Rama Navami celebration : ಮಧ್ಯಪ್ರದೇಶದಲ್ಲಿ ರಾಮನವಮಿ ಆಚರಣೆ ವೇಳೆ ಮೆಟ್ಟಿಲುಗಳಿಂದ ಕೆಳಗೆ ಬಿದ್ದ ಭಕ್ತರು..!

Share the Article

Rama Navami celebration : ಮಧ್ಯಪ್ರದೇಶ: ಇಂದು ದೇಶದ್ಯಂತ ಶ್ರೀರಾಮನವಮಿ (Rama Navami celebration) ಆಚರಣೆ ಮನೆ ಮಾಡಿದೆ. ಇದೀಗ ಹಬ್ಬ ಆಚರಣೆ ಮಾಡಿ ಎಲ್ಲ ಖುಷಿ ಪಡುವ ಸಮಯದಲ್ಲಿ ಒಂದು ಆಘಾತಕಾರಿ ವಿಷಯ ತಿಳಿದಬಂದಿದೆ. ಮಧ್ಯಪ್ರದೇಶದ ಇಂದೋರ್ ನಗರದಲ್ಲಿ ಭೀಕರ ಅಪಘಾತ ಸಂಭವಿಸಿದೆ. ಸ್ನೇಹ ನಗರ ಸಮೀಪದ ಪಟೇಲ್ ನಗರದ ಶ್ರೀ ಬೆಲೇಶ್ವರ ಮಹಾದೇವ್ ಜುಲೇಲಾಲ್ ಅಯಾಲಂ ಎಂಬಲ್ಲಿ ಮೆಟ್ಟಿಲಿನ ಮೇಲ್ಛಾವಣಿ ಕುಸಿದು ಸುಮಾರು 25 ಜನರು ಸಾವನ್ನಪ್ಪಿದ್ದಾರೆ.

ಆದರೆ ಈ ವೇಳೆ ಅಗ್ನಿ ಶಾಮಕದಳ, ಆಂಬ್ಯುಲೆನ್ಸ್ ವಾಹನಗಳು ಸಮಯಕ್ಕೆ ಸರಿಯಾಗಿ ಬಂದಿಲ್ಲ ಎಂದು ಸ್ಥಳೀಯರು ಆಕ್ರೋಶವ್ಯಕ್ತಪಡಿಸಿದ್ದಾರೆ. ಬಾವಿಗೆ ಬಿದ್ದ ಕೆಲವು ಜನರನ್ನು ಸ್ಥಳೀಯರು ಹೊರಗೆ ತೆಗೆದಿದ್ದಾರೆ. ಸ್ನೇಹನಗರ ಪ್ರದೇಶದಲ್ಲಿರುವ ಬಾಲೇಶ್ವರ ದೇವಾಲಯದಲ್ಲಿ ಈ ಘಟನೆ ವರದಿಯಾಗಿದೆ. ಘಟನೆಯ ಬಳಿಕ ದೇವಾಲಯದ ಆವರಣದಲ್ಲಿ ಉಂಟಾದ ಅವ್ಯವಸ್ಥೆಯ ಹಾಗೂ ರಕ್ಷಣಾ ಕಾರ್ಯಾಚರಣೆಯ ವೀಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ.

ವರದಿಗಳ ಪ್ರಕಾರ ದೇವಾಲಯದ ಆವರಣದಲ್ಲಿ ಮೆಟ್ಟಿಲು ಬಾವಿಯಿದ್ದು, ಅದಕ್ಕೆ ಮೇಲ್ಛಾವಣಿ ಹಾಕಿ ಮುಚ್ಚಲಾಗಿತ್ತು. ರಾಮನವಮಿಯ ಹಿನ್ನೆಲೆ ದೇವಾಲಯದಲ್ಲಿ ನೂಕುನುಗ್ಗಲು ಉಂಟಾಗಿದ್ದು, ಈ ವೇಳೆ ಮೆಟ್ಟಿಲು ಬಾವಿಯ ಮೇಲ್ಛಾವಣಿ ಕುಸಿದಿದೆ. ಇದರಿಂದ ಅದರ ಮೇಲೆ ನಿಂತಿದ್ದ ಸುಮಾರು 25 ಜನರು ಬಾವಿಯೊಳಗೆ ಬಿದ್ದಿದ್ದಾರೆ. ಸ್ಥಳಕ್ಕೆ ಇಂದೋರ್ ನಲ್ಲಿ ನಡೆದ ಘಟನೆಯಿಂದ ಪ್ರಧಾನಿ ನರೇಂದ್ರ ಮೋದಿಯವರು ಸಂತಾಪ ಸೂಚಿಸಿದ್ದಾರೆ. ಸಿಎಂ ಶಿವರಾಜ್ ಚೌಹಾಣ್ ಅವರೊಂದಿಗೆ ಮಾತನಾಡಿ ಪರಿಸ್ಥಿತಿಯ ಬಗ್ಗೆ ವಿಚಾರಿಸಿದರು. ರಕ್ಷಣಾ ಮತ್ತು ಪರಿಹಾರ ಕಾರ್ಯಗಳನ್ನು ಯಾವುದೇ ಅಡೆತಡೆಯಿಲ್ಲದೆ ತ್ವರಿತವಾಗಿ ಪೂರ್ಣಗೊಳಿಸಲು ರಾಜ್ಯ ಸರ್ಕಾರವನ್ನು ಕೇಳಲಾಗಿದೆ. ಮೃತರ ಕುಟುಂಬಗಳಿಗೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ.

 

Leave A Reply