Tamilnadu: ಆರೋಪಿಗಳ ಹಲ್ಲು ಕಿತ್ತು, ನವವಿವಾಹಿತನ ವೃಷಣಗಳನ್ನು ಜಜ್ಜಿ ವಿಕೃತಿ ಮೆರೆದ PSI!

Tamilnadu IPS : ಕೇವಲ 10 ದಿನಗಳ ಹಿಂದೆಯಷ್ಟೇ ಪೋಸ್ಟಿಂಗ್ ಗೆ ಬಂದಿದ್ದ, ಬಿಸಿ ರಕ್ತದ IPS ಒಬ್ಬ ಕಸ್ಟಡಿಯಲ್ಲಿದ್ದವರ ಜೊತೆ ಕ್ರೂರವಾಗಿ ವರ್ತನೆ ಮಾಡಿ ವಿಕೃತಿ ಮೆರೆದಿದ್ದಾನೆ. ತನ್ನ ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ ಆರೋಪದ ಮೇಲೆ ಇದೀಗ ಈ ತಮಿಳುನಾಡು(Tamilnadu IPS ) ಐಪಿಎಸ್​(PSI) ಅಧಿಕಾರಿಯನ್ನು ಅಮಾನತು ಮಾಡಲಾಗಿದೆ.

 

ಹೌದು, ಸುಮಾರು 10 ದಿನಗಳ ಹಿಂದೆ ತಿರುನೆಲ್ವೇಲಿ(Tirunelveli) ಜಿಲ್ಲೆಯ ಅಂಬಾಸಮುದ್ರದಲ್ಲಿ ಸಹಾಯಕ ಪೊಲೀಸ್ ಅಧೀಕ್ಷಕರಾಗಿ ನೇಮಕಗೊಂಡಿರುವ 2020ನೇ ಬ್ಯಾಚ್​ನ ಐಪಿಎಸ್​ ಅಧಿಕಾರಿ ಬಲ್ವೀರ್​ ಸಿಂಗ್​ ಅವರು ಕಟಿಂಗ್​ ಪ್ಲೇಯರ್​ ಮೂಲಕ ಐವರು ಶಂಕಿತ ಆರೋಪಿಗಳ ಹಲ್ಲನ್ನು ಕಿತ್ತು, ವೃಷಣಗಳನ್ನು ಜಜ್ಜಿ ಪೊಲೀಸ್​ ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ ಆರೋಪದ ಮೇಲೆ ತಮಿಳುನಾಡು ಐಪಿಎಸ್​ ಅಧಿಕಾರಿಯೊಬ್ಬರನ್ನು ಅಮಾನತು ಮಾಡಲಾಗಿದೆ.

ಈ ವಿಚಾರವಾಗಿ ವಿಧಾನಸಭೆ(Vidhanasabe)ಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಎಂಕೆ ಸ್ಟಾಲಿನ್(CM Stalin) ಬಲ್ವೀರ್ ಸಿಂಗ್ ಅವರನ್ನು ಅಮಾನತುಗೊಳಿಸುವಂತೆ ಅಧಿಕಾರಿಗಳಿಗೆ ಆದೇಶಿಸಿರುವುದಾಗಿ ತಿಳಿಸಿದರು. ನಾನು ಅವರನ್ನು ಅಮಾನತುಗೊಳಿಸುವಂತೆ ಆದೇಶಿಸಿದ್ದೇನೆ. ಮ್ಯಾಜಿಸ್ಟ್ರೇಟ್ ವಿಚಾರಣೆಯ ವರದಿಯ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಪೊಲೀಸ್ ಠಾಣೆಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಗೆ ಯಾವುದೇ ರಾಜಿ ಇಲ್ಲ ಎಂದು ಶ್ರೀ ಸ್ಟಾಲಿನ್ ಹೇಳಿದ್ದಾರೆ.

ಅಂದಹಾಗೆ ವೃಷಣಗಳನ್ನು ಜಜ್ಜಿರುವ ಸಂತ್ರಸ್ತ ನವವಿವಾಹಿತನ ಸ್ಥಿತಿ ಇದೀಗ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ. ಹಲ್ಲೆ ಪ್ರಕರಣದ ಶಂಕಿತ ಆರೋಪಿಗಳು ಸದ್ಯ ಜಾಮೀನಿನ ಮೇಲೆ ಹೊರಗಿದ್ದಾರೆ. ಅವರಲ್ಲಿ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಐಪಿಎಸ್​ ಅಧಿಕಾರಿಯ ಕಸ್ಟಡಿಯ ಚಿತ್ರಹಿಂಸೆ ಬಗ್ಗೆ ದೂರಿದ್ದಾರೆ.

ಸಿಎಂ ಆದೇಶದ ಬೆನ್ನಲ್ಲೇ ಸಿಂಗ್ ವಿರುದ್ಧ ಮ್ಯಾಜಿಸ್ಟ್ರೇಟ್ ತನಿಖೆಗೆ ಜಿಲ್ಲಾಧಿಕಾರಿಗಳು ಈಗಾಗಲೇ ಆದೇಶ ನೀಡಿದ್ದಾರೆ. ಆದರೆ ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕು ಎಂದು ಮಾನವ ಹಕ್ಕುಗಳ ರಕ್ಷಕರು ಆಗ್ರಹಿಸಿದ್ದಾರೆ.

Leave A Reply

Your email address will not be published.