Olle Huduga Pratham: ಏನೇ ಪೋಸ್ಟ್ ಹಾಕ್ಲಿ ‘ಚಾಲೆಂಜಿಂಗ್ ಸ್ಟಾರ್ ಪ್ರಥಮ್’ ಅಂತೀರಾ! ಪ್ಲೀಸ್ ಇದೆಲ್ಲಾ ಬಿಟ್ಬಿಡಿ: ಅಭಿಮಾನಿಗಳಿಗೆ ಮಣಿದ ‘ಒಳ್ಳೆ ಹುಡುಗ’

Olle Huduga Pratham : ಹೊಸಪೇಟೆ(Hospete)ಯಲ್ಲಿ ನಟ ದರ್ಶನ್(Darshan) ಮೇಲೆ ಚಪ್ಪಲಿ ಎಸೆದಂತಹ ಅಘಾತಕಾರಿ ಘಟನೆ ನಡೆದಂದು ದರ್ಶನ್ ಹಾಗೂ ಪುನೀತ್ ರಾಜಕುಮಾರ್(Punith Rajkumar) ಅಭಿಮಾನಿಗಳ ನಡುವೆ ಹೊತ್ತಿಕೊಂಡ ಕಿಡಿ ಇನ್ನೂ ಆರಿಲ್ಲ. ಇದು ಬೂದಿ ಮುಚ್ಚಿದ ಕೆಂಡದಂತಿರುವಾಗಲೇ ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ವೈಲೆಂಟ್ ಆಗಿರೋ ಒಳ್ಳೆ ಹುಡುಗ ಪ್ರಥಮ್(Pratham) ಈ ವಿವಾದದ ಸುಳಿಯಲ್ಲಿ ಸಿಕ್ಕಿಕೊಂಡಿದ್ದಾರೆ. ಪ್ರಥಮ್ (Olle Huduga Pratham) ನೀಡಿದ ಅದೊಂದು ಹೇಳಿಕೆ ಅವರಿಗೇ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಅಷ್ಟಕ್ಕೂ ಪ್ರಥಮ್ ಹೇಳಿದ್ದಾದರೂ ಏನು ಗೊತ್ತಾ?

 

ಡಿ ಬಾಸ್ ದರ್ಶನ್ ಅಭಿಮಾನಿಗಳು ಹಾಗೂ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ನಡುವೆ ಕೆಲ ತಿಂಗಳಿಂದ ಹಣಾಹಣಿ ನಡೆಯುತ್ತಲೇ ಇದೆ. ಅದರಲ್ಲಿಯೂ ಹೊಸಪೇಟೆಯಲ್ಲಿ ನಡೆದ ಘಟನೆ ಬಳಿಕ ಪುನೀತ್ ರಾಜ್‌ಕುಮಾರ್ ಹಾಗೂ ದರ್ಶನ್ ಅಭಿಮಾನಿಗಳ ನಡುವಿನ ಕಿತ್ತಾಟ ಮಿತಿ ಮೀರಿದೆ. ಈ ಹೊಸಪೇಟೆ ವಿವಾದವಾದಾಗ ಬಹುತೇಕ ಎಲ್ಲಾ ಸೆಲೆಬ್ರಿಟಿಗಳು ನಾನು ದರ್ಶನ್ ಪರ ನಿಲ್ಲುತ್ತೇನೆ ಎಂದಿದ್ದರು. ಆದರೆ ಇದನ್ನು ಖಂಡಿಸಿದ್ದ ಪ್ರಥಮ್, ಪುನೀತ್ ರಾಜ್‌ಕುಮಾರ್ ಏನು ಮಾಡಿದ್ರು? ನಾನು ಅವರ ಪರನೂ ನಿಲ್ಲುತ್ತೇನೆ ಎಂದು ಹೇಳಿಕೆ ನೀಡಿದ್ದರು.

ಪ್ರಥಮ್ ಈ ರೀತಿ ಹೇಳಿಕೆ ನೀಡಿದ ಬೆನ್ನಲ್ಲೇ ದರ್ಶನ್ ಅಭಿಮಾನಿಗಳ ಪಾಲಿಗೆ ವಿಲನ್ ಆದರು. ಆಗಿನಿಂದ ಪ್ರಥಮ್ ದರ್ಶನ್ ವಿರೋಧಿ ಎಂದೇ ಬಿಂಬಿಸಲಾಯಿತು. ಪ್ರಥಮ್ ನಟನೆಯ ‘ನಟ ಭಯಂಕರ'(Natabhayanakara) ಸಿನಿಮಾ ಬಿಡುಗಡೆಯಾದಾಗ ಆ ಚಿತ್ರ ಕ್ರಾಂತಿ ಚಿತ್ರಕ್ಕಿಂತ ಮೊದಲ ದಿನ ಹೆಚ್ಚು ಗಳಿಕೆ ಮಾಡಿದೆ ಎಂದು ಸುದ್ದಿ ಹಬ್ಬಿಸಿ ರಿಯಲ್ ಬಾಕ್ಸ್ ಆಫೀಸ್ ಸುಲ್ತಾನ್ ಪ್ರಥಮ್ ಎಂದು ಕಾಮೆಂಟ್ ಮಾಡಲಾಗಿತ್ತು. ಹೀಗೆ ಪ್ರಥಮ್ ನೀಡಿದ ಹೇಳಿಕೆಗಳಿಂದ ದರ್ಶನ್ ಅಭಿಮಾನಿಗಳ ವಿರೋಧವನ್ನು ಕಟ್ಟಿಕೊಂಡರು.

ಇದು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದನ್ನು ಕಂಡ ಪ್ರಥಮ್ ಇದಕ್ಕೆ ಪೂರ್ಣ ವಿರಾಮ ಇಡಲೇಬೇಕೆಂದು ತೀರ್ಮಾನಿಸಿ ಇದೀಗ ವಿಡಿಯೊವೊಂದನ್ನು ಮಾಡಿ ಅದರಲ್ಲಿ ಸ್ಪಷ್ಟನೆ ನೀಡುವ ಯತ್ನ ಮಾಡಿದ್ದಾರೆ. ಪ್ರಥಮ್ ಈ ವಿಡಿಯೊ ಲಿಂಕ್ ಅನ್ನು ತಮ್ಮ ಟ್ವಟರ್ ಖಾತೆಯಲ್ಲಿ ಹಂಚಿಕೊಂಡು ‘ದರ್ಶನ್ ಅಭಿಮಾನಿಗಳಿಗೆ ವಿಶೇಷ ಸಂದೇಶ. ನಾನು ದರ್ಶನ್ ಸರ್ ವಿರೋಧಿಯಲ್ಲ, ನಾನು ಯಾವತ್ತೂ ದರ್ಶನ್ ಸರ್‌ನ ವಿರೋಧಿಸಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಬಂದಾಗಲೂ ಇದರ ಬಗ್ಗೆ ಮಾತಾಡಿರಲಿಲ್ಲ. ಆದರೆ ಎಲ್ಲೋ ತಪ್ಪು ಮಾಹಿತಿ ಹೋಗ್ತಾ ಇದೆ ಅಂದಾಗ ಸ್ಟಷ್ಟನೆ ಮುಖ್ಯವಾಗುತ್ತೆ” ಎಂದು ಬರೆದುಕೊಂಡಿದ್ದಾರೆ. ಸ್ವಾರಸ್ಯ ಸಿನಿ ಕ್ರಿಯೇಷನ್ ಎಂಬ ಯುಟ್ಯೂಬ್ ಚಾನೆಲ್‌ನಲ್ಲಿ ಈ ವಿಡಿಯೊವನ್ನು ಅಪ್‌ಲೋಡ್ ಮಾಡಲಾಗಿದೆ.

ಇನ್ನು ಇತ್ತೀಚಿನ ದಿನಗಳಲ್ಲಿ ನಾನು ದರ್ಶನ್ ಸರ್ ವಿರೋಧಿ ಎಂದೇ ಬಿಂಬಿಸಲಾಗುತ್ತಿದೆ, ಯಾವುದೇ ಪೋಸ್ಟ್ ಹಂಚಿಕೊಂಡರೂ ಸಹ ಅಲ್ಲಿ ಕೆಲವರು ಬಂದು ಚಾಲೆಂಜಿಂಗ್ ಸ್ಟಾರ್ ಪ್ರಥಮ್ ಎಂದು ಕಾಮೆಂಟ್ ಹಾಕುತ್ತಾರೆ, ಇನ್ನೂ ಕೆಲವರು ಬಂದು ಪವರ್ ಸ್ಟಾರ್ ಪ್ರಥಮ್ ಎಂದು ಕಾಮೆಂಟ್ ಹಾಕುತ್ತಾರೆ. ಇದು ಸಣ್ಣ ಬುದ್ಧಿ ಈ ತರಹ ಮಾಡಬೇಡಿ, ನಿಜವಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೇ, ಪವರ್ ಸ್ಟಾರ್ ಎಂದರೆ ಪುನೀತ್ ಅವರೇ ಎಂದಿದ್ದಾರೆ.

ಇದೆಲ್ಲಾ ಶುರುವಾಗಿದ್ದು ನಾನು ಆ ದಿನ ಅಪ್ಪು ಅವರ ಫ್ಯಾಮಿಲಿಗೂ ಬೆಂಬಲ ನೀಡಿ ಎಂದು ನೀಡಿದ ಹೇಳಿಕೆಯಿಂದ. ಅವತ್ತು ನಾನು ದರ್ಶನ್ ರೀತಿಯೇ ಅಪ್ಪು ಫ್ಯಾಮಿಲಿಗೆ ಬೆಂಬಲ ನೀಡಿ ಎಂದಿದ್ದೆ, ಆದರೆ ಇದನ್ನು ತಿರುಚಿ ನನ್ನನ್ನು ದರ್ಶನ್ ವಿರೋಧಿ ಎಂದು ಬಿಂಬಿಸಿದ್ರು ಎಂದು ವಿಷಾದ ವ್ಯಕ್ತಪಡಿಸಿರುವ ಅವರು ನನಗೆ ದರ್ಶನ್ ಸರ್ ಮೇಲೆ ಪ್ರೀತಿಯಿದೆ, ನಾನು ವಿರೋಧಿ ಅಲ್ಲ, ಇಂತಹ ಕೆಲಸಗಳನ್ನು ದಯವಿಟ್ಟು ಇಲ್ಲಿಗೆ ನಿಲ್ಲಿಸಿಬಿಡಿ ಎಂದು ಮನವಿಮಾಡಿಕೊಂಡಿದ್ದಾರೆ.

ಅಂದಹಾಗೆ ಈ ವಿವಾದದ ಮೂಲವನ್ನು ಅರಸಿ ನೋಡುವುದಾದರೆ ದರ್ಶನ್ ಅವರು ‘ಪುನೀತ್ ತೀರಿದ ನಂತರ ಜನರು ತೋರಿಸಿದ ಪ್ರೀತಿಯನ್ನು ನಾನು ಈಗಲೇ ನೋಡಿದ್ದೇನೆ’ ಎಂದು ನೀಡಿದ ಹೇಳಿಕೆಯಿಂದ ಕೋಪಕ್ಕೊಳಗಾಗಿದ್ದ ಹೊಸಪೇಟೆ ಅಪ್ಪು ಫ್ಯಾನ್ಸ್ ದರ್ಶನ್ ಕ್ರಾಂತಿ ಚಿತ್ರವನ್ನು ನಮ್ಮ ಊರಿನಲ್ಲಿ ಬ್ಯಾನ್ ಮಾಡ್ತೇವೆ ಎಂದಿದ್ದರು. ಇನ್ನು ಕ್ರಾಂತಿ ಚಿತ್ರತಂಡ ಅದೇ ಊರಿನಲ್ಲಿ ತಮ್ಮ ಚಿತ್ರದ ಹಾಡೊಂದನ್ನು ಬಿಡುಗಡೆ ಮಾಡಲು ತೀರ್ಮಾನಿಸಿತ್ತು. ಈ ಸಂದರ್ಭದಲ್ಲಿ ಬ್ಯಾನ್ ಮಾಡ್ತೀವಿ ಎಂದ ಊರಿನಲ್ಲಿಯೇ ಹಾಡು ಬಿಡುಗಡೆಯಾಗ್ತಿದೆ ಎಂದು ದರ್ಶನ್ ಫ್ಯಾನ್ಸ್ ಕಾಲೆಳೆದಿದ್ದರು. ಇದಕ್ಕೆ ಪ್ರತ್ಯುತ್ತರವಾಗಿ ಪುನೀತ್ ಫ್ಯಾನ್ಸ್ ಬ್ಯಾನರ್ ಹರಿದು, ಸ್ಟೇಜ್ ಮೇಲೆ ಪುನೀತ್ ಕಟ್ಔಟ್ ಎತ್ತಿಹಿಡಿದು ಕುಣಿದಿದ್ದರು.

ಕಾಂತ್ರಿ ಚಿತ್ರದ ತಂಡ ಹೇಳಿದಂತೆ ಸಿನಿಮಾದ ಎರಡನೇ ಹಾಡು ಬೊಂಬೆ ಬೊಂಬೆಯನ್ನು ಬಳ್ಳಾರಿಯ ಹೊಸಪೇಟೆ ಪಟ್ಟಣದ ಡ್ಯಾಮ್ ರಸ್ತೆಯಲ್ಲಿರುವ ವಾಲ್ಮೀಕಿ ವೃತ್ತದಲ್ಲಿ ಬಿಡುಗಡೆ ಮಾಡಲು ಮುಂದಾಯಿತು. ಈ ಕಾರ್ಯಕ್ರಮಕ್ಕೂ ಮುನ್ನ ಹೊಸಪೇಟೆಯಲ್ಲಿ ಪುನೀತ್ ರಾಜಕುಮಾರ್ ಹಾಗೂ ದರ್ಶನ್ ಅಭಿಮಾನಿಗಳ ನಡುವೆ ವಾರ್ ಶುರುವಾಗಿತ್ತು. ಈ ವೇಳೆ ದರ್ಶನ್ ಅಪ್ಪು ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ನಂತರ ಕಾರ್ಯಕ್ರಮ ಶುರುವಾಯಿತು. ಈ ವೇಳೆ ಯಾರೋ ಕಿಡಿಗೇಡಿ ದರ್ಶನ್ ಮೇಲೆ ಚಪ್ಪಲಿ ಎಸೆದಿದ್ದಾನೆ. ಈ ಘಟನೆ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಚಪ್ಪಲಿ ಎಸೆದದ್ದು ಪುನೀತ್ ಅಭಿಮಾನಿಯೇ ಎಂದರೆ, ಅಪ್ಪು ಫ್ಯಾನ್ಸ್ ಇಂತಹ ಕೆಲಸ ನಮ್ಮಿಂದಾಗಿಲ್ಲ ಎಂದರು. ಈ ಕುರಿತು ಪ್ರತಿಕ್ರಿಯಿಸಿದ ಹಲವರು ತನಿಖೆ ನಡೆಯುತ್ತಿದೆ. ಹೀಗೆ ಅಂದು ನಡೆದ ಉತ್ತರ ಸಿಗದ ಈ ಘಟನೆಯಿಂದ ಇಂದಿಗೂ ಪುನೀತ್ ಹಾಗೂ ದರ್ಶನ್ ಫ್ಯಾನ್ಸ್ ಕಿತ್ತಾಡುತ್ತಲೇ ಇದ್ದಾರೆ

ಹೊಸಪೇಟೆ ವಿವಾದವಾದಾಗ ಬಹುತೇಕ ಎಲ್ಲಾ ಸೆಲೆಬ್ರಿಟಿಗಳು ನಾನು ದರ್ಶನ್ ಪರ ನಿಲ್ಲುತ್ತೇನೆ ಎಂದಿದ್ದರು. ಇದನ್ನು ಖಂಡಿಸಿದ್ದ ಪ್ರಥಮ್ ಅವರು ಪುನೀತ್ ರಾಜ್‌ಕುಮಾರ್ ಏನು ಮಾಡಿದ್ರು, ಅವರ ಪರನೂ ನಿಲ್ಲುತ್ತೇನೆ ಎಂದು ಹೇಳಿ ಎಂದು ಹೇಳಿಕೆ ನೀಡಿದ್ದರು. ಅವರು ಈ ಹೇಳಿಕೆ ನೀಡಿದ ದಿನದಿಂದ ಈ ವಿವಾದದ ಸುಳಿಯಲ್ಲಿ ಸಿಕ್ಕಿಕೊಂಡಿದ್ದಾರೆ.

ಇದನ್ನೂ ಓದಿ: Priyanka Chopra: ಪ್ರಿಯಾಂಕಾ ಚೋಪ್ರಾ ಬಾಲಿವುಡ್ ಬಿಡೋಕೆ ಈ ಖ್ಯಾತ ನಿರ್ದೇಶಕನೇ ಕಾರಣಂತೆ!

Leave A Reply

Your email address will not be published.