Pet dog rape: ತನ್ನ ಸಾಕುನಾಯಿಯ ಮೇಲೆ ನಿರಂತರವಾಗಿ 2 ವರ್ಷ ಅತ್ಯಾಚಾರವೆಸಗಿದ 60ರ ಕಾಮುಕ

Pet dog rape : ಭಾರತದಲ್ಲಿ ಅತ್ಯಾಚಾರದ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದ್ದು ಆತಂಕದ ವಾತಾವರಣ ನಿರ್ಮಾಣವಾಗಿದೆ. ದಿನಬೆಳಗಾದರೆ ಸಾಕು ಒಂದಾದರೂ ಇಂತಹ ಘಟನೆಗಳು ಕಣ್ಣಿಗೆ ರಾಚುತ್ತಿವೆ. ಚಿಕ್ಕ ಮಕ್ಕಳು, ಮುದುಕಿಯರು ಎಂದೂ ನೋಡದೆ ಮನಬಂದಂತೆ ಹೆಣ್ಣು ಜೀವಗಳನ್ನು ಹಿಂಸಿಸಿ ವಿಕೃತಿ ಮೆರೆಯುತ್ತಿದ್ದಾರೆ. ಸರ್ಕಾರ ಕೂಡ ಈ ಕುರಿತು ಮೌನವಾಗಿಯೇ ಇದೆ. ಆದರೆ ಇಲ್ಲೊಬ್ಬ ಕಾಮುಕನ ವಿಚಾರ ಕೇಳಿದ್ರೆ ನಿಮಗೆ ಅಚ್ಚರಿ ಆಗುವುದರೊಂದಿಗೆ ಆತನ ಮೇಲೆ ಹೇಸಿಗೆ ಕೂಡ ಆಗಬಹುದು. ಯಾಕೆಂದರೆ ಈ ಕಾಮುಕ ತನ್ನ ಮನೆಯ ಸಾಕು ನಾಯಿಯ (Pet Dog) ಮೇಲೆ 2 ವರ್ಷಗಳ ಕಾಲ ನಿರಂತರವಾಗಿ ಅತ್ಯಾಚಾರ (pet dog rape) ನಡೆಸಿದ್ದಾನೆ.

 

ಹೌದು, ಪಶ್ಚಿಮ ಬಂಗಾಳದ(West Bengal) ರತಿಕಾಂತ್ ಸರ್ದಾರ್(Ratikant Sardar) ಎಂಬ 60 ವರ್ಷದ ವ್ಯಕ್ತಿ ತನ್ನ ಮನೆಯ ಸಾಕು ನಾಯಿಯ (Pet Dog) ಮೇಲೆ 2 ವರ್ಷಗಳ ಕಾಲ ಅತ್ಯಾಚಾರ (Rape) ನಡೆಸಿದ ಅಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೆರೆ ಮನೆಯ ನಾಯಿ ಇದ್ದಕ್ಕಿದ್ದಂತೆ ಜೋರಾಗಿ ಕೂಗಿಕೊಂಡ ಕೂಡಲೇ ಸ್ಥಳೀಯರು ರತಿಕಾಂತ್ ಮನೆಯತ್ತ ಓಡಿದ್ದಾರೆ. ಅಲ್ಲಿ ರತಿಕಾಂತ್ ಸರ್ದಾರ್ ಅಮಲೇರಿದ ಮತ್ತು ಬಟ್ಟೆಯಿಲ್ಲದ ಸ್ಥಿತಿಯಲ್ಲಿದ್ದದನ್ನು ಕಂಡು ಬೆಚ್ಚಿಬಿದ್ದಿದ್ದಾರೆ.
ಬಳಿಕ ರತಿಕಾಂತ್ ನಾಯಿಯ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಈ ಕೃತ್ಯವನ್ನು ಸ್ಥಳೀಯರು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಸ್ಥಳೀಯರು ಹರಿಬಿಟ್ಟಿದ್ದಾರೆ. ವೀಡಿಯೋ ವೈರಲ್ ಆಗುತ್ತಿದ್ದಂತೆ ಪ್ರಾಣಿ ಪ್ರೇಮಿಗಳ ಸಂಘಟನೆಯ ಸದಸ್ಯರೊಬ್ಬರು ಸೋನಾರ್‌ಪುರ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ಲಿಖಿತ ದೂರು ದಾಖಲಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ರತಿಕಾಂತ್ ಸರ್ದಾರ್‌ನನ್ನು ಬಂಧಿಸಿದ್ದಾರೆ.

ಈ ಬಗ್ಗೆ ಸ್ಥಳೀಯನೊಬ್ಬ ಮಾತನಾಡಿ, ಸರ್ದಾರ್ ಸುಮಾರು 2 ವರ್ಷಗಳಿಂದ ತನ್ನ ಸಾಕು ನಾಯಿಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ. ನಾಯಿಯನ್ನು ಬಿಡುಗಡೆ ಮಾಡುವಂತೆ ಮತ್ತು ಅಂತಹ ಕೃತ್ಯದಿಂದ ದೂರವಿರುವಂತೆ ಪದೇ ಪದೇ ಕೇಳಿಕೊಂಡಿದ್ದೆವು. ಆದರೆ ಆತ ಮಾತನ್ನು ನಮ್ಮ ಕೇಳಲು ನಿರಾಕರಿಸುತ್ತಿದ್ದ ಎಂದು ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿದ ಪ್ರಾಣಿ ಸಂರಕ್ಷಣಾ ಸಂಘಟನೆಯ ಸದಸ್ಯರು, ಈ ವಿಡಿಯೋವನ್ನು ಸ್ಥಳೀಯರು ಒಂದು ವರ್ಷದ ಹಿಂದೆ ಚಿತ್ರೀಕರಿಸಿದ್ದಾರೆ . ಆದರೆ ಅವರಿಗೆ ಪ್ರಾಣಿ ಸಂರಕ್ಷಣಾ ಕಾಯಿದೆಗಳ ಬಗ್ಗೆ ತಿಳಿಯದ ಕಾರಣ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ವಿಫಲವಾಗಿದ್ದಾರೆ. ಸದ್ಯ ಕೃತ್ಯ ನಮ್ಮ ಗಮನಕ್ಕೆ ಬಂದಿದೆ. ಮುಂದಿನ ಕ್ರಮಗಳನ್ನು ನಾವು ಕುಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

Leave A Reply

Your email address will not be published.