Things Dissapear In Future :ಇವುಗಳನ್ನು ನೋಡಬೇಕೆಂದರೂ ನಿಮಗೆ ಮುಂದಿನ 20 ವರ್ಷಗಳಲ್ಲಿ ಕಾಣಲು ಸಿಗಲ್ಲ!

Things Dissapear In Future: ಒಂದಾನೊಂದು ಕಾಲದಲ್ಲಿ ನಮ್ಮ ಹಿರಿಯರು ಯಾವುದೇ ಸೌಕರ್ಯಗಳಿಲ್ಲದೆ ಪ್ರಕೃತಿಯ ಜೊತೆಗೆ ಅವಿನಾಭವ ಅನುಬಂಧ ಹೊಂದಿದ್ದು ದಿನಕ್ಕೊಂದು ಹೊಸ ಪ್ರಯೋಗಕ್ಕೆ ನಾಂದಿ ಹಾಡಿ ಇಂದು ನಾವು ಬಳಕೆ ಮಾಡುತ್ತಿರುವ ಅದೆಷ್ಟೋ ವಸ್ತುಗಳು ಅವರ ಪ್ರಯೋಗ ಪ್ರಯತ್ನದ ಪ್ರತಿಫಲ ಎಂದರೆ ತಪ್ಪಾಗದು. ಆದರೆ, ಮುಂದೊಂದು ದಿನ ಅದೆಷ್ಟೋ ವಸ್ತುಗಳು( Things Dissapear In Future)ಕಾಣಸಿಗುವುದೇ ಅನುಮಾನ.

 

ಮೊದ ಮೊದಲು ಮನುಷ್ಯರೇ ಎಲ್ಲ ಕೆಲಸಗಳನ್ನೂ ಮಾಡಬೇಕಿತ್ತು. ಆದರೆ, ಈ ವಿಚಾರದಲ್ಲಿ ಅನ್ವೇಷಣೆಯಾಗಿ ಮನುಜರ ಬದಲಿಗೆ ಪ್ರಾಣಿಗಳ ಬಳಕೆಯಾಗಿ ಆ ಬಳಿಕ ಯಂತ್ರಗಳ ಅನ್ವೇಷಣೆ ನಡೆದು ಇಂದು ನಮ್ಮ ಸಣ್ಣ ಪುಟ್ಟ ಕೆಲಸಗಳನ್ನೂ ಕೂಡ ಮಾಡಿಕೊಳ್ಳಲು ತಂತ್ರಜ್ಞಾನ ನೆರವಾಗುತ್ತಿದೆ. ಹೇಳಿ ಕೇಳಿ ಇದು ಡಿಜಿಟಲ್ ಯುಗ. ಮೊಬೈಲ್ ಎಂಬ ಮಾಯಾವಿಯ ಬಳಕೆ ಬಳಿಕ ವಿಜ್ಞಾನ, ಕೃಷಿ, ತಂತ್ರಜ್ಞಾನ ಹೀಗೆ ಎಲ್ಲ ಕ್ಷೇತ್ರದಲ್ಲಿಯೂ ಅನ್ವೇಷಣೆಗೆ ನಾವು ತೆರೆದುಕೊಳ್ಳುತ್ತಿದ್ದೇವೆ. ಹೀಗಿರುವಾಗ, ದಿನ ಕಳೆದಂತೆ ಮಾರ್ಪಾಡಿಗೆ ತೆರೆದುಕೊಳ್ಳುತ್ತಾ ಹೋದಂತೆ ಮುಂದೊಂದು ದಿನ ಅನೇಕ ವಸ್ತುಗಳು (Dissapear Things In Future)ಕಾಣಲು ಕೂಡ ಸಾಧ್ಯವಿರಲಿಕ್ಕಿಲ್ಲ.

ಈ ಹಿಂದೆ ನಮ್ಮ ಹಿರಿಯರು ಬಳಕೆ ಮಾಡುತ್ತಿದ್ದ ತಾಮ್ರದ ಪಾತ್ರೆಗಳು, ಬಾಲ್ಯದಲ್ಲಿ ನಾವು ಕಂಡ ದೊಡ್ಡ ಬ್ಲ್ಯಾಕ್ ಆಂಡ್ ವೈಟ್ ಟಿವಿ , ಬಾಲ್ಯದಲ್ಲಿ 50ಪೈಸೆ, 1ರೂಪಾಯಿಗೆ ಸಿಗುತ್ತಿದ್ದ ಅದೆಷ್ಟೋ ಚಾಕಲೇಟ್ ಗಳು, ಆಟದ ಪರಿಕರಗಳು, ಹೀಗೆ ಅದೆಷ್ಟೋ ವಸ್ತುಗಳನ್ನು ನಾವು ಕಾಣುವುದಿರಲಿ ಅದರ ಪಳೆಯುಳಿಕೆ ಕೂಡ ಸಿಗುವುದು ಕಷ್ಟ! ನಾವು ಯಾಂತ್ರಿಕ ಜೀವನಕ್ಕೆ ಒಗ್ಗಿಕೊಂಡು ಹೋದಂತೆ ಈ ಕೆಲವು ದೈನಂದಿನ ವಸ್ತುಗಳು ಮುಂದಿನ 20 ವರ್ಷಗಳಲ್ಲಿ ಕಣ್ಮರೆಯಾಗುವ ಸಾಧ್ಯತೆ ದಟ್ಟವಾಗಿದೆ. ಹಾಗಿದ್ರೆ, ಅದು ಯಾವುದೆಲ್ಲ ಅಂತೀರಾ?

ಕೇಬಲ್ TV (cable tv):
ಈ ಮೊದಲೆಲ್ಲ ಊರಿಗೆ ಒಂದೋ ಎರಡೋ ದೊಡ್ಡ ಟಿವಿಗಳು ಇರುತ್ತಿತ್ತು. ಆ ಬಳಿಕ ಜನರು ಆರ್ಥಿಕವಾಗಿ ಅಭಿವೃದ್ಧಿ ಹೊಂದಿ ತಂತ್ರಜ್ಞಾನ ಕೂಡ ಪ್ರಗತಿ ಕಂಡು ಮನೆಯಲ್ಲೊಂದು ಟಿವಿ ಬಳಕೆ ಆಗಿ ಕೇಬಲ್ TV (cable tv) ಉಪಯೋಗ ಮಾಡುತ್ತಿದ್ದರು. ಆದರೆ, ಇಂದು ಸ್ಟ್ರೀಮಿಂಗ್ ಪ್ಲಾಟ್ ಫಾರ್ಮ್ ಗಳು ಟಿವಿಯ ನಮ್ಮ ಅನುಭವವನ್ನು ಬದಲಾಯಿಸುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಕೇಬಲ್ ಟಿವಿ ಬಳಕೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ನೆಟ್ಫ್ಲಿಕ್ಸ್ ಸಿಇಒ ರೀಡ್ ಹೇಸ್ಟಿಂಗ್ಸ್ ಅವರು ಐದರಿಂದ 10 ವರ್ಷಗಳಲ್ಲಿ ಸಾಂಪ್ರದಾಯಿಕ ಕೇಬಲ್ ಮರೆಯಾಗುವ ಬಗ್ಗೆ ಮಾಹಿತಿ ನೀಡಿದ್ದಾರೆ.

ಚಾಕೊಲೇಟ್ (Chocolate): ಚಾಕಲೇಟ್ ಎಂದರೇ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ!! ಇಂದು ಬಯಸಿದಷ್ಟು ಚಾಕೊಲೇಟ್ ತಿನ್ನಬಹುದು. ಆದರೆ ಮುಂದಿನ ದಿನಗಳಲ್ಲಿ ಈ ಸಾಧ್ಯತೆಗಳು ಕಡಿಮೆ ಎಂದು ಅಂದಾಜಿಸಲಾಗಿದೆ. ಇಂಟರ್ನ್ಯಾಷನಲ್ ಸೆಂಟರ್ ಫಾರ್ ಟ್ರಾಪಿಕಲ್ ಅಗ್ರಿಕಲ್ಚರ್ (International Center for Tropical Agriculture) ಅಧ್ಯಯನದ ಅನುಸಾರ, ಕೋಕೋ ಬೆಳೆಯುವ ಪ್ರದೇಶಗಳಲ್ಲಿ ಕಡಿಮೆ ತಾಪಮಾನದಿಂದಾಗಿ 2030 ರ ವೇಳೆಗೆ ಕೋಕೋ ಉತ್ಪಾದನೆಯಲ್ಲಿ ಕುಂಠಿತ ಕಂಡು ಚಾಕಲೇಟ್ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಮುಂದಿನ 15 ವರ್ಷದ ಬಳಿಕ ಚಾಕೊಲೇಟ್ ಅನ್ನು ನೋಡೋದು ಡೌಟ್ ಅಂತಾನೇ ಲೆಕ್ಕ!

ಮೆಟಲ್ ಕೀಗಳು (Metal Key):
ತಂತ್ರಜ್ಞಾನ (Technology) ಬೆಳೆದಂತೆ ಭದ್ರತೆ ಕೂಡ ಮಹತ್ವ ಪಡೆದುಕೊಂಡಿದೆ. ತಂತ್ರಜ್ಞಾನ ಆಧಾರಿತ ಭದ್ರತೆಯ ಕಡೆಗೆ ವಿಶೇಷ ಗಮನ ವಹಿಸಲಾಗುತ್ತದೆ. ಕೀ ಫೋಬ್ಗಳು, ಕೀಲೆಸ್ ಇಗ್ನಿಷನ್ ವ್ಯವಸ್ಥೆಗಳು, ಫೇಸ್/ ಫಿಂಗರ್ಪ್ರಿಂಟ್( Face/ Fingerprint) ಗುರುತಿಸುವಿಕೆ ಮತ್ತು ಎಲೆಕ್ಟ್ರಾನಿಕ್ ಕೀಪ್ಯಾಡ್ ಲಾಕ್ಗಳ ಎಂಟ್ರಿಯ ಬಳಿಕ ಲೋಹದ ಕೀಗಳು (Metal Key)ಉಳಿಯುವ ಸಾಧ್ಯತೆ ತೀರಾ ಕಡಿಮೆ ಎನ್ನಬಹುದು.

ಪಾಸ್ ವರ್ಡ್ ಗಳು (Passwords): ಯಾವುದೇ ತಂತ್ರಜ್ಞಾನ ಬಳಕೆ ಮಾಡುವಾಗ ಪಾಸ್ ವರ್ಡ್ (Password) ಬಳಸೋದು ಸಹಜ. ಆದರೆ ಅನೇಕ ಸೈಟ್, ಆ್ಯಪ್ ಬಳಕೆ ಮಾಡುವಾಗ ಪಾಸ್ ವರ್ಡ್ ಮರೆತುಹೋಗೋದು ಕಾಮನ್. ಆದರೆ, ಕ್ರಾಸ್-ಡಿವೈಸ್ ಪರಿಶೀಲನೆಯಂತಹ ಹೊಸ ಪಾಸ್ವರ್ಡ್-ರಹಿತ ತಂತ್ರಜ್ಞಾನಗಳು ಪಾಪ್ ಅಪ್ ಆಗಲು ಶುರುವಾಗಿದ್ದು, ಹೀಗಾಗಿ, ಇದರ ಮೂಲಕ ವೈಯಕ್ತಿಕ ಡೇಟಾವನ್ನ ಭದ್ರಪಡಿಸಬಹುದು. ಹೀಗಾಗಿ, ಎಲ್ಲಾ ವಿಭಿನ್ನ ಪಾಸ್ವರ್ಡ್ಗಳನ್ನು ನೆನಪಿಟ್ಟುಕೊಳ್ಳುವ ಅವಶ್ಯಕತೆ ಮುಂದಿನ ದಿನಗಳಲ್ಲಿ ತಲೆದೋರದು.

ಚಾಕ್ ಬೋರ್ಡ್ ಗಳು (Chock Board):
ಒಂದು ಕಾಲದಲ್ಲಿ ಚಾಕ್ ಬೋರ್ಡ್ ಗಳು ಹೆಚ್ಚು ಬಳಕೆಯಲ್ಲಿತ್ತು. ಆ ಬಳಿಕ, ಬಿಳಿ ಬೋರ್ಡ್ಗಳು ಬಂದು, ಈಗ ಸ್ಮಾರ್ಟ್ ಬೋರ್ಡ್ ಗಳನ್ನು ತರಗತಿಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತಿದೆ. ಅವುಗಳನ್ನು ಉಳಿಸುವ ಮತ್ತು ಹಂಚಿಕೊಳ್ಳುವ ಜೊತೆಗೆ ಇನ್ನೂ ಅನೇಕ ಮಲ್ಟಿಮೀಡಿಯಾ ಸಾಧನಗಳನ್ನು ಒದಗಿಸುತ್ತದೆ.

ಪೇ ಫೋನ್ ಗಳು (Pay Phone): ಒಂದು ಕಾಲದಲ್ಲಿ ಲ್ಯಾಂಡ್ ಲೈನ್ ಫೋನ್ ಬಳಕೆ ಮಾಡಲಾಗುತ್ತಿತ್ತು. ಆದರೆ, ಇಂದು ಲ್ಯಾಂಡ್ ಲೈನ್ ಫೋನ್ ಬಳಕೆ ಮಾಡೋರೇ ಅಪರೂಪ. ಪೇ ಫೋನ್ ಗಳು ಒಂದು ಕಾಲದಲ್ಲಿ ಬಹುತೇಕ ಹೆಚ್ಚಿನ ಕಡೆಗಳಲ್ಲಿ ಸ್ಥಾನ ಭದ್ರ ಪಡಿಸಿಕೊಂಡಿತ್ತು. ಆದರೆ ಸೆಲ್ ಫೋನ್ ಗಳ ಎಂಟ್ರಿ ಕೊಟ್ಟ ಮೇಲೆ ಇದರ ಬಳಕೆ ಕಡಿಮೆಯಾಗಿರುವುದಂತು ಸುಳ್ಳಲ್ಲ. ಒಂದು ವೇಳೆ, ಫೋನ್ ಬ್ಯಾಟರಿ ಆಫ್ ಆಗಿದ್ದಾಗ ಇಲ್ಲವೇ ನೆಟ್ ವರ್ಕ್ ಸಂಪರ್ಕ ಇಲ್ಲದಿದ್ದ ಸಂದರ್ಭದಲ್ಲಿ ಪೇ ಫೋನ್ ಗಳು ನೆರವಾಗುತ್ತವೆ. ಆದರೆ ಇನ್ನು ಕೆಲವು ವರ್ಷಗಳಲ್ಲಿ ಪೇ ಫೋನ್ ಗಳು ಕೂಡ ಕಾಣ ಸಿಗೋದು ಅನುಮಾನವೇ ಸರಿ!

ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಗಳು(Credit and Debit Card):
ಇಂದು ಹೆಚ್ಚಿನ ಮಂದಿ ಬಳಸುವ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ಗಳ ಮುಂದೆ ಹೆಚ್ಚು ಮಾರ್ಪಾಡು ಹೊಂದಿ ಫೋನ್ ಅಥವಾ ಸ್ಮಾರ್ಟ್ ವಾಚ್ ಮೂಲಕ ಡಿಜಿಟಲ್ ಪಾವತಿ ಮಾಡುವ ದಿನ ಮುಂದಿನ ದಿನಗಳಲ್ಲಿ ಬಂದರೂ ಅಚ್ಚರಿಯಿಲ್ಲ.

ರಿಮೋಟ್ ಕಂಟ್ರೋಲ್ (Remote Control):
ವಾಯ್ಸ್ ಕಮಾಂಡ್ಸ್ (Voice Commands) ಮತ್ತು ಸ್ಮಾರ್ಟ್ ಫೋನ್ ಕಂಟ್ರೋಲ್ ಮುಂದಿನ ದಿನಗಳಲ್ಲಿ ಆ ಪ್ಲಾಸ್ಟಿಕ್ ರಿಮೋಟ್ ಕಂಟ್ರೋಲ್ ಇಲ್ಲದಂತೆ ಮಾಡುವಷ್ಟು ಪ್ರಗತಿ ಕಾಣುವ ಸಾಧ್ಯತೆ ದಟ್ಟವಾಗಿದೆ. ಈ ನಿಟ್ಟಿನಲ್ಲಿ ಮುಂದಿನ ಕೆಲ ವರ್ಷಗಳಲ್ಲಿ ಟಿವಿ ನೋಡೋವಾಗ ರಿಮೋಟ್ ಮಿಸ್ ಆಗುವ ಸಾಧ್ಯತೆಗಳು ಕಡಿಮೆಯೇ!!

ಚಾರ್ಜಿಂಗ್ ಕೇಬಲ್ ಗಳು (Charging Cable):
ವೈರ್ ಲೆಸ್ ಚಾರ್ಜಿಂಗ್ ಈಗಾಗಲೇ ಗ್ರಾಹಕರ ಬಳಿಯಿದ್ದು, ಇವುಗಳನ್ನು ಬಳಸಿ ಸುಲಭವಾಗಿ ಮತ್ತು ವೇಗವಾಗಿ ಚಾರ್ಜ್ ಮಾಡುವುದು ಗೊತ್ತೇ ಇದೆ. ನಿಮ್ಮ ಲ್ಯಾಪ್ಟಾಪ್, ಸ್ಪೀಕರ್ಗಳು ಮತ್ತು ಇತರ ಸಾಧನಗಳನ್ನು ಚಾರ್ಜ್ ಮಾಡುವ ಚಾರ್ಜಿಂಗ್ ಡೆಸ್ಕ್ ಇನ್ನು ಮುಂದೆ ಕೇಬಲ್ ಜಾಗ ಪಡೆದರೂ ಆಶ್ಚರ್ಯವಿಲ್ಲ.

ಪೋಸ್ಟ್ ಬಾಕ್ಸ್ (Post Box):
ಒಂದಾನೊಂದು ಕಾಲದಲ್ಲಿ ಸಂದೇಶಗಳನ್ನು ರವಾನೆ ಮಾಡಲು ಪಕ್ಷಿಗಳನ್ನ ಬಳಕೆ ಮಾಡುತ್ತಿದ್ದದ್ದು ಗೊತ್ತಿರುವ ಸಂಗತಿ. ಆ ಬಳಿಕ ಅನೇಕ ಮಾರ್ಪಾಡುಗಳಾಗಿ ಇಂದು ಪತ್ರಗಳು, ಯಾವುದೇ ಮಾಹಿತಿ ರವಾನೆಗೆ ಅಂಚೆ ಕಚೇರಿ ಕಾರ್ಯ ನಿರ್ವಹಿಸುತ್ತಿರುವುದು ಗೊತ್ತೇ ಇದೆ. ಆದರೂ ಕೂಡ ಮೊಬೈಲ್(Mobile) ಎಂಬ ಸಾಧನದ ಅನ್ವೇಷಣೆಯ ಬಳಿಕ ಪತ್ರ ಬರೆಯುವ ಸಂಖ್ಯೆ ಕಡಿಮೆ ಆಗಿರುವುದಂತು ಸುಳ್ಳಲ್ಲ. ಇಂದು ಅನೇಕ ಸ್ಥಳಗಳಲ್ಲಿ ಪೋಸ್ಟ್ ಬಾಕ್ಸ್ ಗಳನ್ನು ಕಡಿತ ಮಾಡಲಾಗುತ್ತಿದೆ. ಇಂದು ತಂತ್ರಜ್ಞಾನ ಬೆಳೆದಂತೆ ಏನೇ ಮಾಹಿತಿ ಇದ್ದರೂ ಮೊಬೈಲ್ ಮೂಲಕ ಕ್ಷಣ ಮಾತ್ರದಲ್ಲಿ ರವಾನೆ ಮಾಡಬಹುದು. ಹೀಗಿದ್ದಾಗ, ಬೆರಳೆಣಿಕೆಯ ಮಂದಿ ಮಾತ್ರ ಪ್ರಥಮ ಪತ್ರಗಳನ್ನು ರವಾನೆ ಮಾಡುತ್ತಿದ್ದಾರೆ. ಹೀಗಾಗಿ, ಮುಂದಿನ ಕೆಲ ವರ್ಷಗಳಲ್ಲಿ ಪೋಸ್ಟ್ ಬಾಕ್ಸ್ (Post Box) ಎಂಬ ವಿಚಾರ ಸಂಪೂರ್ಣವಾಗಿ ಕಣ್ಮರೆಯಾಗುವ ಸಾಧ್ಯತೆಯನ್ನ ಅಲ್ಲಗಳೆಯುವಂತಿಲ್ಲ.

ಪ್ಲಾಸ್ಟಿಕ್ ಚೀಲಗಳು (Plastic Bags):
ಇಂದು ಪರಿಸರಕ್ಕೆ ಮಾರಕವಾದ ಏಕ-ಬಳಕೆಯ ಪ್ಲಾಸ್ಟಿಕ್ ಚೀಲಗಳನ್ನು ಬಳಕೆ ಮಾಡುವುದು ಕಡಿಮೆಯಾಗಿದ್ದು, ಅನೇಕರು ಮರುಬಳಕೆ ಮಾಡಬಹುದಾದ ಚೀಲಗಳನ್ನು ಖರೀದಿಸುವತ್ತ ಮುಖ ಮಾಡುತ್ತಿದ್ದಾರೆ. ಸರ್ಕಾರದ ಆದೇಶದ ಬಳಿಕ, ಅನೇಕ ಅಂಗಡಿಗಳು ಪ್ಲಾಸ್ಟಿಕ್ ಬದಲಿಗೆ ಕಾಗದದ ಚೀಲಗಳನ್ನು ನೀಡುತ್ತಿದ್ದು, ಮುಂದಿನ ಕೆಲ ವರ್ಷಗಳಲ್ಲಿ ಪ್ಲಾಸ್ಟಿಕ್ ಚೀಲಗಳು ಸಂಪೂರ್ಣವಾಗಿ ಮರೆಯಾದರು ಅಚ್ಚರಿಯಿಲ್ಲ.

ಕ್ಲಚ್ ಪೆಡಲ್ (Clutch Pedal) ನಮಗೆ ತಿಳಿದಿರುವಂತೆ ಕ್ಲಚ್ ಕಣ್ಮರೆಯಾಗಲು ಎರಡು ಅಂಶಗಳು ಕಾರಣವಾಗಬಹುದು. ಸ್ವಯಂಚಾಲಿತ ಕಾರುಗಳು ಹೆಚ್ಚು ಪರಿಣಾಮಕಾರಿಯಾಗುತ್ತಿರುವ ಹಿನ್ನೆಲೆ ಚಾಲನೆ ಮಾಡುವುದು ಸರಳ ಹಾಗೂ ಸುಲಭ. ಇದರ ಜೊತೆಗೆ ಸ್ವಯಂಚಾಲಿತ” ಹಸ್ತಚಾಲಿತ ಶಿಫ್ಟ್ ಗಳು ಶುರುವಾಗುತ್ತಿದ್ದು, ಇದರಲ್ಲಿ ಎಲೆಕ್ಟ್ರಾನಿಕ್ಸ್ ಕ್ಲಚ್ ಅನ್ನು ನಿಯಂತ್ರಣ ಮಾಡುತ್ತದೆ.

ಟ್ರಾಫಿಕ್ (Traffic):
ಸ್ವಯಂ ಚಾಲಿತ ಕಾರುಗಳೊಂದಿಗೆ ಟ್ರಾಫಿಕ್ ಜಾಮ್ ಗೆ ಸಿಲುಕುವ ಸಂಭವ ಕಡಿಮೆಯಾಗಲಿದೆ. ಈಗಾಗಲೇ ಟ್ರಾಫಿಕ್ ಸಮಸ್ಯೆಗಳನ್ನು ತಪ್ಪಿಸಲು ಅನೇಕ ಕ್ರಮಗಳನ್ನು ಜಾರಿಗೆ ತರಲು ಮುಂದಾಗಿದೆ. ನಿರಂತರವಾಗಿ ಮತ್ತು ಸ್ಥಿರ ವೇಗದಲ್ಲಿ ಚಲಿಸುವ ಆಟೋಮ್ಯಾಟಿಕ್ ಕಾರುಗಳು ಮುಂದಿನ ಕೆಲ ವರ್ಷಗಳಲ್ಲಿ ಬಂದಲ್ಲಿ ಟ್ರಾಫಿಕ್ ಸಮಸ್ಯೆ ಕಂಡು ಬರುವುದಿಲ್ಲ ಅಲ್ಲದೇ ಅಪಘಾತಗಳೂ ಕೂಡ ಕಡಿಮೆಯಾಗುತ್ತದೆ.

Leave A Reply

Your email address will not be published.