Central vista project: ಪ್ರಧಾನಿ ಮೋದಿಯವರಿಂದ ನೂತನ ಸಂಸತ್ತಿನ ವೀಕ್ಷಣೆ, ಹೇಗಿದೆ ಗೊತ್ತಾ ವಿಶ್ವದ ಬೃಹತ್ ಪಾರ್ಲಿಮೆಂಟ್?

Central vista project : ಭಾರತೀಯರ ಹಾಗೂ ಭಾರತದ ಹೆಮ್ಮೆಯ ಪ್ರಧಾನ ಮಂತ್ರಿಗಳ ಕನಸಾದ ನೂತನ ಸಂಸತ್(New Parliment Building) ಕಟ್ಟಡ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು, ಶೀಘ್ರದಲ್ಲೇ ಉದ್ಘಾಟನೆಗೊಳ್ಳುವ ಸಾಧ್ಯತೆ ಇದೆ. ಯಾಕೆಂದರೆ ಈಗಾಗಲೇ ಮುಕ್ಕಾಲು ಭಾಗ ಕಾಮಗಾರಿಗಳು ಮುಗಿದ್ದು ಒಳಗಿನ ಸಣ್ಣ ಪುಟ್ಟ ಕೆಲಸ ಕಾರ್ಯಗಳು ನಡೆಯುತ್ತಿವೆ. ಅಲ್ಲದೆ ಪಿಎಂ ಮೋದಿ(PM Modi) ಕೂಡ ನಿನ್ನೆ ದಿನ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ವೀಕ್ಷಿಸಿ ಹರ್ಷಗೊಂಡಿದ್ದಾರೆ.

ಹೌದು, ಸೆಂಟ್ರಲ್ ವಿಸ್ಟಾ(Central vista project) ಭಾಗವಾಗಿ, ಹೊಸ ಪಾರ್ಲಿಮೆಂಟ್ ಕಟ್ಟಡವನ್ನು ಟಾಟಾ ಪ್ರಾಜೆಕ್ಟ್ಸ್ ಲಿಮಿಟೆಡ್ ನಿರ್ಮಿಸುತ್ತಿದೆ. ನವದೆಹಲಿಯಲ್ಲಿ (New Delhi) ನಿರ್ಮಾಣವಾಗುತ್ತಿರುವ ಹೊಸ ಸಂಸತ್‌ ಭವನಕ್ಕೆ (New Parliament Building) ದಿಢೀರ್‌ ಭೇಟಿ ನೀಡಿದ ಪ್ರಧಾನಿ ಅವರು ಕಾಮಗಾರಿಯನ್ನು ಪರಿಶೀಲಿಸಿದರು. ಅವರು ಒಂದು ಗಂಟೆಗೂ ಅಧಿಕ ಕಾಲ ಕಾಮಗಾರಿ ಪರಿಶೀಲನೆ ನಡೆಸಿದ್ದು, ಹೊಸ ಲೋಕಸಭೆ ಮತ್ತು ರಾಜ್ಯಸಭೆ ಸದನದ ಒಳಾಂಗಣಕ್ಕೆ ತೆರಳಿ ವೀಕ್ಷಣೆ ನಡೆಸಿದರು. ಜೊತೆಗೆ ಸಂಸತ್‌ ಭವನ ನಿರ್ಮಾಣ ಕಾರ್ಯ ಮಾಡುತ್ತಿರುವ ಕಾರ್ಮಿಕರ ಕುಶಲೋಪರಿಯನ್ನು ಪ್ರಧಾನಿ ಮೋದಿ ಅವರು ವಿಚಾರಿಸಿದರು.

ಸೆಂಟ್ರಲ್‌ ವಿಸ್ಟಾ ಯೋಜನೆ ಭಾಗವಾಗಿ ಹೊಸ ಸಂಸತ್‌ ಭವನವನ್ನು ನಿರ್ಮಿಸಲಾಗುತ್ತಿದೆ. ತ್ರಿಕೋನಾಕಾರದ ಸಂಸತ್‌ ಭವನ ಇದಾಗಿದೆ. ಕಟ್ಟಡ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದ್ದು, ಕಟ್ಟಡದ ಒಳಾಂಗಣ ವಿನ್ಯಾಸದ ಕೆಲಸಗಳು ನಡೆಯುತ್ತಿವೆ. ಅಂದಹಾಗೆ 2020ರಲ್ಲಿ ಟಾಟಾ ಪ್ರಾಜೆಕ್ಟ್ಸ್‌ಗೆ ನೂತನ ಸಂಸತ್‌ ಭವನ ನಿರ್ಮಾಣದ ಹೊಣೆ ವಹಿಸಲಾಗಿತ್ತು. ಆ ಸಂದರ್ಭದಲ್ಲಿ 971 ಕೋಟಿ ವೆಚ್ಚಕ್ಕೆ ಅನುಮೋದನೆ ದೊರಕಿತ್ತು. ನಂತರ ಅದರ ಕಚ್ಚಾ ಸಾಮಾಗ್ರಿ ದರ ಹೆಚ್ಚಳದಿಂದಾಗಿ ಯೋಜನಾ ವೆಚ್ಚ ಅಂದಾಜು 1,200 ಕೋಟಿಗೆ ಏರಿಸಲಾಗಿತ್ತು.

ಹೊಸ ಸಂಸತ್ ಭವನವು ಈಗಿರುವ ಸಂಸತ್ ಭವನಕ್ಕಿಂತ ದೊಡ್ಡದಾಗಿ, ಆಕರ್ಷಕವಾಗಿ ಮತ್ತು ಆಧುನಿಕ ಸೌಲಭ್ಯಗಳಿಂದ ಕೂಡಿದೆ. ಈ ಸಂಸತ್ ಕಟ್ಟಡ ದೊಡ್ಡ ಸಭಾಂಗಣಗಳು, ಗ್ರಂಥಾಲಯ, ಸಾಕಷ್ಟು ಪಾರ್ಕಿಂಗ್ ಸ್ಥಳ ಮತ್ತು ಮೀಟಿಂಗ್ ಕೊಠಡಿಗಳನ್ನು ಒಳಗೊಂಡಿದೆ. ಸಭಾಂಗಣಗಳು ಮತ್ತು ಕಚೇರಿಯ ಕೊಠಡಿಗಳು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿವೆ. ಭವನದ ಮೇಲೆ ರಾಷ್ಟ್ರೀಯ ಲಾಂಛನವನ್ನು ಇರಿಸಲಾಗಿದೆ. ಈ ಲಾಂಛನದ ಪ್ರತಿಮೆಯನ್ನು ಕಂಚಿನಿಂದ ಮಾಡಲಾಗಿದೆ. ಅದರ ತೂಕ ಸುಮಾರು 9,500 ಕೆ.ಜಿ ಇದ್ದು, 6.5 ಮೀಟರ್‌ ಎತ್ತರವಿದೆ.

64,500 ಚದರ ಮೀಟರ್‌ನಲ್ಲಿ ನಿರ್ಮಿಸಲಿರುವ ನೂತನ ಸಂಸತ್ ಭವನವನ್ನು ಟಾಟಾ ಯೋಜನೆಯು ನಿರ್ಮಿಸುತ್ತಿದೆ. ಸಂಸತ್ ಭವನದ ನೂತನ ಕಟ್ಟಡದಲ್ಲಿ ದೃಶ್ಯ ಶ್ರವ್ಯ ವ್ಯವಸ್ಥೆ ಹಾಗೂ ಡೇಟಾ ನೆಟ್‌ವರ್ಕ್ ಸೌಲಭ್ಯಕ್ಕಾಗಿ ಸಂಪೂರ್ಣ ಕಾಳಜಿ ವಹಿಸಲಾಗಿದೆ. ಸಂಸತ್ತಿನ ಹೊಸ ಕಟ್ಟಡವು 1,224 ಸಂಸದರ ಸೌಕರ್ಯವನ್ನು ಹೊಂದಿರುತ್ತದೆ. ಅಂದರೆ 1,224 ಸಂಸದರು ಒಂದೇ ಬಾರಿಗೆ ಕುಳಿತುಕೊಳ್ಳಬಹುದು. ಇದರಲ್ಲಿ ಲೋಕಸಭೆಯಲ್ಲಿ 888 ಮತ್ತು ರಾಜ್ಯಸಭೆಯಲ್ಲಿ 384 ಸಂಸದರು ಕುಳಿತುಕೊಳ್ಳಬಹುದು.

Leave A Reply

Your email address will not be published.