April 1 Changes : ಚಿನ್ನಾಭರಣ ಖರೀದಿಸುವವರೇ ಇತ್ತ ಗಮನಿಸಿ! ಬದಲಾಗಲಿದೆ ಚಿನ್ನದ ವಿಷಯಕ್ಕೆ ಸಂಬಂಧಿಸಿದಂತೆ ಈ ನಿಯಮ!!!
HUID 6-digit alphanumeric code :ಇನ್ನು ಕೆಲವೇ ಗಂಟೆಗಳಲ್ಲಿ 2023 ವರ್ಷದ ಮಾರ್ಚ್ 31 ಕಳೆದು ಏಪ್ರಿಲ್ 1 ಬರಲಿದ್ದು, ಹಳೆಯ ಹಣಕಾಸು ವರ್ಷ ಮುಕ್ತಾಯವಾಗಿ ಹೊಸ ಹಣಕಾಸು ವರ್ಷ ಶುರುವಾದಂತೆ. ಅದರ ಜೊತೆಗೆ ಭಾರತದಲ್ಲಿ ಹಲವು ನಿಯಮಗಳಲ್ಲಿಯು ಬದಲಾವಣೆಯಾಗಲಿವೆ. ಅದೇನೆಂದರೆ ನಾಳೆಯಿಂದ ಆದಾಯ ತೆರಿಗೆ ನಿಯಮಗಳಲ್ಲಿ ಆಗುವ ಮಹತ್ತರ(HUID 6-digit alphanumeric code) ಬದಲಾವಣೆಗಳ ಕುರಿತು ಮಾಹಿತಿ ಇಲ್ಲಿದೆ ನೋಡಿ.
ಹೌದು, ಆಭರಣದ ಬೆಲೆ (gold rate) ಕೈಗೆಟಕ್ಕದಷ್ಟು ಮೇಲಿರುವ ಮಾತು ಎಲ್ಲರಿಗೂ ತಿಳಿದೇ ಇದೆ. ಅದೇ ರೀತಿ ನಾಳೆಯಿಂದ ಅಭರಣದಲ್ಲಿ (gold) ಇನ್ನೊಂದು ಹೊಸ ರೀತಿಯ ಕಾನೂನು ಜಾರಿಗೆ ಬರಲಿದೆ ಅದೇನಪ್ಪಾ ಅಂದ್ರೆ. ಈ ಬದಲಾವಣೆಯನ್ನು ಆಭರಣ ಪ್ರಿಯರು ಗಮನಿಸಲೇಬೇಕು. ಚಿನ್ನಾಭರಣಗಳು ಮತ್ತು ಚಿನ್ನದ ಕಲಾಕೃತಿಗಳನ್ನು ಮಾರಾಟ ಮಾಡಲು ಹೊಸ ನಿಯಮವೊಂದು ಜಾರಿಗೆ ಬರಲಿದೆ. ನಾಳೆಯಿಂದ ಮಾರಾಟವಾಗುವ ಚಿನ್ನಾಭರಣಗಳು ಮತ್ತು ಚಿನ್ನದ ಕಲಾಕೃತಿಗಳಲ್ಲಿ ಆರಂಕಿಯ ಆಲ್ಪಾನ್ಯೂಮರಿಕ್ ಹಾಲ್‌ಮಾರ್ಕ್(aaranki alpha numeric hallmark) ಯೂನಿಕ್ ಐಡೆಂಟಿಫಿಕೇಷನ್ (ಎಚ್‌ಯುಐಡಿ) ಸಂಖ್ಯೆ ಇರುವುದು ಕಡ್ಡಾಯವಾಗಿದೆ.
ಈ ಹಿಂದೆ ನಾಲ್ಕು ಅಂಕಿಯ ಹಾಲ್‌ಮಾರ್ಕ್ (hallmark)ಇದ್ದರೆ ಸಾಕಾಗುತ್ತಿತ್ತು. ಆದರೆ ನಾಳೆಯಿಂದ ಆರಂಕಿಯ ಹಾಲ್‌ಮಾರ್ಕ್ ಗುರುತು ಇರುವುದು ಕಡ್ಡಾಯವಾಗಿದೆ. ನಾಳೆಯಿಂದ ನಾಲ್ಕು ಅಂಕಿಯ ಹಾಲ್‌ಮಾರ್ಕ್ ಗುರುತಿನ ಸಂಖ್ಯೆಯನ್ನು ಎಲ್ಲಿಯೂ ಯಾವುದೇ ಮಾರುಕಟ್ಟೆಯಲ್ಲಿ (market) ಬಳಸಲಾಗುವುದಿಲ್ಲ.
ಎಚ್‌ಯುಐಡಿ ಎಂದರೆ ಏನಿದು?
ಜುಲೈ 1, 2021 ರಂದು ಮೊದಲ ಬಾರಿಗೆ ಎಚ್ ಯುಐಡಿಯನ್ನು ಜಾರಿಗೆ ತರಲಾಗಿತ್ತು. ಇದು ಸಂಖ್ಯೆಗಳು ಮತ್ತು ಅಕ್ಷರಗಳನ್ನು ಹೊಂದಿರುವ 6-ಅಂಕಿಯ ಆಲ್ಫಾನ್ಯೂಮರಿಕ್ ಕೋಡ್(alpha numeric code) ಅನ್ನು ಒಳಗೊಂಡಿರುತ್ತದೆ. ಆಭರಣದ ಪ್ರತಿಯೊಂದು ವಸ್ತುವಿನಲ್ಲೂ ಹಾಲ್‌ಮಾರ್ಕಿಂಗ್ ಸಮಯದಲ್ಲಿ HUID ಸಂಖ್ಯೆಯನ್ನು ನೀಡಲಾಗುತ್ತದೆ. ಪ್ರತಿ HUID ವಿಭಿನ್ನವಾಗಿರುತ್ತದೆ. ಅಂದರೆ ಈ ಸಂಖ್ಯೆಯು ಒಂದರಿಂದ ಒಂದು ವಿಭಿನ್ನ ರೀತಿಯಲ್ಲಿರುತ್ತದೆ.
ಹಾಗಾದರೆ ಈಗ ಇರುವ ನಿಯಮಗಳೇನು?
ಈ ಹೊಸ ಗುರುತಿನ ಸಂಖ್ಯೆಯನ್ನು ಪರಿಚಯಿಸುವ ಮೊದಲು, ಮಾರುಕಟ್ಟೆಯಲ್ಲಿ (market) ಆಭರಣವನ್ನು ತೆಗೆದುಕೊಳ್ಳುವಾಗ ಅವುಗಳಿಗೆ ನಾಲ್ಕು ಅಂಕಿಯ ಹಾಲ್‌ಮಾರ್ಕ್ ಇರುತ್ತಿತ್ತು. ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ಆಭರಣದ ಶುದ್ಧತೆಗೆ ತಕ್ಕಂತೆ ಈ ಹಾಲ್‌ಮಾರ್ಕ್ ನೀಡುತ್ತದೆ. ಮೊದಲು ಬಿಐಎಸ್, ವಸ್ತುವಿನ ಶುದ್ಧತೆ, ಚಿನ್ನದ ಲೊಗೊ ಮತ್ತು ಹಾಲ್‌ಮಾರ್ಕಿಂಗ್ ಸೆಂಟರ್‌ನ ಲೋಗೊ ಎಂಬ ನಾಲ್ಕು ಅಂಕಿಗಳು ಇದ್ದವು. ಬಳಿಕ ಎಚ್‌ಯುಐಡಿನಲ್ಲಿ ಎಚ್‌ಯುಐಡಿ, ಬಿಐಎಸ್ ಲೊಗೊ ಮತ್ತು ಆರ್ಟಿಕಲ್ ಪ್ಯೂರಿಟಿ(article Purity) ಎಂಬ ಮೂರು ಅಂಶಗಳನ್ನು ಜನಗಳಿಗೆ ಪರಿಚಯಿಸಲಾಯಿತು. ಈಗಿನ ನಿಯಮಗಳ ಪ್ರಕಾರ ಎಚ್‌ಯುಐಡಿ ಹಾಲ್‌ಮಾರ್ಕ್(hallmark) ಇರುವ ಮತ್ತು ಹಾಲ್‌ಮಾರ್ಕ್ ಇರದ ಆಭರಣಗಳ ಮಾರಾಟಕ್ಕೆ ಅನುಮತಿಯನ್ನು ನೀಡುತ್ತಿದ್ದರು.
ನಿಯಮದಲ್ಲಿ ಬದಲಾವಣೆ ಏಕೆ?
ಮಾರ್ಚ್ 3 ರಂದು ಗ್ರಾಹಕರ ವ್ಯವಹಾರಗಳ ಸಚಿವಾಲಯ ತಿಳಿಸಿದ ಮಾಹಿತಿಯ ಪ್ರಕಾರ ಆಭರಣಗಳಲ್ಲಿ ಎರಡು ಬಗೆಯ ಹಾಲ್‌ಮಾರ್ಕ್ ಇರುವುದರಿಂದ ಗ್ರಾಹಕರಲ್ಲಿ ಸಾಕಷ್ಟು ಗೊಂದಲ ಉಂಟಾಗುತ್ತಿದೆ. ಹಾಗಾಗಿ ಈಗಾಗಲೇ ಗ್ರಾಹಕರಲ್ಲಿ ಇರುವ ಹಾಲ್‌ಮಾರ್ಕ್ ಚಿನ್ನಾಭರಣಗಳು ವ್ಯಾಲಿಡ್ ಆಗಿರುತ್ತದೆ ಎಂದು ಸಚಿವಾಲಯ ಮಾಹಿತಿಯನ್ನು ತಿಳಿಸಿದೆ.
ಹಾಲ್‌ಮಾರ್ಕ್ ಪ್ರಮಾಣೀಕರಣ ಹೇಗಿದೆ :
ಆಭರಣ ಖರೀದಿಸುವ ಜನರು ಅಂದರೆ ಗ್ರಾಹಕರು ಬಿಡ್ ಕೇರ್ (bitcare) ಎಂಬ ಆಪ್‌ನಲ್ಲಿ ವೇರಿಫೈ ಎಚ್‌ಯುಐಡಿ (verify HUID) ಆಯ್ಕೆ ಬಳಸಿಕೊಂಡು ನಿಮ್ಮ ಆಭರಣದ ಎಚ್‌ಯುಐಡಿ ಸಂಖ್ಯೆಯನ್ನು ಸರಿ ಇದೆಯೇ ಎಂದು ನೋಡಬಹುದು. ಈ ಮೊಬೈಲ್ ಅಪ್ಲಿಕೇಷನ್ ಮೂಲಕ ನೀವು ಹಾಲ್‌ಮಾರ್ಕ್ ಸಂಖ್ಯೆಯನ್ನು ನಮೂದಿಸಿದರೆ ಆಭರಣವನ್ನು ಹಾಲ್‌ಮಾರ್ಕ್ (hallmark) ಮಾಡಿದ ಆಭರಣ ವ್ಯಾಪಾರಿ, ಅವರ ನೋಂದಣಿ ಸಂಖ್ಯೆ, ಆಭರಣದ ಶುದ್ಧತೆ, ಆಭರಣದ ಪ್ರಕಾರ ಮತ್ತು ಆಭರಣವನ್ನು ಪರೀಕ್ಷಿಸಿದ ಮತ್ತು ಹಾಲ್‌ಮಾರ್ಕ್ ಮಾಡಿದ ಹಾಲ್‌ಮಾರ್ಕಿಂಗ್ ಕೇಂದ್ರದ ಎಲ್ಲಾ ಮಾಹಿತಿಗಳನ್ನು ತಕ್ಷಣ ನೀವು ಕೂತಲ್ಲಿಯೇ ಪಡೆದುಕೊಳ್ಳಬಹುದು.
ಈ ಮೂಲಕ ನೀವು ನಿಮ್ಮ ಚಿನ್ನವನ್ನು ಖರೀದಿಸುವಾಗ ಆಭರಣದ ಪರಿಶುದ್ಧತೆಯನ್ನು ಖಾತ್ರಿ ಪಡಿಸಿಕೊಳ್ಳಬಹುದು. ಈ ಮೂಲಕ ಮಾಹಿತಿ ತಿಳಿದುಕೊಂಡು ನಿಮ್ಮ ಚಿನ್ನವನ್ನು (gold) ನೀವು ಖರೀದಿಸಬಹುದು.