Anupam Kher: ಅನುಪಮ್‌ ಖೇರ್‌ ಫೋನ್‌ನಿಂದ ರಿಷಬ್‌ ಶೆಟ್ಟಿಗೆ ‘ಮುಠ್ಠಾಳ’ ಎಂದ ಶಿವಣ್ಣ! ಮುಂದೇನಾಯ್ತು ಗೊತ್ತಾ?

Anupam Kher :  ಕನ್ನಡದ ಘೋಸ್ಟ್(Ghost) ಸಿನಿಮಾ ಮೂಲಕ ಬಾಲಿವುಡ್(Bollywood) ನಟ ಅನುಪಮ್ ಖೇರ್(Anupam Kher) ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟಿದ್ದಾರೆ. ಈ ಪೋಸ್ಟ್ ಚಿತ್ರದ ಪತ್ರಿಕಾಗೋಷ್ಠಿಗಾಗಿ ಸದ್ಯ ಬೆಂಗಳೂರಿಗೆ ಬಂದ ಅನುಪಮ್‌ ಖೇರ್‌ ಅವರ ಫೋನ್‌ ತೆಗೆದುಕೊಂಡ ನಮ್ಮ ಹ್ಯಾಟ್ರಿಕ್ ಹಿರೋ ಶಿವಣ್ಣ(Shivrajkumar) , ‘ಏ ಮುಠ್ಠಾಳ ಎಂತ ಕೆಲಸ ಮಾಡಿದ್ದೀಯಾ? ನೀನು ಇಲ್ಲಿ ಇರಬೇಕಾಗಿತ್ತು, ನನ್ನ ವೆಲ್ ಕಮ್ ಮಾಡೋದು ಯಾರು’ ಎಂದು ರಿಷಬ್ ಶೆಟ್ಟಿಗೆ(Rishab) ಮೆಸೆಜ್‌ ಮಾಡಿದ್ದಾರೆ.

 

ಮೆಸೆಜ್‌ ನೋಡಿದ ರಿಷಬ್‌, ಶಿವಣ್ಣ ಯಾಕೆ ಹೀಗೆ ಗರಂ ಆಗಿದ್ದಾರೆ ಎಂದು ಕೆಲ ಕ್ಷಣ ಹೌಹಾರಿದ್ದಾರೆ. ಹಾಗಿದ್ದರೆ ಶಿವಣ್ಣ ಯಾಕೆ ನಮ್ಮ ಶೆಟ್ರಿಗೆ ಹಾಗೆ ಮೆಸೇಜ್ ಹಾಕಿದ್ದು? ರಿಷಬ್ ಮಾಡಿದ ತಪ್ಪೇನು?

ಸ್ನೇಹಿತರೆ ‘ಕಾಂತಾರ’(Kantara) ಸಿನಿಮಾ ಅದ್ಯಾವ ಮಟ್ಟಿಗೆ ಹಿಟ್‌ ಆಯ್ತು ಅಂದ್ರೆ, ಕನ್ನಡದ ಖ್ಯಾತಿ ಜಗತ್ತಿಗೇ ಹರಡೋದು ಬಿಡಿ, ರಿಷಬ್‌ ಶೆಟ್ಟಿ ಅವರ ಹೆಸರು ಕೂಡ ಭಾರತೀಯರ ಬಾಯಲ್ಲಿ ನಲಿಯಲು ಶುರುವಾಯ್ತು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಹೌದು, ಸೌತ್‌ನಿಂದ ಹಿಡಿದು ಬಾಲಿವುಡ್‌ನ ಬಹುತೇಕರು ‘ಕಾಂತಾರ’ ಚಿತ್ರದ ಬಗ್ಗೆ ಮಾತನಾಡಿದರು. ಸಿನಿಮಾ ನೋಡಿ ಹೌಹಾರಿದರು. ನೇರವಾಗಿ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಕಾಂತಾರದ ಆ ಸಿನಿಮ್ಯಾಟಿಕ್‌ ಅನುಭವವನ್ನು ಹೇಳಿಕೊಂಡರು. ಆ ಪೈಕಿ ಬಾಲಿವುಡ್‌ನ ವರ್ಸಟೈಲ್‌ ನಟ ಅನುಪಮ್‌ ಖೇರ್‌ ಸಹ ರಿಷಬ್‌ ಅವರ ನಿರ್ದೇಶನ ಮತ್ತು ನಟನೆಯನ್ನು ಮೆಚ್ಚಿಕೊಂಡಿದ್ದರು. ಭೇಟಿ ಮಾಡುವ ಬಗ್ಗೆಯೂ ಟ್ವಿಟರ್‌ನಲ್ಲಿ ಚರ್ಚೆ ನಡೆದಿತ್ತು.

ಅದಾದ ಬಳಿಕ ಕಳೆದ ನವೆಂಬರ್‌ನಲ್ಲಿ ಮುಂಬೈನಲ್ಲಿ ಟೈಮ್ಸ್‌ ನೌ ಆಯೋಜಿಸಿದ ಕಾರ್ಯಕ್ರಮವೊಂದರಲ್ಲಿ ಭೇಟಿಯಾಗಿ ವೇದಿಕೆ ಹಂಚಿಕೊಂಡಿದ್ದರು. ಕಾರ್ಯಕ್ರಮ ಮುಗಿದ ಬಳಿಕ ಸಿನಿಮಾ, ನಿರ್ದೇಶನ ಸೇರಿ ಹಲವು ವಿಚಾರಗಳು ಇಬ್ಬರ ನಡುವೆ ವಿನಿಮಯವಾಗಿದ್ದವು. ಬೆಂಗಳೂರಿಗೆ ಬಂದಾಗ ಮತ್ತೆ ಭೇಟಿಯಾಗುವ ಬಗ್ಗೆಯೂ ಅನುಪಮ್‌ ಖೇರ್‌ ರಿಷಬ್‌ಗೆ ಹೇಳಿದ್ದರು.

ಅಂದಹಾಗೆ ಇದೀಗ ‘ಘೋಸ್ಟ್‌’ ಸಿನಿಮಾದ ಶೂಟಿಂಗ್‌ ಸಲುವಾಗಿ ಅನುಪಮ್‌ ಬೆಂಗಳೂರಿನಲ್ಲಿದ್ದಾರೆ. ಬೆಂಗಳೂರಿಗೆ ಬಂದಿಳಿದ ಕೂಡಲೇ ಅನುಪಮ್‌ ಖೇರ್‌, ರಿಷಬ್‌ ಶೆಟ್ಟಿ ಅವರನ್ನು ಭೇಟಿ ಮಾಡುವ ತವಕದಲ್ಲಿದ್ದರು. ಹೀಗಾಗಿ ಅವರಿಗೆ ವಾಟ್ಸಾಪ್‌ನಲ್ಲಿಯೇ ಅವರಿಗೆ “ನಾನು ಬೆಂಗಳೂರಿನಲ್ಲಿದ್ದೇನೆ. ಭೇಟಿ ಆಗುತ್ತೀಯಾ” ಎಂದು ಸಂದೇಶ ಕಳುಹಿಸಿದ್ದರು. ಆಗ ಅದಕ್ಕೆ ಪ್ರತಿಕ್ರಿಯಿಸಿದ ರಿಷಬ್‌ ಶೆಟ್ಟಿ, “ಅಯ್ಯೋ ಸರ್‌ ನಾನು ನನ್ನೂರು ಕುಂದಾಪುರದಲ್ಲಿದ್ದೇನೆ” ಎಂದಿದ್ದಾರೆ.

ಇದರಿಂದ ನಿರಾಸೆಯಾದ ಅನುಪಮ್ ಅವರು ಇದ್ಯಾಕೋ ಸರಿ ಹೋಗುತ್ತಿಲ್ಲ ಎಂದು ಜೊತೆಯಲ್ಲಿದ್ದ ಶಿವಣ್ಣನ ಕೈಗೆ ಫೋನ್‌ ಕೊಟ್ಟು “ಕನ್ನಡದಲ್ಲಿ ಏನಾದರೂ ಬರೆದು ರಿಷಬ್‌ಗೆ ವಾಟ್ಸಾಪ್‌ ಮಾಡಿ” ಎಂದಿದ್ದಾರೆ. ಆಗ ಶಿವಣ್ಣ ಮಾಡಿದ ಮೆಸೆಜ್‌ ನೋಡಿ ರಿಷಬ್‌ ನಿಜಕ್ಕೂ ಶಾಕ್‌ ಆಗಿದ್ದಾರೆ. ಯಾಕೆಂದರೆ ಅನುಪಮ್‌ ಖೇರ್‌ ಅವರ ಫೋನ್‌ ತೆಗೆದುಕೊಂಡ ಶಿವಣ್ಣ, “ಎಂಥ ಮುಠ್ಠಾಳ ಕೆಲಸ! ನೀನು ಇಲ್ಲಿ ಇರಬೇಕಾಗಿತ್ತು, ನನ್ನನ್ನು ವೆಲ್‌ಕಮ್‌ ಮಾಡೋಕೆ!” ಎಂದು ಮೆಸೆಜ್‌ ಮಾಡಿದ್ದಾರೆ. ಮೆಸೆಜ್‌ ನೋಡಿದ ರಿಷಬ್‌ ಕೆಲ ಕ್ಷಣ ಹೌಹಾರಿದ್ದಾರೆ. ಈ ಹಾಸ್ಯ ಪ್ರಸಂಗವನ್ನು ‘ಘೋಸ್ಟ್‌’ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಅನುಪಮ್‌ ಖೇರ್‌ ಹೇಳಿಕೊಂಡು ಎಲ್ಲರೂ ನಗು ತರಿಸಿದ್ದಾರೆ.

ನಟ-ನಿರ್ದೇಶಕ ಎಂ.ಜಿ ಶ್ರೀನಿವಾಸ್‌ ನಿರ್ದೇಶನದ `ಘೋಸ್ಟ್’ (Ghost) ಚಿತ್ರದಲ್ಲಿ ನಟ ಶಿವರಾಜ್ ಕುಮಾರ್ ಜೊತೆ ಹಿಂದಿ ನಟ ಅನುಪಮ್ ಖೇರ್ (Anupam Kher) ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಅನುಪಮ್ ಖೇರ್ ಕಾಣಿಸಿಕೊಳ್ತಿದ್ದಾರೆ. ಶಿವಣ್ಣನ ವಿಂಟೇಜ್‌ ಲುಕ್‌ಗೆ ಅವರ ಫ್ಯಾನ್ಸ್‌ ಫಿದಾ ಆಗಿದ್ದಾರೆ. ಈಗಾಗಲೇ ಚಿತ್ರದ ಬಹುತೇಕ ಚಿತ್ರೀಕರಣ ಕೊನೇ ಹಂತಕ್ಕೆ ಬಂದು ನಿಂತಿದೆ.

ಹೊಸ ಅಪ್‌ಡೇಟ್‌ ಏನೆಂದರೆ ಶ್ರೀನಿ ಅವರು ಈ ಚಿತ್ರ ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ ಎಂದ ಸುಳಿವು ನೀಡಿದ್ದಾರೆ . ಸದ್ಯಕ್ಕೆ ಮೊದಲ ಭಾಗದ ಮೇಲಷ್ಟೇ ಗಮನ ಹರಿಸಿದ್ದಾರೆ. ತಾರಾಗಣದ ವಿಚಾರದಲ್ಲಿ ಅನುಪಮ್‌ ಖೇರ್‌ ಮತ್ತು ಮಲಯಾಳಂ ನಟ ಜಯರಾಮ್ ನಟಿಸಿದ್ದಾರೆ. ಇನ್ನುಳಿದಂತೆ ವಿಜಯ್‌ ಸೇತುಪತಿಯನ್ನೂ ಕರೆತರುವ ಯೋಚನೆ ಸಿನಿಮಾ ತಂಡದ್ದು. ಅರ್ಜುನ್‌ ಜನ್ಯ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ಮಹೇನ್‌ ಸಿಂಹ ಛಾಯಾಗ್ರಹಣ ಮಾಡುತ್ತಿದ್ದಾರೆ. ಸಂದೇಶ್‌ ನಾಗರಾಜ್‌ ಚಿತ್ರ ನಿರ್ಮಿಸುತ್ತಿದ್ದಾರೆ.

ಅಂದಹಾಗೆ ಚಿತ್ರದ ಚಿತ್ರೀಕರಣಕ್ಕಾಗಿಯೇ ಬೆಂಗಳೂರಿಗೆ ಬಂದಿಳಿದ ನಟ ಅನುಪಮ್ ಖೇರ್, ಘೋಸ್ಟ್ ಸಿನಿಮಾಗೋಸ್ಕರ ನಾಲ್ಕು ದಿನದ ಕಾಲ್​ಶೀಟ್ಲ್ಶೀ ಕೊಟ್ಟಿದ್ದಾರೆ. ನಾಲ್ಕು ದಿನಗಳ ಕಾಲ ಅನುಪಮ್ ಖೇರ್ ಚಿತ್ರದ ಚಿತ್ರೀಕರಣದಲ್ಲಿ ಭಾಗಿ ಆಗಲಿದ್ದಾರೆ. ಕಾಶ್ಮೀರಿ ಫೈಲ್ಸ್ (Kashmir Files) ನಟ ಅನುಪಮ್ ಖೇರ್ ಸ್ಯಾಂಡಲ್​​ವುಡ್​​ಗೆ ಬಂದಿರೋದ್ದಕ್ಕೆ ಶಿವಣ್ಣ ಖುಷಿಯಿಂದ ಸ್ವಾಗತಿಸಿದ್ದಾರೆ. ಈ ಕುರಿತು ಟ್ವೀಟ್ ಕೂಡ ಮಾಡಿದ್ದಾರೆ. ಅಲ್ಲದೆ ಮೊದಲ ಚಿತ್ರದಲ್ಲಿಯೇ ಒಂದು ಅದ್ಭುತ ರೋಲ್ ಅನ್ನ ಅನುಪಮ್ ಕೇರ್ ನಿರ್ವಹಿಸುತ್ತಿದ್ದಾರೆ.

ಪತ್ರಿಕಾಗೋಷ್ಠಿ ವೇಳೆ ಅನುಪಮ್ ಖೇರ್ ಅವರು ಶಿವರಾಜ್​ಕುಮಾರ್ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ‘ಶಿವರಾಜ್​ಕುಮಾರ್ ಅವರ ಜೊತೆ ನಟಿಸುತ್ತಿರೋದು ಖುಷಿ ನೀಡುತ್ತಿದೆ. ಅವರದ್ದು ಚಾರ್ಮಿಂಗ್ ಸ್ಮೈಲ್’ ಎಂದು ಅನುಪಮ್ ಖೇರ್ ಹೇಳಿದ್ದಾರೆ.

Leave A Reply

Your email address will not be published.