಕಿನಿ ತೊಟ್ಟೇ ಇರುತ್ತಾಳೆ. ಹಾಲು ಕರೆಯುವಾಗಲೂ ಅದೇ ಬಿಕನಿ ಇರುತ್ತದೆ. ಹೀಗಾಗಿ ಪಡ್ಡೆ ಹೈಕ್ಳು ಈಕೆಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಆ ಸಮಯದಲ್ಲಿ ಅಲ್ಲಿಗೆ ಬರುತ್ತಾರಂತೆ.

ಅಂದಹಾಗೆ ಇದೀಗ ಈಕೆಯು ಬಿಕನಿ ತೊಟ್ಟು ದನ ಕರುಗಳ ಸೇವೆ ಮಾಡೋ ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಇತ್ತೀಚೆಗೆ ಗ್ವಾಲಿನ್ ಕೂಡ ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ತಾನು ಬಿಕನಿ ತೊಟ್ಟು ಕೆಲಸ ಮಾಡೋ ವೀಡಿಯೊವನ್ನು ಪೋಸ್ಟ್ ಮಾಡಿದ್ದಾಳೆ.

ಇನ್ನು ಈಕೆ ಹಸುಗಳಿಗೆ ಮೇವು ನೀಡುವುದರಿಂದ ಹಿಡಿದು ಅನಾರೋಗ್ಯದ ಪ್ರಾಣಿಗಳಿಗೂ ಸೇವೆ ಸಲ್ಲಿಸುತ್ತಾಳೆ. ಇದರೊಂದಿಗೆ ಹಸುಗಳ ಹಾಲನ್ನು ಕರೆದು, ಅವುಗಳ ಸಗಣಿಯಯನ್ನೂ ಬಾಚುತ್ತಾ ತನ್ನ ಕಾರ್ಯದಲ್ಲಿ ನಿರತಳಾಗಿದ್ದಾಳೆ.

ತನ್ನ ಬಿಕನಿ ವೇಷ ಭೂಷಣದ ಬಗ್ಗೆ ಪ್ರತಿಕ್ರಿಯಿಸಿದ ಗ್ವಾಲಿನ್, ತಾನು ದಿನವಿಡೀ ಕೆಸರಿನಲ್ಲಿ ಕೆಲಸ ಮಾಡುವುದರಿಂದ ಬಿಕಿನಿ ತೊಡುತ್ತೇನೆ. ಇದೊಂದು ನನಗೆ ಕಂಫರ್ಟೇಬಲ್ ಫೀಲ್ ನೇಡುತ್ತದೆ. ಇಲ್ಲದಿದ್ದರೆ ಇಡೀ ದಿನ ರಬ್ಬರ್ ಬೂಟುಗಳನ್ನು ಧರಿಸಬೇಕಾಗುತ್ತದೆ. ಹೀಗಾಗಿ ಬಿಕಿನಿ ತೊಟ್ಟು ಎಲ್ಲ ಕೆಲಸವನ್ನು ಮಾಡ್ತೀನಿ ಎಂದು ಹೇಳಿದ್ದಾರೆ.

Leave A Reply

Your email address will not be published.