Delhi : ವಯಸ್ಸಿನ ಕುರಿತು ಸುಳ್ಳು ದಾಖಲೆ ನೀಡೀದ ಸಂತ್ರಸ್ಥ ಬಾಲಕಿ! ಅತ್ಯಾಚಾರ ಶಿಕ್ಷೆಯನ್ನೇ ಅಮಾನತುಗೊಳಿಸಿದ ದೆಹಲಿ ಹೈಕೋರ್ಟ್!

Delhi :ಅತ್ಯಾಚಾರ ಮಹಾಪಾಪ. ಇದು ಎಲ್ಲರಿಗೂ ಗೊತ್ತಿದೆ. ಇಂತಹ ನೀಚ ಕೃತ್ಯ ಎಸಗಿದವರ ಮೇಲೆ ಕಾನೂನು ಕಠಿಣ ಕ್ರಮ ಕೈಗೊಳ್ಳುತ್ತದೆ. ಕೆಲವೊಮ್ಮೆ ಮರಣ ದಂಡನೆಯೂ ಆಗಬಹುದು. ವಿದೇಶಗಳಲ್ಲಂತೂ ಕಂಬಗಳಿಗೆ ಕಟ್ಟಿ ಹೊಡೆದು ಸಾಯಿಸುವ ಬಗ್ಗೆಯೂ ನಾವು ಕೇಳಿದ್ದೇವೆ. ಆದರೆ ಇಲ್ಲೊಂದೆಡೆ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಶಿಕ್ಷೆಗೆ ಗುರಿಯಾಗಿದ್ದ ಆರೋಪಿಯ ಶಿಕ್ಷೆಯನ್ನು ಹೈಕೋರ್ಟ್ ಅಮಾನತುಗೊಳಿಸಿದೆ.

 

ಹೌದು, ದೆಹಲಿ (Delhi) ಹೈಕೋರ್ಟ್ ಇಂತಹ ಒಂದು ತೀರ್ಪು ನೀಡಿದ್ದಕ್ಕೆ ಸಾಕ್ಷಿಯಾಗಿದೆ. ಘನ ನ್ಯಾಯಾಲಯವು ಇಂತಹ ಒಂದು ತೀರ್ಪನ್ನು ನೀಡಲು ಕಾರಣವೇನೆಂದು ನೋಡಿದಾಗ ಈ ಪ್ರಕರಣದಲ್ಲಿ ಬಾಲಕಿ ತನ್ನ ವಯಸ್ಸಿನ ಬಗ್ಗೆ ಸುಳ್ಳು ಹೇಳಿದ್ದು ಸಾಭೀತಾಗಿದೆ. ನಿಜ, ಬಾಲಕಿ ತನ್ನನ್ನು ತಾನು ಮೇಜರ್ ಎಂದು ತಪ್ಪಾಗಿ ಬಿಂಬಿಸುವ ಮೂಲಕ ಸ್ವಯಂಪ್ರೇರಣೆಯಿಂದ ವ್ಯಕ್ತಿಯೊಂದಿಗೆ ಹೋಗಿದ್ದಳು ಎಂದು ತಿಳಿದುಬಂದಿದೆ.

ಅಂದಹಾಗೆ ಆರೋಪಿ ಎಂದು ಬಿಂಬಿತವಾಗಿರುವ ಪುರುಷನೊಂದಿಗೆ ಈ ಹುಡುಗಿಯು ಓಡಿಹೋದಾಗ ಆಕೆಗೆ 17 ವರ್ಷ ಮತ್ತು ನಾಲ್ಕು ತಿಂಗಳ ವಯಸ್ಸಾಗಿತ್ತು. ನಂತರ ಆಕೆ ಪ್ರಾಸಿಕ್ಯೂಟ್ರಿಕ್ಸ್ ನ ಆರೈಕೆಯಲ್ಲಿದ್ದು ಆ ವೇಳೆ ಆಕೆ ಮಗುವನ್ನು ಕೂಡ ಹೆತ್ತಿದ್ದಾಳೆ. ಈ ವೇಳೆ ಬಾಲಕಿಯು ಓಡಿ ಹೋದ ಹುಡುಗನ ಮೇಲೆ ಕೇಸ್ ದಾಖಲಿಸಲಾಗಿದೆ. ಅವನನ್ನು ಆರೋಪಿ ಎಂದು ಪರಿಗಣಿಸಿದ ಕೋರ್ಟ್ 12 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.

ಈ ಸಮಯದಲ್ಲಿ ತನ್ನ ಅಪರಾಧ ಮತ್ತು 12 ವರ್ಷಗಳ ಜೈಲು ಶಿಕ್ಷೆಯನ್ನು ಪ್ರಶ್ನಿಸಿ ಶಿಕ್ಷೆಗೊಳಗಾದ ವ್ಯಕ್ತಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ಹೈಕೋರ್ಟ್ ನಡೆಸಿದೆ. ಈ ವೇಳೆ ಆ ಬಾಲಕಿಯೇ ಸ್ವ ಇಚ್ಛೆಯಿಂದ ಪುರುಷನೊಂದಿಗೆ ಓಡಿಹೋಗಿರುವುದು ಸಾಭೀತಾಗಿದೆ. ಅಲ್ಲದೆ ಮ್ಯಾಜಿಸ್ಟ್ರೇಟ್ ಮುಂದೆ ದಾಖಲಾದ ತನ್ನ ಹೇಳಿಕೆಯಲ್ಲಿ ಬಾಲಕಿ ತನ್ನ ಸ್ವಂತ ಇಚ್ಛೆಯಿಂದ ವ್ಯಕ್ತಿಯೊಂದಿಗೆ ಓಡಿಹೋದೆ ಮತ್ತು ತಾನು ಅವನನ್ನು ಪ್ರೀತಿಸುತ್ತಿದ್ದೇನೆ. ಅವನಿಗೆ ಜಾಮೀನಿನ ಮೇಲೆ ಬಿಡುಗಡೆಯಾಗಲಿ ಎಂದು ಪ್ರಾರ್ಥಿಸೋದಾಗಿ ತಿಳಿಸಿದ್ದಾಳೆ.

ಈ ಪ್ರಕರಣವನ್ನು ಪರಿಶೀಲನೆ ಮಾಡಿದ ಘನ ನ್ಯಾಯಾಲಯವು, ಪುರುಷನದ್ದು ಯಾವುದೇ ತಪ್ಪಿಲ್ಲ ಎಂದು ಆತನ ಶಿಕ್ಷೆಯನ್ನು ರದ್ಧು ಮಾಡಿದೆ. ಅಲ್ಲದೆ ಕೆಲವು ಷರತ್ತುಗಳ ಮೇಲೆ ಶಿಕ್ಷೆಯನ್ನು ಅಮಾನತುಗೊಳಿಸಿದೆ. ಅದರಲ್ಲಿ ಹುಡುಗಿ ಅನುಮತಿಸುವವರೆಗೆ ಪುರುಷನು ಹುಡುಗಿ ಮತ್ತು ಅಪ್ರಾಪ್ತ ಮಗುವಿನ ಜೀವನದಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಕೂಡ ತಿಳಿಸಿದೆ.

Leave A Reply

Your email address will not be published.