Credit Cards: ಕ್ರೆಡಿಕ್‌ ಕಾರ್ಡ್‌ ಈ ದೇಶದಲ್ಲಿ ಇಲ್ಲ, ಯಾಕೆ ಗೊತ್ತಾ?

Credit cards :ಎಲ್ಲಾ ದೇಶದಲ್ಲಿ(country)ಜನರು ತಮ್ಮ ಸ್ವಂತ ಉಪಯೋಗಗೋಸ್ಕರ ಕ್ರೆಡಿಟ್ ಕಾರ್ಡ್ ಅನ್ನು ಬಳಸೋದು ಎಲ್ಲರಿಗೂ ತಿಳಿದೇ ಇದೆ. ಇದೇನು ದೊಡ್ಡ ವಿಷಯವೇನಲ್ಲ,ಆದರೆ ಈ ಒಂದು ದೇಶದಲ್ಲಿ ಯಾವುದೇ ಕಾರಣಕ್ಕೂ ಕ್ರೆಡಿಟ್​ ಕಾರ್ಡ್​ ಆನ್ನು ಬಳಸೋದಿಲ್ವಂತೆ. ಅಂದ್ರೆ ಆ ದೇಶ ಯಾವುದು? ಯಾಕೆ ಅಂತ ನಿಮಗೆ ಗೊತ್ತಾ? ಹಾಗಾದರೆ ಈ ದೇಶದಲ್ಲಿ ಯಾಕೆ ಕ್ರೆಡಿಟ್ ಕಾರ್ಡ್ (credit cards) ಬಳಸೋದಿಲ್ಲ ಎಂಬ ಕಾರಣ ನೀವೇ ನೋಡಿ.

ಹೌದು, ಯುರೋಪ್ನಲ್ಲಿ (Europe) ಜರ್ಮನಿಯ (Germany) ಪಕ್ಕದಲ್ಲಿರುವ ನೆದರ್ಲ್ಯಾಂಡ್ಸ್ನಲ್ಲಿ (Netherland) ಜನರು ಕ್ರೆಡಿಟ್ ಕಾರ್ಡ್ಗಳನ್ನು ಅಷ್ಟೇನೂ ಬಳಸುವುದಿಲ್ಲ. ಹಾಗೆಯೂ ನೆದರ್ಲ್ಯಾಂಡ್ ನಲ್ಲಿ ಕ್ರೆಡಿಟ್ ಕಾರ್ಡ್ ಗಳನ್ನು ಬಳಸಬೇಕೆಂದಿದ್ದರೆ, ಕೆಲವು ರೀತಿಯ ಷರತ್ತುಗಳಿವೆ (rules). ಈ ಷರತ್ತುಗಳು ಗ್ರಾಹಕರನ್ನು ಹೆಚ್ಚಿನ ರೀತಿಯಲ್ಲಿ ರಕ್ಷಿಸಲು ಇವೆ. ಜನರು ಇಷ್ಟಪಟ್ಟು ಬಳಸಿಕೊಳ್ಳಬೇಕು ಎಂಬ ಉದ್ದೇಶದಿಂದ ಅಲ್ಲಿನ ಸರ್ಕಾರ ಈ ಕ್ರೆಡಿಟ್ ಕಾರ್ಡ್ ನಿಯಮಗಳನ್ನು ನೀಡಿದೆ. ಅವರ ಪ್ರಕಾರ, ಕ್ರೆಡಿಟ್ ಕಾರ್ಡ್ ಮೇಲಿನ ಬಡ್ಡಿದರಗಳನ್ನು ಸರ್ಕಾರ (government) ನಿರ್ಧರಿಸುತ್ತದೆ. ಕ್ರೆಡಿಟ್ ಕಾರ್ಡ್ ಕಂಪನಿಗಳು ಯಾವುದೇ ಕಾರಣಕ್ಕೂ ದಂಡ ಮತ್ತು ಗುಪ್ತ ಶುಲ್ಕವನ್ನು ವಿಧಿಸಲು ಅವಕಾಶವಿಲ್ಲ.

ಇದರ ಜೊತೆ ಬಡ್ಡಿ ದರ ಭಾರಿ ಪ್ರಮಾಣದಲ್ಲಿ ಕುಸಿಯುತ್ತ ಹೋಗುತ್ತದೆ. ಆಗ ಸಾಮಾನ್ಯವಾಗಿ ಜನರಿಗೆ ಮೊದಲು ಮನಸ್ಸಿಗೆ ಬರೋದು ಕ್ರೆಡಿಟ್ ಕಾರ್ಡ್ ಅನ್ನು ಏಕೆ ಬಳಸಿದೆ ಎಂಬುದು. ಅನೇಕ ಚಿಂತಿಸುವ ಪರಿಸ್ಥಿತಿ ಜೀವನದಲ್ಲಿ ಎದುರಾಗಬಹುದು. ಅಮೆರಿಕಾದಂತಹ (America) ಇತರ ದೇಶಗಳಿಗೆ ಹೋಲಿಸಿದರೆ ನೆದರ್ಲ್ಯಾಂಡ್ಸ್ನಲ್ಲಿ ಕೆಲವೇ ಕೆಲವು ಬಳಕೆದಾರರಿದ್ದಾರೆ. ಅಲ್ಲಿನ ಬ್ಯಾಂಕ್ ಗಳೂ ಅವುಗಳನ್ನು ಬಳಸಲು ಪ್ರೋತ್ಸಾಹಿಸುವುದಿಲ್ಲ. ಏಕೆಂದರೆ ಜನರಿಗೆ ಈ ಕ್ರೆಡಿಟ್ ಕಾರ್ಡ್ ಗಳ ಬಗ್ಗೆ ಆಸಕ್ತಿಯೇ ಇಲ್ಲ. ದೊಡ್ಡ ನಗರಗಳು ಮತ್ತು ಪ್ರವಾಸಿ ಪ್ರದೇಶಗಳಲ್ಲಿ ಕ್ರೆಡಿಟ್ ಕಾರ್ಡ್‌ಗಳನ್ನು ತೆಗೆದುಕೊಳ್ಳುತ್ತಾರೆ. ಇಲ್ಲದಿದ್ದರೆ ಯಾರೂ ಇದನ್ನು ಬಳಸುವುದಿಲ್ಲ.

ಆ ಒಂದು ದೇಶದಲ್ಲಿ ಕ್ರೆಡಿಟ್ ಕಾರ್ಡ್(credit card) ಯಾಕೆ ಬಳಸಲ್ಲ ಅನ್ನೋ ಪ್ರಶ್ನೆ ಕಾಡಬಹುದು. ಇದಕ್ಕೆ ಕೆಲವು ಕಾರಣಗಳಿವೆ ನೋಡಿ.

ಡಚ್ (ನೆದರ್ಲ್ಯಾಂಡ್ಸ್) ಜನರು ಏನನ್ನಾದರೂ ಖರೀದಿಸಲು ಡೆಬಿಟ್ ಕಾರ್ಡ್ ಅಥವಾ ಹಣವನ್ನು (money)ಬಳಸುತ್ತಾರೆ. ಅತ್ಯಂತ ಶ್ರೀಮಂತ ದೇಶವಾಗಿದ್ದರೂ(rich country). ನೆದರ್ಲ್ಯಾಂಡ್ಸ್ ಜನರು ಸಾಲ ಮಾಡಲು ಇಷ್ಟಪಡುವುದಿಲ್ಲ. ಅವರು ತಮ್ಮಲ್ಲಿ ಇರುವ ಹಣದಲ್ಲಿ ಸುಖವನ್ನು ಕಾಣುತ್ತಾರೆ. ನೆದರ್ಲ್ಯಾಂಡ್ಸ್ನಲ್ಲಿ ಬ್ಯಾಂಕಿಂಗ್ (banking) ವ್ಯವಸ್ಥೆಯು ಉತ್ತಮವಾಗಿ ಅಭಿವೃದ್ಧಿಗೊಂಡಿದೆ. ಅನೇಕ ಜನರು ಆನ್‌ಲೈನ್ ಬ್ಯಾಂಕಿಂಗ್ ಸೇವೆಗಳನ್ನು ಬಳಸುತ್ತಾರೆ. ಹಣಕಾಸಿನ ವಹಿವಾಟುಗಳನ್ನು ಅಂದರೆ ಏನೇ ಕೆಲಸ ಇದ್ದರು ಹೆಚ್ಚಾಗಿ ಆನ್‌ಲೈನ್‌ನಲ್ಲಿ ಮಾಡಲಾಗುತ್ತದೆ.

ನೆದರ್ಲ್ಯಾಂಡ್ಸ್ನಲ್ಲಿ ಕ್ರೆಡಿಟ್ ಕಾರ್ಡ್ಗಳನ್ನು ಬಳಸಲು ಕೆಲವು ಷರತ್ತುಗಳನ್ನೂ ಏಕೆ ತರಲಾಯಿತು ಎಂದರೆ, ಗ್ರಾಹಕರು (customers) ಯಾರು ಇದನ್ನು ಒತ್ತಾಯದ ಮೇರೆಗೆ ತೆಗೆದುಕೊಳ್ಳಬಾರದು ಜನರು ಇಷ್ಟಪಟ್ಟು ಬಳಸಿಕೊಳ್ಳಬೇಕು ಎಂಬ ಉದ್ದೇಶದಿಂದ ಅಲ್ಲಿನ ಸರ್ಕಾರ ನಿಯಮಗಳನ್ನು (government rules) ಜಾರಿಗೆ ತಂದಿದೆ.

Leave A Reply

Your email address will not be published.