School Holiday Declared: ಶಾಲಾ ಮಕ್ಕಳಿಗೆ ಎಲ್ಲಿಯತನಕ ರಜೆ, ಮತ್ಯಾವಾಗ ಶಾಲೆ ಶಾಲೆ ಶುರು ಇಲ್ಲಿದೆ ಪೂರ್ತಿ ವಿವರ

School Holiday Declared: ರಾಜ್ಯದಾದ್ಯಂತ ಚಿಣ್ಣರು ಶಾಲಾ ಚೀಲ ಮನೆಯ ಮೂಲೆಗೆ ಬಿಸಾಕಿ ಅಂಗಳಕ್ಕೆ ಇಳಿದಿದ್ದಾರೆ. ರಜೆಯ ಪೂರ್ತಿ ಲಾಭವನ್ನು ಪಡೆದುಕೊಳ್ಳುವ ಆತುರ ಆ ಹುಡುಗ-ಹುಡುಗಿಯರದು. ಅದರ ಮಧ್ಯೆ ಶಾಲಾ ಶಿಕ್ಷಣ ಇಲಾಖೆಯು (Primary school and High schools) 2023-24ನೇ ಶೈಕ್ಷಣಿಕ ಸಾಲಿನ ಶಾಲಾ ವೇಳಾಪಟ್ಟಿಯನ್ನು ಪ್ರಕಟಿಸಿದ್ದು (School Holiday Declared), ಮೇ 29ರಿಂದ ತರಗತಿಗಳು ಆರಂಭವಾಗಲಿವೆ ಎಂಬ ಸುದ್ದಿ ಕೊಟ್ಟಿದೆ.

ರಾಜ್ಯ ಪಠ್ಯಕ್ರಮದ ಸರ್ಕಾರಿ, (Govt school) ಅನುದಾನಿತ(Aided) ಮತ್ತು ಅನುದಾನ ರಹಿತ (Non aided) ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ (High school) ಏಕರೂಪದ ಶೈಕ್ಷಣಿಕ ಮಾರ್ಗಸೂಚಿ ಅನುಷ್ಠಾನಗೊಳಿಸುವಂತೆ ಶಿಕ್ಷಣ ಇಲಾಖೆ ಆಯುಕ್ತರು ಸೂಚನೆ ನೀಡಿದ್ದಾರೆ. ಅದರಂತೆ ಈಗ ವೇಳಾಪಟ್ಟಿ ಸಿದ್ದಪಡಿಸಲಾಗಿದೆ.

2023-24ನೇ ಸಾಲಿನಿಂದ ರಾಜ್ಯಾದ್ಯಂತ ಶೈಕ್ಷಣಿಕ ಚಟುವಟಿಕೆಗಳು ಆರಂಭವಾಗುತ್ತಿದ್ದು, ಸಮಾನ ಏಕರೂಪದ ಅನುಷ್ಠಾನಕ್ಕಾಗಿ ವಾರ್ಷಿಕ ಶೈಕ್ಷಣಿಕ ಮಾರ್ಗಸೂಚಿ ಸಿದ್ಧಪಡಿಸಲಾಗಿದೆ. ಈ ಮಾರ್ಗಸೂಚಿಯಲ್ಲಿ ವಾರ್ಷಿಕವಾಗಿ ಮಾಡುವ ಪಾಠ ಪ್ರವಚನಗಳು ಮತ್ತು ತಿಂಗಳು ತಿಂಗಳು ಬೋಧಿಸುವ ಪಾಠ ಹಂಚಿಕೆ, ಮತ್ತು ಇತರ ಪಠ್ಯೇತರ ಚಟುವಟಿಕೆಗಳು ಕೂಡಾ ಸೇರಿವೆ. ಅಲ್ಲದೆ ಯಾವಾಗ ಪರೀಕ್ಷೆ ಮತ್ತು ಮೌಲ್ಯಾಂಕನ ಯಾವಾಗ ಮುಂತಾದ ವಿವರಗಳನ್ನೂ ಶಿಕ್ಷಣ ಇಲಾಖೆ ಪಟ್ಟಿ ಮಾಡಿದೆ. ಶಾಲಾ ಬೋಧನಾ ಅವಧಿ ಮತ್ತು ರಜಾದಿನಗಳ ಅವಧಿ ಇಲ್ಲಿದೆ ನೋಡಿ.

ಶಾಲಾ ಕರ್ತವ್ಯದ ದಿನಗಳು:
2023ರ ಮೇ 29ರಿಂದ ಅಕ್ಟೋಬರ್ 7 ರವರೆಗೆ ಮತ್ತು
ಅಕ್ಟೋಬರ್ 25ರಿಂದ 2024ರ ಏ.10ರವರೆಗೆ

ರಜೆಯ ದಿನಗಳು:
ಮಧ್ಯಂತರ ರಜೆ 2023ರ ಅಕ್ಟೋಬರ್ 8 ರಿಂದ ಅಕ್ಟೋಬರ್ 24 ರವರೆಗೆ
ಬೇಸಿಗೆ ರಜೆ 2024ರ ಏಪ್ರಿಲ್11ರಿಂದ ಮೇ 28ರ ವರೆಗೆ

Leave A Reply

Your email address will not be published.