Chamayavilakku Festival: ಸಾಮೂಹಿಕವಾಗಿ ಹೆಂಗಳೆಯರಾದ ಹುಡುಗರು, ‘ಅವಳಂತೆ’ ಬಟ್ಟೆ ತೊಟ್ಟ ‘ಅವನಿಗೆ’ ಸಿಕ್ತು ಬಹುಮಾನ!

Chamayavilakku Festival :ಭಾರತ ಹಲವಾರು ಆಚರಣೆ- ಸಂಪ್ರದಾಯಗಳನ್ನು ತನ್ನ ಒಡಲೊಳಗೆ ಇಟ್ಟುಕೊಂಡು ಪೋಷಿಸುತ್ತಿರುವ ದೇಶ. ಒಂದೊಂದು ಪ್ರದೇಶಗಳಲ್ಲಿ ಒಂದೊಂದು ಆಚಾರ ವಿಚಾರಗಳನ್ನು ನಾವು ಕಾಣಬಹುದು. ಅಂತೆಯೇ ದೇವತೆಗಳ ನಾಡು ಎಂದು ಕರೆಯುವ ಕೇರಳ(Kerala)ವು ಹಲವು ಹಬ್ಬ-ಹರಿದಿನಗಳಿಗೆ, ಕೆಲವೊಂದು ವಿಶೇಷ ರೀತಿಯ ಸಂಪ್ರದಾಯ, ಆಚರಣೆಗಳಿಗೆ ಭಾರೀ ಫೇಮಸ್ಸು. ಆದರೀಗ ಸದ್ಯ ಕೇರಳದ ಈ ಜಿಲ್ಲೆಯ ದೇವಾಲವೊಂದರಲ್ಲಿ ನಡೆಯುವ ಹಬ್ಬವೊಂದು ತುಸು ಭಿನ್ನವಾಗಿ ಕಂಡು, ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ಚರ್ಚೆ ಆಗ್ತಿದೆ.

ಭಾರತೀಯ ರೈಲ್ವೇ ಅಧಿಕಾರಿ(Indian Railway Officer) ಅನಂತ್ ರೂಪನಗುಡಿ(Anananth Rupanagudi) ಅವರು ಟ್ವಟಿರ್​​ನಲ್ಲಿ ಶೇರ್ ಮಾಡಿಕೊಂಡಿರುವ ಪೋಟೋವೊಂದು ಈ ಚರ್ಚೆ ಹುಟ್ಟುಹಾಕಿದೆ. ಕೇರಳದ ಕೊಲ್ಲಂ(Kollam) ಜಿಲ್ಲೆಯ ಕೊಟ್ಟಂಕುಲಕರದಲ್ಲಿರುವ ದೇವಿ ದೇವಾಲಯದಲ್ಲಿ ಚಮಯವಿಳಕ್ಕು (Chamayavilakku festival ) ಎಂಬ ಉತ್ಸವ ಹಲವು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ಈ ಸಂದರ್ಭದಲ್ಲಿ ಪುರುಷರು ಮಹಿಳೆಯರಂತೆ ವೇಷ ತೊಟ್ಟು ಉತ್ಸವದಲ್ಲಿ (Festival) ಪಾಲ್ಗೊಳ್ಳುತ್ತಾರೆ. ಇದರ ಸಲುವಾಗಿಯೇ ಈ ಚರ್ಚೆ ಹುಟ್ಟುಕೊಂಡಿದ್ದು, ಇಲ್ಲಿನ ಸಂಪ್ರದಾಯ ಕೇಳಿದ್ರೆ, ನೋಡಿದ್ರೆ ಎಲ್ಲರಿಗೂ ಅಚ್ಚರಿ ಅನಿಸುತ್ತದೆ.

ಅಂದಹಾಗೆ ಕೇರಳದ ಕೊಲ್ಲಂ ಜಿಲ್ಲೆಯಲ್ಲಿರುವ ‘ಕೊಟ್ಟಂಕುಳಂಗರ ದೇವಿ’ ದೇವಸ್ಥಾನಕ್ಕೆ ಪುರುಷರ ಪ್ರವೇಶವನ್ನು (Mens entry) ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ದೇವಾಲಯಕ್ಕೆ (Temple) ಮಹಿಳೆಯರು ಮತ್ತು ನಪುಂಸಕರಿಗೆ ಮಾತ್ರ ಪ್ರವೇಶ! ಪುರುಷರು ಇಲ್ಲಿ ಬರಬೇಕೆಂದರೆ ಅವರು ಸ್ತ್ರೀ ವೇಷ ಧರಿಸಿಕೊಳ್ಳಲೇಬೇಕು. ಅದರಲ್ಲೂ ಕೇವಲ ಸ್ತ್ರೀ ಬಟ್ಟೆ ಧರಿಸಿದರೆ ಸಾಲದು. ಅವರಂತೆ ಎಲ್ಲ ರೀತಿಯಲ್ಲಿ ಮೇಕಪ್ ಹಾಕಿಕೊಂಡು ಸಿಂಗಾರ ಮಾಡಿಕೊಳ್ಳಬೇಕು. ಹೀಗಿದ್ದರೆ ಮಾತ್ರ ದೇವಾಲಯ ಪ್ರವೇಶ ಸಾದ್ಯ. ಇದೇ ವಿಚಾರವೀಗ ಚರ್ಚೆಯ ಕೇಂದ್ರವಾಗಿದೆ.

ಕೊಲ್ಲಂ ಜಿಲ್ಲೆಯ ಕೊಟ್ಟಂಕುಲಕರದಲ್ಲಿರುವ ದೇವಿ ದೇವಾಲಯದಲ್ಲಿ ಚಮಯವಿಳಕ್ಕು ಉತ್ಸವ ಹಲವು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ಈ ಸಂದರ್ಭದಲ್ಲಿ ಪುರುಷರು ಮಹಿಳೆಯರಂತೆ ವೇಷ ತೊಟ್ಟು ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಇದೇ ವೇಳೆಯಲ್ಲಿ ಸ್ಪರ್ಧೆ ಏರ್ಪಡಿಸಿ ಆಕರ್ಷಕವಾಗಿ ಸಿಂಗರಿಸಿಕೊಂಡವರಿಗೆ ಬಹುಮಾನವನ್ನು ಸಹ ನೀಡಲಾಗುತ್ತದೆ. ಚಮಯವಿಳಕ್ಕು ಉತ್ಸವವು ತೃತೀಯ ಲಿಂಗಿ ಸಮುದಾಯಕ್ಕೆ ಸೇರಿದವರ ಅತೀ ದೊಡ್ಡ ಹಬ್ಬವಾಗಿ ಖ್ಯಾತಿ ಪಡೆದುಕೊಂಡಿದೆ.

ಉತ್ಸವದಲ್ಲಿ ಪುರುಷರು ತಮ್ಮ ಕೈಯಲ್ಲಿ ದೀಪಗಳನ್ನು ಹಿಡಿದುಕೊಂಡು ಮಹಿಳೆಯರಂತೆ ವೇಷಧರಿಸಿ ಮೆರವಣಿಗೆಯನ್ನು ಹೊರಡುತ್ತಾರೆ. ರಾಜ್ಯದಾದ್ಯಂತ ಪುರುಷರು ಈ ವಿಶಿಷ್ಟ ಆಚರಣೆಯಲ್ಲಿ ಪಾಲ್ಗೊಳ್ಳುತ್ತಾರೆ. ಸ್ತ್ರೀವೇಷಧಾರಿ ಪುರುಷರು ದೀಪ ಹಿಡಿದು ದೇವಾಲಯದ ಸುತ್ತಲೂ ತಮ್ಮ ಭಕ್ತಿಯ ಸಂಕೇತವಾಗಿ ಪ್ರದಕ್ಷಿಣೆ ಬರುತ್ತಾರೆ ಎಂದು ಕೇರಳ ಪ್ರವಾಸೋದ್ಯಮ ಇಲಾಖೆಯ ವೆಬ್‌ಸೈಟ್​ನಲ್ಲಿ ದಾಖಲಾಗಿದೆ.

ಪ್ರತಿ ವರ್ಷ 2 ದಿನಗಳ ಉತ್ಸವ: ಈ ದೇವಾಲಯದಲ್ಲಿ ಪ್ರತಿ ವರ್ಷ ಚಾಮ್ಯವಿಳಕ್ಕು ಉತ್ಸವವನ್ನು ಆಚರಿಸಲಾಗುತ್ತದೆ. ಈ ಹಬ್ಬದಲ್ಲಿ ಹೆಣ್ಣಿನ ವೇಷ ಧರಿಸಿ ದೇವಿಯನ್ನು ಪೂಜಿಸುವುದರಿಂದ ಒಳ್ಳೆಯ ಉದ್ಯೋಗ ದೊರೆಯುತ್ತದೆ ಮತ್ತು ಸುಂದರ ಪತ್ನಿ ದೊರೆಯುತ್ತಾಳೆ ಎಂಬುದು ಸ್ಥಳೀಯ ನಂಬಿಕೆ. ಈ ಕಾರಣಕ್ಕಾಗಿಯೇ ಈ ಹಬ್ಬದಲ್ಲಿ ದೇಶ ವಿದೇಶಗಳಿಂದ ಸಾವಿರಾರು ಪುರುಷರು ಇಲ್ಲಿಗೆ ಬಂದು ಸ್ತ್ರೀಯರ ವೇಷ ಧರಿಸಿ ದೇವಿಯನ್ನು ಪೂಜಿಸುತ್ತಾರೆ.

ಅಂದಹಾಗೆ ಇತ್ತೀಚೆಗೆ ನಡೆದ ಹಬ್ಬದ ವೇಳೆ ಆಯೋಜನೆಯಾಗಿದ್ದ ಸ್ಪರ್ಧೆಯಲ್ಲಿ ಆಕರ್ಷಕವಾಗಿ ಸಿಂಗರಿಸಿಕೊಂಡು ಪ್ರಥಮ ಬಹುಮಾನ ಪಡೆದ ಸ್ಪರ್ಧಿಯ ಫೋಟೋವನ್ನು ಸದ್ಯ ಅನಂತ್ ರೂಪನಗುಡಿ ಅವರು ಹಂಚಿಕೊಂಡಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಒಂದು ಕ್ಷಣ ಆಶ್ಚರ್ಯ ಚಕಿತರಾಗಿದ್ದಾರೆ. ವ್ಯಕ್ತಿ ನಿಜಕ್ಕೂ ಸ್ತ್ರೀಯಂತೆಯೇ ಕಾಣುತ್ತಾರೆ ಎಂದು ಕಮೆಂಟ್ ಮಾಡುತ್ತಿದ್ದಾರೆ.

ದೇವಸ್ಥಾನದಲ್ಲಿದೆ ಮೇಕಪ್ ರೂಮ್: ದೇವಸ್ಥಾನದಲ್ಲಿ ಮೇಕಪ್ ರೂಂ ಕೂಡ ನಿರ್ಮಿಸಲಾಗಿದ್ದು, ಇದರಿಂದ ಪುರುಷರು ಮಹಿಳೆಯರಂತೆ ಸರಿಯಾಗಿ ಡ್ರೆಸ್ ಮಾಡಿಕೊಳ್ಳಬಹುದಾಗಿದೆ. ಪುರುಷರು ತಮ್ಮನ್ನು ತಾವು ಸಿದ್ಧಪಡಿಸಿಕೊಳ್ಳಲು ಸಾಧ್ಯವಾಗದಿದ್ದರೆ, ಅವರು ತಮ್ಮ ಹೆಂಡತಿ, ಸಹೋದರಿ ಅಥವಾ ತಾಯಿಯ ಸಹಾಯವನ್ನು ಸಹ ತೆಗೆದುಕೊಳ್ಳಬಹುದು. ಅವರು ತಮ್ಮೊಂದಿಗೆ ಇತರ ಪುರುಷರ ಸಹಾಯವನ್ನು ಸಹ ತೆಗೆದುಕೊಳ್ಳಬಹುದು. ದೇವಸ್ಥಾನಕ್ಕೆ ಹೋಗಬೇಕಾದರೆ ಬರೀ ಹೆಂಗಸರ ಬಟ್ಟೆ ಹಾಕಿಕೊಂಡರೆ ಸಾಲದು, 16 ಅಲಂಕಾರಗಳನ್ನು ಸಂಪೂರ್ಣವಾಗಿ ಮಾಡಲೇಬೇಕು.

ದೇವಾಲಯದ ಇತಿಹಾಸ: ಸ್ಥಳೀಯ ದಂತಕಥೆಗಳ ಪ್ರಕಾರ, ಇಲ್ಲಿ ವನದುರ್ಗಾ ದೇವಿಯ ವಿಗ್ರಹವು ಬಹಳ ಹಿಂದೆಯೇ ಇಲ್ಲಿ ಕಾಣಿಸಿಕೊಂಡಿತ್ತು. ಆ ಕಾಲದಲ್ಲಿ ಕುರುಬರು ಪ್ರಾಣಿಗಳನ್ನು ಮೇಯಿಸುತ್ತಿದ್ದ ಕಾಡು ಇದಾಗಿತ್ತು. ಅವರು ಈ ವಿಗ್ರಹವನ್ನು ಮೊದಲು ನೋಡಿದರು ಮತ್ತು ಕೆಲವು ಅಜ್ಞಾತ ಪ್ರೇರಣೆಯಿಂದಾಗಿ, ದೇವಿಗೆ ಹೂವುಗಳನ್ನು ಅರ್ಪಿಸಿದರು ಮತ್ತು ಸ್ತ್ರೀಯರ ಉಡುಪುಗಳನ್ನು ಧರಿಸಿ ಪೂಜಿಸಿದರು. ನಂತರ ಈ ಸ್ಥಳವನ್ನು ದೇವಾಲಯವಾಗಿ ಪರಿವರ್ತಿಸಲಾಯಿತು. ಅಂದಿನಿಂದ ಈ ದೇವಾಲಯದಲ್ಲಿ ಪುರುಷರಿಗೆ ಪೂಜೆ ಮಾಡಲು ಅವಕಾಶವಿಲ್ಲ. ಯಾವುದೇ ವಯಸ್ಸಿನ ಪುರುಷರು ದೇವಾಲಯವನ್ನು ಪ್ರವೇಶಿಸಲು ಮಹಿಳೆಯರ ಉಡುಪುಗಳನ್ನು ಧರಿಸಬೇಕು ಮತ್ತು ಅವರಂತೆ ಷೋಡಶ ಅಲಂಕಾರ ಮಾಡಿಕೊಳ್ಳಬೇಲು.

ಇದನ್ನೂ ಓದಿ: Bollywood Actress: ಮದುವೆ ನಂತರ ಸಿನಿರಂಗವನ್ನು ತೊರೆದ ನಟಿಯರಿವರು!!

 

Leave A Reply

Your email address will not be published.