Bank FD Vs Small Savings: ಬ್ಯಾಂಕ್ FD Vs ಸಣ್ಣ ಉಳಿತಾಯ ಯೋಜನೆ- ಇದರಲ್ಲಿ ಯಾವುದು ಉತ್ತಮ?
RBI : ಕಳೆದ ವರ್ಷ ಮೇ ತಿಂಗಳಿನಿಂದ ಪಿಕ್ಸ್ಡ್ (fixed) ಡೆಪಾಸಿಟ್ (Deposit) ಗಳ ಬಡ್ಡಿದರ ಏರಿಕೆ ಆಗುತ್ತಿದೆ. ಯಾಕೆಂದರೇ ಆರ್ಬಿಐ(RBI) ಪ್ರಮುಖ ರೆಪೋ ದರದಲ್ಲಿ 250 ಬೇಸಿಸ್ ಪಾಯಿಂಟ್ಗಳನ್ನು ಹೆಚ್ಚಿಸಿರಿವುದರಿಂದ ಈ ದರ ಏರಿಕೆ ಆಗಿದೆ.
ಇದರಿಂದಾಗಿ ಬ್ಯಾಂಕ್ ಗಳು ಎಫ್ ಡಿ (FD) ಯ ಮೇಲಿನ ಬಡ್ಡಿದರವನ್ನು ಹೆಚ್ಚಿಸಿದ್ದಾರೆ. ಹೀಗಾಗಿ ಬ್ಯಾಂಕ್ ಎಫ್ ಡಿ (FD) ಗಳು ಜನರನ್ನು ಆಕರ್ಷಿಸಲು ಸರ್ಕಾರವು ಶುಕ್ರವಾರ (ಮಾರ್ಚ್31) ರಂದು ಸಣ್ಣ ಉಳಿತಾಯ ಯೋಜನೆಗಳಾದ ಪಿಪಿಎಫ್ (PPF), ಎನ್ಎಸಿ(NS), ಎಸ್ಎಸ್ ವೈ (NSV) ಮತ್ತು ಪೋಸ್ಟ್ ಆಫೀಸ್ (postoffice) ನ ಠೇವಣಿಗಳ ಮೇಲೆ ಬಡ್ಡಿದರ ವನ್ನು ಹೆಚ್ಚಿಸಲಾಗಿದೆ.
ಬ್ಯಾಂಕ್ ಎಫ್ ಡಿ (FD) ಗಳು ಹಾಗು ಸಣ್ಣ ಉಳಿತಾಯ ಯೋಜನೆಗಳಲ್ಲಿ ಯಾವುದು ಉತ್ತಮ ಎಂಬುವುದನ್ನು ನೀವು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಥಮಾಡಿಕೊಳ್ಳಿ.
ಬ್ಯಾಂಕ್ ಎಫ್ ಡಿ (FD) ಗಳು : ಬ್ಯಾಂಕ್ ಠೇವಣಿಗಳು ಕೇವಲ ಕೆಲ ಸಮಯದ ಠೇವಣಿಗಳಾಗಿವೆ, ಇದರಲ್ಲಿ ಠೇವಣಿದಾರರು ತಮ್ಮ ಹಣವನ್ನು 6 ತಿಂಗಳು, 1 ವರ್ಷ, 3 ವರ್ಷ ಅಥವಾ 5 ವರ್ಷಗಳವರೆಗೆ ಇಡಬಹುದಾಗಿದೆ. ಈ ಠೇವಣಿಯ ಮೇಲೆ ಬ್ಯಾಂಕ್ ಸ್ಥಿರ ವಾರ್ಷಿಕ ಬಡ್ಡಿ ದರಗಳನ್ನು ನೀಡುತ್ತದೆ ಮತ್ತು FD ಅವಧಿ ಹಾಗೂ ಠೇವಣಿದಾರರ ವಯಸ್ಸಿನ ಆಧಾರದ ಮೇಲೆ ದರಗಳನ್ನು ಬದಲಾಯಿಸುತ್ತದೆ. PNB ಬ್ಯಾಂಕ್ ಜನರಿಗೆ ಶೇ 7.25 ರಷ್ಟು ನೀಡುತ್ತದೆ. ಮತ್ತು ಹಿರಿಯ ನಾಗರಿಕರಿಗೆ ಶೇ 7.75 ರಷ್ಟು ಬಡ್ಡಿದರನೀಡುತ್ತದೆ. ಇನ್ನೂ ಎಚ್ಡಿಎಫ್ಸಿ (HDFC) ಬ್ಯಾಂಕ್ ಜನರಿಗೆ ಶೇ 7.1 ರಷ್ಟು ಮತ್ತು 60 ವರ್ಷ ಮೇಲ್ಪಟ್ಟವರಿಗೆ ಶೇ 7.6 ರಷ್ಟು ಬಡ್ಡಿದರವನ್ನು ನೀಡುತ್ತದೆ. ಐಸಿಐಸಿಐ (ICICI) ಬ್ಯಾಂಕ್ ಗಳು ಜನರಿಗೆ ಶೇ 7.1 ರಷ್ಟು ಮತ್ತು ಹಿರಿಯ ನಾಗರಿಕರಿಗೆ 7.6 ರಷ್ಟು ನೀಡುತ್ತದೆ.
ಸಣ್ಣ ಉಳಿತಾಯ ಯೋಜನೆಗಳು: ಈ ಯೋಜನೆಯೂ ಜನರನ್ನು ಪ್ರೋತ್ಸಾಹಿಸುವ ಸಲುವಾಗಿ ನಿರ್ಮಾಣ ಮಾಡಲಾಗಿದೆ. ಈ ಯೋಜನೆಯಲ್ಲಿ ಮೂರು ವಿಭಾಗಗಳಿವೆ, ಉಳಿತಾಯ ಠೇವಣಿಗಳು, ಸಾಮಾಜಿಕ ಭದ್ರತಾ ಯೋಜನೆಗಳು ಮತ್ತು ಮಾಸಿಕ ಆದಾಯ ಯೋಜನೆಗಳು. ಉಳಿತಾಯ ಠೇವಣಿಗಳಲ್ಲಿ 1-3-ವರ್ಷದ ಸಮಯದ ಠೇವಣಿ ಇದ್ದು ಇದನ್ನು 5 ವರ್ಷದ ವರೆಗೆ ಮುಂದುವರೆಸಬಹುದು. ಇದರಲ್ಲಿ ಉಳಿತಾಯ ಪ್ರಮಾಣಪತ್ರಗಳು ಮತ್ತು ರಾಷ್ಟೀಯ ಕಿಸಾನ್ ವಿಕಾಸ್ ಪತ್ರಗಳು ಸೇರಿವೆ. ನಂತರ ಸಾಮಾಜಿಕ ಭದ್ರತಾ ಯೋಜನೆಗಳಲ್ಲಿ ಸುಕನ್ಯಾ ಸಮೃದ್ಧಿ ಖಾತೆ, ಸಾರ್ವಜನಿಕ ಭವಿಷ್ಯ ನಿಧಿ (PPF), ಮತ್ತು ಹಿರಿಯ ನಾಗರಿಕರ ಉಳಿತಾಯ ಯೋಜನೆಗಳು ಸೇರಿವೆ. ಮಾಸಿಕ ಆದಾಯ ಯೋಜನೆಯಲ್ಲಿ ಕೇವಲ ಮಾಸಿಕ ಆದಾಯ ಖಾತೆಯನ್ನು ಒಳಗೊಂಡಿದೆ.
ಇತ್ತೀಚಿನ ಜೂನ್ 2023 ದಲ್ಲಿನ ತ್ರೈಮಾಸಿಕದ ಸಣ್ಣ ಉಳಿತಾಯ ಯೋಜನೆಯ ಬಡ್ಡಿದರದ ವಿವರ.
ಶೇ 6.8 : 1 ವರ್ಷದ ಪೋಸ್ಟ್ ಆಫೀಸ್ ಸಮಯದ ಠೇವಣಿ.
ಶೇ 6.9: 2ವರ್ಷದ ಪೋಸ್ಟ್ ಆಫೀಸ್ ಸಮಯದ ಠೇವಣಿ.
ಶೇ7 : 3 ವರ್ಷದ ಪೋಸ್ಟ್ ಆಫೀಸ್ ಸಮಯದ ಠೇವಣಿ.
ಶೇ 7.5 : 5ವರ್ಷದ ಪೋಸ್ಟ್ ಆಫೀಸ್ ಸಮಯದ ಠೇವಣಿ.
ಶೇ 7.7 ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳಲ್ಲಿ ಠೇವಣಿ ಆಗಿರುತ್ತದೆ.
ಶೇ 7.5 ಕಿಸಾನ್ ವಿಕಾಸ್ ಪತ್ರಗಳ ಠೇವಣಿ ಆಗಿರುತ್ತದೆ. ಮತ್ತು ಶೇ 7.1 ಸಾರ್ವಜನಿಕ ಭವಿಷ್ಯ ನಿಧಿ ಅಗಿದೆ.
ಶೇ 8.0 ರಷ್ಟು ಸುಕನ್ಯಾ ಸಮೃದ್ಧಿ ಖಾತೆಯ ಠೇವಣಿ ಅಗಿದೆ.
ರಿಸರ್ವ್ ಬ್ಯಾಂಕ್ ಗಳು ಬೆಂಚ್ ಮಾರ್ಕ್ (bench mark) ಸಾಲದದರವನ್ನು ಶೇ 6.5 ಕ್ಕೆ ಏರಿಸಿದೆ. ಮತ್ತು ಬ್ಯಾಂಕ್ (bank) ಗಳು ಕೂಡ ಠೇವಣಿಯ ಮೇಲೆ ಬಡ್ಡಿದರವನ್ನು ಹೆಚ್ಚಿಸುವಂತೆ ಮಾಡಿದೆ. ಆರ್ಬಿಐ (RBI) ಕೂಡ ಕಳೆದ ತಿಂಗಳಲ್ಲಿ ರೆಪೊ ದರವನ್ನು 25 ಬೇಸಿಸ್ ಪಾಯಿಂಟ್ ಅಷ್ಟು ಹೆಚ್ಚಿಸಿದೆ. ಇದು ಸತತ ಆರನೇ ಬಾರಿ ಬೇಸಿಸ್ ಪಾಯಿಂಟ್ಗಳನ್ನು ಹೆಚ್ಚಿಸಲಾಗಿದೆ. ಒಟ್ಟಿನಲ್ಲಿ ಆರ್ಬಿಐ (RBI) ಬೆಂಚ್ ಮಾರ್ಕ್ (bench mark) ದರವನ್ನು ಶೇ 2.5 ರಷ್ಟು ಹೆಚ್ಚಳ ಮಾಡಲಾಗಿದೆ.