IPL 2023: IPL ಅಖಾಡದಲ್ಲಿದ್ದಾರೆ 10 ಮಂದಿ ಕನ್ನಡಿಗರು, ಯಾವ್ಯಾವ ಟೀಮ್ ನಲ್ಲಿ ಯಾರಿದ್ದಾರೆ ನೋಡಿ!

IPL 2023 : ರಂಗು ರಂಗಿನ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್​ಗೆ(IPL 2023) ಕೌಂಟ್ ಡೌನ್ ಶುರುವಾಗಿದೆ. ಇಂದು ಭಾರಿ ಸಂಭ್ರಮದೊಂದಿಗೆ ಆರಂಭವಾಗಲಿದೆ. ಈ ಬಾರಿಯ ಐಪಿಎಲ್​ನಲ್ಲಿ 10 ತಂಡಗಳೊಂದಿಗೆ ಒಟ್ಟು 243 ಆಟಗಾರರು ಕಾಣಿಸಿಕೊಳ್ಳಲಿದ್ದು ಅವರಲ್ಲಿ 10 ಕನ್ನಡಿಗರೂ ಕೂಡ ಇರುವುದು ವಿಶೇಷ. ಹಾಗಿದ್ದರೆ ಯಾವ್ಯಾವ ತಂಡದಲ್ಲಿ ಯಾರೆಲ್ಲಾ ಕನ್ನಡಿಗರಿದ್ದಾರೆ ಎಂಬುದನ್ನು ತಿಳಿಯೋಣ ಬನ್ನಿ.

ಐಪಿಎಲ್​ನ 7 ತಂಡಗಳಲ್ಲಿ ಒಟ್ಟು 10 ಕರ್ನಾಟಕದ ಆಟಗಾರರು ಸ್ಥಾನ ಪಡೆದಿದ್ದಾರೆ. ಅದರಲ್ಲಿ ಆರ್​ಸಿಬಿ(RCB) ತಂಡದಲ್ಲಿರುವುದು ಏಕೈಕ ಕನ್ನಡಿಗ ಮಾತ್ರ. ಇನ್ನು ಡೆಲ್ಲಿ ಕ್ಯಾಪಿಟಲ್ಸ್, ರಾಜಸ್ಥಾನ್ ರಾಯಲ್ಸ್(Rajasthan Royas), ಲಕ್ನೋ ಸೂಪರ್ ಜೈಂಟ್ಸ್ ತಂಡಗಳಲ್ಲಿ ತಲಾ ಇಬ್ಬರು ಕನ್ನಡಿಗರು ಆಯ್ಕೆಯಾಗಿದ್ದಾರೆ.

ಲಕ್ನೋ ಸೂಪರ್ ಜೈಂಟ್ಸ್ – ಕೆ ಎಲ್ ರಾಹುಲ್ ಹಾಗೂ ಕೃಷ್ಣಪ್ಪ ಗೌತಮ್. ರಾಜಸ್ಥಾನ್ ರಾಯಲ್ಸ್ -ಕೆಸಿ ಕಾರ್ಯಪ್ಪ, ದೇವದತ್ ಪಡಿಕ್ಕಲ್. ಸನ್​ರೈಸರ್ಸ್ ಹೈದರಾಬಾದ್- ಮಯಾಂಕ್ ಅಗರ್ವಾಲ್, ಡೆಲ್ಲಿ ಕ್ಯಾಪಿಟಲ್ಸ್- ಮನೀಷ್ ಪಾಂಡೆ, ಪ್ರವೀಣ್ ದುಬೆ. ಗುಜರಾತ್ ಟೈಟಾನ್ಸ್ -ಅಭಿನವ್ ಮನೋಹರ್, ರಾಯಲ್ ಚಾಲೆಂಜರ್ಸ್ ಬೆಂಗಳೂರು-ಮನೋಜ್ ಭಾಂಡಗೆ. ಪಂಜಾಬ್ ಕಿಂಗ್ಸ್- ವಿಧ್ವತ್ ಕಾವೇರಪ್ಪ ಇವರೆಲ್ಲರೂ ಕನ್ನಡಿಗರಾಗಿ ಕಣಕ್ಕಿಳಿಯಲಿದ್ದಾರೆ.

Leave A Reply

Your email address will not be published.