UPI Update : ಯುಪಿಐ ಪಾವತಿಗೆ ಶುಲ್ಕವಿಲ್ಲ- NPCI
UPI Update : ಭಾರತದ ಎಲ್ಲೆಡೆ ಸ್ಮಾರ್ಟ್ ಫೋನ್ ನಲ್ಲಿಯೇ UPI ಮೂಲಕ ಹಣ ಪಾವತಿ ಮಾಡಲಾಗುತ್ತಿದೆ. UPI ಪಾವತಿಯು ಅತ್ಯಂತ ಸರಳವಾದ ವಿಧಾನವಾಗಿದೆ. ಆದ್ದರಿಂದ ಭಾರತದ ಎಲ್ಲ ವ್ಯಾಪಾರಿಗಳು ಡಿಜಿಟಲ್ ಪಾವತಿಯನ್ನು ಬಳಸುತ್ತಿದ್ದಾರೆ. ಹಾಗೂ ಈ ವಹಿವಾಟನ್ನು ಜನರು ನೆಚ್ಚಿಕೊಂಡು ಹೆಚ್ಚಾಗಿ UPI (UPI Update)ಬಳಸುತ್ತಿದ್ದಾರೆ.
ಇದೀಗ UPI ಬಳಕೆದಾರರಿಗೆ ಸದ್ಯಕ್ಕೆ ಶುಲ್ಕವಿಲ್ಲ. ಸಂಪೂರ್ಣ ಉಚಿತವಾಗಿ ವಹಿವಾಟು ಮಾಡಬಹುದು ಎಂದು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI) ಯುಪಿಐ ತಿಳಿಸಿದ್ದಾರೆ. ಆದರೆ ಈ ಹಿಂದೆ UPI ವಹಿವಾಟಿಗೆ ಹೆಚ್ಚು ಶುಲ್ಕವಿದೆ ಎಂಬ ಮಾಹಿತಿ ಹರಿದಾಡುತ್ತಿತ್ತು. ಸದ್ಯ ಇದೀಗ UPI ವಹಿವಾಟಕ್ಕೆ ಸದ್ಯಕ್ಕೆ ಶುಲ್ಕವಿಲ್ಲ ಎಂದು ಸ್ಪಷ್ಟನೆ ನೀಡಿರುವುದರಿಂದ ಜನರಲ್ಲಿ ಹೆಚ್ಚು ಸಮಾಧಾನವನ್ನು ತಂದಿದೆ.
PPI ವ್ಯಾಲೆಟ್‌ಗಳನ್ನು ಇತ್ತೀಚಿಗೆ UPI ವ್ಯವಸ್ಥೆಯು ಪರಿಸರ ವ್ಯವಸ್ಥೆಗೆ ಸೇರಲು ಅನುಮತಿ ನೀಡಿದೆ. UPI ವರ್ಗಾವಣೆ ಮತ್ತು ಪಾವತಿ ಬಳಕೆದಾರರಿಗೆ ಮತ್ತು ವ್ಯಾಪಾರಿಗಳಿಗೆ ಮಾತ್ರ ಉಚಿತವಾಗಿರುತ್ತದೆ. ಈ ಉಚಿತ ಶುಲ್ಕವು ಇಂಟರ್‌ಚೇಂಜ್ ಪ್ರಿಪೇಯ್ಡ್ ಪಾವತಿ ಸಲಕರಣೆ ವ್ಯಾಪಾರಿ ವಹಿವಾಟುಗಳಿಗೆ ಮಾತ್ರ ಅನ್ವಯಿಸುತ್ತದೆ.
ಯಾವುದೇ ಬ್ಯಾಂಕ್ ಖಾತೆ , PPI ವ್ಯಾಲೆಟ್ಗಳು , RuPay ಕ್ರೆಡಿಟ್ ಕಾರ್ಡ್ ಗಳನ್ನು ಕೂಡ UPI ಸ್ಮಾರ್ಟ್‌ಫೋನ್ ಅಪ್ಲಿಕೇಶನ್‌ಗಳಲ್ಲಿ ಬಳಸಬಹುದಾಗಿದೆ.
UPI ಪಾವತಿಯ ವಹಿವಾಟು ಈಗ ಸದ್ಯಕ್ಕೆ ಶುಲ್ಕವಿಲ್ಲದೆ ಇರಬಹುದು, ಆದರೆ ಮುಂದೆ ಹೆಚ್ಚಿನಶುಲ್ಕ ಇರಬಹುದು ಎಂದು ಜನರಲ್ಲಿ ಆತಂಕ ಮೂಡಿದೆ.