WHO ನಿಂದ ಮತ್ತೊಂದು ಡೋಸ್‌ ಬಗ್ಗೆ ಎಚ್ಚರಿಕೆಯ ಸಂದೇಶ!

Booster Dose : ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ ಕೊರೋನಾ ರೋಗಿಗಳ ಸಂಖ್ಯೆ ಮತ್ತೆ ಹೆಚ್ಚಾಗಿದ್ದು, ಹೀಗಾಗಿ ವೈರಸ್ ವಿರುದ್ಧ ರಕ್ಷಣೆ ಪಡೆಯೋದು ಬಹಳ ಮುಖ್ಯ. ಅಲ್ಲದೆ ಬೂಸ್ಟರ್ ಡೋಸ್ ( Booster Dose) ಪಡೆದ 12 ತಿಂಗಳ ನಂತರ ಮತ್ತೊಂದು ಡೋಸ್ ಅಗತ್ಯ ಎನ್ನಲಾಗಿದೆ.

 

ಇದೀಗ ದೇಶಾದ್ಯಂತ ಕೊರೊನಾ ಸೋಂಕು ಮತ್ತೊಮ್ಮೆ ವೇಗ ಪಡೆದುಕೊಂಡಿದ್ದು, ಕಳೆದ ಕೆಲವು ದಿನಗಳಿಂದ ಕೊರೊನಾ ಸೋಂಕಿತರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಲೇ ಇದೆ. ಇದೀಗ ಮತ್ತೊಮ್ಮೆ ಭಾರತದಲ್ಲಿ ಕೊರೊನಾ ವೈರಸ್ ಭಯ ಶುರುವಾಗಿದೆ.

ಕಳೆದ 24 ಗಂಟೆಗಳಲ್ಲಿ ಕೊರೊನಾ ಸೋಂಕಿನ ದಾಖಲೆ ಪ್ರಕರಣಗಳು ವರದಿಯಾಗಿದ್ದು,
ದೇಶಾದ್ಯಂತ ಒಟ್ಟು 2,151 ಕೊರೊನಾ (Corona) ಪ್ರಕರಣಗಳು ದಾಖಲಾಗಿವೆ ಎಂದು ಆರೋಗ್ಯ (Health) ಸಚಿವಾಲಯ ತಿಳಿಸಿದೆ. ಕಳೆದ ಐದು ತಿಂಗಳಿಗೆ ಹೋಲಿಸಿದರೆ ಕಳೆದ 24 ಗಂಟೆಗಳಲ್ಲಿ ಗರಿಷ್ಠ ಸಂಖ್ಯೆಯ ಕರೋನಾ ಪ್ರಕರಣಗಳು ವರದಿಯಾಗಿವೆ. ಇನ್ನು ಈ ಅವಧಿಯಲ್ಲಿ 1,222 ಜನರು ಕರೋನಾದಿಂದ ಚೇತರಿಸಿಕೊಂಡಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.

ಕೋವಿಡ್‌ನ ಸಕ್ರಿಯ ಪ್ರಕರಣಗಳು ಈಗ 11,903 ಕ್ಕೆ ಏರಿಕೆಯಾಗಿದೆ. ಇದಕ್ಕೂ ಮುನ್ನ, ನಿನ್ನೆ ಅಂದರೆ ಮಂಗಳವಾರ ದೇಶದಲ್ಲಿ 1,573 ಕೊರೊನಾ ರೋಗಿಗಳು ಪತ್ತೆಯಾಗಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ವಯಸ್ಸಾದವರು ಕೊರೋನಾ ಸೋಂಕಿಗೆ ಒಳಗಾಗುವ ಅಪಾಯ ಹೆಚ್ಚು. ಅದೇ ರೀತಿ ಚಿಕ್ಕ ಮಕ್ಕಳಿಗೂ ಸೋಂಕು ತಗಲುವ ಸಾಧ್ಯತೆ ಹೆಚ್ಚು. ಹಿರಿಯರು ಮತ್ತು ಮಕ್ಕಳಿಗೆ ಬೂಸ್ಟರ್ ಡೋಸ್ ನೀಡಿದ 6 ಮತ್ತು 12 ತಿಂಗಳ ನಂತರ ಹೆಚ್ಚುವರಿ ಲಸಿಕೆಗಳನ್ನು ನೀಡಬೇಕು ಎಂದು ಡಬ್ಲ್ಯುಹೆಚ್ ಒ ಮಾಹಿತಿ ನೀಡಿದೆ .
ಆರೋಗ್ಯವಂತ ಮಕ್ಕಳು ಮತ್ತು ಹದಿಹರೆಯದವರು ಸೋಂಕಿಗೆ ಒಳಗಾಗುವ ಸಾಧ್ಯತೆ ಕಡಿಮೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ಮಾಡಿದೆ. ಸೋಂಕಿಗೆ ಒಳಗಾಗುವ ಅಪಾಯ ಹೆಚ್ಚಿರುವ ಜನರಿಗೆ ಮೊದಲು ಲಸಿಕೆ ನೀಡಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಕರೋನಾ ಲಸಿಕೆಯ ಆರಂಭಿಕ ಎರಡು ಡೋಸ್ ಮತ್ತು ಒಂದು ಬೂಸ್ಟರ್ ಡೋಸ್ ನಂತರ, ಕೊರೊನಾ ಅಪಾಯದಲ್ಲಿರುವ ಜನರಿಗೆ ಹೆಚ್ಚುವರಿ ಬೂಸ್ಟರ್ ಲಸಿಕೆಗಳನ್ನು ನಿಯಮಿತವಾಗಿ ಅನ್ವಯಿಸುವ ಅಗತ್ಯವಿಲ್ಲ ಎಂದು ಹೇಳಿದೆ. ವಿಶ್ವ ಆರೋಗ್ಯ ಸಂಸ್ಥೆ ಈ ಸೂಚನೆ ನಂತರ ಜನರಿಗೆ ಮತ್ತೆ ಆತಂಕ ಶುರುವಾಗಿದೆ. ಈಗಾಗಲೇ ಮೂರು ಡೋಸ್ ಪಡೆದ ಜನರು ನಾಲ್ಕನೇ ಡೋಸ್ ಪಡೆಯುವ ಅಗತ್ಯವಿದೆಯೇ ಎಂದು ಪ್ರಶ್ನೆ ಮಾಡಲು ಶುರುಮಾಡಿದ್ದಾರೆ.

ಕೊರೊನಾ ತೀವ್ರತೆಯನ್ನು ಕಡಿಮೆ ಮಾಡಲು ಬೂಸ್ಟರ್ ಡೋಸ್ ಸಾಕು. ಆದ್ರೆ ಬೂಸ್ಟರ್ ಡೋಸ್ ಪಡೆಯುವ ಅಗತ್ಯವಿದೆ ಎಂದು ಅನೇಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಬೂಸ್ಟರ್ ಡೋಸ್, ಕೊರೊನಾ ಸೋಂಕಿನ ಅಪಾಯವನ್ನು ಕಡಿಮೆ ಮಾಡುತ್ತದೆ. ಆದರೆ ಲಸಿಕೆ ಪಡೆಯದ ಜನರಿಗೆ ಸೋಂಕು ಬೇಗ ತಗಲುವುದಲ್ಲದೆ ಅವರಿಂದ ಸೋಂಕು ಹರಡುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.

ಒಟ್ಟಿನಲ್ಲಿ ದೇಶಾದ್ಯಂತ ಕೊರೊನಾ ಸೋಂಕು ಮತ್ತೊಮ್ಮೆ ವೇಗ ಪಡೆದುಕೊಂಡಿದ್ದು, ಕಳೆದ ಕೆಲವು ದಿನಗಳಿಂದ ಕೊರೊನಾ ಸೋಂಕಿತರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಲೇ ಇದೆ.

Leave A Reply

Your email address will not be published.