Single Parent : ಸಿಂಗಲ್ ಪೇರೆಂಟ್‌ ಆಶ್ರಯದಲ್ಲಿ ಬೆಳೆದ ಮಕ್ಕಳು ಇತರರಿಗಿಂತ ಡಿಫರೆಂಟ್ : ಹೇಗೆ ಗೊತ್ತಾ?

Single Parent : ಮಕ್ಕಳು ಎಷ್ಟು ಮುಗ್ದರಾಗಿದ್ದರೂ ಕೂಡ ಅವರು ಹಿರಿಯರು ಯಾವ ರೀತಿಯಾಗಿ ನಡೆದುಕೊಳ್ಳುತ್ತಾರೆ ಎಂಬುದನ್ನು ಅನುಸರಿಸಿಕೊಂಡು ಹೋಗುತ್ತಾರೆ. ಅದರಂತೆ ಮಕ್ಕಳು ಕೂಡ ತಮ್ಮ ಜೀವನ ಶೈಲಿಯನ್ನು ರೂಪಿಸಿಕೊಳ್ಳುತ್ತಾರೆ. ಮುಖ್ಯವಾಗಿ ಸಿಂಗಲ್ ಪೇರೆಂಟ್ ಮಕ್ಕಳು(Single Parent) ಇತರ ಮಕ್ಕಳಿಗಿಂತ ವಿಭಿನ್ನವಾಗಿರುತ್ತಾರೆ.

ಹೌದು. ಕೆಲವೊಂದು ವಿಚಾರಗಳಲ್ಲಿ ಬದಲಾವಣೆಗಳನ್ನು ಗಮನಿಸಬಹುದು. ಇಂದಿನ ಈ ಕಾಲದಲ್ಲಿ ಒಬ್ಬಂಟಿ ತಾಯಿ ಅಥವಾ ಒಬ್ಬಂಟಿ ತಂದೆ ಒಬ್ಬರೇ ಸ್ವತಂತ್ರವಾಗಿ ಮಕ್ಕಳನ್ನು ಸಾಕುವುದು ಸುಲಭದ ಕೆಲಸವಲ್ಲ. ಮಕ್ಕಳನ್ನು ಒಳ್ಳೆಯ ದಾರಿಯಲ್ಲಿ ನಡೆಸುವುದು ಮುಖ್ಯವಾಗಿದೆ. ಹಾಗಾದ್ರೆ ಒಬ್ಬಂಟಿ ಪೋಷಕರಾಗೋದು ಮಕ್ಕಳ ಮೇಲೆ ಯಾವ ರೀತಿ ಧನಾತ್ಮಕ ಪರಿಣಾಮ ಬೀಳುತ್ತದೆ ಎಂಬುದನ್ನು ತಿಳಿಯೋಣ.

ತಂದೆ ಹಾಗೂ ತಾಯಿ ಇಬ್ಬರು ಇದ್ದಾಗ ಇಬ್ಬರು ಪ್ರೀತಿಯನ್ನು ಕೊಡುತ್ತಾರೆ. ಆದ್ರೆ ಅವರಲ್ಲಿ ಯಾರು ಹೆಚ್ಚು ಕೇರ್‌ ಮಾಡುತ್ತಾರೋ ಅವರನ್ನು ಮಕ್ಕಳು ನೆಚ್ಚಿಕೊಳ್ಳುತ್ತಾರೆ. ಆದರೆ ಒಬ್ಬರೇ ಇದ್ದಾಗ ಮಕ್ಕಳಿಗೆ ಅವರೇ ಪ್ರಪಂಚವಾಗುತ್ತಾರೆ. ಅವರ ಜೊತೆಗೆ ಮಕ್ಕಳ ಭಾಂದವ್ಯ ಹೆಚ್ಚಾಗುತ್ತದೆ. ಹಾಗಾಗಿ ಅವರ ನೋವು-ನಲಿವಿನಲ್ಲಿ ಜೊತೆಯಾಗಿರುತ್ತಾರೆ.

ಅಷ್ಟೇ ಅಲ್ಲದೆ, ಒಂಟಿ ಪೋಷಕರ ಆಶ್ರಯದಲ್ಲಿ ಬೆಳೆದ ಮಕ್ಕಳು ಪ್ರಬುದ್ಧರಾಗಿರುತ್ತಾರೆ. ಅಂತಹ ಮಕ್ಕಳಿಗೆ ಮನೆಯಲ್ಲಿ ಪ್ರೀತಿ, ಅಕ್ಕರೆಯ ಜೊತೆಗೆ ಜವಾಬ್ದಾರಿಯನ್ನು ಕಲಿಸಿಕೊಟ್ಟಿರುತ್ತಾರೆ. ಹೀಗಾಗಿ ಅಮ್ಮ ಅಥವಾ ಅಪ್ಪ ಎಷ್ಟು ಕಷ್ಟ ಪಟ್ಟು ನಮ್ಮನ್ನು ಬೆಳೆಸುತ್ತಿದ್ದಾರೆ ಅನ್ನೋ ವಿಚಾರ ಮಕ್ಕಳಿಗೆ ಗೊತ್ತಿರುತ್ತದೆ. ದುಡ್ಡಿನ ಮೌಲ್ಯದ ಬಗ್ಗೆ ಅರ್ಥ ಮಾಡಿಕೊಂಡಿರುತ್ತಾರೆ. ಅವರ ವಯಸ್ಸಿಗಿಂತ ಹೆಚ್ಚಿನ ಪ್ರಬುದ್ಧತೆ ಅವರಲ್ಲಿರುತ್ತದೆ.

ಸಿಂಗಲ್‌ ಪೇರೆಂಟ್‌ ಆಗಿದ್ದಾಗ ತಂದೆ ಅಥವಾ ತಾಯಿ ಹಚ್ಚಿನ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ. ಚಿಕ್ಕಂದಿನಿಂದಲೇ ಮಕ್ಕಳ ಹಾಗೂ ಮನೆಯ ಕೆಲಸವನ್ನು ನಿಭಾಯಿಸಿರುತ್ತಾರೆ. ಇದನ್ನೇ ನೋಡಿಕೊಂಡು ಬೆಳೆದ ಮಕ್ಕಳು ಸ್ವಲ್ಪ ದೊಡ್ಡವರಾಗುತ್ತಿದ್ದ ಹಾಗೇ ಪೋಷಕರಿಗೆ ಸಹಾಯ ಮಾಡೋದಕ್ಕೆ ಶುರು ಮಾಡುತ್ತಾರೆ. ಹೀಗಾಗಿ ಪೋಷಕರಿಗೆ ಎಲ್ಲ ಕ್ಷಣದಲ್ಲಿ ಸಹಾಯ ಮಾಡುತ್ತ ಇರುತ್ತಾರೆ.

ಸಿಂಗಲ್‌ ಪೇರೆಂಟ್‌ ಆಶ್ರಯದಲ್ಲಿ ಬೆಳೆದ ಮಕ್ಕಳಿಗೆ ಕುಟುಂಬದ ಮಹತ್ವದ ಬಗ್ಗೆ ಗೊತ್ತಿರುತ್ತದೆ. ತಂದೆ ಅಥವಾ ತಾಯಿ ಒಬ್ಬಂಟಿಯಾಗಿ ಮಕ್ಕಳನ್ನು ಬೆಳೆಸೋದಕ್ಕೆ ಪಟ್ಟ ಕಷ್ಟದ ಬಗ್ಗೆ ಅರ್ಥ ಮಾಡಿಕೊಂಡಿರುತ್ತಾರೆ. ಹಾಗೂ ಪೋಷಕರನ್ನೇ ಮಕ್ಕಳು ಪ್ರೇರಣೆಯಾಗಿ ತೆಗೆದುಕೊಳ್ಳುತ್ತಾರೆ. ಹಾಗೂ ತಂದೆ ತಾಯಿಯ ಬುದ್ಧಿಯನ್ನೇ ಮಕ್ಕಳು ಕಲಿತು ಕೊಳ್ಳುತ್ತಾರೆ. ಆದರೆ ಸಿಂಗಲ್‌ ಪೇರೆಂಟ್‌ ಆಗಿದ್ದಾಗ ಮನೆಯಲ್ಲಿ ಜಗಳಗಳಾಗೋ ಪ್ರಸಂಗ ಎದುರಾಗೋದಿಲ್ಲ. ತಾಯಿ ಅಥವಾ ತಂದೆ ಏನು ಹೇಳುತ್ತಾರೋ ಮಕ್ಕಳು ಅದನ್ನೇ ಕೇಳುತ್ತಾರೆ.

Leave A Reply

Your email address will not be published.