Shikhar Dhawan: ‘ಆ ವಿಚಾರ ತಿಳಿದ ಕೂಡಲೇ ನಾನು HIV ಟೆಸ್ಟ್ ಮಾಡಿಸಿಕೊಂಡೆ’! ಜೀವನದ ಅತಿದೊಡ್ಡ ಗುಟ್ಟನ್ನು ರಟ್ಟು ಮಾಡಿದ ಶಿಖರ್ ಧವನ್!
Shikhar Dhawan : ಟೀಮ್ ಇಂಡಿಯಾದ(Team India) ಖ್ಯಾತ ಆಟಗಾರರಲ್ಲಿ ಶಿಖರ್ ಧವನ್(Shikhar Dhawan) ಕೂಡ ಒಬ್ಬರು. ಸದ್ಯ ಅವರು ‘ಗಬ್ಬರ್ ಸಿಂಗ್’ ಎಂದೇ ಖ್ಯಾತರಾಗಿದ್ದಾರೆ. ಅಂದಹಾಗೆ ಭಾರತ ಕ್ರಿಕೆಟ್ ನ ಪೂರ್ವ ಆಟಗಾರರಾದ ಸೌರವ್ ಗಂಗೂಲಿ(Sourav Ganguli), ಗೌತಮ್ ಗಂಭೀರ್(Gowthan Gambir) ಬಳಿಕ ದೇಶ ಕಂಡಂತಹ ಅತ್ಯಂತ ಯಶಸ್ವಿ ಎಡಗೈ ಆರಂಭಿಕ ಬ್ಯಾಟರ್ ಎನಿಸಿಕೊಂಡಿದ್ದಾರೆ ಧವನ್ ಅವರು. ಆದರೀಗ ಶಿಖರ್ ಧವನ್, ತಮ್ಮ ಜೀವನದಲ್ಲಿ ನಡೆದ ಅತ್ಯಂತ ಮಹತ್ವದ ಘಟನೆಯೊಂದನ್ನು ಬಾಯ್ಬಿಟ್ಟಿದ್ದು ತೀವ್ರ ಕುತೂಹಲ ಹಾಗೂ ಆತಂಕ ಎರಡಕ್ಕೂ ಕಾರಣವಾಗಿದೆ.
ಹೌದು, ಸದ್ಯದಲ್ಲೇ ನಡೆಯಲಿರುವ ಚೊಚ್ಚಲ ಐಪಿಎಲ್(IPL) ಟೂರ್ನಿ ಆರಂಭಕ್ಕೂ ಮುನ್ನ ಹಿಂದಿ ನ್ಯೂಸ್ ಚಾನೆಲ್ ‘ಆಜ್ ತಕ್’ ವಾಹಿನಿಯಲ್ಲಿ ನಡೆದ ‘ಸೀದಿ ಬಾತ್’ (ನೇರ ಮಾತು) ಎಂಬ ಕಾರ್ಯಕ್ರಮದಲ್ಲಿ ಶಿಖರ್ ಧವನ್ ಅವರು ತಾವು HIV ಟೆಸ್ಟ್ ಮಾಡಿಸಿಕೊಂಡಿದ್ದರ ಕುರಿತಾದ ಇಂಟ್ರೆಸ್ಟಿಂಗ್ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ. ಆದರೆ ಈ ಪರೀಕ್ಷೆಯ ಹಿಂದೆ ಒಂದು ಕುತೂಹಲಕಾರಿಯಾದ ಹಿನ್ನಲೆ ಅಡಗಿದೆ.
ಟೀಂ ಇಂಡಿಯಾ ಅನುಭವಿ ಆರಂಭಿಕ ಬ್ಯಾಟರ್ ಶಿಖರ್ ಧವನ್, ಓರ್ವ ಟ್ಯಾಟೂ(Tattoo) ಪ್ರಿಯ ವ್ಯಕ್ತಿ ಎನ್ನುವುದು ಎಲ್ಲರಿಗೂ ಗೊತ್ತೆ ಇದೆ. ಶಿಖರ್ ಧವನ್ ಮೈಮೇಲೆ ಮಾತ್ರವಲ್ಲ, ಮುಂಗೈ ಹಾಗೂ ಕಾಲಿನ ಕೆಲ ಭಾಗದಲ್ಲೂ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಅಂದಹಾಗೆ ತಾವು ಹದಿಹರೆಯದಲ್ಲಿದ್ದಾಗ ಈ ಟ್ಯಾಟೂನಿಂದ ಮಾಡಿಕೊಂಡ ಎಡವಟ್ಟಿನಿಂದಾಗಿ HIV ಟೆಸ್ಟ್ ಮಾಡಿಕೊಂಡಿದ್ದಾಗಿ ಧವನ್ ತಿಳಿಸಿದ್ದಾರೆ. ಅದೃಷ್ಟವಶಾತ್ ಆ ಟೆಸ್ಟ್‌ನಲ್ಲಿ ನೆಗೆಟಿವ್ ಬಂದಿತು ಎಂದು ಆ ದಿನಗಳನ್ನು ಶಿಖರ್ ಧವನ್ ಮೆಲುಕು ಹಾಕಿದ್ದಾರೆ.
ನಾನು 14-15 ವರ್ಷದವನಿದ್ದಾಗ ಒಮ್ಮೆ ಮನಾಲಿಗೆ ಹೋಗಿದ್ದೆ. ನಮ್ಮ ಕುಟುಂಬದವರಿಗೆ ಗೊತ್ತಾಗದಂತೆ ನಾನು ನನ್ನ ಬೆನ್ನ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದೆ. ಕೆಲ ಸಮಯದವರೆಗೂ ಈ ವಿಚಾರವನ್ನು ನಮ್ಮ ಪೋಷಕರಿಂದ ಮುಚ್ಚಿಟ್ಟಿದೆ. ಇದಾಗಿ ಮೂರ್ನಾಲ್ಕು ತಿಂಗಳ ಬಳಿಕ ನನ್ನ ತಂದೆ ನಾನು ಟ್ಯಾಟೂ ಹಾಕಿಸಿಕೊಂಡಿರುವುದು ನೋಡಿದರು. ಆಮೇಲೆ ನನಗೆ ಚೆನ್ನಾಗಿ ಬಾರಿಸಿದರು.
ಇಷ್ಟೇ ಆಗಿದ್ದರೇ ಹೆಚ್ಚು ಭಯಪಡುತ್ತಿರಲಿಲ್ಲ. ಆದರೆ ಒಬ್ಬರಿಗೆ ಟ್ಯಾಟೂ ಹಾಕಲು ಬಳಸಿದ ಸೂಜಿಯನ್ನು ಮತ್ತೊಬ್ಬರಿಗೆ ಹಾಕಲು ಬಳಸಬಾರದು ಎಂಬ ವಿಚಾರವೂ ನನಗಾಗ ತಿಳಿಯಿತು. ಜೊತೆಗೆ ಆತಂಕವೂ ಆಯಿತು. ಯಾಕೆಂದರೆ ನನಗೆ ಟ್ಯಾಟೂ ಹಾಕಿದ ಸೂಜಿಯನ್ನು ಈ ಹಿಂದೆ ಎಷ್ಟು ಜನರಿಗೆ ಬಳಸಿದ್ದಾರೆ ಎನ್ನುವ ಮಾಹಿತಿ ನನಗಿರಲಿಲ್ಲ. ಹೀಗಾಗಿ ನಾನು ಆತಂಕದಿಂದಲೇ HIV ಟೆಸ್ಟ್ ಮಾಡಿಸಿಕೊಂಡೆ, ಅದೃಷ್ಟವಶಾತ್ ಆ ಟೆಸ್ಟ್ ನೆಗೆಟಿವ್ ಬಂದಿತು ಎಂದು ಶಿಖರ್ ಧವನ್ ಹೇಳಿದ್ದಾರೆ.
ಸಾಮಾನ್ಯವಾಗಿ ಒಬ್ಬರಿಗೆ ಟ್ಯಾಟೂ ಹಾಕಲು ಬಳಸಿದ ಸೂಜಿಯನ್ನು ಇನ್ನೊಬ್ಬರಿಗೆ ಬಳಸುವುದಿಲ್ಲ. ಒಂದು ವೇಳೆ ಹೆಚ್‌ಐವಿ ಸೋಂಕು ಇರುವ ವ್ಯಕ್ತಿಗೆ ಟ್ಯಾಟೂ ಹಾಕಲು ಬಳಸಿದ ಸೂಜಿಯನ್ನು ಮತ್ತೊಬ್ಬ ವ್ಯಕ್ತಿಗೆ ಬಳಸಿದರೆ, ಅವರಿಗೂ ಸೋಂಕು ತಗುಲುವ ಸಾಧ್ಯತೆ ಇರುತ್ತದೆ. ಹೀಗಾಗಿ ನೀವು ಕೂಡಾ ರಸ್ತೆ ಬದಿ ಟ್ಯಾಟೂ ಹಾಕಿಸಿಕೊಳ್ಳುವಾಗ ಜಾಗೃತೆಯಿಂದಿರಿ.
ಇನ್ನು ಟೀಂ ಇಂಡಿಯಾ ಅನುಭವಿ ಆರಂಭಿಕ ಬ್ಯಾಟರ್ ಶಿಖರ್ ಧವನ್, ಸದ್ಯ ಕೆಲ ಸಮಯದಿಂದ ರಾಷ್ಟ್ರೀಯ ತಂಡದಿಂದ ಹೊರಗುಳಿದಿದ್ದು, ಇದೀಗ 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಸಜ್ಜಾಗಿದ್ದಾರೆ. 2023ನೇ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಶಿಖರ್ ಧವನ್, ನಾಯಕನಾಗಿ ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸಲಿದ್ದಾರೆ. ಪಂಜಾಬ್ ಕಿಂಗ್ಸ್ ತಂಡವು ಚೊಚ್ಚಲ ಐಪಿಎಲ್ ಟ್ರೋಫಿ ಜಯಿಸುವ ಕನವರಿಕೆಯಲ್ಲಿದೆ.
ಇದನ್ನೂ ಓದಿ: Film News: ವೇಶ್ಯಾವಾಟಿಕೆಲ್ಲಿ ಸಿಲುಕಿ ಭಾರೀ ಸುದ್ದಿಯಾಗುತ್ತಿದ್ದಾರೆ ಭಾರತ ಚಿತ್ರರಂಗದ ಈ ಖ್ಯಾತ ನಟಿಯರು!