B Y Vijayendra: ಬಿ ವೈ ವಿಜಯೇಂದ್ರ ಕಣಕ್ಕಿಳಿಯೋದು ಎಲ್ಲಿಂದ? ಕೊನೆಗೂ ಉತ್ತರ ಕೊಟ್ಟ ಯಡಿಯೂರಪ್ಪ!
B Y Vijayendra : ವಿಧಾನಸಭಾ ಚುನಾವಣೆಲ್ಲಿ(Assembly Election) ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ(Siddaramaiah) ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬುದು ರಾಜ್ಯಾದ್ಯಂತ ಇದುವರೆಗೂ ತೀವ್ರ ಕುತೂಹಲ ಕೆರಳಿಸಿತ್ತು. ಸಿದ್ದು ವರುಣಾ(Varuna)ದಿಂದ ಕಣಕ್ಕಿಳಿಯೋದು ಖಚಿತವಾದ ಬಳಿಕ ಸದ್ಯ BJP ಪಾಳಯದಲ್ಲಿ ಮಾಜಿ ಸಿಎಂ ಯಡಿಯೂರಪ್ಪನವರ(Yadiyurappa) ಪುತ್ರ ಬಿ ವೈ ವಿಜಯೇಂದ್ರ(B Y Vijayendra) ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ಪ್ರಶ್ನೆ ಸದ್ಯ ರಾಜ್ಯದ ಜನರನ್ನು ಕಾಡುತ್ತಿದೆ. ದಿನೇ ದಿನೇ ಈ ವಿಚಾರ ಚರ್ಚೆಯಾಗುತ್ತಿದೆ. ಆದರೆ ಸದ್ಯ ಈ ಕುರಿತು ಸ್ವತಃ ಯಡಿಯೂರಪ್ಪರನವರೇ ಪ್ರತಿಕ್ರಿಯಿಸಿದ್ದು ತಮ್ಮ ಪುತ್ರ ಸ್ಪರ್ಧಿಸೋ ಕ್ಷೇತ್ರ ಯಾವುದೆಂದು ತಿಳಿಸಿದ್ದಾರೆ.
ಹೌದು, ಕರ್ನಾಟಕ ಬಿಜೆಪಿಯ ಉಪಾಧ್ಯಕ್ಷ ಆಗಿರುವ ಬಿ.ವೈ.ವಿಜಯೇಂದ್ರ (BY Vijayendra), ಚುನಾವಣೆಯ ಎಕ್ಸಪರ್ಟ್ (Election Experts) ಅಂತಾನೇ ಬಿಂಬಿತರಾಗಿರುವ ವಿಜಯೇಂದ್ರ, ವರುಣಾ ಕ್ಷೇತ್ರದಿಂದಲೇ (Varuna Constituency) ಚುನಾವಣೆ ರಾಜಕೀಯ ಪ್ರವೇಶ ಮಾಡ್ತಾರೆ ಅನ್ನೋ ಮಾತುಗಳು 2018ರಿಂದಲೇ ಕೇಳಿ ಬಂದಿದ್ವು. ಇದಕ್ಕೆ ಕಾರಣ ಮಾಜಿ ಸಿಎಂ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ (MLA Yathindra Siddaramaiah). ಆದರೆ ಕೊನೆ ಕ್ಷಣದಲ್ಲಿ 2018ರ ಚುನಾವಣೆಯ ಟಿಕೆಟ್ ವಿಜಯೇಂದ್ರ ಅವರಿಗೆ ಮಿಸ್ ಆಗಿತ್ತು. ಈ ಬಾರಿ ಸ್ಪರ್ಧೆ ವರುಣಾದಿಂದಲೋ ಅಥವಾ ತಂದೆಯ ಕ್ಷೇತ್ರ ಶಿಕಾರಿಪುರದಿಂದಲೊ ಅನ್ನೋದು ಸದ್ಯ ರಾಜ್ಯದ ಜನರೆದುರಿರುವ ಪ್ರಶ್ನೆ. ಈ ಕುರಿತು ಸ್ವತಃ ಯಡಿಯೂರಪ್ಪರು ಏನು ಹೇಳಿದ್ದಾರೆ ಗೊತ್ತಾ?
ಮೈಸೂರಿನ ವರುಣಾ (Varuna) ಕ್ಷೇತ್ರದಿಂದ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಸ್ಪರ್ಧಿಸೋದು ಪಕ್ಕಾ ಆಗಿದ್ದು ಪ್ರತಿಸ್ಪರ್ಧಿಯಾಗಿ ಬಿಜೆಪಿಯಿಂದ ಬಿವೈ ವಿಜಯೇಂದ್ರ (BY Vijayendra) ಸ್ಪರ್ಧಿಸುವ ಸಾಧ್ಯತೆ ಇದೆ ಎಂದು (ಮಾ.30) ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa)ಅವರೇ ಸುಳಿವು ನೀಡಿದ್ದರು. ಆದರೆ ಈಗ ಯಾವುದೇ ಕಾರಣಕ್ಕೂ ಬಿವೈ ವಿಜಯೇಂದ್ರ ವರುಣಾ ಕ್ಷೇತ್ರದಿಂದ ಸ್ಪರ್ಧಿಸಲ್ಲ ಎನ್ನುವ ಮೂಲಕ BSY ಯುಟರ್ನ್ ಆಗಿದ್ದಾರೆ.
ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಪುತ್ರ ವಿಜಯೇಂದ್ರ ಶಿಕಾರಿಪುರ ಕ್ಷೇತ್ರದಲ್ಲೇ ಸ್ಪರ್ಧೆ ಮಾಡುತ್ತಾನೆ. ವರುಣ ಕ್ಷೇತ್ರದಲ್ಲಿ ವಿಜಯೇಂದ್ರ ಸ್ಪರ್ಧಿಸಬೇಕೆಂದು ಒತ್ತಡ ಇದೆ. ಆದರೆ ವರುಣ ಕ್ಷೇತ್ರದಲ್ಲಿ ಬಿ.ವೈ.ವಿಜಯೇಂದ್ರ ಸ್ಪರ್ಧೆ ಮಾಡುವುದಿಲ್ಲ. ನನ್ನ ಕ್ಷೇತ್ರ ಶಿಕಾರಿಪುರದಲ್ಲೇ ಸ್ಪರ್ಧಿಸಬೇಕು ಎಂದು ಸೂಚಿಸಿದ್ದೇನೆ. ವರುಣ ಕ್ಷೇತ್ರದಲ್ಲಿ ವಿಜಯೇಂದ್ರ ಸ್ಪರ್ಧೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.
ಶಿಕಾರಿಪುರ(Shikaripura)ದಲ್ಲಿ ವಿಜಯೇಂದ್ರ ಸ್ಪರ್ಧಿಸಬೇಕೆಂದು ವರಿಷ್ಠರಿಗೆ ಹೇಳುವೆ. ವಿಜಯೇಂದ್ರಗೂ ಶಿಕಾರಿಪುರದಲ್ಲೇ ಸ್ಪರ್ಧೆ ಮಾಡು ಅಂತಾ ತಿಳಿಸ್ತೇನೆ. ಇನ್ನು 4-5 ದಿನದಲ್ಲಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಲಿದೆ ಎಂದು ತಿಳಿಸಿದರು. ಆದರೆ ಅಂತಿಮ ಹಂತ, ಅಭ್ಯರ್ಥಿಗಳ ಪಟ್ಟಿ ಬಿಡುಗಡೆವರೆಗು ಕಾದು ನೋಡಬೇಕಿದೆ. ಅಂದಹಾಗೆ ಬಿ ವೈ ವಿಜಯೇಂದ್ರ ಅವರದ್ದು ಮೊದಲ ಚುನಾವಣೆಯಾಗಿದ್ದು, ಪ್ರಬಲ ಅಭ್ಯರ್ಥಿ ಎದರು ಮಗನನ್ನು ನಿಲ್ಲಿಸಿ ಸಂಕಷ್ಟಕ್ಕೆ ದೂಡುವುದಕ್ಕಿಂತ ಸೇಫ್ ಆಗಿ ಗೆದ್ದು ಬರಲಿ ಎಂದು ರಾಜಕೀಯ ಭವಿಷ್ಯದಿಂದ ಪುತ್ರನ ರಕ್ಷಣೆಗೆ ಎಸ್ ಯಡಿಯೂರಪ್ಪ ಮುಂದಾಗಿದ್ದಾರಂತೆ ಎಂದು ಮೂಲಗಳು ತಿಳಿಸಿವೆ.
ಅಲ್ಲದೆ ಇತ್ತೀಚೆಗೆ ವರುಣಾದಲ್ಲಿ ಬಿಜೆಪಿ ಕಾರ್ಯಕರ್ತನೊಬ್ಬ ‘ಹುಲಿ ಜೊತೆ ಹುಲಿಯೇ ಸ್ಪರ್ಧೆ ಮಾಡಲಿ. ಹುಲಿ ಜೊತೆ ಆಡು ಮರಿಯನ್ನು ಸ್ಪರ್ಧೆಗೆ ಬಿಡಬೇಡಿ. ಹುಲಿಯನ್ನು ಹೊಡೆಯಲು ಹುಲಿಯೆ ಬೇಕು. ಕ್ಷೇತ್ರಕ್ಕೆ ವಿಜಯೇಂದ್ರ ಬಂದರೆ ನಾನೇ 2 ಲಕ್ಷ ಕೊಡುತ್ತೇನೆ. ವರುಣ ಅಪ್ಪ ಮಕ್ಕಳ ಪಕ್ಷ ಇದೆ. ಸಿದ್ದರಾಮಯ್ಯ ಜೊತೆ ಒಳ ಒಪ್ಪಂದ ಅನ್ನೋ ಕಳಂಕ ಇದೆ. ನೀವು ಸ್ಪರ್ಧೆ ಮಾಡಿದರೆ ಅದನ್ನು ತೊಡೆದು ಹಾಕಬಹುದು. ನೀವು ವರುಣ ಕ್ಷೇತ್ರಕ್ಕೆ ಬಂದರೆ ಸಿದ್ದರಾಮಯ್ಯ ಅವರನ್ನು ವರುಣದಲ್ಲಿ ಕಟ್ಟಿ ಹಾಕಬಹುದು ಎಂದು ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ವರುಣ ಕಾರ್ಯಕರ್ತರ ಸಭೆ ವೇಳೆ ಘೋಷಿಸಿದ್ದಾರೆ.
ಇದಲ್ಲದೆ ವಿಜಯೇಂದ್ರ ಅವರು ವರುಣಾ ಹಾಗೂ ಶಿಕಾರಿಪುರ ಎರಡರಿಂದಲೂ ಸ್ಪರ್ಧಿಸುತ್ತಾರೆ ಅನೋ ಮಾತು ಕೇಳಿ ಬರುತ್ತಿತ್ತು. ಆದರೆ ಸಿದ್ದರಾಮಯ್ಯನವರು ವರುಣಾ ಕ್ಷೇತ್ರದಿಂದ ಕಣಕ್ಕಿಳಿದರೆ ಎದುರಾಳಿಯಾಗಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಸ್ಪರ್ಧಿಸುವ ಸಾಧ್ಯತೆಯನ್ನು ಅವರ ಸಹೋದರ, ಸಂಸದ ಬಿ.ವೈ. ರಾಘವೇಂದ್ರ(B Y Raghavendra) ಅವರು ಪರೋಕ್ಷವಾಗಿ ತಳ್ಳಿಹಾಕಿದ್ದಾರೆ. ಬಿಜೆಪಿಯಿಂದ ಒಬ್ಬ ಅಭ್ಯರ್ಥಿಯನ್ನು 2 ಕಡೆ ನಿಲ್ಲಿಸುವುದಿಲ್ಲ. ತಂದೆ ಸೇರಿದಂತೆ ನಮ್ಮೆಲ್ಲರ ಇಚ್ಛೆ ಅವರು ಶಿಕಾರಿಪುರದಿಂದ ಸ್ಪರ್ಧಿಸಬೇಕು ಎಂಬುದು. ವರುಣಾದಲ್ಲಿ ನಿಲ್ಲುವ ಬಗ್ಗೆ ನಮಗೆ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ.