Donkey Milk : ಕತ್ತೆ ಹಾಲಿನ ಪ್ರಯೋಜನ ಹಾಗೂ ದುಷ್ಟಪರಿಣಾಮದ ಕಂಪ್ಲೀಟ್‌ ಮಾಹಿತಿ ಇಲ್ಲಿದೆ!

Donkey Milk : ಕತ್ತೆ ಹಾಲು ಕುಡಿಯಲು ಯೋಗ್ಯವಾದ ಅರೋಗ್ಯಕರವಾದ (healthy ) ಹಾಲು ಆಗಿದೆ. ಅದಲ್ಲದೆ ಹಸು, ಆಡು, ಕುರಿ, ಎಮ್ಮೆ ಮತ್ತು ಒಂಟೆಗಳಂತಹ ಇತರ ಡೈರಿ ಪ್ರಾಣಿಗಳ ಹಾಲಿಗೆ ಹೋಲಿಸಿದರೆ, ಕತ್ತೆಯ ಹಾಲು (Donkey Milk) ಮಾನವನ ಎದೆ ಹಾಲನ್ನು ಹೋಲುತ್ತದೆ ಎನ್ನುವುದನ್ನು ತಜ್ಞರು ತಿಳಿಸಿದ್ದಾರೆ.

ಕತ್ತೆ ಹಾಲಿನಲ್ಲಿ ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೇರಳವಾಗಿದ್ದು, ಆಫ್ರಿಕಾ ಮತ್ತು ಭಾರತದ ಕೆಲವು ಭಾಗಗಳಲ್ಲಿ ಇದನ್ನು ಕೆಮ್ಮು ಹಾಗೂ ಇತರ ಸಾಂಕ್ರಮಿಕ ಸೋಂಕುಗಳಿಗೆ ಔಷಧಿಯಾಗಿ ಬಳಸಲಾಗುತ್ತದೆ.

ಇನ್ನು ಕತ್ತೆ ಹಾಲಿನಲ್ಲಿರುವ ವಿಟಮಿನ್‌ಗಳು, ಆಂಟಿ ಆಕ್ಸಿಡೆಂಟ್‌ಗಳು ಮತ್ತು ಅಗತ್ಯ ಕೊಬ್ಬಿನಾಮ್ಲಗಳು ಚರ್ಮದ ಆರೋಗ್ಯವನ್ನು ಹೆಚ್ಚಿಸುತ್ತದೆ. ಚರ್ಮದ ತಡೆಗೋಡೆಯನ್ನು ಪುನರುತ್ಪಾದಿಸಲು ಮತ್ತು ರಕ್ಷಿಸಲು ಅಗತ್ಯವಾದ ಎಲ್ಲಾ ಅಮೈನೋ ಆಮ್ಲಗಳನ್ನು ಒಳಗೊಂಡಿರುವ ಹಾಲಿನ ಪ್ರೋಟೀನ್‌ಗಳಿಂದ ಹೆಚ್ಚಿನ ಪ್ರಯೋಜನಗಳು ಬರುತ್ತವೆ.

ಕತ್ತೆ ಹಾಲು ಉತ್ತಮ ಮಾಯಿಶ್ಚರೈಸರ್ ಮತ್ತು ಹಾಲಿನ ಸ್ನಾನಕ್ಕೆ ಅತ್ಯುತ್ತಮವಾಗಿದೆ. ನಿಮ್ಮ ಚರ್ಮವನ್ನು ಕಾಂತಿಯುತವನ್ನಾಗಿ ಮಾಡುವಲ್ಲಿ ಕತ್ತೆಯ ಹಾಲು ಅತ್ಯಂತ ಉಪಯುಕ್ತವಾಗಿದೆ.

ಬೆಳೆಯುವ ಮಕ್ಕಳಿಗೆ ವರ್ಷಕ್ಕೆ ಎರಡು ಮೂರು ಬಾರಿಯಾದರೂ ಕತ್ತೆ ಹಾಲನ್ನು ಕುಡಿಸುವುದರಿಂದ, ಅವರ ರೋಗನಿರೋಧಕ ಶಕ್ತಿ ಹೆಚ್ಚಾಗುವುದರ ಜೊತೆಗೆ, ಮಕ್ಕಳಲ್ಲಿ ಪದೇ ಪದೇ ಕಂಡುಬರುವ, ಶೀತ ಕೆಮ್ಮು, ಹೊಟ್ಟೆ ಯಲ್ಲಿನ ಸೋಂಕು ಮತ್ತು ಚರ್ಮದ ವ್ಯಾಧಿಯಂತಹ ಸಮಸ್ಯೆಗಳು, ನಿವಾರಣೆಯಾಗುತ್ತದೆ.

ಕತ್ತೆಯ ಹಾಲಿನಲ್ಲಿ ಹಸುವಿನ ಹಾಲಿನಂತೆ, ವಿಟಮಿನ್ ಎ, ವಿಟಮಿನ್ ಬಿ1, ವಿಟಮಿನ್ ಸಿ , ವಿಟಮಿನ್ ಬಿ2 , ವಿಟಮಿನ್ ಬಿ6 , ವಿಟಮಿನ್ ಡಿ ಮತ್ತು ವಿಟಮಿನ್ ಇ ಅಂಶಗಳು, ಯಥೇಚ್ಛ ವಾಗಿ ಕಂಡುಬರುತ್ತದೆ. ಹೀಗಾಗಿ ಚರ್ಮದ ವ್ಯಾಧಿಗಳು ಹಾಗೂ ಕೆಲವೊಮ್ಮೆ ಕಂಡು ಬರುವ ಚರ್ಮದ ಅಲರ್ಜಿ ಸಮಸ್ಯೆಯನ್ನು ನಿವಾರಿಸಲು ಕೂಡ ಸಹಾಯ ಮಾಡುತ್ತದೆ.

ಕತ್ತೆ ಹಾಲಿನಲ್ಲಿ ಆರೋಗ್ಯಕ್ಕೆ ಬೇಕಾಗುವ ಒಳ್ಳೆಯ ಪ್ರಮಾಣದ, ಕೊಬ್ಬಿನ ಅಂಶ ಇದರಲ್ಲಿ ಸಿಗುವುದರ ಜೊತೆಗೆ, ಇದರಲ್ಲಿ ವಿಟಮಿನ್ ಡಿ ಹಾಗೂ ಯಥೇಚ್ಛವಾಗಿ ಪ್ರೋಟಿನ್ ಅಂಶ ಕೂಡ ಇದರಲ್ಲಿ ಕಂಡು ಬರುವು ದರಿಂದ, ದೇಹದ ಮೂಳೆಗಳ ಆರೋಗ್ಯ ವೃದ್ಧಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಅಷ್ಟೇ ಅಲ್ಲದೆ ಇದರಲ್ಲಿ ಲ್ಯಾಕ್ಟೋಸ್ ಅಂಶ ಕೂಡ ಹೇರಳವಾಗಿ ಕಂಡು ಬರುವುದರಿಂದ, ದೇಹದ ಮೂಳೆಗಳು ಸದೃಢವಾಗಿರಲು ನೆರವಾಗುತ್ತದೆ.

ಅಧಿಕ ರಕ್ತದೊತ್ತಡದ ಸಮಸ್ಯೆಯಿಂದ ಬಳಲುತ್ತಿರುವವರು ನಿಯಮಿತವಾಗಿ ಕತ್ತೆ ಹಾಲನ್ನು ಸೇವನೆ ಮಾಡಬೇಕು. ಇದರಿಂದ, ರಕ್ತಸಂಚಾರ ಸರಿಯಾಗಿ ಕಾರ್ಯ ನಿರ್ವಹಿಸುವುದರ ಜೊತೆಗೆ, ರಕ್ತದಒತ್ತಡದ ಸಮಸ್ಯೆ ಕೂಡ ನಿಯಂತ್ರಣಕ್ಕೆ ಬರುತ್ತದೆ. ಇದರಿಂದ ಹೃದಯದ ಆರೋಗ್ಯ ಕೂಡ ಚೆನ್ನಾಗಿರುತ್ತದೆ.

ಕತ್ತೆ ಹಾಲಿನ ಅನಾನುಕೂಲಗಳು :
ಮುಖ್ಯವಾಗಿ ಕತ್ತೆ ಹಾಲಿನ ಒಂದು ದೊಡ್ಡ ಅನಾನುಕೂಲವೆಂದರೆ ಇದು ಸಾಕಷ್ಟು ದುಬಾರಿಯಾಗಿದೆ. ಅಲ್ಲದೆ ಈ ಹಾಲು ಕೆಲವು ದೇಶಗಳಲ್ಲಿ ಮಾತ್ರ ಲಭ್ಯವಿರುವುದರಿಂದ, ಕತ್ತೆ ಹಾಲು ಬೇಕಾದಲ್ಲಿ ಮಾರುಕಟ್ಟೆಯಲ್ಲಿ ಪೌಡರ್​​ ರೂಪದಲ್ಲಿ ಖರೀದಿಸಬಹುದು. ಆದರೆ ಈ ಪೌಡರ್​​ ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಜೊತೆಗೆ ಹಾಲಿನಲ್ಲಿರುವ ಲಾಕ್ಟೋಸ್​​​ ಅಂಶವು ಹೊಟ್ಟೆ ಉಬ್ಬರ, ಆಸಿಡಿಟಿ ಮುಂತಾದ ಆರೋಗ್ಯ ಸಮಸ್ಯೆಗೂ ಕಾರಣವಾಗುತ್ತದೆ. ಆದ್ದರಿಂದ ಕತ್ತೆ ಹಾಲನ್ನು ಆದಷ್ಟು ಪೌಡರ್ ರೂಪದಲ್ಲಿ ಸೇವಿಸುವುದನ್ನು ನಿಯಂತ್ರಿಸುವುದು ಉತ್ತಮ.

ಇದನ್ನೂ ಓದಿ: Plant : ಈ ‘ಗಿಡ’ಗಳನ್ನು ಮನೆಯಲ್ಲಿ ಬೆಳೆಸಿ ಧೂಳು ರಹಿತ ‘ಶುದ್ಧ’ ಗಾಳಿ ಪಡೆದು ಆರೋಗ್ಯವಂತರಾಗಿ!!

 

Leave A Reply

Your email address will not be published.