PPI: PPI ಎಂದರೇನು? PPI ಮತ್ತು UPI ನಡುವಿನ ವ್ಯತ್ಯಾಸವೇನು? ಮಾಹಿತಿ ಇಲ್ಲಿದೆ

Difference between UPI and PPI: ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ₹ 2,000 ಕ್ಕಿಂತ ಹೆಚ್ಚಿನ ಏಕೀಕೃತ ಪಾವತಿ ಇಂಟರ್ಫೇಸ್ (ಯುಪಿಐ) ವಹಿವಾಟುಗಳಿಗೆ ಶೇ 1.1 ಶುಲ್ಕ ವಿಧಿಸಿದೆ. ಈ ಇಂಟರ್‌ಚೇಂಜ್ ಶುಲ್ಕಗಳು ಪ್ರೀಪೇಯ್ಡ್ ಪೇಮೆಂಟ್ ಇನ್‌ಸ್ಟ್ರುಮೆಂಟ್ಸ್ (PPI) ಮೂಲಕ ಮಾಡಿದ ವಹಿವಾಟಿಗೆ ಮಾತ್ರ ಅನ್ವಯಿಸುತ್ತವೆ. ಮತ್ತು ಗ್ರಾಹಕರಿಗೆ ಯಾವುದೇ ಶುಲ್ಕವಿರುವುದಿಲ್ಲ, ಮತ್ತು ಬ್ಯಾಂಕ್ ಖಾತೆ ಆಧಾರಿತ UPI ಪಾವತಿಗಳಿಗೆ ಅಂದ್ರೆ, ಬ್ಯಾಂಕ್ ಅಕೌಂಟ್‌ನಿಂದ ಬ್ಯಾಂಕ್ ಅಕೌಂಟ್‌ಗೆ ಮಾಡಲಾಗುವ ಯುಪಿಐ ಪಾವತಿಗೆ ಯಾವುದೇ ಶುಲ್ಕವಿರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಬ್ಯಾಂಕ್ ಹಾಗೂ ಪಾವತಿ ಸೇವೆಯನ್ನು ನೀಡುವವರಿಗೆ ಆದಾಯವನ್ನು ಹೆಚ್ಚಳ ಮಾಡುವ ನಿಟ್ಟಿನಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ. ಇದೀಗ ಪಿಪಿಐ ಎಂದರೇನು? (What is PPI) ಯುಪಿಐ ಮತ್ತು ಪಿಪಿಐ ನಡುವಿನ ವ್ಯತ್ಯಾಸವೇನು? (Difference between UPI and ppi) ತಿಳಿಯೋಣ.

PPI ಎಂದರೇನು?
PPI ಹಣಕಾಸು ಸೇವೆಗಳು, ಹಣ ರವಾನೆಗಳು, ಪಿಪಿಐ ವ್ಯಾಲೆಟ್‌ನಲ್ಲಿರುವ ಹಣವನ್ನು ಕುಟುಂಬ ಮತ್ತು ಸ್ನೇಹಿತರಿಗೆ
ಕಳುಹಿಸಲು ಸಹಕಾರಿಯಾಗಿದೆ. ಹಣ ಪಾವತಿಸದೆಯೇ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿ ಮಾಡದೆಯೇ ನೀವು ಪಿಪಿಐ ಮೂಲಕ ಹಣವನ್ನು ವರ್ಗಾವಣೆ ಮಾಡಬಹುದು ಅಥವಾ ಪಡೆಯಬಹುದಾಗಿದೆ. ಪ್ರಿಪೇಯ್ಡ್ ಮೊತ್ತವನ್ನು ಪ್ರವೇಶಿಸಲು ಬಳಸಬಹುದಾದ ಯಾವುದೇ ಸಾಧನವು PPI ಆಗಿದೆ.

ಯುಪಿಐ ಹಾಗೂ ಪಿಪಿಐ ನಡುವಿನ ವ್ಯತ್ಯಾಸವೇನು?

ಪಿಪಿಐ ವಹಿವಾಟುಗಳು ಮೊಬೈಲ್ ವ್ಯಾಲೆಟ್‌ಗಳು, ಸ್ಮಾರ್ಟ್ ಕಾರ್ಡ್‌ಗಳು, ಮ್ಯಾಗ್ನೆಟಿಕ್ ಚಿಪ್‌ಗಳು, ವೋಚರ್‌ಗಳು ಮತ್ತು ಇತರ ಆನ್‌ಲೈನ್ ಪಾವತಿ ವಿಧಾನಗಳಂತಹ ಪ್ರಿಪೇಯ್ಡ್ ಪಾವತಿ ವಿಧಾನಗಳನ್ನು ಬಳಸುತ್ತವೆ. ಆದರೆ ಯುಪಿಐ ವಹಿವಾಟುಗಳು ಎರಡು ಬ್ಯಾಂಕ್ ಖಾತೆಗಳ ನಡುವಿನ ವರ್ಗಾವಣೆಯಾಗಿದೆ. ಯುಪಿಐಗಳು ಬಿಲ್ ಪಾವತಿ, ಆನ್‌ಲೈನ್ ಶಾಪಿಂಗ್ (online shopping) ಮತ್ತು ಇತರ ಚಟುವಟಿಕೆಗಳಿಗೆ ಬಳಸಲಾಗುತ್ತದೆ. ಹಾಗೇ ಯುಪಿಐ ಪೀರ್ ಟು ಪೀರ್ ವರ್ಗಾವಣೆಗಳು ಮತ್ತು ವ್ಯಾಪಾರಿ ಪಾವತಿಗಳಿಗೆ ಬಳಸಲಾಗುತ್ತದೆ. ಪಿಪಿಐಗೆ ಹೋಲಿಸಿದರೆ, ಯುಪಿಐ ಕೂಡಾ ಹೆಚ್ಚಿನ ಪಾವತಿ ಮಿತಿಯನ್ನು ಹೊಂದಿದೆ.

NPCI ಪ್ರಕಾರ, ಇತ್ತೀಚಿನ ನಿಯಂತ್ರಕ ನಿಯಮಗಳ ಅಡಿಯಲ್ಲಿ ಪಿಪಿಐ ವ್ಯಾಲೆಟ್‌ಗಳು ಇಂಟರ್‌ಆಪರೇಬಲ್ ಯುಪಿಐ ವ್ಯವಸ್ಥೆಯ ಭಾಗವಾಗಿರಲು ಈಗ ಅನುಮತಿ ನೀಡಲಾಗಿದೆ. “ಇತ್ತೀಚಿನ ಬದಲಾವಣೆಯಿಂದ ಗ್ರಾಹಕರಿಗೆ ಹಾನಿಯಾಗುವುದಿಲ್ಲ. ಯಾಕೆಂದರೆ ಹೆಚ್ಚುವರಿ ವೆಚ್ಚವನ್ನು ವ್ಯಾಪಾರಿ ಭರಿಸಬೇಕಾಗುತ್ತದೆ,” ಎಂದು ಲೋನ್‌ಟ್ಯಾಪ್‌ನ ಬಿಸಿನೆಸ್ ಹೆಡ್ ಅಮೀತ್ ವೆಂಕೇಶ್ವರ್ ಹೇಳಿದ್ದಾರೆ.

Leave A Reply

Your email address will not be published.