Lady Kissing Kumaraswamy : ಪಂಚ ‘ ರತ್ನ ‘ ಹುಡುಕಿ ಹೊರಟ ಕುಮಾರಣ್ಣನಿಗೆ ಸಿಕ್ತು ಮೊದಲ ‘ ಮುತ್ತು ‘ ; ಯಾತ್ರೆ ಸಂದರ್ಭ ಕುಮಾರಸ್ವಾಮಿಗೆ ಕಿಸ್ ಮಾಡಿದ ಮಹಿಳೆ !

Lady Kissing Kumaraswamy : ಮಾಜಿ ಸಿಎಂ ಕುಮಾರಸ್ವಾಮಿ ಅವರು ನಡೆಸುತ್ತಿರುವ ಪಂಚರತ್ನ ರಥಯಾತ್ರೆ ಎಲ್ಲಾ ಕಡೆ ಭಾರೀ ಪ್ರಮಾಣದ ಬೆಂಬಲ ಲಭ್ಯವಾಗುತ್ತಿದೆ. ಯಾವುದೇ ಜಿಲ್ಲೆಗೆ ಹೋದರೂ ಅಲ್ಲಿ ಜನರು ಗುಂಪು ಕಟ್ಟಿಕೊಂಡು ಬರುತ್ತಿದ್ದಾರೆ. ಇದರ ನಡುವೆ ಇಂದು ರ್ಯಾಲಿ ನಡೆಸುತ್ತಿದ್ದ ಹೆಚ್​ಡಿಕೆಗೆ ಮಹಿಳೆಯೊಬ್ಬರ ಮುತ್ತು ಸಿಕ್ಕಿದೆ. ಪಂಚ ‘ ರತ್ನ ‘ ಹುಡುಕಿ ಹೊರಟವನಿಗೆ ‘ ಮುತ್ತು ‘ ದೊರೆತಿದೆ.

Lady Kissing Kumaraswamy :ಇಂದು ಕುಮಾರಸ್ವಾಮಿ ಅವರು ರಾಜಧಾನಿ ಬೆಂಗಳೂರಿನ ಯಶವಂತಪುರದಲ್ಲಿ ಪಂಚರತ್ನ ಯಾತ್ರೆ ನಡೆಸಿದ್ದರು. ಈ ವೇಳೆ ಮಹಿಳಾ ಅಭಿಮಾನಿಯೊಬ್ಬರು ವಾಹನದ ಮೇಲೆ ಹತ್ತಿ ಬಂದು ತಮ್ಮ ನೆಚ್ಚಿನ ನಾಯಕರನ್ನು ಮಾತನಾಡಿದ್ದಾರೆ. ಅಲ್ಲದೆ ವಾಪಸ್ ತೆರಳುವ ಸಂದರ್ಭದಲ್ಲಿ ಕುಮಾರ ಸ್ವಾಮಿಯ ಕೆನ್ನೆಗೆ ಮುತ್ತು ಒತ್ತಿದ್ದಾರೆ (Lady Kissing Kumaraswamy).

 

ಆ ಮಹಿಳೆ ಮೊದಲು ಕುಮಾರಸ್ವಾಮಿ ಅವರಿಗೆ ಕೈಕುಲುಕಿ ಶುಭಕೋರಿದ್ದರು. ನಂತರ ಆಕೆ ಏಕಾಏಕಿ ಮುತ್ತುಕೊಟ್ಟ ಕಾರಣ ಕುಮಾರನಂತಹ ಕುಮಾರನೇ ಕ್ಷಣ ಕಾಲ ಬೆಚ್ಚಿಬಿದ್ದಿದ್ದಾರೆ. ಕೆಲ ಕ್ಷಣ ಕುಮಾರಣ್ಣ ಶಾಕ್​ ಒಳಗಾದವರಂತೆ ಕಂಡು ಬಂದರು. ಆ ಬಳಿಕ ಸಾವರಿಸಿಕೊಂಡು ಜನರತ್ತ ಕೈಬೀಸಿ ತನ್ನ ಯಾತ್ರೆ ಮುಂದುವರೆಸಿದರು.

ಮುತ್ತು ಕೊಟ್ಟ ಘಟನೆ ಬಳಿಕ ಮಾಧ್ಯಮಗಳೊಂದಿಗೆ ಮಹಿಳೆ ಮಾತಾಡಿದ್ದಾರೆ. ತಮ್ಮ ಮತ್ತು ಕುಮಾರಸ್ವಾಮಿ ಅವರೊಂದಿಗೆ ಏನು ಸಂಭಾಷಣೆ ಆಯ್ತು ಅಂತ ಆಕೆ ತಿಳಿಸಿದ್ದಾರೆ. ‘ ಅವರನ್ನು ಟಿವಿಯಲ್ಲಿ ಮಾತ್ರ ನೋಡಿದ್ದೆ. ಮೊದಲು ಹೋದ ಕೂಡಲೇ ಕುಲುಕಿ ಥ್ಯಾಂಕ್ಸ್​ ಕೊಟ್ಟರು. ಬಳಿಕ ಎಲ್ಲಿಂದ ಬಂದಿದ್ದೀಯಾ ತಂಗಿ ಅಂತ ಮಾತನಾಡಿದರು. ಚೆನ್ನಾಗಿದ್ದೀರಾ ಅಂತ ಕೇಳಿದ್ದಕ್ಕೆ ಚೆನ್ನಾಗಿದ್ದೀನಿ ಅಂತ ಹೇಳಿದರು ‘ ಎಂದಿದ್ದಾರೆ ಆ ಮಹಿಳೆ.

” ನಿಮ್ಮದು ಯಾವ ಊರವ್ವ, ಎಷ್ಟು ಜನ ಮಕ್ಕಳು ಅಂತ ಕೇಳಿದರು. ನಾನು ಭದ್ರಾವತಿ, ಮೂವರು ಮಕ್ಕಳೊಂದಿಗೆ ಇಲ್ಲೇ ನೆಲೆಸಿದ್ದೀನಿ ಅಂತ ಹೇಳಿದೆ. ಸರಿ ಆಯ್ತು ಮುಂದುವರಿಸುತ್ತೇನೆ ಬಿಡವ್ವ …” ಅಂತ ಹೇಳಿದರು ಎಂದು ಮಹಿಳೆ ತಿಳಿಸಿದ್ದಾರೆ.

ಇದೀಗ ಕುಮಾರಸ್ವಾಮಿ ಅವರಿಗೆ ಮಹಿಳೆ ಮುತ್ತು ಕೊಟ್ಟ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ಹಾಟ್ ಸಬ್ಜೆಕ್ಟ್ ಆಗಿ ವೈರಲ್​ ಆಗುತ್ತಿದೆ. ಅಭಿಮಾನಿಗಳು ತಮ್ಮ ನಾಯಕರ ಜತೆ ಮಾತನಾಡುವುದು, ಸೆಲ್ಫಿಗೆ ಪೋಸ್​ ಕೊಡುವುದು ಸಾಮಾನ್ಯ. ಆದರೆ ಮಹಿಳಾ ಅಭಿಮಾನಿಯೊಬ್ಬರು ಸದ್ಯ ಹೆಚ್​​ಡಿಕೆಗೆ ಮುತ್ತು ಕೊಟ್ಟಿರುವ ಘಟನೆ ನಡೆದಿದೆ. ರತ್ನ ಹುಡುಕಿ ಹೊರಟವನಿಗೆ ಮೊದಲ ಮುತ್ತು ಸಿಕ್ಕಿದೆ.

ಕಳೆದ 2019ರ ಮಂಡ್ಯ ಲೋಕಸಭಾ ಚುನಾವಣೆಯ ರೋಡ್​​ ಶೋ ವೇಳೆ ಅಭಿಮಾನಿಯೊಬ್ಬ ಕುಮಾರಸ್ವಾಮಿ ಅವರಿಗೆ ಮುತ್ತು ಕೊಟ್ಟಿದ್ದ. ಈ ವೇಳೆ ಭದ್ರತಾ ಸಿಬ್ಬಂದಿ ವ್ಯಕ್ತಿಯನ್ನು ಹಿಡಿದುಕೊಂಡು ದೂರ ಕಳುಹಿಸಿದ್ದರು. ಅಲ್ಲದೆ ಕೆಲ ಕಾರ್ಯಕರ್ತರು ಆ ವೇಳೆ ಅಭಿಮಾನಿ ಮೇಲೆ ಹಲ್ಲೆ ಕೂಡಾ ನಡೆಸಿದ್ದರು. ಇವತ್ತು ಕುಮಾರಸ್ವಾಮಿಯವರಿಗೆ ಮುತ್ತು ಒತ್ತಿದಂತೆ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಕೂಡಾ ಕಳೆದ ಚುನಾವಣಾ ಸಂದರ್ಭದಲ್ಲಿ ಕಿಸ್ ದೊರೆತಿತ್ತು. ಅವರಿಗೆ ಕಾರ್ಯಕ್ರಮವೊಂದರಲ್ಲಿ ಮಹಿಳೆಯೊಬ್ಬರು ಮುತ್ತು ಕೊಟ್ಟಿದ್ದ ಪ್ರಸಂಗವೂ ನಡೆದಿತ್ತು. ಈ ಫೋಟೋ ಮತ್ತು ವಿಡಿಯೋಗಳು ಇದೀಗ ಕುಮಾರಣ್ಣನ ಕಿಸ್ ಪ್ರಕರಣದ ನಂತರ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಎಚ್ಚೆತ್ತು ಹರಿದಾಡಲು ಆರಂಭವಾಗಿದೆ.

ಇದನ್ನೂ ಓದಿ: AT Ramaswamy : ಜೆಡಿಎಸ್ ಹಿರಿಯ ಶಾಸಕ ಎ.ಟಿ ರಾಮಸ್ವಾಮಿ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆ

Leave A Reply

Your email address will not be published.