Bengaluru Mysuru Expressway: ಟೋಲ್​ ದರ ಹೆಚ್ಚಳದ ಬಿಗ್ ಮಾಹಿತಿ ನೀಡಿದ ಎನ್​ಹೆಚ್​ಎಐ!

Bengaluru Mysore Expressway : ಈಗಾಗಲೇ ಬೆಂಗಳೂರು – ಮೈಸೂರು ಎಕ್ಸಪ್ರೆಸ್​ವೇ ಟೋಲ್​ ದರ ಹೆಚ್ಚಳ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಟೋಲ್ ದರ ಹೆಚ್ಚಳ ಆದೇಶವನ್ನು ವಾಪಸ್ ಪಡೆದಿದೆ.

 

ಸದ್ಯ, ಎನ್​ಹೆಚ್​ಎಐ ಶೇ.22ರಷ್ಟು ಟೋಲ್ ದರ ಹೆಚ್ಚಿಸಿ ಆದೇಶ ಹೊರಡಿಸಿತ್ತು. ಆದರೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾದ ಹಿನ್ನೆಲೆ ಹಿಂಪಡೆದಿದೆ.

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ / NHAI) ಶೇಕಡಾ 22ರಷ್ಟು ಟೋಲ್​ ದರ (Bengaluru Mysore Expressway ) ಹೆಚ್ಚಳ ಮಾಡಿ ಆದೇಶ ಹೊರಡಿಸಿತ್ತು. ಟೋಲ್ ಸಂಗ್ರಹ ಆರಂಭವಾದ 17 ದಿನದಲ್ಲೇ ಎನ್​ಹೆಚ್​ಎಐ ಮತ್ತೆ ಟೋಲ್ ದರ ಹೆಚ್ಚಳ ಮಾಡಿದ್ದು ಗೊಂದಲಕ್ಕೆ ಕಾರಣವಾಗಿತ್ತು. ಇದು ಈಗಿರುವ ಟೋಲ್​ಗಿಂತ ಶೇಕಡಾ 22ರಷ್ಟು ದರ ದುಬಾರಿಯಾಗಿತ್ತು.

ಇನ್ನು ಬೆಂಗಳೂರಿನಿಂದ ದೇವನಹಳ್ಳಿಯ (Bengaluru-Devanahalli) ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (Bengaluru International Airport) ಹೋಗುವ ಟೋಲ್​ ದರ ಕೂಡ ಏರಿಕೆಯಾಗಿದೆ. ಏರ್​​ಪೋರ್ಟ್​​ ರಸ್ತೆಯ ನಿರ್ವಹಣೆ ಹೊತ್ತಿರುವ ಅಥಾಂಗ್ ಟೋಲ್ ವೇ ಪ್ರವೈಟ್ ಲಿಮಿಟೆಡ್‌ ಮಧ್ಯರಾತ್ರಿಯಿಂದಲೇ ಟೋಲ್ ದರವನ್ನು ಏರಿಸಿದೆ.

ಕಾರು, ಜೀಪು, ವ್ಯಾನ್ ಲಘು ‌ಮೋಟಾರು ವಾಹನ ಏಕಮುಖ ಸಂಚಾರಕ್ಕೆ 110 ರೂ. 24 ಗಂಟೆಯೊಳಗೆ ಹಿಂತಿರುಗುವ ಶುಲ್ಕ 170 ರೂ ನಿಗದಿ ಮಾಡಲಾಗಿದೆ. ಇಷ್ಟು ದಿನ ಏಕಮುಖ ಸಂಚಾರಕ್ಕೆ 105 ರೂ. ಹಾಗೂ ದ್ವಿಮುಖ ಸಂಚಾರ 165 ರೂಪಾಯಿ ಇತ್ತು. 3555 ರೂಪಾಯಿಯಿದ್ದ ಮಾಸಿಕ ಪಾಸ್ ಶುಲ್ಕ 3755 ರೂಪಾಯಿಗೆ ಏರಿಕೆಯಾಗಿದೆ.

ಟ್ರಕ್ ಬಸ್ 2 ಆಕ್ಸೆಲ್ ವಾಹನಗಳ ಏಕಮುಖ ಸಂಚಾರಕ್ಕೆ 330 ರಿಂದ 345 ರೂ. ಗೆ ಏರಿಕೆ. ದ್ವಿಮುಖ ಸಂಚಾರಕ್ಕೆ 495 ರೂ. ನಿಂದ 520 ರೂ. ಗೆ ಏರಿಕೆ ಮಾಡಲಾಗಿದೆ. 10,990 ರೂಪಾಯಿ ಇದ್ದ ಮಾಸಿಕ ಪಾಸ್ 11,550 ರೂ. ಆಗಿದೆ. ಭಾರೀ ವಾಹನಗಳು 03 ರಿಂದ 06 ಅಕ್ಸೆಲ್ ವಾಹನಗಳ ಏಕಮುಖ ಸಂಚಾರಕ್ಕೆ 500 ರಿಂದ 525 ರೂ. ದ್ವಿಮುಖ ಸಂಚಾರ 750 ರೂ. ನಿಂದ 790 ರೂ. 16,680 ರೂ. ಇದ್ದ ಮಾಸಿಕ ಪಾಸ್ 17, 525 ರೂ. ಹೆಚ್ಚಿಗೆಯಾಗಿದೆ.

ಭಾರೀ ಗಾತ್ರದ ವಾಹನಗಳಿಗೆ 07 ಆಕ್ಸೆಲ್ ಹಾಗೂ ಅದಕ್ಕಿಂತ ಹೆಚ್ಚು ಆಕ್ಸೆಲ್ ವಾಹನಗಳಿಗೆ ಏಕಮುಖ ಸಂಚಾರಕ್ಕೆ 650 ರಿಂದ 685 ರೂ. ಗೆ ಏರಿಕೆ. ದ್ವಿಮುಖ 980 ರೂ. ನಿಂದ 1025 ರೂ. ಗೆ ಏರಿಕೆ. 21, 730 ರೂ. ಇದ್ದ ಮಾಸಿಕ ಪಾಸ್ 22, 830 ರೂಪಾಯಿಯಷ್ಟು ಹೆಚ್ಚಿಸಲಾಗಿದೆ.

ಅದಲ್ಲದೆ ಲಘು ವಾಣಿಜ್ಯ ವಾಹನ ಲಘು ಸರಕು ವಾಹನ ಮಿನಿ ಬಸ್- ಏಕಮುಖ ಸಂಚಾರಕ್ಕೆ 165 ರಿಂದ 170 ರೂ. ಗೆ ಏರಿಕೆ. ಹಿಂತಿರುಗುವ ಶುಲ್ಕ 245 ರಿಂದ 260 ರೂಪಾಯಿಗೆ ಏರಿಕೆ. ಮಾಸಿಕ ಪಾಸ್ 5465 ರೂ. ಯಿಂದ 5745 ರೂ. ಗೆ ಏರಿಸಲಾಗಿದೆ.

ಇದನ್ನೂ ಓದಿ: Toll rate hike : ಜನರಿಗೆ ತಟ್ಟಿದ ಬೆಲೆ ಏರಿಕೆ ಬಿಸಿ; ದೇವನಹಳ್ಳಿ ಏರ್‌ ಪೋರ್ಟ್‌ ಹೋಗುವ ರಸ್ತೆಯ ಟೋಲ್‌ ದರ ಹೆಚ್ಚಳ; ಎಷ್ಟಿದೆ ಗೊತ್ತಾ?

Leave A Reply

Your email address will not be published.