2nd Puc Annual Exam : ಸೆಕೆಂಡ್‌ ಪಿಯುಸಿ ವಾರ್ಷಿಕ ಪರೀಕ್ಷೆ ಮಾದರಿ ಉತ್ತರ ಪ್ರಕಟ! ಆಕ್ಷೇಪಣೆ ಸಲ್ಲಿಸಲು ಇಲ್ಲಿದೆ ಅವಕಾಶ!

2nd PUC Annual Exam : ದ್ವಿತೀಯ ಪಿಯುಸಿ(2nd PUC) ವಿದ್ಯಾರ್ಥಿಗಳಿಗೆ ಬಹು ಮುಖ್ಯ ಮಾಹಿತಿ ಪ್ರಕಟವಾಗಿದೆ. ದ್ವಿತೀಯ ಪಿಯುಸಿ ಮಾರ್ಚ್ 2023ರ ವಾರ್ಷಿಕ ಪರೀಕ್ಷೆಯ ವಿಷಯವಾರು (2nd PUC Annual Exam)ಪ್ರಶ್ನೆಪತ್ರಿಕೆಗಳ ಮಾದರಿ ಉತ್ತರಗಳನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ(KARNATAKA SCHOOL EXAMINATION AND ASSESSMENT BOARD), ವೆಬ್‌ಸೈಟ್‌ (Website) ನಲ್ಲಿ ಪ್ರಕಟಿಸಲಾಗಿದೆ. ಸದ್ಯ, ಈ ಕುರಿತು ವಿದ್ಯಾರ್ಥಿಗಳಿಗೆ ಯಾವುದೇ ಆಕ್ಷೇಪಣೆಗಳಿದ್ದರೆ ಸಲ್ಲಿಸಲು ಅನುವು ಮಾಡಿಕೊಡಲಾಗಿದೆ.

ಈ ಹಿಂದೆ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ವಿಷಯವಾರು ಪ್ರಶ್ನೆಪತ್ರಿಕೆಗಳ ಮಾದರಿ ಉತ್ತರಗಳನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ, ದಿನಾಂಕ 09-03-2023 ರಿಂದ 23-03-2023 ರವರೆಗೆ ಮಂಡಲಿ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಸದ್ಯ, ಈ ಕುರಿತು ಆಕ್ಷೇಪಣೆ ಸಲ್ಲಿಸಲು ದಿನಾಂಕ 25-03-2023 ರಿಂದ 27-03-2023ರ ಕಲ್ಪಿಸಲಾಗಿತ್ತು. ಈ ನಿಟ್ಟಿನಲ್ಲಿ ಲಿಂಕ್ ಅನ್ನು ಕೂಡ ನೀಡಲಾಗಿದೆ. ಈಗ ಮುಂದುವರಿದ ಭಾಗವಾಗಿ ದಿನಾಂಕ 25-03-2023 ರಿಂದ 29-03-2023 ರವರೆಗೆ ನಡೆದಿರುವ ಪ್ರಶ್ನೆಪತ್ರಿಕೆಗಳ ಮಾದರಿ ಉತ್ತರಗಳನ್ನು ಮಂಡಲಿಯ ವೆಬ್‌ಸೈಟ್‌ https://kseab.karnataka.gov.in/ ಪ್ರಕಟಿಸಲಾಗಿದೆ.

ದ್ವಿತೀಯ ಪಿಯುಸಿ ಸಂಬಂಧಿಸಿದಂತೆ ವಿದ್ಯಾರ್ಥಿಗಳು (Second PUC Students)ಪೋಷಕರುಗಳಿಂದ ಏನಾದರೂ ಆಕ್ಷೇಪಣೆಗಳಿದ್ದರೆ ಆನ್‌ಲೈನ್ (Online) ಮೂಲಕ ಆಕ್ಷೇಪಣೆಗಳನ್ನು ದಿನಾಂಕ 30-03-2023 ರಿಂದ 01-04-2023ರ ಸಂಜೆಯವರೆಗೆ ಅವಕಾಶ ಕಲ್ಪಿಸಲಾಗಿದೆ. ದಿನಾಂಕ 01-04-2023ರ ಸಂಜೆ 5.00 ಗಂಟೆಯ ಬಳಿಕ ಸಲ್ಲಿಸಲಾದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ. ಆಕ್ಷೇಪಣೆಗಳನ್ನು ಅಧಿಕೃತ ವೆಬ್‌ಸೈಟ್‌ https://kseab.karnataka.gov.in/ ಅಥವಾ ಇ-ಮೇಲ್ ವಿಳಾಸ jdexam.kseab@gmail.com ಕ್ಕೆ ಆಕ್ಷೇಪಣೆಗಳನ್ನು ಕಲ್ಪಿಸುತ್ತದೆ.

Leave A Reply

Your email address will not be published.