Husband and Wife Relationship: ಗಂಡನ ಖುಷಿಗಾಗಿ ಬೇರೆಯವಳ ಜೊತೆ ಮಲಗೋಕೆ ಟೈಮ್ ಫಿಕ್ಸ್ ಮಾಡಿದ್ಲು ಈ ಹೆಂಡ್ತಿ!

Husband and Wife Relationship : ದಾಂಪತ್ಯ ಜೀವನ ಎಂಬುದು ಒಂದು ಗಂಡು ಹೆಣ್ಣು ಪರಸ್ಪರ ಪ್ರೀತಿ ಪ್ರೇಮಗಳನ್ನು ಹಂಚಿಕೊಂಡು, ಒಬ್ಬರನ್ನೊಬ್ಬರು ಅರ್ಥೈಸಿಕೊಂಡು ಬದುಕು ಸಾಗಿಸುವ ಸುಂದರ ಹಾಗೂ ಪವಿತ್ರ ಸಂಬಂಧ. ಪ್ರೀತಿ ಇದೆ ಅಂದ್ರೆ ಅಲ್ಲಿ ಜಲಸಿ ಅಥವಾ ಪೊಸೆಸಿವ್‌ನೆಸ್ ಕೂಡ ಇರುತ್ತದೆ. ಹೆಂಡತಿಯಾದವಳಿಗೆ ತನ್ನ ಗಂಡ ನನ್ನನ್ನೇ ಪ್ರೀತಿಸಬೇಕು, ನನ್ನೊಂದಿಗೇ ಇರಬೇಕು, ಪರ ಸ್ತ್ರೀಯರೊಂದಿಗೆ ಹೆಚ್ಚು ಸಲಿಗೆಯಿಂದ ಇರಕೂಡದು ಹೀಗೆ ಇತ್ಯಾದಿ. ಆದ್ರೆ ಇಲ್ಲೊಬ್ಬ ಹೆಂಡ್ತಿ ಮಾತ್ರ ಇದಕ್ಕೆ ಅಪವಾದ ಎಂಬಂತಿದ್ದಾಳೆ. ಗಂಡ ಬೇರೆ ಮಹಿಳೆ ಜೊತೆ (Husband and Wife Relationship) ಮಲಗಿದ್ರೂ ನನ್ಗೇನು ಪ್ಲಾಬ್ಲಂ ಇಲ್ಲ ಅಂತಿದ್ದಾಳೆ.

 

ಹೌದು, ಅಮೇರಿಕಾದ ಮೋನಿಕಾ ಹಲ್ಟ್ ಎಂಬ ಮಹಿಳೆ (Women)ಗಂಡ ಖುಷಿಯಾಗಿರ್ಲಿ ಅಂತ ಆತನನ್ನು ಮತ್ತೊಬ್ಬಳ ಜೊತೆ ಮಲಗೋಕೆ ಕಳಿಸ್ತಾಳೆ! ತನ್ನ ಗಂಡ ಯಾರ ಜೊತೆ ಸುತ್ತಾಡಿದ್ರೂ, ಮಲಗಿದ್ರೂ ನನಗೇನು ಸಮಸ್ಯೆಯಾಗಲ್ಲ. ತನ್ನ ಪ್ರಿಯತಮನ ಅಗತ್ಯತೆಗಳು ಏನೇ ಇರಲಿ ಅವನನ್ನು ಸಂತೋಷಪಡಿಸುವುದು ತನ್ನ ಕರ್ತವ್ಯ ಎಂದು ನಂಬುವ ಈಕೆ ತಾನು ಅಡುಗೆ ಮನೆ (Kitchen), ಸ್ವಚ್ಛಗೊಳಿಸುವ ಮತ್ತು ಮನೆಕೆಲಸಗಳನ್ನು ನೋಡಿಕೊಳ್ಳುವಾಗ, ತನ್ನ ಪತಿಯನ್ನು ಇತರ ಮಹಿಳೆಯರೊಂದಿಗೆ ಸಮಯ ಕಳೆಯಲು ಕಳುಹಿಸುತ್ತಾಳೆ.

ನ್ಯೂಯಾರ್ಕ್ ಪೋಸ್ಟ್‌ ಜೊತೆ ಮಾತನಾಡಿದ ಮೋನಿಕಾ, ತನ್ನ ಗುರಿ ಎಂದರೆ ಪತಿ (Husband) ಜಾನ್ ಅನ್ನು ಸಂತೋಷಪಡಿಸುವುದು ಅನ್ನುತ್ತಾಳೆ. ತನ್ನ ಪತಿಗೆ ಇತರ ಮಹಿಳೆಯರೊಂದಿಗೆ ಮಲಗಲು ಅವಕಾಶ ನೀಡುವುದು ಅವರ ಸಂಬಂಧಕ್ಕೆ ಹೆಚ್ಚು ಪ್ರಯೋಜನವನ್ನು ನೀಡುತ್ತದೆ ಎಂದು ಹೇಳಿದ್ದಾರೆ. ತನ್ನ ಪತಿಗೆ ಕೆಲಸದ ನಡುವೆ ಬಿಡುವಿನ ವೇಳೆಯನ್ನು ಹುಡುಕುವುದು ಕಷ್ಟಕರವಾದ ಕಾರಣ ತಾನು ಇದನ್ನು ಮಾಡಲು ಪ್ರಾರಂಭಿಸಿದೆ ಎಂದು ಹೇಳಿಕೊಂಡಿದ್ದಾಳೆ.

ಅಂದಹಾಗೆ ಹಲ್ಟ್ ಮನೆಯಲ್ಲಿ ಎಲ್ಲಾ ಕೆಲಸಗಳನ್ನು ಮುಗಿಸಿದ ನಂತರ ಮಾತ್ರ ಜಾನ್ ಮನೆಗೆ ಹಿಂದಿರುಗುತ್ತಾನೆ. ಮನೆಗೆಲಸದ ಸಮಯದಲ್ಲಿ ಇತರ ಮಹಿಳೆಯ ಜೊತೆ ಸಮಯ ಕಳೆಯಲು ಆತನಿಗೆ ಸಂಪೂರ್ಣ ಸ್ವಾತಂತ್ರ್ಯ ಇರುವುದಲ್ಲದೆ, ತಾನು ಮನೆಯಲ್ಲಿ ಏನು ಧರಿಸಬೇಕು, ಏನನ್ನು ಮಾಡಬೇಕು ಎಂಬುದನ್ನು ಆತನೇ ನಿರ್ಧರಿಸುತ್ತಾನೆ. ಈ ಬಗ್ಗೆ ನನಗೆ ಖುಷಿಯಿದೆ ಎಂದು ಆಕೆ ಹೇಳಿಕೊಂಡಿದ್ದಾಳೆ.

ಜಾನ್, ಮನೆಯಲ್ಲಿ ನಾನು ಚೆನ್ನಾಗಿ ಅಡುಗೆ ಮಾಡೋದನ್ನು ಇಷ್ಟಪಡುತ್ತಾನೆ. ಮತ್ತು ನಾನು ಮನೆಯಲ್ಲಿದ್ದಾಗ ಮೇಕಪ್ ಮಾಡೋದನ್ನು ಅವನು ಇಷ್ಟಪಡುವುದಿಲ್ಲ. ಗಂಡಂದಿರು ಕೆಲವು ಮಹಿಳೆಯರು ಏನು ಮಾಡಬೇಕೆಂದು ಅಥವಾ ಧರಿಸಬೇಕೆಂದು ಹೇಳುತ್ತಾರೆ. ಹೀಗಾಗಿ ಅವನು ಸೂಚನೆಗಳನ್ನು ಕೊಟ್ಟಾಗ ನನಗೆ ಖುಷಿಯಾಗುತ್ತದೆ .ಅವನು ಬೇರೆ ಮಹಿಳೆಯೊಂದಿಗೆ ಸಮಯ ಕಳೆದು ಖುಷಿ ಖುಷಿಯಾಗಿ ಮನೆಗೆ ಮರಳುತ್ತಾನೆ. ಇದು ನನ್ನಲ್ಲಿ ಸಹ ಖುಷಿ ಮೂಡಿಸುತ್ತದೆ ಎಂದು ಮೋನಿಕಾ ಹಲ್ಟ್ ಹೇಳಿದ್ದಾರೆ.

Leave A Reply

Your email address will not be published.