New Tax Rules: ಈ 10 ಆದಾಯ ತೆರಿಗೆ ನಿಯಮಗಳು ಏಪ್ರಿಲ್‌ 1 ರಿಂದ ಬದಲಾಗಲಿವೆ!

Income Tax : ಏಪ್ರಿಲ್​ 1 ರಿಂದ ಹಲವು ಬದಲಾವಣೆಗಳೊಂದಿಗೆ 2023-24 ಹೊಸ ಹಣಕಾಸು ವರ್ಷ ಆರಂಭವಾಗುತ್ತದೆ ,ಅದೇ ರೀತಿ ಹಳೆಯ ಹಣಕಾಸು ವರ್ಷ ಮುಕ್ತಾಯವಾಗುತ್ತ(financial year) ಹೋಗುತ್ತದೆ. ಹೊಸ ತೆರಿಗೆ ಪದ್ಧತಿ (New Tax Slabs) , ಆದಾಯ ತೆರಿಗೆ (Income Tax) ಮಿತಿಯಲ್ಲಿ ಬದಲಾವಣೆ, ಸ್ಲ್ಯಾಬ್‌ ಬದಲಾವಣೆ ಹೀಗೆ ಅನೇಕ ಬದಲಾವಣೆಗಳು ವರ್ಷದಿಂದ ವರ್ಷಕ್ಕೆ ಬದಲಾಗುತ್ತಾ ಹೋಗುತ್ತದೆ.

ಹಾಗಾದರೆ ತೆರಿಗೆ ಪಾವತಿದಾರರ (Tax Payers) ಮೇಲೆ ಹೆಚ್ಚಿನ ಪರಿಣಾಮ ಬೀರುವ 10 ಬದಲಾವಣೆಗಳು(changes) ಯಾವುವು ಎಂದು ತಿಳಿಯೋಣ ಬನ್ನಿ

ಡೀಫಾಲ್ಟ್ ತೆರಿಗೆ ಪದ್ಧತಿ

ಹೊಸ ಆದಾಯ ತೆರಿಗೆ ಪದ್ಧತಿಯು ಏಪ್ರಿಲ್ 2023 ರಿಂದ ಡೀಫಾಲ್ಟ್ ತೆರಿಗೆ (default income tax) ಪದ್ಧತಿಯಾಗಿ ಕಾರ್ಯನಿರ್ವಹಿಸುತ್ತದೆ. ಅದರೆ ಆದಾಯ ತೆರಿಗೆಯನ್ನು ರಿಟರ್ನ್‌(return) ಸಲ್ಲಿಸುವಾಗ ಬಳಕೆದಾರರು ಹಳೆಯ ಅಥವಾ ಹೊಸ, ಇದರಲ್ಲಿಯಾವುದಾದರೂ ಒಂದನ್ನು ಗುರುತಿಸಿಕೊಳ್ಳಬಹುದು. ಬಳಕೆದಾರರು ಎರಡನ್ನೂ ಆಯ್ಕೆ ಮಾಡದಿದ್ದರೆ ಅವರಿಗೆ ಡಿಫಾಲ್ಟ್‌ ಆಗಿ ಹೊಸ ತೆರಿಗೆ ಪದ್ಧತಿ ಅನ್ವಯವಾಗುತ್ತದೆ. ವೇತನದಾರರು ಮತ್ತು ಪಿಂಚಣಿದಾರ ರೂ.15.5 ಲಕ್ಷಗಳನ್ನು ಮೀರಿದ ತೆರಿಗೆಯ( tax) ಆದಾಯಕ್ಕೆ ಹೊಸ ವ್ಯವಸ್ಥೆಯ ಪ್ರಮಾಣಿತ ಕಡಿತವು ₹52,500 ಆಗಿರುತ್ತದೆ.

₹7 ಲಕ್ಷಕ್ಕೆ ತೆರಿಗೆ ರಿಯಾಯಿತಿ ಮಿತಿ ಹೆಚ್ಚಳ

ಕೇಂದ್ರ ಸರ್ಕಾರದ(central government) ಈ ವರ್ಷದ ಬಜೆಟ್ ಮಂಡನೆಯಲ್ಲಿ ಇಲ್ಲಿಯ ತನಕ ಇದ್ದ ತೆರಿಗೆ ರಿಯಾಯಿತಿ ಮಿತಿಯನ್ನು ಹೆಚ್ಚಿಸಿದೆ. ಈ ವರ್ಷದ ಬಜೆಟ್ ಮಂಡನೆ ಮೊದಲು ಐದು ಲಕ್ಷ ರೂ.ವರೆಗೆ ತೆರಿಗೆ (tax)ವಿನಾಯಿತಿ ಮಿತಿ ಇತ್ತು. ಆದರೆ ಈಗ ಆ ಮಿತಿ ಏಳು ಲಕ್ಷ ರೂ.ಗೆ ಹೆಚ್ಚಾಗಿದೆ.ಅಂದರೆ ಇದರರ್ಥ,ವಿನಾಯಿತಿಗಳನ್ನು ಪಡೆಯಲು ₹ 7 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವ ವ್ಯಕ್ತಿಯು ಹಣವನ್ನು ಹೂಡಿಕೆ ಮಾಡಬೇಕಾಗಿಲ್ಲ.

ಸ್ಟ್ಯಾಂಡರ್ಡ್ ಡಿಡಕ್ಷನ್‌

ಸ್ಟ್ಯಾಂಡರ್ಡ್ ಡಿಡಕ್ಷನ್ (standard deduction)ನಲ್ಲಿ ₹ 15.5 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಆದಾಯ ಹೊಂದಿರುವ ಪ್ರತಿಯೊಬ್ಬ ವೇತನದಾರರು ₹ 52,500 ಲಾಭ ಪಡೆಯುತ್ತಾರೆ.ಏಕೆಂದರೆ ಹಳೆಯ ತೆರಿಗೆ ಪದ್ಧತಿಯಲ್ಲಿ ಉದ್ಯೋಗಿಗಳಿಗೆ(workers) ಒದಗಿಸಲಾದ ರೂಪಾಯಿ 50000 ಇರುವುದರಿಂದ ಇದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

ಆದಾಯ ತೆರಿಗೆ ಸ್ಲ್ಯಾಬ್‌ಗಳಲ್ಲಿ ಹೇಗೆ ಬದಲಾವಣೆಗಳು ಇದೆ

ಹೊಸ ಆದಾಯ ತೆರಿಗೆ ಸ್ಲ್ಯಾಬ್‌ ಈ ರೀತಿ ಇದೆ:
0-3 ಲಕ್ಷ – ಶೂನ್ಯ
3-6 ಲಕ್ಷ – 5%
6-9 ಲಕ್ಷ- 10%
9-12 ಲಕ್ಷ – 15%
12-15 ಲಕ್ಷ – 20%
15 ಲಕ್ಷಕ್ಕಿಂತ ಹೆಚ್ಚು- 30%

LTA

2002 ರಿಂದ ₹3 ಲಕ್ಷ ಇದ್ದ LTA ಮಿತಿಯನ್ನು ಈಗ ₹25 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಹಾಗೆಯೇ ಸರಕಾರಿ ಉದ್ಯೋಗಿಗಳಿಗೆ ರಜೆ ಎನ್ ಕ್ಯಾಶ್ ಮೆಂಟ್ ಗೆ ನಿರ್ದಿಷ್ಟ ಮಿತಿಯವರಿಗೆ ವಿನಾಯಿತಿ ಇದೆ.

ಮ್ಯೂಚುಯಲ್ ಫಂಡ್‌ಗಳಲ್ಲಿ ಯಾವುದೇ LTCG ತೆರಿಗೆ ಪ್ರಯೋಜನವಿಲ್ಲ

ಹೂಡಿಕೆದಾರರು ಏಪ್ರಿಲ್ 1ರಿಂದ ಸಾಲ ಮ್ಯೂಚುವಲ್ ಫಂಡ್ (mutual fund)ಗಳಲ್ಲಿ ಹಣವನ್ನು ಹೂಡಿಕೆ ಮಾಡುವುದರಿಂದ ಅಲ್ಪಾವಧಿಯ ಬಂಡವಾಳ ಲಾಭದ ಮೇಲೆ ತೆರಿಗೆ ವಿಧಿಸಲಾಗುತ್ತದೆ. ಈ ಕ್ರಮವು ಹೂಡಿಕೆದಾರರಿಗೆ ಅಂತಹ ಹೂಡಿಕೆಗಳನ್ನು ಜನಪ್ರಿಯಗೊಳಿಸಿದ ದೀರ್ಘಾವಧಿಯ ತೆರಿಗೆ ಪ್ರಯೋಜನಗಳನ್ನು ತೆಗೆದುಹಾಕುತ್ತದೆ.

ಮಾರುಕಟ್ಟೆ ಸಂಬಂಧಿತ ಡಿಬೆಂಚರ್‌

ಎಪ್ರಿಲ್ 1 ರ ನಂತರ, ಎಂಎಲ್‌ಡಿಗಳಲ್ಲಿನ ಹೂಡಿಕೆಯು ಅಲ್ಪಾವಧಿಯ ಬಂಡವಾಳ ಆಸ್ತಿಗಳಾಗಿರುತ್ತದೆ. ಇದರೊಂದಿಗೆ ಮ್ಯೂಚುವಲ್ ಫಂಡ್ ಉದ್ಯಮದ ಮೇಲೆ ಇಂತಹ ಕ್ರಮದ ಪರಿಣಾಮವು ಕೊಂಚಮಟ್ಟಿಗೆ ಋಣಾತ್ಮಕವಾಗಿರುತ್ತದೆ.

ಜೀವ ವಿಮಾ ಪಾಲಿಸಿಗಳು ಯಾವ ರೀತಿ ಇದೆ

ಏಪ್ರಿಲ್ 1, 2023 ರಿಂದ ವಾರ್ಷಿಕ ಪ್ರೀಮಿಯಂ(annual premium) 5 ಲಕ್ಷ ರೂ.ಗಿಂತ ಹೆಚ್ಚಿನ ಜೀವ ವಿಮಾ ಪ್ರೀಮಿಯಂನಿಂದ ಬರುವ ಆದಾಯವು ಹೊಸ ಹಣಕಾಸು ವರ್ಷದಿಂದ ತೆರಿಗೆಗೆ ಒಳಪಡುತ್ತದೆ.

ಹಿರಿಯ ನಾಗರಿಕರಿಗೆ ಪ್ರಯೋಜನಗಳು ಏನಿದೆ?

ಕೇಂದ್ರ ಸರ್ಕಾರದ ಬಜೆಟ್ ಮಂಡನೆಯಲ್ಲಿ ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ ಹಣ ಉಳಿತಾಯ (savings)ಮಾಡುವ ಮಿತಿಯನ್ನು ದ್ವಿಗುಣಗೊಳಿಸುವ ಬಗ್ಗೆ ಹೇಳಲಾಗಿದೆ. ಆ ಪ್ರಕಾರ ಹಿರಿಯ ನಾಗರಿಕರ ಉಳಿತಾಯ ಯೋಜನೆಯ ಗರಿಷ್ಠ ಠೇವಣಿ ಮಿತಿಯನ್ನು ₹15 ಲಕ್ಷದಿಂದ ₹30 ಲಕ್ಷಕ್ಕೆ ಹೆಚ್ಚಿಸಲಾಗುವುದು.ಮಾಸಿಕ ಆದಾಯ ಯೋಜನೆಯ ಗರಿಷ್ಠ ಠೇವಣಿ ಮಿತಿಯನ್ನು ಏಕ ಖಾತೆಗಳಿಗೆ(account) 4.5 ಲಕ್ಷದಿಂದ ₹ 9 ಲಕ್ಷಕ್ಕೆ ಮತ್ತು ಜಂಟಿ ಖಾತೆಗಳಿಗೆ ₹ 7.5 ಲಕ್ಷದಿಂದ ₹ 15 ಲಕ್ಷಕ್ಕೆ ಹೆಚ್ಚಿಸಲಾಗುವುದು.

ಭೌತಿಕ ಚಿನ್ನವನ್ನು ಇ-ಚಿನ್ನದ ರಸೀದಿಯಾಗಿ ಪರಿವರ್ತನೆ

ಕೇಂದ್ರ ಸರ್ಕಾರ 2023 ರ ಬಜೆಟ್ (budget)ನ ಬಗ್ಗೆ ಮಾಹಿತಿಯನ್ನು ತಿಳಿಸುವಾಗ,ಭೌತಿಕ ಚಿನ್ನವನ್ನು ಎಲೆಕ್ಟ್ರಾನಿಕ್ ಚಿನ್ನದ ರಶೀದಿ (ಇಜಿಆರ್) ಆಗಿ ಪರಿವರ್ತಿಸಿದರೆ ಯಾವುದೇ ಬಂಡವಾಳ ಲಾಭದ ತೆರಿಗೆ ಇರುವುದಿಲ್ಲ,ಈ ರೀತಿಯ ನಿಯಮಗಳು ಕ್ಷಣಿಕವಾಗಿ ಅಂದರೆ ಏಪ್ರಿಲ್ 1, 2023 ರಿಂದ ಜಾರಿಗೆ ಬರಲಿದೆ ಎಂದು ತಿಳಿಸಿದೆ.

Leave A Reply

Your email address will not be published.