March 31 : ಕೆಲವೇ ಕ್ಷಣಗಳಲ್ಲಿ ಅಂತ್ಯವಾಗುತ್ತೆ ಈ ವರ್ಷ, ಕೂಡಲೇ ಈ 5 ಕೆಲಸ ಮಾಡಿಬಿಡಿ, ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ

March 31 : ನಾಳೆಯ ದಿನ ಅಂದರೆ ಮಾರ್ಚ್ 31 ವರ್ಷದ ಕೊನೆಯ ದಿನವಾಗಿದೆ. 2023 -24 ರ ಹೊಸ ಹಣಕಾಸು ವರ್ಷ ಇನ್ನು ಕೆಲವೇ ಗಂಟೆಗಳಲ್ಲಿ ಹೊಸ ಹುಮ್ಮಸಿನಿಂದ ಆರಂಭವಾಗಲಿದೆ. ಈ ಹೊಸ ಹಣಕಾಸು ವರ್ಷ ಪ್ರಾರಂಭವಾಗುವ ಸಂತಸದ ಮೊದಲು ಅಂದರೆ ಮಾರ್ಚ್ 31 (March 31)ರ ಮುಂಚಿತವಾಗಿ ಈ ಐದು ಪ್ರಮುಖ ಕೆಲಸಗಳನ್ನು ಮಾಡಿ ಮುಗಿಸಿ, ಇಲ್ಲದಿದ್ದರೆ ನೀವು ಬಹು ದೊಡ್ಡ ರೀತಿಯ ನಷ್ಟವನ್ನು(lose) ಎದುರಿಸಬೇಕಾದ ಪರಿಸ್ಥಿತಿ ಬರಬಹುದು.

 

ಹೌದು, ಮಾರ್ಚ್ 31ರ ಮೊದಲು ಮಾಡಬೇಕಾದ ಈ ಎಲ್ಲಾ ಕೆಲಸಗಳನ್ನು ನೀವು ಮನೆಯಲ್ಲೇ ಕುಳಿತು ಆನ್‌ಲೈನ್‌ನಲ್ಲಿ (online)ಮಾಡಬಹುದು. ಹಾಗಾದರೆ ಈ 5 ಕೆಲಸಗಳು ಯಾವುದು ಎಂದು ನೋಡಿ.

ನೀವು ಮ್ಯೂಚುವಲ್ ಫಂಡ್‌ಗಳಲ್ಲಿ(mutual fund) ಹಣವನ್ನು ಹೂಡಿಕೆ ಮಾಡಿದ್ದರೆ, ಹಾಗೆಯೇ ನಾಮನಿರ್ದೇಶನ ಪ್ರಕ್ರಿಯೆಯನ್ನು ಪೂರ್ಣಗೊಳಿಸದಿದ್ದರೆ, ತಕ್ಷಣ ಇದನ್ನು ಮಾರ್ಚ್ 31ರ ಮುಂಚಿತವಾಗಿಯೇ ಇದನ್ನು ಮಾಡಿ ಮುಗಿಸಬೇಕು. ಏಕೆಂದರೆ ಮಾರ್ಚ್ 31 ಇದಕ್ಕೆ ಕೊನೆಯ ದಿನಾಂಕವಾಗಿದೆ. ಇದರ ಮೊದಲು ನೀವು ಮಾಡಲು ಸಾಧ್ಯವಾಗದಿದ್ದರೆ ನಿಮ್ಮ ಖಾತೆಯುaccount) ಫ್ರೀಜ್ (freeze)ಆಗುವ ಸಾಧ್ಯತೆ ಇರುತ್ತದೆ. ಮತ್ತೆ ನೀವು ನಿಮ್ಮ ಹಣವನ್ನು ಕಳೆದು ಕೊಳ್ಳುವ ಸಾದ್ಯತೆ ಹೆಚ್ಚು.

ನೀವು ದೊಡ್ಡ ಮಟ್ಟದ ಹೂಡಿಕೆದಾರರಾಗದೆ ಚಿಲ್ಲರೆ ಹೂಡಿಕೆದಾರರಾಗಿದ್ದರೆ, ನಿಮ್ಮ ಟ್ರೇಡಿಂಗ್(trading) ಮತ್ತು ಡಿಮ್ಯಾಟ್ ಖಾತೆಗಳಲ್ಲಿ(demat account) ನಾಮಿನಿಯನ್ನು ತಕ್ಷಣವೇ ನವೀಕರಿಸಿ. ಈ ರೀತಿ ನೀವು ನವೀಕರಿಸದಿದ್ದರೆ, ನೀವು ಷೇರುಗಳ ಖರೀದಿ ಮತ್ತು ಮಾರಾಟವನ್ನು ಮುಂದುವರಿಸಲು ಅಸಾಧ್ಯವಾಗುತ್ತದೆ. ಹಾಗಾಗಿ ಮಾರ್ಚ್ 31ರ ಮೊದಲು ಟ್ರೇಡಿಂಗ್ ಮತ್ತು ಡಿಮ್ಯಾಟ್ ಖಾತೆಗಳಿಗೆ ನಾಮಿನಿ ಮಾಹಿತಿಯನ್ನು ನವೀಕರಿಸಲು ಕೊನೆಯ ದಿನಾಂಕವಾಗಿದೆ.

ಹೆಚ್ಚಿನ ಪ್ರೀಮಿಯಂನೊಂದಿಗೆ(premium) ಎಲ್‌ಐಸಿ ಪಾಲಿಸಿಯ ಮೇಲೆ ಜನರು ತೆರಿಗೆ ವಿನಾಯಿತಿ ಪಡೆಯಲು ಮಾರ್ಚ್ 31 ಕೊನೆಯ ದಿನಾಂಕವಾಗಿದೆ. ಏಪ್ರಿಲ್ 1ರಿಂದ 5 ಲಕ್ಷಕ್ಕಿಂತ ಹೆಚ್ಚು ಪ್ರೀಮಿಯಂ(premium) ಪಾವತಿಸುವವರು ಪಾಲಿಸಿಯ ಮುಕ್ತಾಯದ ಮೇಲೆ ತೆರಿಗೆ ಪ್ರಯೋಜನಗಳನ್ನು ಪಡೆಯುವುದಿಲ್ಲ.

ಉನ್ನತ ಸ್ಥಾನದಲ್ಲಿ ಇರುವವರು ಮತ್ತು ಉದ್ಯಮಿಗಳು ಪ್ರತಿ ಮೂರು ತಿಂಗಳಿಗೊಮ್ಮೆ ಮುಂಗಡ ತೆರಿಗೆಯನ್ನು ಜಮಾ ಮಾಡಬೇಕು. ಹಣಕಾಸು ವರ್ಷದ ಕೊನೆಯ(annual year) ಮುಂಗಡ ತೆರಿಗೆಯನ್ನು(tax) ಮಾರ್ಚ್ 15 ರೊಳಗೆ ಠೇವಣಿ ಮಾಡಲಾಗುತ್ತದೆ. ಕೆಲವು ಕಾರಣಗಳಿಂದ ನೀವು ಮಾರ್ಚ್ 15 ರೊಳಗೆ ಈ ತೆರಿಗೆಯನ್ನು ಠೇವಣಿ ಮಾಡಲು ಅಸಾಧ್ಯವಾಗಿದ್ದರೆ, ಮಾರ್ಚ್ 31 ರೊಳಗೆ ಠೇವಣಿ ಮಾಡಬೇಕು. ನೀಡಿದ ದಿನಾಂಕದ ಮೊದಲು ಠೇವಣಿ ಮಾಡದಿದ್ದರೆ ಬಾಕಿ ಮೊತ್ತದ ಮೇಲೆ ದಂಡವನ್ನು ವಿಧಿಸಬಹುದು.ಇದರಿಂದ ಜನರು ಪರದಾಡುವ ಸಮಸ್ಯೆ ಎದುರಾಗಬಹುದು.

ಮಾರ್ಚ್ 31 ರ ನಂತರ, ಈ ನಾಲ್ಕು FD ಯೋಜನೆಗಳು ಮುಚ್ಚಲ್ಪಡುತ್ತವೆ. ಅ ನಾಲ್ಕು FD ಯೋಜನೆಗಳು ಯಾವುದೆಂದರೆ SBIಯ ಅಮೃತ್ ಕಲಾಶ್ FD, ಪಂಜಾಬ್ ಮತ್ತು ಸಿಂಧ್ ಬ್ಯಾಂಕ್‌ನ PSB 222, ಇಂಡಿಯನ್ ಬ್ಯಾಂಕಿನ ಯೋಜನೆ IND SHAKTI 555 ಗಳಾಗಿದ್ದು, ನೀವು ನಿಶ್ಚಿತ ಠೇವಣಿಗಳಲ್ಲಿ ಹಣವನ್ನು ಹೂಡಿಕೆ ಮಾಡಲು ಹೆಚ್ ಡಿಎಫ್ ಸಿ ಬ್ಯಾಂಕ್‌ನ ಹಿರಿಯ ನಾಗರಿಕರ ಆರೈಕೆ ಯೋಜನೆಯಲ್ಲಿ ಹೂಡಿಕೆ ಮಾಡಬಹುದಾಗಿದೆ. ಇದನ್ನು ಮಾಡಲು ನೀವು ಸಾಧ್ಯವಾಗದಿದ್ದರೆ ನಂತರ ಈ ನಾಲ್ಕು ಎಫ್ ಡಿ ಯೋಜನೆಯಲ್ಲಿ ಮಾಡಲು ಅಸಾಧ್ಯವಾಗುತ್ತದೆ.

Leave A Reply

Your email address will not be published.