Part time job: ಹೆಚ್ಚು ಸಂಬಳ ನೀಡುವ ಬೆಸ್ಟ್‌ ಪಾರ್ಟ್ ಟೈಮ್‌ ಜಾಬ್‌ಗಳ ಲಿಸ್ಟ್ ಇಲ್ಲಿದೆ

Part time job: ಅನೇಕ ಮಂದಿ ಮನೆಯಲ್ಲೇ ಕುಳಿತು ಮಾಡುವಂತಹ ಕೆಲಸ ಹುಡುಕುತ್ತಾರೆ. ಅಲ್ಲದೆ, ದಿನಗಳೆದಂತೆ ಈ ಉದ್ಯೋಗ (job) ಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದೆ. ಹೆಚ್ಚಿನ ಜನರು ಪಾರ್ಟ್ ಜಾಬ್ ಗಳನ್ನೇ ಮಾಡುತ್ತಿದ್ದಾರೆ. ಸದ್ಯ ಹೆಚ್ಚು ಸಂಬಳ ನೀಡುವ ಬೆಸ್ಟ್‌ ಪಾರ್ಟ್ ಟೈಮ್‌ ಜಾಬ್ ಗಳ (part time job) ಲಿಸ್ಟ್ ಇಲ್ಲಿದೆ. ನೀವು ಕೂಡ ಈ ಹುದ್ದೆಗೆ ಸೇರಿದರೆ ಉತ್ತಮ ವೇತನ ಪಡೆಯಬಹುದು.

ಫ್ರೀಲ್ಯಾನ್ಸರ್ (freelancer):
ಈ ಉದ್ಯೋಗಕ್ಕಾಗಿ ವಿಶೇಷವಾಗಿ ಉತ್ತಮ ಬರವಣಿಗೆ ಮತ್ತು ಸಂವಹನ ಕೌಶಲ್ಯ ಇರಬೇಕು. ವೇತನ ಕೆಲಸ ಮಾಡುವ ಕ್ಷೇತ್ರಕ್ಕೆ ಆಧಾರಿತವಾಗಿರುತ್ತದೆ. ತಮ್ಮ ಕೌಶಲಗಳಾದ ಬರವಣಿಗೆ (writing), ಫೋಟೋಗ್ರಾಫರ್ (photographer), ಡಿಸೈನಿಂಗ್ (designing) ಇಂತಹವುಗಳ ಸೇವೆ ನೀಡುವುದು ಆಗಿದೆ. ಇದರಿಂದ ಅದೆಷ್ಟೋ ಜನ ಸಾಕಷ್ಟು ಹಣ ಗಳಿಸುತ್ತಿದ್ದಾರೆ.

ಶಾಲೆಗಳ ಬಸ್ ಚಾಲಕ (school bus driver) :
ವಿದ್ಯಾರ್ಥಿಗಳನ್ನು ಬೆಳ್ಳಗ್ಗೆ ಮತ್ತು ಸಂಜೆ ಸ್ಕೂಲ್ ಗೆ ಕರೆದೊಯ್ದು, ಕರೆತರುವ ಕೆಲಸವಿದೆ. ಇದು ಕೂಡ ಉತ್ತಮ ಪಾರ್ಟ್ ಟೈಮ್ ಜಾಬ್. ಹುದ್ದೆಗೆ ಸೇರಬೇಕಾದರೆ, ಸೂಕ್ತವಾದ ಚಾಲನ ಪರವಾನಗಿ, ಉತ್ತಮ ಕಾರ್ಯಾನುಭವ ಇರಬೇಕು. ಚಾಲನೆಗೆ ಸಂಬಂಧಿತ ನಿಯಮಗಳನ್ನು ಸರಿಯಾಗಿ ತಿಳಿದುಕೊಂಡು, ಈ ಕೆಲಸ ನಿರ್ವಹಿಸಬೇಕಾಗುತ್ತದೆ. ಇದರ ವೇತನ Rs.14,000 ಆಗಿರಲಿದೆ.

ಬುಕ್‌ ಕೀಪರ್ಸ್‌ (book keepers) :
ಈ ಹುದ್ದೆಗೆ ಕನಿಷ್ಠ ಪದವಿ ಓದಿರಬೇಕು. ಓದುವ, ಬರೆಯುವ, ಉತ್ತಮ ಸಂವಹನ ಕೌಶಲ ಇರಬೇಕು. ಕೆಲಸ ಕ್ಲೈಂಟ್‌ಗಳ ಲೆಡ್ಜರ್‌ಗಳನ್ನು, ವಹಿವಾಟುಗಳನ್ನು ನಿರ್ವಹಣೆ ಮಾಡುವುದು. ಬ್ಯಾಂಕ್‌ ಡೆಪಾಸಿಟ್‌, ಹಣಕಾಸು ನಿರ್ವಹಣೆಯನ್ನು ನಿರಂತರವಾಗಿ ವ್ಯವಸ್ಥೆ ನೋಡಿಕೊಳ್ಳುವ ಕೆಲಸ ಆಗಿದೆ. ವೇತನ : Rs.18,000. ಇರುತ್ತದೆ.

ಪರ್ಸನಲ್ ಟ್ರೈನರ್ (personal trainer):
ಫಿಟ್‌ನೆಸ್‌ ಟ್ರೈನರ್ (fitness trainer), ಯೋಗ ಟ್ರೈನರ್ (yoga trainer), ಸ್ಪೋರ್ಟ್‌ ಟ್ರೈನರ್ (sports trainer) ಇವುಗಳು ಈ ಕೆಲಸ. ಈ ಟ್ರೈನರ್‌ಗಳಾಗಲು ಟ್ರೈನಿಂಗ್ ಸರ್ಟಿಫಿಕೇಟ್‌ ಪಡೆದು, ಟ್ರೈನರ್ ಕೆಲಸ ಮಾಡಬಹುದು. ವೇತನ Rs.13,000 ಇರುತ್ತದೆ.

ಟ್ಯೂಷನ್ / ಟ್ಯೂಟರ್ (tution) :
ಆನ್‌ಲೈನ್ ಟ್ಯೂಷನ್ (online tution) ಕೊಡುವ ಉದ್ಯೋಗಗಳನ್ನು ಮನೆಯಲ್ಲೇ ಮಾಡಬಹುದು. ಈ ಉದ್ಯೋಗಕ್ಕೆ ಉತ್ತಮ ಬೋಧನಾ ಕೌಶಲ್ಯ ಅತ್ಯಗತ್ಯ. ಆಗ ಮಾತ್ರ ಹೆಚ್ಚು ಹಣ ಸಂಪಾದನೆ ಮಾಡಲು ಸಾಧ್ಯ. ಅಲ್ಲದೇ ಈ ಪಾರ್ಟ್ ಟೈಮ್ ಉದ್ಯೋಗವು ಅತ್ಯಂತ ಹೆಚ್ಚಿನ ಬೇಡಿಕೆಯನ್ನೂ ಹೊಂದಿದೆ. ಇದು ವಿದ್ಯಾರ್ಥಿಗಳಿಗೆ ಕಠಿಣ ಸಬ್ಜೆಕ್ಟ್‌ಗಳ ಕುರಿತು ಪಾಠಗಳನ್ನು ಮಾಡುವ, ಕಲಿಸುವ ಕೆಲಸವಾಗಿದೆ. ಅವರಿಗೆ ಟ್ಯೂಷನ್‌ ಅನ್ನು ಪಾರ್ಟ್‌ ಟೈಮ್‌ನಲ್ಲಿ ಮಾಡಬಹುದು. ಈ ಹುದ್ದೆಯ ಸರಾಸರಿ ವೇತನ Rs.10,000 – 15,000 ಆಗಿದೆ.

ಪ್ರವಾಸ ಮಾರ್ಗದರ್ಶಿ :
ಟ್ರಾವೆಲ್ ಏಜೆನ್ಸಿಗಳಲ್ಲಿ (travel agency), ಟೂರ್ಸ್‌ ಅಂಡ್ ಟ್ರಾವೆಲಿಂಗ್ ಏಜೆನ್ಸಿಗಳಲ್ಲಿ ಟೂರಿಸ್ಟ್‌ ಗೈಡ್‌ (tourist guid) ಆಗಿ ಪಾರ್ಟ್‌ ಟೈಮ್‌ ಜಾಬ್ ಪಡೆಯಬಹುದು. ಇಂದು ಬಹುಬೇಡಿಕೆಯ ಪಾರ್ಟ್ಟೈಮ್ ಜಾಬ್ಗಳಲ್ಲಿ ಇದೂ ಒಂದು. ಇಲ್ಲಿ ದುಡಿಯುವಿಕೆಯೂ ಕೂಡ ಕಡಿಮೆ ಅವಧಿಯದ್ದಾಗಿದ್ದು, ಆದಾಯ ಮಾತ್ರ ಹೆಚ್ಚಾಗಿರುತ್ತದೆ. ಉದ್ಯೋಗವು ಸಂಪೂರ್ಣ ಇಂಟರ್‌ನೆಟ್ ಆಧಾರಿತವಾಗಿದೆ. ಈ ಹುದ್ದೆಯನ್ನು ಕೇವಲ ವೀಕೆಂಡ್‌ಗಳಿಗಾಗಿ ಅಥವಾ ಬಿಡುವಿನ ವೇಳೆಗೆ ಕೆಲಸ ಮಾಡುವಂತೆ ಹೇಳಿಕೊಂಡು ಪಡೆಯಬಹುದು. ಹುದ್ದೆಯ ಸರಾಸರಿ ವೇತನ Rs.18,000 ಆಗಿದೆ.

ಮೇಲ್ ಕ್ಯಾರಿಯರ್ :
ಮೇಲ್‌ ಮತ್ತು ಪ್ಯಾಕೇಜ್‌ಗಳನ್ನು ಸರಿಯಾದ ಸ್ಥಳಗಳಿಗೆ ತಲುಪಿಸುವ
ಕೆಲಸ. ಈ ಉದ್ಯೋಗವನ್ನು ಕೊರಿಯರ್ ಸೆಂಟರ್‌ಗಳಲ್ಲಿ ಪಡೆಯಬಹುದು. ಆದರೆ, ಈ ಹುದ್ದೆಗೆ ಸೇರಬಯಸುವವರಿಗೆ ಓದುವ, ಬರೆಯುವ ಕೌಶಲ ಇರಬೇಕು. ವಿದ್ಯಾರ್ಹತೆ- ಕನಿಷ್ಠ 10ನೇ ತರಗತಿ ಪಾಸಾಗಿದ್ದರೆ ಸಾಕು. ಇನ್ನು ವೇತನ Rs.19,000 ಇದೆ.

ರಿಯಲ್‌ ಎಸ್ಟೇಟ್ ಏಜೆಂಟ್ (real estate agent) :
ಕಮಿಷನ್‌ ಎಂಬುದು ಈ ಕೆಲಸಕ್ಕೆ ಇರುತ್ತದೆ. ರಿಯಲ್ ಎಸ್ಟೇಟ್‌ ಬ್ಯುಸಿನೆಸ್‌ ಎಂಬುದು ಭೂಮಿ ಕೊಡಿಸುವ, ಮನೆ ಕೊಡಿಸುವ, ಸೈಟ್ ಮಾರಿಸುವ ಕೊಡಿಸುವ, ಮಧ್ಯವರ್ತಿಗಳಾಗಿ ಕೆಲಸ ಮಾಡಿ ಕಮಿಷನ್‌ ಪಡೆಯುವ ಕೆಲಸ ಇದಾಗಿದ್ದು, ಪಾರ್ಟ್‌ ಟೈಮ್‌ನಲ್ಲಿ ದುಡಿಯಬಹುದಾದ ಸುಲಭದ ಕೆಲಸ ಇದು. ಆದರೆ ಸಾಕಷ್ಟು ಸಂಪರ್ಕಗಳನ್ನು ಬೆಳವಣಿಗೆ ಮಾಡಿಕೊಳ್ಳಬೇಕಾಗುತ್ತದೆ.

ಪರ್ಸನಲ್ ಡ್ರೈವರ್ (personal driver) :
ನಗರ ಪ್ರದೇಶಗಳಲ್ಲಿ ವೈಯಕ್ತಿಕ ಕಾರು ಚಾಲಕರಾಗಿ ಪಾರ್ಟ್‌ ಟೈಮ್‌ ಕೆಲಸ ಮಾಡಬಹುದು. ಬಿಡುವಿನ ಸಮಯದಲ್ಲಿ ಮಾಡುವ ಈ ಕೆಲಸ ಉತ್ತಮವಾಗಿದೆ. ಸ್ವಂತ ಕಾರು ಅಥವಾ ಅವರ ವೈಯಕ್ತಿಕ ಕಾರಿನಲ್ಲಿ ಮಾಲೀಕರನ್ನು ಕರೆದೊಯ್ದು, ಕರೆತರುವ ಕೆಲಸ. ಈ ಹುದ್ದೆಗೆ ವೇತನ Rs.15,000 ಇರುತ್ತದೆ.

ಇದನ್ನೂ ಓದಿ:Car Sales: ಕಾರು ಮಾರಾಟದಲ್ಲಿ ಯಾರಿಗೆಷ್ಟು ಲಾಭ? ಇಲ್ಲಿದೆ ಮಾಹಿತಿ

Leave A Reply

Your email address will not be published.