Ravi Kishan :ನಾಯಕನನ್ನೆ ಮಂಚಕ್ಕೆ ಕರೆದ ಆ ಪ್ರಭಾವಿ ಮಹಿಳೆ, ಕಾಸ್ಟಿಂಗ್ ಕೌಚ್ ಅನುಭವ ಬಿಚ್ಚಿಟ್ಟ ‘ಹೆಬ್ಬುಲಿ’ ನಟ !
Ravi Kishan :ಕಾಸ್ಟಿಂಗ್ ಕೌಚ್ ಅಂದರೆ ಮಂಚದ ಲಂಚದ ಬಗ್ಗೆ ಇದಾಗಲೇ ಹಲವಾರು ನಟ ನಟಿಯರು ಮಾತನಾಡಿದ್ದು, ಇದೀಗ ನಟ, ಸಂಸದ ರವಿ ಕಿಶನ್ ಈ ಬಗ್ಗೆ ಶಾಕಿಂಗ್ ಸತ್ಯ ಬಿಚ್ಚಿಟ್ಟಿದ್ದಾರೆ. ಹುಡುಗಿಯೊಬ್ಬಳು ನಟನನ್ನೆ ಮಂಚಕ್ಕೆ ಕರೆದ ವಿಷ್ಯ ಈಗ ವೈರಲ್ ಸ್ವರೂಪ ಪಡಕೊಳ್ಳುತ್ತಿದೆ.
ಕಾಸ್ಟಿಂಗ್ ಕೌಚ್ (cast couching) ಎನ್ನುವುದು ಕೆಲ ವರ್ಷಗಳಿಂದ ಸಿನಿರಂಗದಲ್ಲಿ ಬಹಳ ಸದ್ದು ಮಾಡಿದ ಶಬ್ದ. 2018 ರಲ್ಲಿ ನಟಿ ಶ್ರುತಿ ಹರಿಹರನ್ ಅವರು ತಮಗೆ ಆಗಿರುವ ಕಹಿ ಘಟನೆಗಳನ್ನು ಹಂಚಿಕೊಂಡ ನಂತರ ‘ ಮೀ ಟೂ ‘ ಎಂಬ ದೊಡ್ಡ ಅಭಿಯಾನವೇ ಶುರುವಾಯಿತು. ಅಲ್ಲಿಂದೀಚೆಗೆ ಹಲವು ನಟಿಯರು ಮುನ್ನೆಲೆಗೆ ಬಂದು ತಮ್ಮ ಮೇಲಾಗಿದ್ದ ಲೈಂಗಿಕ ದೌರ್ಜನ್ಯಗಳ ಕುರಿತು ಒಬ್ಬೊಬ್ಬರಾಗಿ ‘ ನಾನೂ, ನಾನೂ ‘ ಎನ್ನುತ್ತಾ ಬಂದು ಹೇಳಿಕೊಂಡರು. ಅಲ್ಲಿಂದ ಮೀ ಟೂ ಹಾಗೂ ಕಾಸ್ಟಿಂಗ್ ಕೌಚ್ ಎನ್ನುವುದು ದೊಡ್ಡ ಸ್ವರೂಪ ಪಡೆದುಕೊಂಡಿತು.
ನಂತರ ಸಿನಿಮಾ ಕ್ಷೇತ್ರದಲ್ಲಿ ಮಾತ್ರವಲ್ಲದೇ ಇತರ ಕ್ಷೇತ್ರಗಳಲ್ಲಿನ ಮಹಿಳೆಯರೂ ಇದರ ಬಗ್ಗೆ ವಿವರಣೆ ನೀಡತೊಡಗಿದರು. ಹಲವೆಡೆ ಇದರ ಬಗ್ಗೆ ಟೀಕೆ ಟಿಪ್ಪಣೆಗಳೂ ಕೇಳಿ ಬರತೊಡಗಿದವು. ಕಾಸ್ಟಿಂಗ್ ಕೌಚ್ ಅಥವಾ ಮೀ ಟೂ (Me too) ಎಂದಾಕ್ಷಣ ನೆನಪಾಗುವುದು ಮಹಿಳೆಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ಎಂದೇ. ಆದರೆ ಪುರುಷರ ಮೇಲೂ ಇಂಥ ಘಟನೆಗಳು ನಡೆದಿರುವುದು ಅಲ್ಲಲ್ಲಿ ವರದಿಯಾಗಿದೆ. ಇತ್ತೀಚೆಗೆ ಖ್ಯಾತ ನಟ, ‘ಉದರಿಯಾನ್’ ಹಿಂದಿ ಧಾರಾವಾಹಿ ಮೂಲಕ ಹೀರೋ (Hero) ಎನಿಸಿಕೊಂಡಿರುವ ನಟ ಅಂಕಿತ್ ಗುಪ್ತಾ ಈಗ ತಮಗಾಗಿರುವ ಕಹಿ ಅನುಭವಗಳನ್ನು ತೆರೆದಿಟ್ಟಿದ್ದರು. ಹಿಂದಿಯ ‘ಬಿಗ್ ಬಾಸ್ 16′ (Bigg Boss 16) ರ ಸ್ಪರ್ಧಿಯಾಗಿದ್ದ ಅಂಕಿತ್ ಅವರು ಮಹಿಳೆಯೊಬ್ಬರಿಂದ ಆಗಿರುವ ಕಹಿ ಅನುಭವ ಹಂಚಿಕೊಂಡಿದ್ದರು.
ಇದೀಗ ನಾಯಕನಟ ಮತ್ತು ಬಿಜೆಪಿ ಸಂಸದ ರವಿ ಕಿಶನ್ ಅವರು (Ravi Kishan) ತಮ್ಮ ಕಾಸ್ಟಿಂಗ್ ಕೌಚ್ ಅನುಭವವನ್ನು ಶೇರ್ ಮಾಡಿದ್ದಾರೆ. ರವಿಕಿಶನ್ ಪ್ರಮುಖ ಹಿಂದಿ ಮತ್ತು ಭೋಜಪುರಿ ಚಿತ್ರರಂಗದ ನಟ. ಹಲವು ತೆಲುಗು ಚಿತ್ರಗಳಲ್ಲಿ ನಟಿಸಿದ ಇವರು ಕನ್ನಡದಲ್ಲಿ ಕಿಚ್ಚ ಸುದೀಪ್ ಅಭಿನಯದ `ಹೆಬ್ಬುಲಿ’ ಚಿತ್ರದಲ್ಲಿ ಖಳನಾಯಕನಾಗಿ ನಟಿಸಿದ್ದಾರೆ. ಇವರು ಹಾಲಿ ಬಿಜೆಪಿ ಸಂಸದ ಕೂಡ ಹೌದು. ರಜತ್ ಶರ್ಮಾ ಅವರೊಂದಿಗೆ ಆಪ್ ಕಿ ಅದಾಲತ್ ಕಾರ್ಯಕ್ರಮದಲ್ಲಿ ಅವರು ತಮ್ಮ ಮೇಲೆ ಆಗಿರುವ ಕಾಸ್ಟಿಂಗ್ ಕೌಚ್ ಕುರಿತು ಮಾತನಾಡಿದ್ದಾರೆ. ಹೆಂಗಸೊಬ್ಬಳು ತಮ್ಮನ್ನು ಮಂಚಕ್ಕೆ ಕರೆದ ಬಗ್ಗೆ ಮಾತಾಡಿದ್ದಾರೆ. ಆದರೆ ಆಕೆ ಯಾರೆಂದು ಅವರು ಗುಪ್ತವಾಗಿ ಇಟ್ಟಿದ್ದಾರೆ.
“ನಾನು ಆಕೆಯ ಹೆಸರು ಹೇಳುವುದಿಲ್ಲ. ಆದರೆ ಏನಾಗಿತ್ತು ಎನ್ನುವುದನ್ನು ಮಾತ್ರ ಹೇಳುವೆ” ಎನ್ನುವ ಮೂಲಕ ರವಿ ಕಿಶನ್ ಅವರು ಆ ಕಹಿ ಘಟನೆಯನ್ನು ಮೆಲುಕು ಹಾಕಿದ್ದಾರೆ. ಜೊತೆಗೆ ಆ ಪರಿಸ್ಥಿತಿಯಿಂದ ತಾನು ಹೇಗೆ ಪಾರಾಗುವಲ್ಲಿ ಯಶಸ್ವಿಯಾದೆ ಎಂಬುದನ್ನು ತಿಳಿಸಿದ್ದಾರೆ.
” ಆಕೆ ಯಾರೆಂದು ನಾನು ಹೇಳುವುದಿಲ್ಲ, ಹೆಸರು ಹೇಳಲು ಇಷ್ಟಪಡುವುದಿಲ್ಲ. ಆದರೆ ಅಂದು ರಾತ್ರಿ ಕಾಫಿ ಕುಡಿಯೋಣ ಎಂದು ಅವರು ಕರೆದರು. ರಾತ್ರಿ ಭೇಟಿಯಾಗಲು ಹೇಳಿದರು. ಆಕೆ ಕರೆದ ರೀತಿ ನನಗೆ ಯಾಕೋ ಸರಿ ಎನಿಸಲಿಲ್ಲ. ಇದೇನೋ ಅಪಾಯದ ಮುನ್ಸೂಚನೆ ಎಂದು ಸುಳಿವು ಸಿಕ್ಕಿತು ” ಎಂದು ನಟ ರವಿಕಿಶನ್ ಹೇಳಿದ್ದಾರೆ.
” ಈಗ ಆಕೆ ಬಹು ದೊಡ್ಡ ಹೆಸರು ಮಾಡಿದ್ದಾರೆ. ಆದರೆ ಅಂದು ಮಾತ್ರ ರಾತ್ರಿಯಲ್ಲಿ ಒಂದು ಕಪ್ ಕಾಫಿಗಾಗಿ ಬನ್ನಿ ಎಂದು ಕರೆದಿದ್ದನ್ನು ಇಂದಿಗೂ ಮರೆಯಲಾರೆ ” ಎಂದಿದ್ದಾರೆ ಕಿಶನ್. ಜನರು ಹಗಲಿನಲ್ಲಿ ಊಟಕ್ಕೆ ಕರೆಯುವುದನ್ನು ನಾನು ಬಲ್ಲೆ. ರಾತ್ರಿಯ ವೇಳೆಯೂ ಕೆಲವೊಮ್ಮೆ ತಿಂಡಿ, ಪಾನೀಯಗಳಿಗೆ ಆಹ್ವಾನ ನೀಡುತ್ತಾರೆ. ಆದರೆ ಆಕೆ ರಾತ್ರಿಯ ವೇಳೆ ಕಾಫಿ ಕುಡಿಯಲು ಕರೆದದ್ದು, ಅವತ್ತು ಕರೆದ ರೀತಿಯಿಂದ ನನಗೆ ದೊಡ್ಡ ಅನುಮಾನ ಬಂತು. ಈ ಆಹ್ವಾನ ನೀಡುವ ಮೊದಲು ಅವರು, ತಮ್ಮ ಬಗ್ಗೆ ಹಾಗೂ ತಮ್ಮ ತಂದೆಯ ಬಗ್ಗೆ ದೊಡ್ಡ ದೊಡ್ಡ ವಿಷಯಗಳನ್ನು ಹೇಳಿಕೊಂಡಿದ್ದರು. ತಮ್ಮ ತಂದೆ ಎಷ್ಟು ದೊಡ್ಡ ಪ್ರತಿಭಾನ್ವಿತರು ಎನ್ನುವುದನ್ನು ತಿಳಿಸಿದ್ದರು. ನಾನು ಅದರಿಂದ ಇಂಪ್ರೆಸ್ (Impress) ಆದೆ. ಆದರೆ ಕೊನೆಯಲ್ಲಿ ತಿಳಿದದ್ದು ಏನೆಂದರೆ, ಆಕೆಯ ಉದ್ದೇಶವೇ ಬೇರೆ ಇತ್ತು ಎನ್ನುವುದು ಎಂದು ನಟ ರವಿ ಕಿಶನ್ ಹೇಳಿದ್ದಾರೆ. ನಾನು ಕೂಡಲೇ ಆಕೆಯ ಆಹ್ವಾನವನ್ನು ತಿರಸ್ಕರಿಸಿದೆ. ತುಂಬಾ ಒತ್ತಾಯ ಮಾಡಿದರೂ ನಾನು ರಾತ್ರಿಯ ವೇಳೆ ಹೋಗಲಿಲ್ಲ ಎಂದಿದ್ದಾರೆ.
ಇದಾಗಲೇ, ರಣವೀರ್ ಸಿಂಗ್, ಆಯುಷ್ಮಾನ್ ಖುರಾನಾ, ಸ್ವರಾ ಭಾಸ್ಕರ್, ರಿಚಾ ಚಡ್ಡಾ ಮತ್ತು ಇತರ ಹಲವು ಟಾಪ್ ಸ್ಟಾರ್‌ಗಳು ತಮ್ಮ ಕಾಸ್ಟಿಂಗ್ ಕೌಚ್ ಅನುಭವಗಳನ್ನು ಹಂಚಿಕೊಂಡಿದ್ದರು.
ಅಂದಹಾಗೆ ರವಿ ಕಿಶನ್ ಅವರು, ಅವರು ತೇರೆ ನಾಮ್, ತನು ವೆಡ್ಸ್ ಮನು (Tanu Weds Manu), ಫಿರ್ ಹೆರಾ ಫೆರಿ, ಮರ್ಜಾವನ್, ಬಾಟ್ಲಾ ಹೌಸ್ ಮತ್ತು ಇನ್ನೂ ಅನೇಕ ಬಾಲಿವುಡ್ ಚಲನಚಿತ್ರಗಳ ಭಾಗವಾಗಿದ್ದಾರೆ. ರಾಜಕೀಯಕ್ಕೂ ಕಾಲಿಟ್ಟು ಈಗ ಸಂಸದರಾಗಿದ್ದಾರೆ.
ಇದನ್ನೂ ಓದಿ: Amrutha Iyengar: ತಾನು ವರಿಸುವ ಹುಡುಗ ಹೀಗಿರಬೇಕೆಂದ ನಟಿ ಅಮೃತ ಅಯ್ಯಂಗಾರ್, ಹಾಗಿದ್ರೆ ‘ಡಾಲಿ’ ಕಥೆ ಏನು?